Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದಲ್ಲಿ ಸಂಘದ (100) ಶತಾಬ್ದಿ ಹಾಗೂ ವಿಜಯದಶಮಿ ನಿಮಿತ್ಯ ಶುಕ್ರವಾರ ದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಗಣವೇಷಧಾರಿಗಳ ಭವ್ಯ ಪಥ ಸಂಚಲನ ಆಯೋಜಿಸಲಾಗಿದೆ.ಪಥಸಂಚಲನವು ಎ.ಪಿ.ಎಮ್.ಸಿ. ಇಂದ ಪ್ರಾರಂಭಗೊಂಡು, ಬಸವೇಶ್ವರ ಸರ್ಕಲ್, ಬಜಾರ ರೋಡ, ಅಗಸಿ, ಎಸ್.ಬಿ.ಐ. ಬ್ಯಾಂಕ್, ಬಸವೇಶ್ವರ ಸರ್ಕಲ್, ಸರಕಾರಿ ದವಾಖಾನೆ, ಸಿಂಪಿ ಲಿಂಗಣ್ಣ (ವೃತ್ತ್) ಸರ್ಕಲ್, ಜೇಡರ ದಾಸಿಮಯ್ಯ ಸರ್ಕಲ್, ನೇಕಾರ ಕಾಲೋನಿ ಮಾರ್ಗವಾಗಿ ಸಂಚರಿಸಿ ಸಂಗಮೇಶ್ವರ ಕಾಲೇಜಿನಲ್ಲಿ ಮುಕ್ತಾಯಗೊಳ್ಳಲಿದೆ.ಪಥಸಂಚಲನದಲ್ಲಿ ಹಾವಿನಾಳ ಚರಮೂರ್ತಿ ಮಠದ ವಿಜಯಮಹಾಂತೇಶ ಶಿವಾಚಾರ್ಯರು, ಕರ್ನಾಟಕ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ರಾಮಚಂದ್ರ ಏಕಡೆ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.ಪಥಸಂಚಲನದಲ್ಲಿ ಚಡಚಣ ತಾಲೂಕಿನ ಎಲ್ಲಾ ಗ್ರಾಮದ ಸ್ವಯಂಸೇವಕರು, ಸಂಘದ ಹಿತೈಷಿಗಳು ಅವತ್ತಿನ (ಅ.10) ದಿನ ತಾವೆಲ್ಲರೂ ಕಾರ್ಯಕ್ರಮದಲ್ಲಿ ಗಣವೇಷದೊಂದಿಗೆ ಬಂದು ಪಥ ಸಂಚಲನದಲ್ಲಿ ಭಾಗಿಯಾಗಬೇಕು. ಇದು ನಮ್ಮ ಮನೆಯ ಕಾರ್ಯಕ್ರಮವೆಂದು ತಿಳಿದು ಎಲ್ಲರೂ ಪಥ ಸಂಚಲನದಲ್ಲಿ ಭಾಗವಹಿಸಬೇಕು,ಸುಮಾರು 1000 ಗಣವೇಷಧಾರಿಗಳು ಫಾಲ್ಗೊಳ್ಳಲಿದ್ದಾರೆ ಎಂದು ಚಡಚಣ ತಾಲೂಕಾ ಕಾರ್ಯನಿರ್ವಾಹ ಸಂಜೀವ ಜಾಲಗೇರಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವಾಲ್ಮೀಕಿಯವರು ಒಬ್ಬ ಶ್ರೇಷ್ಠ ಋಷಿ ಮತ್ತು ಕವಿ, ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಕರ್ತೃ, ಮೊಟ್ಟಮೊದಲ ಮಹಾಕಾವ್ಯ ರಚಿಸಿದ್ದರಿಂದ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಒಬ್ಬ ಕ್ರೂರ ವ್ಯಕ್ತಿಯು ಮಹಾನ್ ಋಷಿಯಾಗಿ ಪರಿವರ್ತನೆಯಾದ ಪವಾಡಕ್ಕೆ ನಮ್ಮ ಯುವಕರಿಗೆ ವಾಲ್ಮೀಕಿಯವರ ಜೀವನವೇ ಸಾಕ್ಷಿ ಎಂದು ಕಂದಾಯ ಉಪವಿಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.ಪಟ್ಟಣದ ಆಡಳಿತ ಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿ ಆ ಮೂಲಕ ಭಾರತದ ಪ್ರಾಚೀನ ಬದುಕು ಸಂಸ್ಕೃತಿ ಸಂಬಂಧಗಳು ಜೀವನದ ಮೌಲ್ಯಗಳನ್ನು ವಾಲ್ಮೀಕಿ ದಾಖಲಿಸಿದ್ದಾರೆ. ಮಹಾಕಾವ್ಯದ ಪಾತ್ರಗಳ ಮೂಲಕ ಜವಾಬ್ದಾರಿ ಮತ್ತು ಕರ್ತವ್ಯದ ಮಹತ್ವವನ್ನು ಸಾರಿ ಮುಂದಿನ ಪೀಳಿಗೆಗೆ ಮೌಲ್ಯಯುತ ನ್ಯಾಯ ನಿಷ್ಠ ಪ್ರಾಮಾಣಿಕ ಬದುಕಿನ ಮಾರ್ಗವನ್ನು ತೋರಿದ್ದಾರೆ ಎಂದರು.ಇಒ ಬೀಮಾಶಂಕರ ಕನ್ನೂರ, ಸಮಾಜ ಕಲ್ಯಾಣ ಆಧಿಕಾರಿ ಉಮೇಶ ಲಮಾಣಿ, ಬಿಸಿಎಂ ಅಧಿಕಾರಿ ಗದ್ಯಾಳ, ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಕಾಲಕ, ಮಂಜುನಾಥ ಧುಳೆ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ…

Read More

ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಜಾತಿ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಪೂರ್ಣಗೊಳ್ಳಲು ದಸರಾ ರಜೆ ೧೦ ದಿನಗಳ ಕಾಲ ವಿಸ್ತರಿಸಬೇಕೆಂಬ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕರ ಸಂಘದ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರ ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಂದಿಸಿದ್ದಾರೆ.ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆಯಲು, ಶಾಲೆ ಆರಂಭಗೊಂಡರೆ ಅದಕ್ಕಾಗಿ ಶಿಕ್ಷಕರಿಗೆ ಆಗುವ ಸಮಸ್ಯೆಗಳ ಕುರಿತು, ಮಂಗಳವಾರ ಬೆಳಿಗ್ಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿ ಶಿಕ್ಷಕ ಸಂಘದ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ರಶ್ಮಿ ಮಹೇಶ ಅವರಿಗೆ ಭೇಟಿ ನೀಡಿ ಇನ್ನೂ ಕನಿಷ್ಠ ೧೦ ದಿನಗಳ ಕಾಲ ರಜೆ ನೀಡಬೇಕೆಂದು ಮನವಿ ಮಾಡಲಾಯಿತು.ಅದಕ್ಕಾಗಿಯೇ ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸಿ, ಅ.೮ ರಿಂದ ಅ.೧೮ ರವರೆಗೆ ದಸರಾ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕಳೆದು 15 ದಿನಗಳಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಅತ್ಯಂತ ಒತ್ತಡದಲ್ಲಿ ಶ್ರಮಿಸುತ್ತಿರುವ ರಾಜ್ಯದ ಶಿಕ್ಷಕರಿಗೆ ಸ್ವಲ್ಪ ನಿರಾಳತೆಯ ನಿಟ್ಟುಸಿರು ಬಿಡಲು ಅವಕಾಶ ಮಾಡಿಕೊಟ್ಟಂತಹ ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ, ರಾಜ್ಯ ಸಂಘದ ಅಧ್ಯಕ್ಷರ ಷಡಕ್ಷರಿ ರಾಜ್ಯ ಉಪಾಧ್ಯಕ್ಷ ಸುರೇಶ ಶೆಡಶ್ಯಾಳ ಅವರಿಗೆ ರಾಜ್ಯ ತಂಡಕ್ಕೆ ತಿಕೋಟಾ ತಾಲ್ಲೂಕ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಾಲ್ಮೀಕಿ ಸಮಾಜಕ್ಕೆ ಬಹುದೊಡ್ಡ ಸಾಂಸ್ಕೃತಿಕ ಪರಂಪರೆ ಇದ್ದು, ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾಕಾವ್ಯ ಕೊಟ್ಟ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.ಸಿಂದಗಿ ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜ ಅಕ್ಷರ ಸಂಸ್ಕೃತಿಯಿಂದ ದೂರ ಉಳಿದಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಕಟ್ಟಿಕೊಡಬೇಕಾದ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಸೌಲಭ್ಯಗಳನ್ನು ಎಲ್ಲರೂ ಕಡ್ಡಾಯವಾಗಿ ಬಳಸಿಕೊಳ್ಳಬೇಕು. ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಿಂದಗಿ ಉಪವಿಭಾಗದ ಅಂಚೆ ಇಲಾಖೆಯ ನೀರಿಕ್ಷಕ ಮಹಾಂತೇಶ ತೊಗರಿ ವಿಶೇಷ ಉಪನ್ಯಾಸ ನೀಡಿದರು. ವಾಲ್ಮೀಕಿ ಸಮಾಜದ ಮಹಾ ಸಭಾ ಅಧ್ಯಕ್ಷ ಸಿದ್ದಲಿಂಗ ನಾಯ್ಕೋಡಿ, ನೌಕರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ದುರುದ್ದೇಶಪೂರ್ವಕವಾಗಿ ಅವಮಾನಗೈದು ಗೂಂಡಾಗಿರಿಯ ವಿಕೃತ ಮೆರೆದ ಆರೋಪಿ ಮೇಲೆ ಜಾಮೀನುರಹಿತ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್‌ಐ ಒತ್ತಾಯಿಸುತ್ತದೆ ಎಂದು ಡಿವೈಎಫ್‌ಐ ಕಾರ್ಯದರ್ಶಿ ರಮೇಶ ಸಾಸಾಬಾಳ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದು ದುಷ್ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಹಾಗೂ ನ್ಯಾಯಾಧೀಶರ ಮೇಲೆ ಶೂ ಎಸೆದ ಕೋಮುವಾದಿ ಹೀನ ಮನಸ್ಸಿನ ಆರೋಪಿ ವಕೀಲನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿರುವ ಸಿಜೆಐ ಗವಾಯಿ ಅವರ ಮೇಲೆ ನ್ಯಾಯಾಲಯದ ಕೋಣೆಯಲ್ಲಿ ಆರೋಪಿ ವಕೀಲನು ಶೂ ಎಸೆಯುತ್ತಾ, ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿರುವುದು ಅತ್ಯಂತ ಆಘಾತಕಾರಿಯಾದುದು. ಪೂರ್ವನಿಯೋಜಿತವಾಗಿ ದುರುದ್ದೇಶದಿಂದ ನಡೆಸಿದ ಘಟನೆಯು ದೇಶದ ಸಂವಿಧಾನದ…

Read More

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ | ವಾಲ್ಮೀಕಿ ಮಹರ್ಷಿ ರಚನೆಯ ಮಹಾಕಾವ್ಯ | ಶಾಸಕ ವಿಠ್ಠಲ ಕಟಕಧೋಂಡ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಮಾಯಣದ ಮಹಾಕಾವ್ಯದಲ್ಲಿ ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳು ಒಳಗೊಂಡಿದ್ದು ಆ ಜೀವನ ಮೌಲ್ಯಗಳನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ನೀಡಿದ್ದಾರ ಎಂದು ಶಾಸಕ ವಿಠ್ಠಲ ಕಟಕಧೋಂಡ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವಿಜಯಪುರ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾತನಾಡಿದ ಅವರು ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ, ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯ ಕಾಣಬಹುದಾಗಿದೆ. ಮನುಕುಲದ ಏಳಿಗೆಗಾಗಿ ಅವರು ನೀಡಿದ ಸಂದೇಶ ದಾರಿದೀಪವಾಗಿವೆ. ಮಹರ್ಷಿ ಅವರು ರಾಮಾಯಣದ ಮೂಲಕ ಪ್ರತಿಯೊಬ್ಬರು…

Read More

ಉದಯರಶ್ಮಿ ದಿನಪತ್ರಿಕೆ ಬರದ ನಾಡನ್ನು ತಮ್ಮ ಭಗೀರಥ ಪ್ರಯತ್ನದ ಮೂಲಕ ನೀರಾವರಿಗೆ ಒಳಪಡಿಸಿ ಬರದ ನಾಡನ್ನು ಬಂಗಾರದ ನಾಡನ್ನಾಗಿಸಿದ ಎಂ ಬಿ ಪಾಟೀಲರು ಇಂದು ಕೈಗಾರಿಕಾ ಸಚಿವರಾಗಿ ನಾಡು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವದಾರ ಜೊತೆಗೆ ನೂರಾರು ಕೋಟಿ ಸಿ ಎಸ್ ಆರ್ ಅನುದಾನವನ್ನು ತರುವದರ ಮೂಲಕ ಸರಕಾರಿ ಶಾಲೆಗಳಿಗೆ ಹೊಸ ಚೈತನ್ಯ ತುಂಬಿದ್ದಾರೆ. ನಮ್ಮ ಮತಕ್ಷೇತ್ರದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅವುಗಳಿಗೆ ಕಟ್ಟಡ ಮಾತ್ರವಲ್ಲದೆ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಿ ಖಾಸಗಿ ಶಾಲೆಯಲ್ಲಿ ಓದುವ ಮಗು ಸರಕಾರಿ ಶಾಲೆ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದ ಕೀರ್ತಿ ಎಂ. ಬಿ ಪಾಟೀಲರಿಗೆ ಸಲ್ಲುತ್ತದೆ. ತುಂಬಾ ಹಳೆಯದಾದ ಕಟ್ಟಡಗಳನ್ನು ನೆ ಲಸಮಗೊಳಿಸಿ ಅಗತ್ಯವಿರುವಲ್ಲಿ ಹೊಸಕಟ್ಟಡ ನಿರ್ಮಿಸಿದ್ದಾರೆ. ಕೆಲವು ಶಾಲಾ ಕಟ್ಟಡಗಳನ್ನು ನವಿಕರಿಸಲಾಗಿದೆ. ಬರೀ ಕಟ್ಟಡ ಮಾತ್ರವಲ್ಲ ಜೊತೆಗೆ ಸ್ಮಾರ್ಟ್ಕ್ಲಾಸ್ ಅಳವಡಿಸಲಾಗಿದೆ. ಕಲಿಕೆಗೆ ಮಾತ್ರ ವಲ್ಲದೇ ಉತ್ತಮ ಆಟದ ಮೈದಾನ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಟದ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ಆದರ್ಶ ಆಡಳಿತ, ಆದರ್ಶ ರಾಜ ಹೇಗಿರಬೇಕು ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಜೀವನ ಮೌಲ್ಯಗಳಿರುವದರಿಂದಾಗಿ ವಾಲ್ಮೀಕಿ ರಾಮಾಯಣವು ಒಂದು ಸಾಂಸ್ಕ್ರತಿಕ ಸಂವಿಧಾನವಾಗಿದೆ ಎಂದರೆ ತಪ್ಪಾಗಲಾರದು ಎಂದು ಮಡಿಕೇಶ್ವರ ಪ್ರೌಢಶಾಲೆಯ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಮಾಯಣದಲ್ಲಿರುವ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಾಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ ಎಂದರು.ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಜಗತ್ತಿಗೆ ವಾಲ್ಮೀಕಿ ರಚಿಸಿರುವ ರಾಮಾಯಣವು ಪ್ರತಿಯೊಬ್ಬರೂ ಪರಿವರ್ತನೆ ಮಾಡಿಕೊಳ್ಳಲು ಪೂರಕವಾಗಿದೆ. ಈ ಮಹಾಕಾವ್ಯ ಎಲ್ಲ ಸಮಾಜಕ್ಕೂ ಅಗತ್ಯವಿದೆ. ಪರಿವರ್ತನೆ ಯಾರ ಸ್ವತ್ತಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ,…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಅದು ದೇಶದಲ್ಲಿಯೇ ಪ್ರಖ್ಯಾತವಾದ ವಿಶ್ವವಿದ್ಯಾಲಯ. ಆ ವಿಶ್ವವಿದ್ಯಾಲಯದ ತರಗತಿಯ ಕೋಣೆಯೊಂದರಲ್ಲಿ ಅತ್ಯಂತ ತಲ್ಲಿನತೆಯಿಂದ ಬೋರ್ಡಿನ ಮೇಲೆ ಚಿತ್ರ ಒಂದನ್ನು ಅಲ್ಲಿಯ ಪ್ರೊಫೆಸರ್ ಬಿಡಿಸಿದರು. ಪ್ರೊಫೆಸರ್ ಏನು ಹೇಳಬಹುದು ಎಂಬ ಕುತೂಹಲ ಮಕ್ಕಳಿಗೆ ಕಾಡತೊಡಗಿತು. ಅಂತಿಮವಾಗಿ ತಮ್ಮ ಕಾರ್ಯವನ್ನು ಸಂಪೂರ್ಣಗೊಳಿಸಿದ ಪ್ರೊಫೆಸರ್ ಮಕ್ಕಳತ್ರ ತಿರುಗಿ ಈ ಚಿತ್ರವನ್ನು ಗಮನವಿಟ್ಟು ನೋಡಿ ಎಂದು ಹೇಳಿದರು.ಪ್ರೊಫೆಸರ್ ಅವರ ಮಾತನ್ನು ಕೇಳಿದ ವಿದ್ಯಾರ್ಥಿಗಳುಚಿತ್ರದ ಕಡೆ ಗಮನಹರಿಸಿದರು. ದೊಡ್ಡದಾದ ಮರವೊಂದರ ಟೊಂಗೆಯ ಮೇಲೆ ನಾಲ್ಕು ಹಕ್ಕಿಗಳು ಕುಳಿತಿದ್ದವು. ಇದನ್ನೇ ಮಕ್ಕಳು ಪ್ರೊಫೆಸರರಿಗೆ ಹೇಳಿದರು.ವಿದ್ಯಾರ್ಥಿಗಳ ಮಾತನ್ನು ಕೇಳಿದ ಪ್ರೊಫೆಸರ್ ನಗುತ್ತಾ… ಈ ದೊಡ್ಡ ಮರದ ಟೊಂಗೆಯ ಮೇಲೆ ಇರುವ ನಾಲ್ಕು ಹಕ್ಕಿಗಳಲ್ಲಿ ಮೂರು ಹಕ್ಕಿಗಳು ಮೇಲಕ್ಕೆ ಹಾರಿಹೋಗಲು ನಿರ್ಧರಿಸಿದವು. ಹಾಗಾದರೆ ಮರದ ಮೇಲೆ ಎಷ್ಟು ಹಕ್ಕಿಗಳು ಉಳಿದುಕೊಂಡವು? ಎಂದು ಪ್ರೊಫೆಸರ್ ಪ್ರಶ್ನಿಸಿದರು.ಇದೇನು ಮಹಾ ಪ್ರಶ್ನೆ! ಎಂಬಂತೆ ಕೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ನಗಾಡುತ್ತಾ ಒಂದು ಹಕ್ಕಿ ಎಂದು ಒಕ್ಕೊರಲಿನಿಂದ ಉತ್ತರಿಸಿದರು.…

Read More