Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿವಶಂಕರಪ್ಪನವರು ೧೯೩೧ರ ಜೂ.೧೬ರಂದು ದಾವಣಗೆರೆಯಲ್ಲಿ ಜನಿಸಿದ್ದರು. ಮೂಲತಃ ಉದ್ಯಮಿಯಾಗಿದ್ದ ಅವರು, ೧೯೬೯ರಲ್ಲಿ ದಾವಣಗೆರೆ ನಗರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಅಶೋಕ ವಾರದ ಹೇಳಿದರು.ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಿಧನರಾದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತರು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಗಳು, ದಾವಣಗೆರೆ ಅಂಗವಿಕಲರ ಆಶಾಕಿರಣ ಟ್ರಸ್ಟ್, ಕ್ರಿಕೆಟ್ ಕ್ಲಬ್, ಸಂಘ ಸಂಸ್ಥೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಎಲ್ಲಾ ರಂಗಗಳಲ್ಲೂ ತಮದೇ ಆದ ಛಾಪನ್ನು ಮೂಡಿಸಿದ್ದರು. ಅಪರಿಮಿತ ಜೀವನೋತ್ಸಾಹ, ಜನರ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ನಮ್ಮ ಜನಪದ ಹಾಡುಗಳು, ಹಬ್ಬಗಳು ಮತ್ತು ಕಲೆಗಳು ಕಣ್ಮರೆಯಾಗುತ್ತಿವೆ ಎಂದು ಶ್ರೀ ದತ್ತಗುರು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ರಾಯಪ್ಪ. ಎಸ್. ಹೂಗಾರ ಹೇಳಿದರು.ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಶ್ರೀ ದತ್ತಗುರು ಎಜುಕೇಷನ್ ಟ್ರಸ್ಟ್ ಪರಸನಹಳ್ಳಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ” ನುಡಿ-ಸಂಸ್ಕೃತಿ ಉಳಿಸಿ ಬೆಳೆಸಬೇಕು ಹಾಗೂ ಜನಪದ ಕಲಾವಿದರ ಸಂಭ್ರಮ” ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದವರು.ಯುವಕರು ಮತ್ತು ವಿದ್ಯಾರ್ಥಿಗಳು ಮೊಬೈಲ್, ಟಿವಿ, ಲ್ಯಾಬ್ ಟಾಪ್, ಮಾಹಿತಿ ತಂತ್ರಜ್ಞಾನಕ್ಕೆ ಮಾರುಹೋಗದೆ, ನಮ್ಮ ಜಾನಪದ ಸಂಸ್ಕೃತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮತ್ತು ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವುದು ಸಮಾಜದ ಕರ್ತವ್ಯವಾಗಿದೆ ಎಂದವರು. ತಲೆ ತಲೆಮಾರುಗಳಿಂದ ಈ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಕಲಾವಿದರನ್ನು ಗೌರವಿಸುವುದು ಮತ್ತು ಅವರನ್ನು ಸತ್ಕರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಹೂಗಾರ್, ಭೀಮರಾಯ ಆರ್. ಕುಲಕರ್ಣಿ, ಪುರಸಭೆ ಸದ್ಯಸರಾದ ಮುದೆಪ್ಪ ಪೂಜಾರಿ, ಗುರುನಾಥ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಅವರನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ 2023-24ನೇ ವರ್ಷದ ಬಾಲ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಅಕಾಡೆಮಿಯ ಬಹುಮುಖ ಪ್ರತಿಭೆ ವಿಭಾಗದ ಅಡಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಡಿಸೆಂಬರ್ 16 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಕಾರ್ಯಕರ್ಮದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ವಿದ್ಯಾರ್ಥಿನಿ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಶೈಕ್ಷಣಿಕ, ವಿಜ್ಞಾನ, ಸಂಶೋಧನೆ, ಕ್ರೀಡೆ ಮತ್ತು ರಸಪ್ರಶ್ನೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಅವಳು ಯಾವಾಗಲೂ ತರಗತಿಯ ಟಾಪರ್ ಆಗಿದ್ದು, ಚೆಸ್, ಕಲೆ, ಪ್ರಬಂಧ, ಸಾಹಿತ್ಯ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾಳೆ.ವಿದ್ಯಾರ್ಥಿನಿಗೆ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಶಾಲೆಯ ಪ್ರಾಚಾರ್ಯ ಡಾ. ಶೈಜು ಕೆ. ಆರ್. ನಾಯರ, ಹಿರಿಯ ಸಂಯೋಜಕಿ ದೀಪಾ ಜಂಬುರೆ, ಬೋಧಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡದ ದೀಕ್ಷಾ ಭದ್ದ ಸಂಘಟನೆಯಾದ ಕದಂಬ ಸೈನ್ಯ ಹಾಗೂ ಸಂಘಟನೆಯ ಮುಖವಾಣಿಯಾದ ಕದಂಬವಾಣಿ ದಿನಪತ್ರಿಕೆಯ ವಾರ್ಷಿಕೋತ್ಸವದ ಸಮಾರಂಭವು ಶ್ರೀರಂಗಪಟ್ಟಣದ ತಾಲೂಕಿನ ಶ್ರೀ ಕ್ಷೇತ್ರ ಚಂದ್ರವನದಲ್ಲಿ ಪ್ರತಿ ವರ್ಷದಂತೆ ಕದಂಬ ಸೈನ್ಯ ಸಂಘಟನೆ ಕೊಡ ಮಾಡುವ ಕದಂಬ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದೊಂದಿಗೆ ನೆರವೇರಿತು.ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯವರು, ಪೂಜ್ಯ ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮಾ ಹಾಗೂ ಚೆನ್ನವೀರ ಮಹಾಸ್ವಾಮಿಗಳು ವಹಿಸಿದ್ದು, ಅಧ್ಯಕ್ಷತೆಯನ್ನು ಕದಂಬ ಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ವಹಿಸಿದ್ದು, ಇವರೆಲ್ಲರ ಸಮ್ಮುಖದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರು ಎಂ ಸಿ ಕಾಂಬಳೆ ಹಾಗೂ ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ್ ಅವರ ಸಮ್ಮತಿಯ ಮೇರೆಗೆ ವಿಜಯಪುರ ಜಿಲ್ಲೆಯ ಕನ್ನಡ ಪರ ಹೋರಾಟಗಾರರು ಪತ್ರಕರ್ತರು ಆದ ಇರ್ಫಾನ್ ಎಸ್ ಬೀಳಗಿ ಅವರಿಗೆ ಕದಂಬ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ೧೨ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭ ಆಲಮೇಲದ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಜರುಗಿತು.ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಆಲಮೇಲ ತಾಲೂಕಿನ ಕ.ಸಾ.ಪ ಅಧ್ಯಕ್ಷ ಶಿವಶರಣ ಗುಂದಗಿ ಆಲಮೇಲ ಜನತೆ ಮೇಲೆ ಭರವಸೆ ಇಟ್ಟು ಮಕ್ಕಳ ಸಾಹಿತಿ ಹ.ಮ.ಪೂಜಾರ ರವರು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಲಮೇಲ ದಲ್ಲಿ ಹಮ್ಮಿಕೊಂಡಿದ್ದು ನಮ್ಮ ಸೌಭಾಗ್ಯ. ಹಾಗಾಗಿ ಈ ಸಮ್ಮೇಳನವನ್ನು ನಾವೆಲ್ಲರೂ ಪಕ್ಷ ಭೇದ ಮರೆತು ಎಲ್ಲರ ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಸೋಣ, ವಿಶೇಷವಾಗಿ ಇದು ಮಕ್ಕಳ ಸಮ್ಮೇಳನವಾಗಿರುವುದರಿಂದ ಜಿಲ್ಲೆಯ ಪ್ರತಿಭಾನ್ವಿತ ಮಕ್ಕಳು ಈ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ ನಮ್ಮ ತಾಲೂಕಿನ ಮಕ್ಕಳಿಗೆ ಸಾಹಿತ್ಯದ ಆಸಕ್ತಿ ಬೆಳೆಯುಂತೆ ಮಾಡಲು ಸಹಕಾರಿಯಾಗಬಲ್ಲದು.ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಕ್ಕಳ ಹಿರಿಯ ಸಾಹಿತಿ ಬಿ.ಅರ್.ನಾಡಗೌಡ ರವರನ್ನು ಆಯ್ಕೆ ಮಾಡಿರುವುದು ಸಾಹಿತ್ಯ ಆಸಕ್ತರಿಗೆ ಸಂತೋಷ ತಂದಿದೆ ಎಂದರು.ಈ ವೇಳೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾ ಅಧ್ಯಕ್ಷ ಪ್ರೋ.ಎ.ಆರ್.ಹೆಗ್ಗನದೊಡ್ಡಿ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮುದ್ದು ಗೌರವಸಂಪಿಗೆಯಂಥ ಮೂಗು, ದಾಳಿಂಬೆಯಂತಹ ದಂತಪಂಕ್ತಿ, ಕಾಮನಬಿಲ್ಲಿನಂತ ಹುಬ್ಬು, ನಾಗರ ಜಡೆ, ಎತ್ತರಕ್ಕೆ ತಕ್ಕ ಸಪೂರ ದೇಹ ನಕ್ಷತ್ರದಂತೆ ಹೊಳೆವ ಜೋಡಿ ಕಂಗಳು, ನಕ್ಕಾಗ ಬೀಳುವ ಗುಳಿ, ಎದುರಿನವರನ್ನು ತಿಳಿದು ಮಾತನಾಡುವ ಚತುರ ಮಾತುಗಾರಿಕೆ, ನಿರ್ಗತಿಕರನ್ನು ಕಂಡರೆ ಕನಿಕರ, ಸದಾ ಸಹಾಯ ಹಸ್ತ ಚಾಚುವವಳು ನಾನಾಗಿದ್ದರೂ ನನ್ನದು ಕೃಷ್ಣವರ್ಣವೆಂದು ನೋಡಲು ಬಂದ ಅನೇಕ ಗಂಡುಗಳು ಬಣ್ಣ ಕಂಡು ಬೆನ್ನು ತೋರಿಸಿ ಹೋದರು. ಸಂಬಂಧ ಬೆಸೆಯುವುದು ಬಣ್ಣದಿಂದಾರೆ ಮದುವೆಯೇ ಬೇಡವೆಂದು ಮನದಲ್ಲಿ ನಿರ್ಧರಿಸಿಯಾಗಿತ್ತು.ಈಗಿನ ಕಾಲದಲ್ಲಿ ರೂಪ ಇದ್ದವರಲ್ಲೂ ಬೇರೆ ಬೇರೆ ಕೊಂಕು ತೆಗೆದು ವಿವಾಹ ಬೇಡವೆನ್ನುವವರು ಇದ್ದಾರೆ. ಅಂಥದ್ದರಲ್ಲಿ ಗುಣಕ್ಕೆ ಪ್ರಾಶಸ್ತ್ಯ ಕೊಡುವವರು ವಿರಳ. ವಿವಾಹ ಯೋಗ ಕೂಡಿ ಬರುವುದಂತೂ ವಿರಳಾತಿವಿರಳ. ಹುಡುಗಿ ಲಕ್ಷಣವಾಗಿದ್ದಾಳೆ ಆದರೆ ಎಂದು ರಾಗ ಎಳೆಯುವವರೇ ಹೆಚ್ಚು. ರೂಪ ಕಪ್ಪಿರಬಹುದು ಮನಸ್ಸು ಮಾತ್ರ ಹಾಲಿನಂತೆ ಶುದ್ಧ. ಎಂಬುದು ಅಪ್ಪ ಅವ್ವನ ಮಾತು. ಕೃಷ್ಣವರ್ಣದವಳಾದರೂ ತುಂಬ ಲಕ್ಷಣ ಇದ್ದಾಳೆ. ಸೀರೆಯುಟ್ಟು…
ಮುದ್ದೇಬಿಹಾಳ ತಹಶೀಲ್ದಾರ್ ಕೀರ್ತಿ ಚಾಲಕ ಪಾಲಕರಲ್ಲಿ ಮನವಿ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಡಿ.೨೧ರಿಂದ ೨೪ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ೫ವರ್ಷದೊಳಗಿನ ಮಕ್ಕಳಿಗೆ ತಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ತಹಶೀಲ್ದಾರ್ ಕೀರ್ತಿ ಚಾಲಕ ಪಾಲಕರಲ್ಲಿ ಮನವಿ ಮಾಡಿದರು.ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡಿ.೨೧ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಬಳಿಕ ಸತತ ೩ದಿನ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯ ನಡೆಯಲಿದೆ. ಪೋಲಿಯೋ ಮಾರಕ ರೋಗವಾಗಿದ್ದು, ೫ ವರ್ಷದೊಳಗಿನ ಯಾವುದೇ ಮಗು ಎರಡು ಹನಿ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಲಸಿಕಾ ಅಭಿಯಾನದ ಎರಡು ದಿನ ಮುನ್ನ ಎಲ್ಲ ಲಸಿಕಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರತಿ ಗ್ರಾಮಗಳಲ್ಲಿ ಕರಪತ್ರ, ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಮೂಡಿಸಬೇಕು ಎಂದರು.ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆಯೂ,…
ಉದಯರಶ್ಮಿ ದಿನಪತ್ರಿಕೆ ಮುದೇಬಿಹಾಳ: ಕೃಷಿ ಪರಿಸರದ ಮೂಲ ಸೆಲೆ ಎಂತಿರುವ ಹಾಗೂ ಭೌತಿಕ, ರಾಸಾಯನಿಕ, ಜೈವಿಕ ಗುಣಧರ್ಮಗಳಿಂದ ರಚಿತವಾದ ಮಣ್ಣು ವಿಜ್ಞಾನದ ವಿಸ್ಮಯವನ್ನು ಸಾರುವ ಜ್ಞಾನ ದಾಸೋಹ ನಿರಂತರವಾಗಿರಲಿ ಎಂದು ಕೃಷಿ ಉಪನಿರ್ದೇಶಕ ಶರಣಗೌಡರು ಹೇಳಿದರು.ಇಲ್ಲಿನ ಆದಿತ್ಯ ಫ್ಲಾಜಾ ಸಭಾಂಗಣದಲ್ಲಿ ಅಮೃತ ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯಡಿ ಸ್ಥಾಪಿಸಲಾದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ, ಬೆಂಗಳೂರಿನ ಸಿ-ಕ್ಯಾಂಪ್ ಹಾಗೂ ಕೃಷಿತಂತ್ರ ಸಂಸ್ಥೆಗಳ ನೆರವಿನೊಂದಿಗೆ ಮಣ್ಣು ನೀರು ಮತ್ತು ಸಸ್ಯ ಅಂಗಾಂಶ ಪರೀಕ್ಷಿಸಲು ಸ್ಥಾಪಿಸಲಾದ ದಾಸೋಹಿ ಕೃಷಿ ವಿಶ್ಲೇಷಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಣ್ಣಿನ ಮೇಲೆ ನಡೆಯುತಿರುವ ಅಸ್ವಾಭಾವಿಕ ದಬ್ಬಾಳಿಕೆ, ಅವೈಜ್ಞಾನಿಕ ನಿರ್ವಹಣೆ ಮತ್ತು ಹವಾಮಾನ ಬದಲಾವಣೆ ದುಷ್ಪರಿಣಾಮಗಳಿಂದ ಮಣ್ಣು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಕೊನೆ ಹಂತ ತಲುಪಿರುವುದನ್ನು ಗಂಭಿರವಾಗಿ ಪರಿಗಣಿಸಿ ಮಣ್ಣು ಉಳಿಸುವ ಅಭಿಯಾನದೊಂದಿಗೆ ಸುಸ್ಥಿರ ಕೃಷಿಯ ತಳಮಟ್ಟವನ್ನು ಬಲಪಡಿಸುವ ಉದ್ದೇಶದಿಂದ ಅತ್ಯಾಧುನಿಕ ಮತ್ತು ನಿಖರ ತಾಂತ್ರಿಕತೆಗಳನ್ನು ಬಳಸಿಕೊಂಡು ದಾಸೋಹಿ ಕೃಷಿ ವಿಶ್ಲೇಷಣಾ ಕೇಂದ್ರ ಸ್ಥಾಪಿಸಿರುವುದು ರೈತರಿಗೆ ವರವಾಗಲಿದೆ…
ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಯವರು ಪಾದಯಾತ್ರೆ, ದಾಸೋಹವೇ ಅವರ ನಿತ್ಯ ಕಾಯಕವಾಗಿತ್ತು. ಇವರು ಶತಾಯುಷಕ್ಕೆ ಸಮೀಪವಾಗಿದ್ದರೂ ಸಹ ಶರೀರ ಬಾಗಲಿಲ್ಲ. ಇವರ ಕಾಯಕ ಭಕ್ತರ ಅಂತರಾಳದಲ್ಲಿ ಸದಾ ಇರುವ ಮೂಲಕ ಅವರ ಕಾಯಕ ತತ್ವ ಅಳವಡಿಸಿಕೊಳ್ಳುವಂತಾಗಬೇಕೆಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಇಂಗಳೇಶ್ವರ ವಿರಕ್ತಮಠದ ಲಿಂಗೈಕ್ಯರಾದ ಚನ್ನಬಸವ ಸ್ವಾಮೀಜಿಯವರಿಗೆ ಶುಕ್ರವಾರ ಮಠದ ಆವರಣದಲ್ಲಿ ಜರುಗಿದ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಗ, ದ್ವೇಷಗಳಿಲ್ಲದ ಮಂದಹಾಸದ ಇಂಗಳೇಶ್ವರ ವಿರಕ್ತ ಮಠದ ಬಸವ ಶ್ರೀಗಳು ಆದಿಲ್ ಶಾಹಿ ಗೋಲಗುಂಬಜ ಕಟ್ಟಿದ ಮಾದರಿಯಲ್ಲಿ ವಚನ ಶಿಲಾ ಮಂಟಪ ನಿರ್ಮಿಸಿ ಸಮಾಜಕ್ಕೆ, ಮಠಾಧೀಶರಿಗೆ ಸಾರ್ವಕಾಲಿಕ ಮಾದರಿ ರೀತಿ ಬದುಕಿ ತೋರಿದ ಮಹಾನ್ ಚೇತನವಾಗಿದ್ದರು ಎಂದರು.ಬಸವಾದಿ ಶರಣರ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಿ ಷಟಸ್ಥಲ ಮಂಟಪ ರೂಪಿಸುವ ಚನ್ನಬಸವ ಶ್ರೀಗಳ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಥಣಿ ತಾಲೂಕಿನ ಕೊಕಟನೂರದಲ್ಲಿ ನಡೆಯಲಿರುವ ಶ್ರೀ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯಪುರ ವಿಭಾಗದಿಂದ ಡಿಸೆಂಬರ್ ೧೫ ರಿಂದ ಡಿಸೆಂಬರ್ ೨೧ರವರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಕೊಕಟನೂರಕ್ಕೆ ವಿಶೇಷ ಸಾರಿಗೆ ವ್ಯವಸ್ಥೆ ಇರಲಿವೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರ ಸಂಖ್ಯೆ ವಿಜಯಪುರ-೧: ೭೭೬೦೯೯೨೨೬೩, ವಿಜಯಪುರ-೨: ೭೭೬೦೯೯೨೨೬೪, ಇಂಡಿ- ೭೭೬೦೯೯೨೨೬೫, ಸಿಂದಗಿ- ೭೭೬೦೯೯೨೨೬೬, ಮುದ್ದೇಬಿಹಾಳ- ೭೭೬೦೯೯೨೨೬೭, ತಾಳಿಕೋಟ- ೭೭೬೦೯೯೨೨೬೮, ಬಸವನ ಬಾಗೇವಾಡಿ- ೭೭೬೦೯೯೨೨೬೯, ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂರವಾಣಿ ಸಂಖ್ಯೆ ೦೮೩೫೨-೨೫೧೩೪೪ ಹಾಗೂ ಮೊಬೈಲ್ ಸಂಖ್ಯೆ – ೭೭೬೦೯೯೨೨೫೮ ಸಂಪರ್ಕಿಸಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರಕಟಣೆ ತಿಳಿಸಿದೆ.
