ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರೈತ ಈ ದೇಶದ ಬೆನ್ನೆಲುಬು. ರೈತರ ಪ್ರಗತಿಯೇ ದೇಶದ ಪ್ರಗತಿ ಎಂದು ಯಾಳವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಬುಧವಾರ ವಿ.ಪ್ರಾ.ಗ್ರಾ.ಕೃ.ಸ ಸಂಘದ ೪೯ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತ ಸ್ವಾವಲಂಬಿಯಾಗಿ, ಬದುಕನ್ನು ಆರ್ಥಿಕವಾಗಿ ಉಜ್ವಲಗೊಳಿಸಿಕೊಳ್ಳಬೇಕಾದರೆ ಸಹಕಾರಿ ಸಂಘಗಳಿAದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಹಕಾರ ಸಂಘಗಳ ಬೆಳವಣಿಗೆಗೆ ರೈತರು ಸಹಕಾರ ನೀಡಬೇಕು ಜೊತೆಗೆ ಸಮಯಕ್ಕನುಸಾರ ಸಾಲ ಮರುಪಾವತಿಸಬೇಕು. ಇದರಿಂದ ಉಳಿದ ರೈತರು ಸಾಲಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕಡಕೋಳ ಹಿರೇಮಠದ ಮಹಾಲಿಂಗಸ್ವಾಮೀಜಿ ಸಾನಿಧ್ಯ ವಹಿಸಿ, ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆಯ್.ಲಗಳಿ ವರದಿ ವಾಚಿಸಿ, ಸಂಘ ೨೦೨೪-೨೫ನೇ ಸಾಲಿನಲ್ಲಿ ೬.೮೪ ಲಕ್ಷ ರೂ.ಗಳ ಲಾಭಗಳಿಸಿದೆ ಎಂದರು. ಹುಸೇನಸಾಬ್ ಕರಡಿ ರೈತಗೀತೆ ಮೂಲಕ ಸ್ವಾಗತಿಸಿ, ವಂದಿಸಿದರು.
ವ್ಹಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಲ್.ಎಂ.ನದಾಫ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರ ಬಡಿಗೇರ, ಸಂಘದ ಉಪಾಧ್ಯಕ್ಷ ರಾವ್‌ಸಾಹೇಬಗೌಡ ನ್ಯಾಮಣ್ಣವರ, ನಿರ್ದೇಶಕರಾದ ಶಿವನಗೌಡ ಪಾಟೀಲ, ರವಿ ದೊಡಮನಿ, ಶಿವಾನಂದ ಮೂಲಿಮನಿ, ಸಂಗನಗೌಡ ತಳೇವಾಡ, ಮಾಣಿಕಮ್ಮ ಹುಣಶ್ಯಾಳ, ಶಾಂತಮ್ಮ ದೊಡಮನಿ, ಧರೆಣ್ಣ ಉಪ್ಪಾರ, ಯಲ್ಲಪ್ಪ ಬೂದಿಹಾಳ, ಸಂಗಣ್ಣ ನಾಯ್ಕೋಡಿ ಕುಪಿಂದ್ರ ಜಾವಡಗಿ ಸೇರಿದಂತೆ ಎಲ್ಲ ನಿರ್ದೇಶಕರು, ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

