ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯ ಗೊಡೆ ಕುಸಿದು 4 ವರ್ಷದ ಮಗುವಿನ ಮೇಲೆ ಬಿದ್ದ ಪರಿಣಾಮ ಮಗು ಸಾವುನಪ್ಪಿರುವ ಘಟನೆ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜು ಪತ್ತಾರ್ ಎಂಬುವರ ಮಗ ಸಮರ್ಥ ರಾಜು ಪತ್ತಾರ ವಯಸ್ಸು (೪) ಮೃತ ದುರ್ದೈವಿ.
ಘಟನೆ ವಿವರ: ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ದುರಂತ ಸಂಭವಿಸಿದೆ.
ಗುರುವಾರ ಮಧಾಹ್ನ ಮಗು ತನ್ನ ಮನೆಯ ಎದುರು ಆಟ ಆಡುತ್ತಿರುವಾಗ ಎದುರು ಮನೆಯ ಗೊಡೆ ಕುಸಿದು ಮಗುವಿನ ಮೇಲೆ ಬಿದ್ದಿದೆ. ವಿಷಯ ತಿಳಿದ ತದನಂತರ ಗ್ರಾಮಸ್ಥರು ಆ ಮಗುವಿನ ಮೇಲೆ ಕುಸಿದ ಗೊಡೆಯ ಮಣ್ಣನ್ನು ತೆಗೆದು ಮಗುವಿನ ರಕ್ಷಣೆಗೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಮಗುವಿನ ಉಸಿರಾಟ ತೊಂದರೆ ಇರುವುದರಿಂದ ಚಿಕಿತ್ಸೆಗಾಗಿ ವಿಜಯಪುರ ನಗರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಕುಟುಂಬದ ಪ್ರಾಥಮಿಕ ಮಾಹಿತಿಯಾಗಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಪ್ರಕಾಶ ಚವಡಿಹಾಳ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

