ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೊಂದಣಿಯಾದ ಫಲಾನುಭವಿಗಳಿಗೆ ಮೇಷನ್ ಸುರಕ್ಷಾ ಕಿಟ್, ಎಲೆಕ್ಟಿçಷಿಯನ್ ಸುರಕ್ಷಾ ಕಿಟ್, ಕಾರಪೆಂಟರ್ ಸುರಕ್ಷಾ ಕಿಟ್, ವೆಲ್ಡಿಂಗ್ ಸುರಕ್ಷಾ ಕಿಟ್, ಪ್ಲಂಬರ್ ಸುರಕ್ಷಾ ಕಿಟ್ & ಪೇಂಟರ್ ಸುರಕ್ಷಾ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿಗಳು ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ ಕಾರ್ಡ ಮತ್ತು ಫಲಾನುಭವಿಯ ಭಾವಚಿತ್ರ ದಾಖಲೆಗಳೊಂದಿಗೆ ದಿನಾಂಕ : ೩೦-೦೯-೨೦೨೫ರೊಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ, ೧ನೇ ವೃತ್ತ ಮತ್ತು ೨ನೇ ವೃತ್ತ, ಕಲ್ಯಾಣ ಸಮುದಾಯ ಭವನ ಸಿಂದಗಿ ನಾಕಾ ಅಲ್ಲಾಪೂರ ಓಣಿ, ವಿಜಯಪುರ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇಲೆ ಕಾರ್ಮಿಕ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
