ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಪ್ರೊ. ಶ್ರೀನಿವಾಸ ಅವರಿಗೆ ‘ಫಿಸಿಕಲ್ ಎಜುಕೇಟರ್ ಅವಾರ್ಡ್–೨೦೨೫’ ಪುರಸ್ಕಾರ ಲಭಿಸಿದೆ.
ಪುರಸ್ಕಾರ ಪಡೆದಿರುವ ಪ್ರೊ. ಶ್ರೀನಿವಾಸ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.
ಈ ಪ್ರಶಸ್ತಿಯನ್ನು ಕ್ಯಾಪ್ಟನ್ ಎಂ.ಪಿ. ಸಿಂಗ್ ಸ್ಪೋರ್ಟ್ಸ್ ಟ್ರಸ್ಟ್ (ರಿ) ವತಿಯಿಂದ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕ್ಯಾಪ್ಟನ್ ಮಂಜೀತ್ ಪಾಳ್ ಸಿಂಗ್, ಅಧ್ಯಕ್ಷ ಸುಖವಿಂದರ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಸುಖವಂತ್ ಸಿಂಗ್ ಉಪಸ್ಥಿತರಿದ್ದರು.

