ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಸುಳ್ಳು ಭರವಸೆಗಳನ್ನೇ ಯುವಕರಿಗೆ ನೀಡಿ, ಅವರನ್ನು ಭ್ರಮೆಯಲ್ಲಿಯೇ ಇಟ್ಟು, ಮತ ಪಡೆಯುತ್ತಿರುವ ಕೇಂದ್ರ ಬಿಜೆಪಿ ಸರಕಾರ ಯುವಕರಿಗೆ ಅನ್ಯಾಯ ಮಾಡುತ್ತಿದೆ ಎಂದು ತೇರದಾಳ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ಹೇಳಿದರು.
ಗ್ರಾಮದ ಬಸ್ ನಿಲ್ದಾಣ ಬಳಿಯ ಬಸವೇಶ್ವರ ವೃತ್ತದಲ್ಲಿ ಪ್ರಧಾನಿ ನರೆಂದ್ರ ಮೋದಿಯವರ ಜನ್ಮದಿನಾಚರಣೆಯ ನಿಮಿತ್ತ ಪಕೋಡಾ (ಭಜಿ) ತಯಾರಿಸಿ ನಿರುದ್ಯೋಗ ದಿನ ಆಚರಣೆ ಮಾಡುವ ಮೂಲಕ ನಡೆಸಿದ ಪ್ರತಿಭಟಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ ಪ್ರಧಾನಿಯವರು ಇದುವರೆಗೆ ನೀಡಿದ ಯಾವುದೇ ಭರವಸೆ ಈಡೆರಿಸದೆ ದೇಶದ ಜನರಿಗೆ ಮೋಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಭು ದೊಡವಾಡ, ನಿಂಗಪ್ಪ ದೊಡಮನಿ, ಅಲ್ಲಪ್ಪ ಮುಗಳಖೋಡ, ದಾದೇಸಾಬ ಸರಕಾವಸ, ಯಲ್ಲಪ್ಪ ಭಜಂತ್ರಿ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಸಲೀಮ ಸರಕಾವಸ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.

