Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಾಷ್ಟ್ರೀಯ ಆರೋಗ್ಯ ಅಭಿಯಾನ | ವಿಜಯಪುರ ಜಿಲ್ಲಾಧಿಕಾರಿ ಡಾ. ಕೆ.ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆರೋಗ್ಯ ಸೌಕರ್ಯ ಮತ್ತು ವಿವಿಧ ಆರೋಗ್ಯ ಸೌಲಭ್ಯ ಒದಗಿಸಿ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಸುರಕ್ಷತೆಗೆ ಅಗತ್ಯ ಆರೋಗ್ಯ ತಿಳುವಳಿಕೆ ಮೂಡಿಸಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯ ಸಮರ್ಪಕ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸಂಬಂಧಿಸಿದವರಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ೧೨ ರಿಂದ ೧೪ ಬಾರಿ ನಿಯಮಿತವಾಗಿ ಕೈಗೊಳ್ಳಬೇಕು. ಅನೀಮಿಯಾ, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಉಚಿತ ಆರೋಗ್ಯ ಚಿಕಿತ್ಸೆ ಒದಗಿಸಬೇಕು. ಜಿಲ್ಲೆಯಲ್ಲಿ ತಾಯಿ-ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಆರ್.ಸಿ.ಹೆಚ್. ಪೋರ್ಟಲ್ ಮೂಲಕ ಗರ್ಭಿಣಿ ಮಹಿಳೆಯರಿಗೆ ಕಾಲ-ಕಾಲಕ್ಕೆ ಆರೋಗ್ಯದ ಕುರಿತಾಗಿ ತಿಳುವಳಿಕೆ ನೀಡುವಂತೆ ಅವರು ಸೂಚನೆ…
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಆಗಸ್ಟ್ ೨೭ ರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿ, ಜಿಲ್ಲೆಯ ಉಪ ವಿಭಾಗಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರರು ತಾಲೂಕು ದಂಡಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.ಆಗಸ್ಟ್ ೨೭ ಪ್ರತಿಷ್ಠಾಪನೆ ಹಾಗೂ ಆಗಸ್ಟ್ ೩೧, ಸೆಪ್ಟೆಂಬರ್ ೨, ೪ ಹಾಗೂ ಸೆ.೬ರವರೆಗೆ ವಿಜಯಪುರ ಉಪ ವಿಭಾಗಕ್ಕೆ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ (ಮೊ:೯೫೯೯೯೦೯೭೨೪), ಇಂಡಿ ಉಪ ವಿಭಾಗಕ್ಕೆ ಉಪ ವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತçದ (ಮೊ:೯೭೩೯೭೪೯೭೩೨), ವಿಜಯಪುರ ತಾಲೂಕಿಗೆ ತಹಶೀಲ್ದಾರ ಪಿ.ಎಸ್.ಚನಗೊಂಡ (ಮೊ:೯೪೮೨೮೯೬೩೭೦), ಇಂಡಿ ತಾಲೂಕಿಗೆ ತಹಶೀಲ್ದಾರ್ ಬಿ.ಎಸ್. ಕಡಕಭಾವಿ (ಮೊ:೯೯೦೨೭೪೮೨೪೦),…
ವಿಜಯಪುರ: ೨೦೨೫-೨೬ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.ಕರ್ನಾಟಕ ರಾಜ್ಯದಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ತರಗತಿಗಳು ನಡೆಯುತ್ತಿಲ್ಲ, ರಾಜ್ಯದ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದ ಅವಲಂಬಿತವಾಗಿರುವ ಕಾರಣ ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ, ಬಡ, ಕೂಲಿ ಕಾರ್ಮಿಕರ ಮಕ್ಕಳು ಸರಕಾರಿ ಕ್ಯಾಂಪಸ್‌ಗಳಲ್ಲಿ ಅಧ್ಯಯನ ಮಾಡುವ ಉದ್ದೇಶದಿಂದ ದಾಖಲಾತಿ ಮಾಡಿರುತ್ತಾರೆ, ಆದರೆ ಪ್ರತಿ ವರ್ಷ ಈ ರೀತಿಯ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಹಿಂದುಳಿಯುತ್ತಿದ್ದಾರೆ, ಖಾಸಗಿ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳು ನಡೆದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಆದರೆ ಶೇಕಡ ೫೦ರಷ್ಟು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಅನ್ಯಾಯ ಮಾಡಿದಂತಾಗಿದೆ. ಕೂಡಲೇ ರಾಜ್ಯ ಸರ್ಕಾರ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ. ಎಚ್.ಟಿ.ಪೋತೆ ಪ್ರಶಸ್ತಿ ನೀಡಲು ಹಸ್ತಪ್ರತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿ ರೂ 10 ಸಾವಿರ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ಪ್ರಕಾಶನದಿಂದ ಪ್ರಕಟಿಸಿ ಪ್ರಕಾಶನದ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.ಸಂಶೋಧನೆ ಮತ್ತು ಅನುವಾದಿತ ಸಂಬಂಧಿ ಬರಹಗಳು ಮುದ್ರಣಕ್ಕೆ ಸಿದ್ದಪಡಿಸಿದ್ದರೆ ಅಂತಹ ಹಸ್ತಪ್ರತಿಗಳನ್ನು ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿದ ತಮ್ಮ ಅಪ್ರಕಟಿತ ಕೃತಿಯ ಎರಡು ಪ್ರತಿಗಳನ್ನು ಸೆಪ್ಟೆಂಬರ್ ೨೫ ರೊಳಗೆ ತಲುಪುವಂತೆ ಕಳಿಸಲು ಕೋರಲಾಗಿದೆ.ಪ್ರಕಟಿತ ಕೃತಿಗಳ ಆಹ್ವಾನ:ಕಡಣಿ ಬೆರಗು ಪ್ರಕಾಶನವು ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿ ನೀಡಲು 2024ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆವ್ಹಾನಿಸಿದೆ. ಪ್ರಶಸ್ತಿಯು 5ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತ ಲೇಖಕರು ತಮ್ಮ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ 1.30 ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ.ತಾಲೂಕಿನ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವದರಿಂದ ಮುತ್ತೂರ ನಡುಗಡ್ಡೆಯಲ್ಲಿನ ಅಪ್ಪಯ್ಯನ ದೇವರಗುಡಿ, ಐದಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.ಕೃಷ್ಣಾ ನದಿಯಲ್ಲಿ ಎರಡುವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಯುತಿದ್ದಂತೆ ನದಿ ಪಾತ್ರದ ಬಹುತೇಕ ಜನವಸತಿ ಪ್ರದೇಶಗಳು ಮುಳುಗಡೆಯಾಗುವುದು ಇಲ್ಲಿ ಸರ್ವೆ ಸಾಮಾನ್ಯವಾಗಿದೆ, ಆದರೆ ಈಗ ಮಹಾರಾಷ್ಟ್ರ ಮತ್ತು ಕರ್ನಾಟಕ ಜಲಾಶಯಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹರಿ ಬಿಡುತ್ತಿರುವದರಿಂದ ಪ್ರವಾಹ ಸಾಧ್ಯತೆ ಇಲ್ಲ ಎಂದು ತಾಲೂಕಾಡಳಿತ ಹೇಳುತ್ತಿದೆ. ಈ ನಡುವೆಯೂ ಮಹಾಪೂರದಿಂದ ಪ್ರತಿವರ್ಷವೂ ಹಲವು ಗ್ರಾಮಗಳು ನಡುಗಡ್ಡೆಯಾಗುತ್ತಲೇ ಇವೆ.ಯಾವ್ಯಾವ ದ್ವೀಪಗಳಾಗುತ್ತವೆ?ಸುಮಾರು 2.5 ರಿಂದ 3.5 ಲಕ್ಷಕ್ಕೂ ಅಧಿಕ ನೀರು ಹರಿದು ಬಂದರೆ ಮುತ್ತೂರ ನಡುಗಡ್ಡೆ, ಆಲಗೂರ ಗೌಡರ ಗಡ್ಡೆ, ನರಸಗೊಂಡ ವಸ್ತಿ, ತುಬಚಿ ಕಾಸರ ನಡುಗಡ್ಡೆಗಳು…
ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು | ನಡುಗಡ್ಡೆಯಾಗಿದ ಮುತ್ತೂರು | ಮನೆಗಳಿಗೆ ನುಗ್ಗಿದ ನೀರು ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿ ಜಮಖಂಡಿ: ಮಹಾರಾಷ್ಟ್ರ ದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ತಾಲ್ಲೂಕಿನ ಮುತ್ತೂರು ನಡುಗಡ್ಡೆಯಾಗಿದೆ. ಹಲವು ರಸ್ತೆಗಳ ಮೇಲೆ ನೀರು ಬಂದಿದ್ದು ಸಂಚಾರಕ್ಕೆ ತೊಂದರೆಯಾಗಿದೆ.ಮುತ್ತೂರ ಗ್ರಾಮದ ಸುತ್ತಲೂ ನೀರು ಆವರಿಸಿರುವುದರಿಂದ ಬೋಟ್ ಮೂಲಕ ನಡುಗಡ್ಡೆಗೆ ಹೋಗುವಂತಾಗಿದೆ. ಧರೆಪ್ಪ ನಾಟಿಕಾರ, ರವಿ ನಾಟಿಕಾರ, ಹಣಮಂತ ನಾಟಿಕಾರ, ಮುತ್ತಣ್ಣನಾಟಿಕಾರ, ಗುರಸಿದ್ದ ಹಿಪ್ಪರಗಿ, ರಾಮು ಅಮಾತಾ ಅವರ ಮನೆಗಳಿಗೆ ನೀರು ನುಗ್ಗಿದೆ. ಆ ಕುಟುಂಬದವರು ಇನ್ನೂ ಸ್ಥಳಾಂತರವಾಗಲು ಹಿಂದೇಟು ಹಾಕುತ್ತಿದ್ದಾರೆ.’ತಾಲ್ಲೂಕಾಡಳಿತ ಇನ್ನೂ ಕಾಳಜಿ ಕೇಂದ್ರ ತೆರೆದಿಲ್ಲ, ಜಾನುವಾರಿಗೆ ಮೇವಿನ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಇಲ್ಲಿ ಬಂದು ಮನೆ ಖಾಲಿ ಮಾಡಿ ಬೇರೆ ಕಡೆ ಸ್ಥಳಾಂತರವಾಗಲು ಒತ್ತಾ-ಯಿಸುತ್ತಿದ್ದಾರೆ. ಮನೆ ಖಾಲಿ ಮಾಡಿ ನಾವು ಎಲ್ಲಿಗೆ ಹೋಗುವುದು’ ಎಂದು ರೈತ ಧರೆಪ್ಪ ನಾಟಿಕಾರ ಪ್ರಶ್ನಿಸಿದರು.ಮುತ್ತೂರಿನಲ್ಲಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಅನ್ನ, ನೀರು ಮತ್ತು ಒಳ್ಳೆಯ ಮಾತುಗಳು ಇವು ಜಗತ್ತಿನ ಮೂರು ರತ್ನಗಳು. ಪವಿತ್ರವಾದ ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಬೇಕು. ಆದ್ದರಿಂದ ಸಮಾಜದಲ್ಲಿ ಒಳ್ಳೆಯ ಮಾತುಗಳನ್ನು ಬಿತ್ತುವ ಕಾರ್ಯವನ್ನು ಓಲೆಮಠ ಮಾಡುತ್ತಿದೆ ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಶ್ರಾವಣ ಮಾಸದ ಪ್ರಯುಕ್ತ ಓಲೆಮಠದ ಆಶ್ರಯದಲ್ಲಿ ಜು.25 ರಿಂದ ಆ.19ರ ವರಗೆ ನಡೆದ ವಚನ ಶ್ರಾವಣ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲು ನಡೆದ ವಚನ ಶ್ರಾವಣ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತಿಗೆ ಮನುಷ್ಯನಲ್ಲಿ ಪರಿವರ್ತನೆ ತರುವ ಶಕ್ತಿಸಾಮರ್ಥ್ಯವಿದೆ. ಆದ್ದರಿಂದ ಕೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಗೊಳ್ಳಬೇಕು ಎಂದರು.ಸಿಂದಗಿ ಸಾರಂಗ ಮಠದ ಡಾ.ವಿಶ್ವಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ,ಕರ್ನಾಟಕದಲ್ಲಿ ಅತ್ಯಂತ ಸಮನ್ವಯ ಇರುವ ಭಕ್ತರು ಜಮಖಂಡಿಯಲ್ಲಿದ್ದಾರೆ. ಯಾವ ಭಾವದಿಂದ ಭಕ್ತರು ಮಠಕ್ಕೆ ಬರುತ್ತಾರೆ ಅದನ್ನೆ ಭಕ್ತರು ಪಡೆದುಕೊಳ್ಳುತ್ತಾರೆ. ಭಕ್ತರು ಭಕ್ತಿಯಿಂದ ಬರುವಂತ ಕಾರ್ಯಗಳು ಓಲೆಮಠದಿಂದ ನಡೆಯುತ್ತಿವೆ. ಸಮನ್ವಯತೆ, ಸಹಬಾಳ್ವೆ, ಪ್ರೀತಿ,…
ಕನ್ನಡ ಜಾನಪದ ಪರಿಷತ್ತಿನ ತಾಲೂಕು ಗೌರವಾಧ್ಯಕ್ಷ ಅಭಿನವ ಮುರುಗೇಂದ್ರ ಶಿವಾಚಾರ್ಯರ ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತುಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ ಎಂದು ಕನ್ನಡ ಜಾನಪದ ಪರಿಷತ್ತಿನ ತಾಲೂಕ ಗೌರವಾಧ್ಯಕ್ಷ ಅಭಿನವ ಮುರುಗೇಂದ್ರ ಶಿವಾಚಾರ್ಯರು ಹೇಳಿದರು.ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ಇಂಡಿ ಘಟಕದ ವತಿಯಿಂದ ಹಮ್ಮಿಕೊಂಡ “ವಿಶ್ವ ಜಾನಪದ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜನಪದ ಕಲೆಗಳು ಗ್ರಾಮೀಣ ಜನರ ಜೀವನ ವಿಧಾನ, ನಂಬಿಕೆ, ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಅವುಮನರಂಜನೆ ನೀಡುವ ಜತೆಗೆ ಸಾಮಾಜಿಕ ಬಾಂಧವ್ಯವನ್ನು ವೃದ್ಧಿಗೊಳಿಸಿ, ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಪರಂಪರೆಯನ್ನು ಕೊಂಡೊಯ್ಯುತ್ತವೆ ಎಂದು ಹೇಳಿದರು.ಉಪನ್ಯಾಸ ನೀಡಿ ಮಾತನಾಡಿದ ಶಿಕ್ಷಕ ಸಂತೋಷ ಬಂಡೆ, ನಮ್ಮ ಸನಾತನ ಜನಪದ ಕಲೆಯು ಗ್ರಾಮೀಣ ಸಂಸ್ಕೃತಿ, ಪರಂಪರೆಯ ಪ್ರತೀಕ. ಗ್ರಾಮೀಣ ಜನರ ದೈನಂದಿನ ಬದುಕಿನಲ್ಲಿ ಜನಪದ ಕಲೆ ಹಾಸುಹೊಕ್ಕಾಗಿದೆ. ಸಾಹಿತ್ಯ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಹಿರಿಯರು ತಮ್ಮ ತನುಮನ ಧನಗಳನ್ನು ಅರ್ಪಿಸಿದ್ದು,, ಅವರೆಲ್ಲರ ಶ್ರಮದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತು 78 ವರ್ಷಗಳಾಗಿವೆ. ಇದೀಗ ಮತ್ತೊಂದು ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲು ಇಡೀ ದೇಶವೇ ಸಡಗರ ಮತ್ತು ಉತ್ಸಾಹಗಳಿಂದ ಸಜ್ಜಾಗಿದೆ. ಪ್ರತಿ ಶಾಲೆ ಕಾಲೇಜುಗಳು, ಸಂಘ ಸಂಸ್ಥೆಗಳು ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಧ್ವಜಾರೋಹಣದ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.. ಎಲ್ಲೆಡೆ ತ್ರಿವರ್ಣ ಧ್ವಜದ ಮೆರುಗನ್ನು ಹೆಚ್ಚಿಸಿದ ಈ ದಿನದ ಸಂಭ್ರಮಕ್ಕಾಗಿ ಕಾತರದಿಂದ ಕ್ಷಣಗಣನೆ ನಡೆದಿದೆ. ನಮ್ಮದೇಶವು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ವೈದ್ಯಕೀಯವಾಗಿ ಮತ್ತು ತಾಂತ್ರಿಕವಾಗಿ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ನಾವು ಪತ್ರಿಕೆಗಳಲ್ಲಿ, ರಾಜಕೀಯ ಭಾಷಣಗಳಲ್ಲಿ, ತಜ್ಞರ ಸಮ್ಮೇಳನಗಳಲ್ಲಿ ಕಂಡುಕೊಳ್ಳುತ್ತಿದ್ದೇವೆ. ಆದರೆ ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಇನ್ನೂ ಹಲವಾರು ಸಮಸ್ಯೆಗಳು ಅಗೋಚರ ಗೋಚರವಾಗಿ ನಮ್ಮ ಕಣ್ಣು ಮುಂದೆ ನರ್ತನಗೈಯುತ್ತಿವೆ ಎಂದರೆ ತಪ್ಪಿಲ್ಲ.ಎಲ್ಲವೂ ಸರಿಯೇ ಆದರೆ ಸುಲಿದ ಬಾಳೆಯ ಹಣ್ಣನು ಸುಲಭಸಾಧ್ಯವಾಗಿ ತಿನ್ನುವಂತೆ…
ಲೇಖನ- ರಶ್ಮಿ ಕೆ. ವಿಶ್ವನಾಥ್ ಮೈಸೂರು ಉದಯರಶ್ಮಿ ದಿನಪತ್ರಿಕೆ “ಬಾವಿಯಲ್ಲಿ ನೀರು ಸೇದಲು ಕಟ್ಟಿದ ಬಿಂದಿಗೆ ಒಳಗೆ ಹೋಗುವಾಗ ಅದು ಖಾಲಿ ಇರುವ ಕಾರಣ ಮತ್ತು ಗುರುತ್ವಾಕರ್ಷಣೆಯ ಕಾರಣದಿಂದ, ಬಿಟ್ಟ ತಕ್ಷಣ ಹೋಗಿಬಿಡುತ್ತದೆ. ಮೇಲೆ ಬರುವಾಗ ನೀರು ತುಂಬಿರುತ್ತದೆ ಜೊತೆಗೆ ಮೇಲಕ್ಕೆ ಬರಬೇಕು ಆದ ಕಾರಣ ನಿಧಾನವಾಗಿ ಬರುತ್ತದೆ” ಇದನ್ನು ಹೆಣ್ಣು ತವರು ಮನೆಗೆ ಹೋಗಿಬರುವುದಕ್ಕೆ ಹೋಲಿಸಲಾಗುತ್ತದೆ. ಹಾಗೆಯೇ ಬೆಳಗೆದ್ದು ಕೆಲಸಕ್ಕೆ ಹೋಗುವಾಗ ಲೇಟಾಗುತ್ತದೆ ಎಂಬ ಒತ್ತಡದಲ್ಲಿ ಸಾಧ್ಯವಾದಷ್ಟು ಬೇಗ ಗಾಡಿ ಓಡಿಸಿಕೊಂಡು ಹೋಗುತ್ತೇವೆ. ವಾಪಸ್ಸು ಬರುವಾಗ ಆರಾಮವಾಗಿ ಬರುತ್ತೇವೆ.ಅಂದು ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದೆ. ಸಿಗ್ನಲ್ ಕೆಂಪು ಲೈಟ್ ಬಂದಿದ್ದರಿಂದ ಅಲ್ಲಿಯೇ ನಿಲ್ಲಿಸಿದೆ. ನನ್ನ ಪಕ್ಕದಲ್ಲೇ ಒಂದು ಬೈಕ್, ಸಿಗ್ನಲ್ ದಾಟಿ ಜೋರಾಗಿ ಹೊರಟುಹೋಯಿತು. ತಕ್ಷಣ ಜೋರಾದ ಕೂಗು ಕೇಳಿಸಿದ್ದರಿಂದ, ಭಯ ಆಯಿತು ‘ನಾ ಏನಾದ್ರು ತಪ್ಪು ಮಾಡಿದೆನಾ? ಸಿಗ್ನಲ್ ದಾಟಿದ್ದರೆ ಅದು ತಪ್ಪು ಬಟ್ ನಾ ದಾಟಿಲ್ಲವಲ್ಲ’. ಏನಾಯ್ತು? ಶಬ್ದ ಬಂದ ಕಡೆ ತಿರುಗಿ ನೋಡಿದೆ. ರಸ್ತೆಯ ಬದಿಯಲ್ಲಿ…
