ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದಲ್ಲಿ ಸಂಘದ (100) ಶತಾಬ್ದಿ ಹಾಗೂ ವಿಜಯದಶಮಿ ನಿಮಿತ್ಯ ಶುಕ್ರವಾರ ದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಗಣವೇಷಧಾರಿಗಳ ಭವ್ಯ ಪಥ ಸಂಚಲನ ಆಯೋಜಿಸಲಾಗಿದೆ.
ಪಥಸಂಚಲನವು ಎ.ಪಿ.ಎಮ್.ಸಿ. ಇಂದ ಪ್ರಾರಂಭಗೊಂಡು, ಬಸವೇಶ್ವರ ಸರ್ಕಲ್, ಬಜಾರ ರೋಡ, ಅಗಸಿ, ಎಸ್.ಬಿ.ಐ. ಬ್ಯಾಂಕ್, ಬಸವೇಶ್ವರ ಸರ್ಕಲ್, ಸರಕಾರಿ ದವಾಖಾನೆ, ಸಿಂಪಿ ಲಿಂಗಣ್ಣ (ವೃತ್ತ್) ಸರ್ಕಲ್, ಜೇಡರ ದಾಸಿಮಯ್ಯ ಸರ್ಕಲ್, ನೇಕಾರ ಕಾಲೋನಿ ಮಾರ್ಗವಾಗಿ ಸಂಚರಿಸಿ ಸಂಗಮೇಶ್ವರ ಕಾಲೇಜಿನಲ್ಲಿ ಮುಕ್ತಾಯಗೊಳ್ಳಲಿದೆ.
ಪಥಸಂಚಲನದಲ್ಲಿ ಹಾವಿನಾಳ ಚರಮೂರ್ತಿ ಮಠದ ವಿಜಯಮಹಾಂತೇಶ ಶಿವಾಚಾರ್ಯರು, ಕರ್ನಾಟಕ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ರಾಮಚಂದ್ರ ಏಕಡೆ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಪಥಸಂಚಲನದಲ್ಲಿ ಚಡಚಣ ತಾಲೂಕಿನ ಎಲ್ಲಾ ಗ್ರಾಮದ ಸ್ವಯಂಸೇವಕರು, ಸಂಘದ ಹಿತೈಷಿಗಳು ಅವತ್ತಿನ (ಅ.10) ದಿನ ತಾವೆಲ್ಲರೂ ಕಾರ್ಯಕ್ರಮದಲ್ಲಿ ಗಣವೇಷದೊಂದಿಗೆ ಬಂದು ಪಥ ಸಂಚಲನದಲ್ಲಿ ಭಾಗಿಯಾಗಬೇಕು. ಇದು ನಮ್ಮ ಮನೆಯ ಕಾರ್ಯಕ್ರಮವೆಂದು ತಿಳಿದು ಎಲ್ಲರೂ ಪಥ ಸಂಚಲನದಲ್ಲಿ ಭಾಗವಹಿಸಬೇಕು,ಸುಮಾರು 1000 ಗಣವೇಷಧಾರಿಗಳು ಫಾಲ್ಗೊಳ್ಳಲಿದ್ದಾರೆ ಎಂದು ಚಡಚಣ ತಾಲೂಕಾ ಕಾರ್ಯನಿರ್ವಾಹ ಸಂಜೀವ ಜಾಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

