ಖ್ಯಾತ ಕಲಾವಿದ ಹಾಗೂ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ರಮೇಶ ಚೌಹಾಣ ಸಂತಾಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಿನ ಸಾಹಿತ್ಯ ಲೋಕದ ದಿಗ್ಗಜ, ಪದ್ಮಭೂಷಣ ಡಾ. ಎಸ್.ಎಲ್.ಭೈರಪ್ಪ ಅವರ ಅಗಲಿಕೆಯಿಂದ ಇಡೀ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಗರದ ಖ್ಯಾತ ಕಲಾವಿದ ಹಾಗೂ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ರಮೇಶ ಚೌಹಾಣ ಕಂಬನಿ ಮಿಡಿದಿದ್ದಾರೆ.
ಬುಧವಾರ ಈ ಕುರಿತು “ಉದಯರಶ್ಮಿ” ಯೊಂದಿಗೆ ಮಾತನಾಡಿದ ಅವರು, ನಾಡಿನ ಶ್ರೇಷ್ಠ ಚಿಂತಕರಾಗಿದ್ದ ಡಾ. ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಕೊಡುಗೆ ಅಜರಾಮರ. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾದಂಬರಿಗಳನ್ನು ನೀಡಿ, ಅನೇಕ ಉನ್ನತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಡಾ. ಎಸ್. ಎಲ್. ಭೈರಪ್ಪ ಭವ್ಯ ಭಾರತದ ಸಂಸ್ಕೃತಿಯ ಶ್ರೇಷ್ಠತೆ ಪ್ರತಿಪಾದಿಸಿದ ಮಹಾನ್ ಚೇತನ. ನಾಡು ಒಬ್ಬ ಶ್ರೇಷ್ಠ ಸಾಹಿತಿ, ಸಂಸ್ಕೃತಿಯ ಆರಾಧಕನನ್ನು ಕಳೆದುಕೊಂಡಿದೆ ಎಂದು ಕಲಾವಿದ ರಮೇಶ ಚೌಹಾಣ ಸಂತಾಪ ವ್ಯಕ್ತಪಡಿಸಿದ್ದಾರೆ.

