ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಿಜಯನಗರ ಅರಸರು ಆಚರಣೆಗೆ ತಂದ ವಿಜಯದಶಮಿ ಆಚರಣೆಯೇ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಭಾವೈಕ್ಯತೆಯ ಬೆಸುಗೆ, ಜಾತಿ, ಮತ, ಪಂಥಗಳ ಎಲ್ಲೆ ಮೀರಿದ್ದು ಎಂದು ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ ದಸರಾ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ನಾಡ ಹಬ್ಬ ದಸರಾ ಉತ್ಸವದ ಕಳೆ ನಮ್ಮೂರಲ್ಲಿ ಮೊಳಗಲಿ, ಸಾಂಸ್ಕೃತಿಕ ಮನಸ್ಸುಗಳು ಬೆಸೆಯಲಿ, ಎಂದು ಉತ್ಸಾಹಿ ಯುವಕರು ಸೇರಿಕೊಂಡು ವಿದ್ಯಾರ್ಥಿಗಳಿಗೆ ರೈತರಿಗೆ, ಯುವಕರಿಗೆ, ಮಹಿಳೆಯರಿಗೆ, ಆತ್ಮವಿಶ್ವಾಸ ತುಂಬುವ ಸದುದ್ದೇಶದೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಎಲ್ಲರೂ ಒಟ್ಟಾಗಿ ವೈವಿಧ್ಯಮಯವಾಗಿ ಆಚರಿಸುವ ಕಾರ್ಯ ಶ್ಲಾಘನೀಯ ಎಂದರು.
ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಿ ಸಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆ ಸಂಗಣ್ಣ ಸಿದ್ರಾಮಪ್ಪ ಸಾಹು ತುಂಬಗಿ(ವರ್ಷದ ವ್ಯಕ್ತಿ ಪ್ರಶಸ್ತಿ). ರಾಜಅಹ್ಮದ್ ಬಡಿಗೇರ, ನಾಗರತ್ನ ಹೆಚ್ಚ್ ಕುಲ್ಕರ್ಣಿ, ರಮಾಬಾಯಿ ಎಂ ಕುಲ್ಕರ್ಣಿ, ರಾಮಕೃಷ್ಣ ಹುಜರತ್ತಿ(ಆದರ್ಶ ಶಿಕ್ಷಕ/ಶಿಕ್ಷಕಿ ರತ್ನ ಪ್ರಶಸ್ತಿ). ಶಿವಶರಣರಡ್ಡಿ ಜಿ ಡಿಗ್ಗಾವಿ(ಉತ್ತಮ ಕೃಷಿಕ ಪ್ರಶಸ್ತಿ). ಅರುಣ ಚೌವ್ಹಾಣ್( ಸೇವಾ ಸರ್ವೋತ್ತಮ ಪ್ರಶಸ್ತಿ). ಪರುಶುರಾಮ ಎಂಟಮಾನಿ(ಕಲಾ ರತ್ನ ಪ್ರಶಸ್ತಿ). ಪುರಸ್ಕಾರ ನೀಡಿ ಗೌರವಿಸಲಾಯಿತು, ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಮಾಡಿದ ಸೈಯದ್ ಜಿಲಾನಿ ಹಳಿಸಗರ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು , ಮಾಜಿ ಜಿಪಂ ಅಧ್ಯಕ್ಷೆ ಸಿದ್ದನಗೌಡ ಪೊಲೀಸ್ ಪಾಟೀಲ ನಾಡ ದೇವಿಗೆ ಪುಷ್ಪಾರ್ಚನೆ ಮಾಡಿದರು. ವಿಶೇಷ ಆಹ್ವಾನಿತರಾಗಿ ಅಪ್ಪುಗೌಡ ಪಾಟೀಲ ಯಾಳಗಿ, ಪುರಸಭೆ ಅಧ್ಯಕ್ಷ ರಹಿಮಾನ್ ಪಟೇಲ್ ಯಲ್ಗೋಡ್, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ್ ನಾಲತವಾಡ, ನೀಲಕಂಠರಾಯಗೌಡ ಪಾಟೀಲ, ಸಮಿತಿಯ ಅಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ, ಸಮಿತಿಯ ಉಪಾಧ್ಯಕ್ಷ ಇಲಿಯಾಸ್ ವಡಿಕೇರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಂದೇನವಾಜ ನಾಲತವಾಡ ನಿರೂಪಿಸಿದರು, ಸೂಗುರಯ್ಯ ಇಂಡಿ ಸ್ವಾಗತಿಸಿದರು, ಪರುಶುರಾಮ ನಾರಾಯಣಕರ್ ವಂದಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆದು, ಮನಸೂರೆಗೊಂಡಿತು.

