ಉದಯರಶ್ಮಿ ದಿನಪತ್ರಿಕೆ
ಇಂಡಿ: ವಾಲ್ಮೀಕಿಯವರು ಒಬ್ಬ ಶ್ರೇಷ್ಠ ಋಷಿ ಮತ್ತು ಕವಿ, ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಕರ್ತೃ, ಮೊಟ್ಟಮೊದಲ ಮಹಾಕಾವ್ಯ ರಚಿಸಿದ್ದರಿಂದ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಒಬ್ಬ ಕ್ರೂರ ವ್ಯಕ್ತಿಯು ಮಹಾನ್ ಋಷಿಯಾಗಿ ಪರಿವರ್ತನೆಯಾದ ಪವಾಡಕ್ಕೆ ನಮ್ಮ ಯುವಕರಿಗೆ ವಾಲ್ಮೀಕಿಯವರ ಜೀವನವೇ ಸಾಕ್ಷಿ ಎಂದು ಕಂದಾಯ ಉಪವಿಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಪಟ್ಟಣದ ಆಡಳಿತ ಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿ ಆ ಮೂಲಕ ಭಾರತದ ಪ್ರಾಚೀನ ಬದುಕು ಸಂಸ್ಕೃತಿ ಸಂಬಂಧಗಳು ಜೀವನದ ಮೌಲ್ಯಗಳನ್ನು ವಾಲ್ಮೀಕಿ ದಾಖಲಿಸಿದ್ದಾರೆ. ಮಹಾಕಾವ್ಯದ ಪಾತ್ರಗಳ ಮೂಲಕ ಜವಾಬ್ದಾರಿ ಮತ್ತು ಕರ್ತವ್ಯದ ಮಹತ್ವವನ್ನು ಸಾರಿ ಮುಂದಿನ ಪೀಳಿಗೆಗೆ ಮೌಲ್ಯಯುತ ನ್ಯಾಯ ನಿಷ್ಠ ಪ್ರಾಮಾಣಿಕ ಬದುಕಿನ ಮಾರ್ಗವನ್ನು ತೋರಿದ್ದಾರೆ ಎಂದರು.
ಇಒ ಬೀಮಾಶಂಕರ ಕನ್ನೂರ, ಸಮಾಜ ಕಲ್ಯಾಣ ಆಧಿಕಾರಿ ಉಮೇಶ ಲಮಾಣಿ, ಬಿಸಿಎಂ ಅಧಿಕಾರಿ ಗದ್ಯಾಳ, ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಕಾಲಕ, ಮಂಜುನಾಥ ಧುಳೆ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ರಾಹೂರ, ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ಶಿರಸ್ತೆದಾರ ಎಸ್.ಆರ್.ಮುಜಗೊಂಡ, ಆರ್.ಬಿ.ಮೂಗಿ, ಎಸ್.ಜಿ.ನಂದರಗಿ, ಮುಖ್ಯ ಗುರುಗಳು ಎ.ಪಿ.ಬಿರಡ, ಅರ್ಜುನ ವಾಲಿಕಾರ, ಎಚ್.ಎಚ್.ಗುನ್ನಾಪುರ, ಸಂತೋಷ ಹಿರೇಬೇವನೂರ, ಶ್ರೂತು ಖೇಡಗಿ, ಸೌಮ್ಯ ಪಾಟೀಲ, ಸೌಜನ್ಯ ಚಾಂದಕವಠೆ, ಲಲಿತಾ ಬಗಲಿ , ದಾನಮ್ಮ ಕಂಬಾರ ಮತ್ತಿತರಿದ್ದರು.