ಉದಯರಶ್ಮಿ ದಿನಪತ್ರಿಕೆ
ಬರದ ನಾಡನ್ನು ತಮ್ಮ ಭಗೀರಥ ಪ್ರಯತ್ನದ ಮೂಲಕ ನೀರಾವರಿಗೆ ಒಳಪಡಿಸಿ ಬರದ ನಾಡನ್ನು ಬಂಗಾರದ ನಾಡನ್ನಾಗಿಸಿದ ಎಂ ಬಿ ಪಾಟೀಲರು ಇಂದು ಕೈಗಾರಿಕಾ ಸಚಿವರಾಗಿ ನಾಡು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವದಾರ ಜೊತೆಗೆ ನೂರಾರು ಕೋಟಿ ಸಿ ಎಸ್ ಆರ್ ಅನುದಾನವನ್ನು ತರುವದರ ಮೂಲಕ ಸರಕಾರಿ ಶಾಲೆಗಳಿಗೆ ಹೊಸ ಚೈತನ್ಯ ತುಂಬಿದ್ದಾರೆ. ನಮ್ಮ ಮತಕ್ಷೇತ್ರದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅವುಗಳಿಗೆ ಕಟ್ಟಡ ಮಾತ್ರವಲ್ಲದೆ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಿ ಖಾಸಗಿ ಶಾಲೆಯಲ್ಲಿ ಓದುವ ಮಗು ಸರಕಾರಿ ಶಾಲೆ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದ ಕೀರ್ತಿ ಎಂ. ಬಿ ಪಾಟೀಲರಿಗೆ ಸಲ್ಲುತ್ತದೆ. ತುಂಬಾ ಹಳೆಯದಾದ ಕಟ್ಟಡಗಳನ್ನು ನೆ ಲಸಮಗೊಳಿಸಿ ಅಗತ್ಯವಿರುವಲ್ಲಿ ಹೊಸಕಟ್ಟಡ ನಿರ್ಮಿಸಿದ್ದಾರೆ. ಕೆಲವು ಶಾಲಾ ಕಟ್ಟಡಗಳನ್ನು ನವಿಕರಿಸಲಾಗಿದೆ. ಬರೀ ಕಟ್ಟಡ ಮಾತ್ರವಲ್ಲ ಜೊತೆಗೆ ಸ್ಮಾರ್ಟ್ಕ್ಲಾಸ್ ಅಳವಡಿಸಲಾಗಿದೆ. ಕಲಿಕೆಗೆ ಮಾತ್ರ ವಲ್ಲದೇ ಉತ್ತಮ ಆಟದ ಮೈದಾನ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಟದ ಪರಿಕರಗಳನ್ನು ಒದಗಿಸಿ ಕೊಟ್ಟಿರುವ ಎಂ. ಬಿ ಪಾಟೀಲರ ಕಾರ್ಯ ನಿಜಕ್ಕೂ ಅನನ್ಯವಾದದ್ದು. ಇಂದು ಅವರ ಜನ್ಮದಿನ. ಈ ಸಂತೋಷದ ಘಳಿಗೆಯಲ್ಲಿ ನಾನು ಮಕ್ಕಳಿಗಾಗಿ ಇಷ್ಟೆಲ್ಲ ಕೊಡುಗೆ ಕೊಟ್ಟಿರುವ ಜನಮೆಚ್ಚಿದ ಜನನಾಯಕರಾದ ಡಾ ಎಂ. ಬಿ ಪಾಟೀಲರು ಸುಖ, ಸಂತೋಷ, ಆರೋಗ್ಯ, ಸಮೃದ್ಧಿ ಯ ನೆರಳಲ್ಲಿ ನೂರುಕಾಲ ಸುಖವಾಗಿ ಬಾಳಿ ಬೆಳಗಲೆಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸುತ್ತೇನೆ.
– ಸಂಗಮೇಶ ಬಬಲೇಶ್ವರ ಅಧ್ಯಕ್ಷರು, ಕರ್ನಾಟಕ ಬಾಲವಿಕಾಸ ಅಕಾಡೆಮಿ
ಕರ್ನಾಟಕ ಸರಕಾರ

