ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಕೋರವಾರ-ಕೊಕಟನೂರ ಗ್ರಾಮಗಳ ನಡುವಿನ ಸುಮಾರು ೮ ಕಿ.ಮೀ ರಸ್ತೆ ತಗ್ಗು ದಿನ್ನೆಗಳಿಂದ ಕೂಡಿದ್ದು ಪ್ರಯಾಣಿಸಲು ಬಾರದಂತಾಗಿದೆ.
ಗ್ರಾಮದ ಮುಖ್ಯ ಸಂಪರ್ಕ ರಸ್ತೆಯ ಜೊತೆಗೆ ಐತಿಹಾಸಿಕ ಶ್ರೀಕೋರವಾರೇಶ(ಹನುಮಾನ) ದೇವಸ್ಥಾನಕ್ಕೆ ತೆರಳುವ ರಸ್ತೆ ಹಾಗೂ ದ್ವಾರಬಾಗಿಲು ಬಳಿ ಇರುವ ಸೇತುವೆ ಸಹ ಬಲಿಗಾಗಿ ಕಾದು ಕುಳಿತಂತೆ ಆಗಿದ್ದು, ನಿತ್ಯ ರಸ್ತೆಯಲ್ಲಿ ಸಂಚಾರ ಮಾಡುವ ಸಾರ್ವಜನಿಕರ ದ್ವಿಚಕ್ರ ವಾಹನ ಸವಾರರು ಒಂದಿಲ್ಲೊಂದು ಗುಂಡಿಯಲ್ಲಿ ಬೀಳುವಂತಾಗಿದೆ.
ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಸಹ ಯಾವುದೇ ರೀತಿ ಸ್ಪಂದಿಸಿರುವುದಿಲ್ಲ. ರಸ್ತೆ ಸಮಸ್ಯೆಯ ಕುರಿತು ಮುಂದಿನ ವಾರದೊಳಗಾಗಿ ಪಿಡಿಓ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಸ್ತೆ ತಡೆ ಮಾಡಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ, ಬುಡ್ಡೇಸಾಬ ಅರಬ, ಜುಬೇರ ಕೆರೂಟಗಿ, ರಫೀಕ್ ವಡಗೇರಿ, ಯಾಸೀನ್ ಕೆರೂಟಗಿ, ಶಾಹಿದ್ ಪಟೇಲ, ಯಾಕುಬ್ ಕೆರೂಟಗಿ, ಅಲ್ತಾಫ್ ವಡಗೇರಿ, ಆಯುಬ್ ಕೊಣ್ಣೂರ, ಮುತ್ತು ನಾದ, ಭೀಮರಾಯ ಕಿರಣಗಿ, ಮಾಂತೇಶ ಬಿರಾದಾರ ಸಹಿತ ಗ್ರಾಮಸ್ಥರು ಅಗ್ರಹಿಸಿದ್ದಾರೆ.

