Author: editor.udayarashmi@gmail.com

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಮ್ಮ ಬಳಿ ಇಲ್ಲದೆ ಇರುವ ವಸ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ನಾವು ಬದುಕಿನಲ್ಲಿ ನಾಗಾಲೋಟದ ಪಯಣ ಸಾಗಿಸಿದ್ದೇವೆ. ಆದರೆ ಯಾವುದನ್ನು ನಾವು ಬೇಕು ಎಂದು ಬಯಸಿ ಪಡೆಯಲು ಆಶಿಸುತ್ತಿರುವೆವೋ ಅದನ್ನು ಈಗಾಗಲೇ ಸಾಕಷ್ಟು ಜನ ತಮ್ಮ ಪ್ರಯತ್ನದ ಮೂಲಕ ಪಡೆದುಕೊಂಡಿದ್ದಾರೆ ಎಂಬುದು ನಾವು ಮರೆತಿರುವ ಒಂದು ಸತ್ಯ ಸಂಗತಿ.ನಿರ್ಜನ ದ್ವೀಪವೊಂದರಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಹಾದು ಹೋಗುತ್ತಿರುವ ಹಡಗೊಂದನ್ನು ಕಂಡು ತಾನು ಬಚಾವಾದೆ ಎಂದುಕೊಳ್ಳುತ್ತಾನೆ ಆದರೆ ಅದೇ ಸಮುದ್ರದಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕ ಎತ್ತ ಹೋಗಬೇಕು ಎಂದು ಅರಿಯದೆ ದಿಕ್ಕು ತಪ್ಪಿದ್ದು ದ್ವೀಪವನ್ನು ಕಂಡೊಡನೆ ಅಬ್ಬ! ಅಂತೂ ನೆಲ ಸಿಕ್ಕಿತು ಎಂದು ಸಂತಸ ಪಡುತ್ತಾನೆ ಇದೇ ಬದುಕಿನ ವಿಪರ್ಯಾಸ ಅಲ್ಲವೇ ಸ್ನೇಹಿತರೆ?ಘಟನೆ ಒಂದೇ, ದೃಶ್ಯವೂ ಅದೇ ಆದರೆ ಎರಡು ವಿಭಿನ್ನ ಗ್ರಹಿಕೆಗಳು ನಮ್ಮನ್ನು ಆಳುತ್ತವೆ ಎಂಬ ಮಾತು ಆಳವಾಗಿ ಮನದಲ್ಲಿ ಚಿಂತನೆಯನ್ನು ಹುಟ್ಟು ಹಾಕುತ್ತದೆ. ನಾವು ಬಯಸುವ ವಸ್ತುವನ್ನು ನಮಗಿಂತ ಮುಂಚೆಯೇ ಆಶಿಸಿ…

Read More

ಲೇಖನ- ಸಂತೋಷ್ ರಾವ್. ಪೆರ್ಮುಡಪಟ್ರಮೆ ಗ್ರಾಮ & ಅಂಚೆ,ಬೆಳ್ತಂಗಡಿ ತಾಲೂಕುದ.ಕ ಜಿಲ್ಲೆದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತು ಬಹುವಾಗಿ ಪ್ರಚಲಿತದಲ್ಲಿದ್ದ ಕಾಲವೊಂದಿತ್ತು. ಆದರೆ ಕಾಲ ಬದಲಾಗಿದ್ದು, ಅದೇ ಮಾತು ಈಗ ‘ಉದ್ಯೋಗಂ ಸರ್ವ ಲಕ್ಷಣಂ’ ಎಂಬಂತಾಗಿ ಉದ್ಯೋಗವಿಲ್ಲದ ವ್ಯಕ್ತಿಗೆ ಬೆಲೆಯೇ ಇಲ್ಲ ಎನ್ನುವ ಸ್ಥಿತಿ ಇದೆ. ಜೊತೆಗೆ ಉದ್ಯೋಗವಿಲ್ಲದ ಮನುಷ್ಯನಿಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದ್ದು, ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಎಲ್ಲ ವಸ್ತುಗಳ ಬೆಲೆಯೂ ಗಗನಮುಖಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕುಟುಂಬದ ನಿರ್ವಹಣೆಗೆ ಬೇಕಾಗುವ ಆದಾಯವನ್ನು ಗಳಿಸುವ ಜವಾಬ್ದಾರಿಯನ್ನು ಕೇವಲ ಗಂಡಸು ಮಾತ್ರ ನಿರ್ವಹಿಸಿದರೆ ಸಾಲದಾಗಿದ್ದು, ಹೆಣ್ಣೂ ಕೂಡ ಉದ್ಯೋಗವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ಸುಳ್ಳಲ್ಲ. ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಹಿಳೆಯರು ಸ್ಥಳೀಯವಾಗಿ ಉದ್ಯೋಗವನ್ನು ಮಾಡುತ್ತಿರುವ ಇಂದಿನ ದಿನಗಳಲ್ಲಿ ತಮ್ಮ ತಮ್ಮ ಉದ್ಯೋಗಗಳಲ್ಲಿ ತಾವು ಪೂರ್ತಿಯಾಗಿ ಕಳೆದು ಹೋಗುವವರೇ ಹೆಚ್ಚು. ಇಂತಹ ವ್ಯಕ್ತಿಗಳು ತಮ್ಮ ತಮ್ಮ ಔದ್ಯೋಗಿಕ ಬದುಕಲ್ಲಿ ಯಶಸ್ವೀ ವ್ಯಕ್ತಿಗಳಾದರೂ, ವೈಯಕ್ತಿಕ (ಸಾಂಸಾರಿಕ) ಜೀವನದಲ್ಲಿ ವಿಫಲರಾಗುವ…

Read More

ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ | ದಸರಾ ಉತ್ಸವ ರಾಜಕೀಯದ ವಿಷಯವಲ್ಲ | ಸಿಎಂ ಸಿದ್ದರಾಮಯ್ಯ ಭವಿಷ್ಯ ಮೈಸೂರು: ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಹಬ್ಬ ದಸರಾ ವೇಳೆಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವುದಿಲ್ಲ ಎಂದು ಹೇಳಿದ್ದ ವಿಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು , ಬಜೆಟ್ ಮಂಡಿಸಲು ಸಾಧ್ಯವಿಲ್ಲ ವೆಂದಿದ್ದರು. ಆದರೂ ನಾನೇ ಎರಡನೇ ಬಾರಿಗೂ ಮುಖ್ಯಮಂತ್ರಿಯಾಗಿ ಮುಂದುವರೆದು ಬಜೆಟ್ ಮಂಡಿಸಿದ್ದೇನೆ ಎಂದರು.ಆದರೆ ಪಕ್ಷದ ವರಿಷ್ಠರ ಆದೇಶದಂತೆ ಎಲ್ಲರೂ ನಡೆಯಬೇಕಿದೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಕನಸಿಗೆ ಕೊಳ್ಳಿ ಇಟ್ಟರು.ದಸರಾ ಉದ್ಘಾಟಕರ ಬಗ್ಗೆ ಬಿಜೆಪಿಯವರು ವಿರೋಧದ ಧ್ವನಿಯೆತ್ತಿದ್ದರು. ಕರ್ನಾಟಕ ಜಾತ್ಯಾತೀತ ರಾಜ್ಯವಾಗಿದ್ದು, ಸಂವಿಧಾನದ ಬಗ್ಗೆ ಅರಿವಿಲ್ಲದವರೇ…

Read More

ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್‌ಟಿಓ) ಅಧಿಕಾರಿ ಜಯರಾಜ ಭೃಂಗಿಮಠ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದಲ್ಲಿ ಖಾಸಗಿ ವಾಹನಗಳನ್ನು ಬಾಡಿಗೆಗೆ ನೀಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್‌ಟಿಓ) ಅಧಿಕಾರಿ ಜಯರಾಜ ಭೃಂಗಿಮಠ ಹಾಗೂ ಅವರ ತಂಡ ಚಡಚಣದ ಎಪಿಎಮ್‌ಸಿ ಯಾರ್ಡ ಮುಂದುಗಡೆ ಇರುವ ಶ್ರೀ ಸಂಗಮೇಶ್ವರ ಚಾಲಕರ ಹಾಗೂ ಮಾಲಿಕರ ಸಂಘದ ಬಾಡಿಗೆಗೆ ಎಂದು ನಿಲ್ಲುವ ಪಾರ್ಕಿಂಗ್ ಸ್ಥಳಕ್ಕೆ ಧೀಡಿರ್ ದಾಳಿ ನಡೆಸಿ ಬಿಳಿ ನಂಬರ್ ಪ್ಲೇಟ್ ಹೊಂದಿದ ಬಾಡಿಗೆ ಕೊಡಲು ಸಜ್ಜಾದ ವಾಹನಗಳನ್ನು ದಂಡ ವಿಧಿಸುವ ಮೂಲಕ ಕ್ರಮ ಕೈಗೊಂಡಿದ್ದಾರೆ.ಬಾಡಿಗೆ ವಾಹನ ಚಾಲಕರು ಇನ್ನು ಮುಂದೆ ಕಡ್ಡಾಯವಾಗಿ ಖಾಕಿ ಬಣ್ಣದ ಉಡುಪುಗಳು ಧರಿಸಲೇಬೇಕು ಮತ್ತು ಅವರ ಹೆಸರು ಮತ್ತು ಊರಿನ ಹೆಸರು ಇರುವ ಲೋಗೊ ಕಡ್ಡಾಯವಾಗಿ ಇರಲೇಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವದು ಎಂದು ಎಚ್ಚರಿಕೆ ನೀಡಿದರು.ಈ ರಸ್ತೆಯಲ್ಲಿ ತಿರುಗಾಡಬೇಕೆಂದರೆ ತಮ್ಮ ಪ್ರಾಣ ಕೈಯಲ್ಲಿ ಹಿಡಿದು ಹೋಗುವ ಪ್ರಸಂಗ ಬಂದಿದೆ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ವಿಜಯನಗರ ಅರಸರು ಆಚರಣೆಗೆ ತಂದ ವಿಜಯದಶಮಿ ಆಚರಣೆಯೇ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಭಾವೈಕ್ಯತೆಯ ಬೆಸುಗೆ, ಜಾತಿ, ಮತ, ಪಂಥಗಳ ಎಲ್ಲೆ ಮೀರಿದ್ದು ಎಂದು ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ಹೇಳಿದರು.ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ ದಸರಾ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ನಾಡ ಹಬ್ಬ ದಸರಾ ಉತ್ಸವದ ಕಳೆ ನಮ್ಮೂರಲ್ಲಿ ಮೊಳಗಲಿ, ಸಾಂಸ್ಕೃತಿಕ ಮನಸ್ಸುಗಳು ಬೆಸೆಯಲಿ, ಎಂದು ಉತ್ಸಾಹಿ ಯುವಕರು ಸೇರಿಕೊಂಡು ವಿದ್ಯಾರ್ಥಿಗಳಿಗೆ ರೈತರಿಗೆ, ಯುವಕರಿಗೆ, ಮಹಿಳೆಯರಿಗೆ, ಆತ್ಮವಿಶ್ವಾಸ ತುಂಬುವ ಸದುದ್ದೇಶದೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಎಲ್ಲರೂ ಒಟ್ಟಾಗಿ ವೈವಿಧ್ಯಮಯವಾಗಿ ಆಚರಿಸುವ ಕಾರ್ಯ ಶ್ಲಾಘನೀಯ ಎಂದರು.ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಿ ಸಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.ಇದೇ ವೇಳೆ ಸಂಗಣ್ಣ…

Read More

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನುಮದಿನ (ಅಕ್ಟೋಬರ್ ೨, ಗುರುವಾರ) ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಪ್ರಶಾಂತ ಕುಲಕರ್ಣಿ ಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿಮೊ: 9845442237 ಉದಯರಶ್ಮಿ ದಿನಪತ್ರಿಕೆ “ನನ್ನ ಜೀವನವೇ ನನ್ನ ಸಂದೇಶ” ಎಂದು ಮಹಾತ್ಮ ಗಾಂಧೀಜಿ ಹೇಳಿದ ಮಾತು ಇಂದಿಗೂ ಪ್ರತಿಧ್ವನಿಸುತ್ತಿದೆ. ಅಕ್ಟೋಬರ್ 2 ರಂದು ನಾವು ಗಾಂಧೀಜಿಯ ಜಯಂತಿ ಯನ್ನು ಆಚರಿಸುತ್ತೇವೆ. ಈ ಆಚರಣೆಯ ಅರ್ಥ ಕೇವಲ ಹೂವಿನ ಮಾಲೆ ಹಾಕುವುದು, ಸ್ಮಾರಕ, ಭಾಷಣ ಮಾಡುವುದು, ಸ್ವಚ್ಛತಾ ಕಾರ್ಯಕ್ರಮ ನಡೆಸುವುದಲ್ಲ. ಗಾಂಧೀಜಿಯವರ ಜೀವನದಿಂದ ಮತ್ತು ಚಿಂತನೆಗಳಿಂದ ನಾವು ಕಲಿಯುವುದು, ಅವನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ವೇಗದ ಅಭಿವೃದ್ಧಿ, ಜಾಗತೀಕರಣದ ಪ್ರಭಾವ, ಸ್ಪರ್ಧಾತ್ಮಕ ಜೀವನಶೈಲಿ ಇವುಗಳಲ್ಲಿ ಗಾಂಧೀಜಿಯವರ ತತ್ತ್ವಗಳು ಹಳೆಯವು, ಅಪ್ರಸ್ತುತವೆಂದು ಕೆಲವರು ಭಾವಿಸಬಹುದು. ಆದರೆ ವಾಸ್ತವ ಏನೆಂದರೆ, ಗಾಂಧೀಜಿಯವರ ಚಿಂತನೆಗಳು ಕಾಲಾತೀತ. ಅವು ಯಾವ ಯುಗದಲ್ಲಾದರೂ ಮಾನವನ ಬದುಕಿಗೆ ಬೆಳಕು ಚೆಲ್ಲಬಲ್ಲವು. ಅವರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಇಂಡಿ ರಸ್ತೆಯಲ್ಲಿರುವ ಗೋಕಾಕ ಚಳುವಳಿ ಹೋರಾಟಗಾರ ಗಂಗಾಧರ ಕೋರಳ್ಳಿ ಪ್ರತಿಷ್ಠಾಪಿತ ಮಹಾಶಕ್ತಿ ನಾಡದೇವಿ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ಮಂಗಳವಾರ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ನೀಲಕಂಠ ಕೋರಳ್ಳಿ, ಮಹಾದೇವಿ ಕೋರಳ್ಳಿ, ವೀಣಾ ಕೋರಳ್ಳಿ ಆದಿತ್ಯ ಕೋರಳ್ಳಿ, ಗಂಗಾಬಾಯಿ ಮನಗೂಳಿ, ತ್ರಿವೇಣಿ ಮನಗೂಳಿ, ಸವಿತಾ ಬಿರಾದಾರ, ನಿಹಾರಿಕಾ ಮಂಟಾಳೆ, ಶಾಂತಾಬಾಯಿ ಬಿದರಿ, ಹಣಮಂತ ಕಲಾದಗಿ, ಶೋಭಾ ಪಾಟೀಲ, ಉಮಾ ಇಟ್ಟಂಗಿ, ಕವಿತಾ ಪ್ಯಾಟಿ ಎಚ್ ಜಿ ವಾಲಿ, ರಾಜೇಂದ್ರ, ಗುರು ಹಿರೇಮಠ, ಸಂಗು ಹಿರೇಮಠ, ಭೀಮರಾಯ ಕುಂಟೋಜಿ, ಕಲ್ಲಪ್ಪ ಶಿವಶರಣ, ಕನ್ನಡದ ಕಟ್ಟಾಳು ಗಂಗಾಧರ ಕೋರಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿ ಲಾಯಪ್ಪ ಇಂಗಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More

“ನಾನು ವಿಜ್ಞಾನಿ-2025” ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರ ಉದಯರಶ್ಮಿ ದಿನಪತ್ರಿಕೆ ಹೊನವಾಡ: ಒಂಬತ್ತು ದಿನಗಳ ಕಾಲ ದೊಡ್ಡಬಳ್ಳಾಪುರದಲ್ಲಿ ನಡೆಯುವ ವಿಶ್ವ ದಾಖಲೆಯ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ತಿಕೋಟಾ ತಾಲೂಕಿನ ಅಧ್ಯಕ್ಷರಾದ ಬೀರಪ್ಪ ಖಂಡೆಕಾರ ತಿಳಿಸಿದರು.ಶುಭ ಹಾರೈಕೆಯ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋ ಧನೆ ಪರಿಷತ್ತು, ಇಸ್ರೋ, ಭಾರತ ಸೇವಾದಳ, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್, ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಸೇರಿದಂತೆ ಅನೇಕ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಪಥಮ ಟೆಲಿಸ್ಕೋಪ್ ತರಬೇತಿ ಶಿಬಿರ “ನಾನೂ ವಿಜ್ಞಾನಿ -2025” ನಡೆಯಲಿದೆ. ಬೆಸೆಂಟ್ ಪಾರ್ಕ್, ಸೈಟ್ಸ್ ಕ್ಯಾಂಪ್, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ)ದಲ್ಲಿ ಅ.1ರಿಂದ ಅ.9ರವರೆಗೆ (9 ದಿನಗಳ ಕಾಲ) ನಡೆಯುವ ಈ ಶಿಬಿರದಲ್ಲಿ ರಾಜ್ಯದ 152 ಮಕ್ಕಳು ಭಾಗವಹಿಸಲಿದ್ದು, ಶಿಬಿರದಲ್ಲಿ…

Read More

ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎಚ್. ಪಠಾಣ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತಗಳಿಗೆ ಚುನಾವಣೆ ನಡೆದಿಲ್ಲ. ಸಂವಿಧಾನದ ಅನುಚ್ಛೇದ ೨೪೩ಇ ಪ್ರತಿ ಪಂಚಾಯುತ ಐದು ವರ್ಷಗಳ ಅವಧಿಯನ್ನು ಹೊಂದಿದ್ದು ಚುನಾವಣೆಗಳನ್ನು ಮುಕ್ತಾಯದ ಮೊದಲು ನಡೆಸಬೇಕೆಂದು ಹೇಳುತ್ತದೆ ಎಂದು ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎಚ್. ಪಠಾಣ ಹೇಳಿದರು.ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಝ್ ಅಧಿನಿಯಮ ೧೯೯೩ ಕ್ಕೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ವಿಂಗಡನೆ ಆಯೋಗವನ್ನು ರಚಿಸುವ ಮೂಲಕ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಚುನಾವಣೆಗಳನ್ನು ಮುಂದೂಡಿತ್ತು. ಈ ತಿದ್ದುಪಡಿಗೆ ಸಭಾ ತ್ಯಾಗ ಮಾಡುವ ಮೂಲಕ ಹಿಂಬಾಗಿಲಿನಿಂದ ಕಾಂಗ್ರೆಸ್ ಪಕ್ಷವು ಕೈ ಜೋಡಿಸಿತ್ತು. ನಂತರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೂ ಅದು ಕೂಡ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು…

Read More

ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಮಾತ್ರವಲ್ಲ, ಸ್ಪಷ್ಟವಾದ ಗುರಿ ಮತ್ತು ಉದ್ದೇಶ ಅಗತ್ಯ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೆ, ಸಮಾಜಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ಜ್ಞಾನವನ್ನು ಬಳಸಿಕೊಳ್ಳಬೇಕು” ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯವು ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಹಯೋಗದಿಂದ ಇತ್ತೀಚಿಗೆ ಆಯೋಜಿಸಿದ್ದ ‘ಸೈಕಾಲಾಜಿಕಲ್ ಕೌನ್ಸಿಲಿಂಗ್ ಫಾರ್ ಕರಿಯರ್ ಗೈಡನ್ಸ್’ ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರಿ-ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ನಗರದ ಆಲ್‌ಅಮೀನ್ ವೈದ್ಯಕೀಯ ಕಾಲೇಜಿನ ಶಸ್ತçಚಿಕಿತ್ಸೆಯ ಸಹಾಯಕ ಪ್ರಾಧ್ಯಾಪಕ ಡಾ.…

Read More