Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಕಾಡಿನಲ್ಲಿ ಬೇಟೆಗೆ ಹೋದಾಗ ನಾರದ ಮುನಿಗಳ ದರ್ಶನ ಹಾಗೂ ಅವರ ಉಪದೇಶದಿಂದ ಜೀವನ ಬದಲಾಯಿಸಿಕೊಂಡು, ಸರ್ವಶ್ರೇಷ್ಠವಾದ ರಾಮಾಯಣ ಗ್ರಂಥ ರಚಿಸಿ ಜಗತ್ತಿಗೆ ನೀಡಿದರು. ಅಂತಹ ಮಹಾನುಭವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ಮಂಗಳವಾರ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸರ್ಕಾರದಿಂದ ಅನೇಕ ಮಹಾಪುರುಷರ ಜಯಂತ್ಯೋತ್ಸವಗಳನ್ನು ಆಚರಿಸಲಾಗುತ್ತದೆ. ಎಲ್ಲ ಜನಾಂಗಕ್ಕೆ ಬೇಕಾಗಿರುವ ಮಹಾಪುರುಷರ ಕಾರ್ಯಕ್ರಮಗಳಲ್ಲಿ ಆಯಾ ಸಮಾಜದವರು ಮಾತ್ರ ಭಾಗವಹಿಸುವ ಸಂಪ್ರದಾಯ ಬಿಡಬೇಕು. ಎಲ್ಲ ಸಮಾಜದವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಎಲ್ಲ ಗಣ್ಯರಿಗೆ ಗೌರವ ಸಲ್ಲಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಸದಸ್ಯರಾದ ದಿಲಾವರ ಶಿರೋಳ, ಸುನೀಲ ಸಿಂಧೆ, ಮುಖಂಡರಾದ ರಾಮಣ್ಣ ಚಿನಗುಂಡಿ, ಗಂಗಾಧರ ಮಾರ್ದನಿ, ಪುಟ್ಟು ಪಾನಿ, ರಾಜು…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಶ್ರೀಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಮುಂದಿನ ಆವರಣದಲ್ಲಿ ವಾಲ್ಮೀಕಿ ಸಮಾಜ ಬಾಂಧವರು ಹಾಗೂ ಗ್ರಾಮದ ವಿವಿಧ ಪ್ರಗತಿಪರ ಚಿಂತಕರು ಮತ್ತು ಸಾರ್ವಜನಿಕರಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.ಗುರುಮರುಳಾರಾಧ್ಯ ಹಿರೇಮಠದ ಸಿದ್ಧರಾಮ ಶಿವಾಚಾರ್ಯರ ನೇತೃತ್ವದಲ್ಲಿ ಮಹಾಕಾವ್ಯ ಶ್ರೀ ರಾಮಾಯಣವನ್ನು ಬರೆದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸೇರಿದ ಯುವಕರು ಮತ್ತು ಗ್ರಾಮಸ್ಥರು ಅವರ ಸ್ಮರಣೆ ಮಾಡಿಕೊಳ್ಳುವುದರ ಜೊತೆಗೆ ತತ್ವಾದರ್ಶಗಳನ್ನು ಮೌಲಿಕ ವಿಚಾರಗಳನ್ನು ಮೆಲುಕು ಹಾಕಿದರು.ಈ ವೇಳೆ ಸಹಕಾರಿ ಸಂಘಗಳ ಇಲಾಖೆಯ ಕನಕರಾಜ ವಡ್ಡರ, ಯುವ ಮುಖಂಡರಾದ ಹಣಮಂತ ವಡ್ಡರ, ಗ್ರಾಪಂ ಸದಸ್ಯರಾದ ಸುಧಾಕರ ಅಡಕಿ ಮತ್ತು ಜೆಡಿಎಸ್ ಮುಖಂಡರಾದ ರಮೇಶ ಹೆಂಡಿ ಮಾತನಾಡಿದರು.ಈ ವೇಳೆ ಸಣ್ಣಶರಭಯ್ಯ ಗದ್ದಗಿಮಠ, ಬಾಲಪ್ಪ ದೊರೆಗೋಳ, ಶರಣಪ್ಪ ಮೋಪಗಾರ, ಶಿವರಾಜ ದೊರೆಗೋಳ, ಪ್ರವೀಣ ಜಗಶೆಟ್ಟಿ, ಪರಶುರಾಮ ದೊರೆಗೋಳ, ಗ್ರಾಪಂ ಸದಸ್ಯರಾದ ಭೀಮಣ್ಣ ವಡ್ಡರ, ವಿಶ್ವನಾಥ ರಾಠೋಡ, ಜೆ.ಬಿ.ಕುಲಕರ್ಣಿ, ಪ್ರಕಾಶ ಯರನಾಳ, ಪ್ರಶಾಂತ ಬಡಿಗೇರ, ಶಿವಯ್ಯ…

Read More

ಕಲಕೇರಿಯ ಆದರ್ಶ ಪದವಿ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಆದಿಕವಿ ಮಹಾಋಷಿ ವಾಲ್ಮೀಕಿಯು ಬರೆದ ಮಹಾಕಾವ್ಯ ರಾಮಾಯಣವು ಭಾರತೀಯರಿಗೆ ಒಂದು ಪವಿತ್ರ ಗ್ರಂಥವಾಗಿದ್ದು, ನೀತಿ, ಧರ್ಮ, ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಪ್ರಾಚಾರ್ಯರಾದ ಎಸ್.ಎಮ್.ಸಜ್ಜನ ಹೇಳಿದರು.ಗ್ರಾಮದ ಆದರ್ಶ ಪ್ರಥಮದರ್ಜೆ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಅಡಿಯಲ್ಲಿ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ವೇಳೆ ಉಪನ್ಯಾಸಕಿ ಶ್ರೀದೇವಿ ಹೂಲಿ ಅವರು ಮಾತನಾಡಿ, ಪ್ರತಿಯೊಬ್ಬರೂ ವಾಲ್ಮೀಕಿ ರಾಮಾಯಣವನ್ನು ಓದಬೇಕು ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿ ಹೇಳಬೇಕು ಅದು ಪ್ರಗತಿಪರ ಸಮಾಜಕ್ಕೆ ಸನ್ಮಾರ್ಗವನ್ನು ತೋರುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿ ಗೌರವ ಸಮರ್ಪಣೆ ಮಾಡಲಾಯಿತು. ಈ ವೇಳೆ ಉಪನ್ಯಾಸಕರಾದ ಆಬಿದಅಲಿ ಸಾಲೋಡಗಿ, ಎಮ್.ಬಿ.ಸಜ್ಜನ, ಸದ್ದಾಮ ಬಡೇಘರ, ಅಬ್ದುಲ್ ಮುಶ್ರಿಫ್, ವಿನೋದ ನಂದಿಮಠ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಒಬ್ಬ ವ್ಯಕ್ತಿ ಪರಿವರ್ತನೆಯಾದರೆ, ಸಮಾಜದ ರೂಪವೇ ಬದಲಾಗಬಹುದು ಎಂಬುದನ್ನು ಮಹರ್ಷಿ ವಾಲ್ಮೀಕಿ ತೋರಿಸಿಕೊಟ್ಟಿದ್ದಾರೆ. ಅವರು ಕೇವಲ ಮಹಾಕವಿ ಮಾತ್ರವಲ್ಲ, ಪರಿವರ್ತನೆಯ ಹರಿಕಾರರಾಗಿದ್ದಾರೆ,” ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಾಲ್ಮೀಕಿ ರಾಮಾಯಣವು ಕೇವಲ ಸಾಹಿತ್ಯ ಕೃತಿ ಅಲ್ಲ, ಅದು ಆದರ್ಶ ಜೀವನದ ದಾರಿದೀಪ. ಅದರಲ್ಲಿ ಕಾಣುವ ಪಾತ್ರಗಳು ಸಮಾಜಕ್ಕೆ ಅಗತ್ಯವಾದ ಮೌಲ್ಯಗಳನ್ನು ಸಾರುತ್ತವೆ. ಆ ಮೌಲ್ಯಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಮಹರ್ಷಿ ವಾಲ್ಮೀಕಿಯವರು ರಾಮಾಯಣ ರಚಿಸುವ ಮೊದಲು ಸಮಾಜದ ಓರೆಕೋರೆಗಳು, ಮಾನವ ಜೀವನದ ವಿವಿಧ ಆಯಾಮಗಳು ಹಾಗೂ ನೈತಿಕ ಮೌಲ್ಯಗಳ ಕುರಿತು ಸುದೀರ್ಘ ಅಧ್ಯಯನ…

Read More

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರು, ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಸರಕಾರಿ ಗೋಮಾಳ ಖಾಸಗೀ ವ್ಯಕ್ತಿಗಳ ಹೆಸರಿಗೆ ಪರಭಾರೆಯಾಗಿದ್ದನ್ನು ವಿರೋಧಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಪ್ರಯುಕ್ತ ೧೯.೨೩ ಎಕರೆ ಜಮೀನು ಸರಕಾರಕ್ಕೆ ಮರಳಿದೆ.ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೆ ನಂ. ೫೯/೧ ರಲ್ಲಿನ ಸುಮಾರು ೧೯ ಎಕರೆ ೨೩ ಗುಂಟೆ ಜಮೀನು ಸರಕಾರ ಜಾನುವಾರುಗಳನ್ನು ಮೇಯಿಸಲು (ಗೋಮಾಳ) ಮೀಸಲಿರಿಸಿತ್ತು ಅದಕ್ಕೆ ಧಾಖಲೆಗಳಲ್ಲಿ ಗುರುಚರಣ (ಸರಕಾರಿ ಜಮೀನು) ಎಂದು ನೊಂದನಿಯಾಗಿರುತ್ತದೆ ಈ ಭಾಗದಲ್ಲಿ ಬಹುತೇಕ ಗೋಮಾಳ ಜಾಗೆಗಳಿಗೆ ಗುರುಚರಣ ಎಂದೇ ದಾಖಲಾಗಿರುತ್ತವೆ ಇದನ್ನೇ ದುರುಪಯೋಗ ಪಡೆದುಕೊಂಡ ಶಿವಮೊಗ್ಗದ ಶ್ರೀ ಗುರುಚರಣ ಬಿನ್ ಮುರುಳಪ್ಪ ಎನ್ನುವ ವ್ಯಕ್ತಿ ದಿನಾಂಕ ೧೪-೮-೨೦೨೫ರಂದು ಶಿವಮೊಗ್ಗದ ಉಪನೊಂದನಾಧಿಕಾರಿ ಕಛೇರಿಯಲ್ಲಿ ತಮ್ಮ ಹೆಸರಿಗೆ ಮುಕ್ತ್ಯಾರ ಪತ್ರ (ಜಿಪಿಎ) ಮಾಡಿಕೊಂಡಿದ್ದಾರೆ, ನಂತರ ದಿನಾಂಕ ೨೬-೮-೨೦೨೫ರಂದು ಒಟ್ಟು ಮುಕ್ತ್ಯಾರ ಪತ್ರದನ್ವಯ ಮುಧೋಳ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಮುಧೋಳ…

Read More

ಬಿಎಲ್‌ಡಿಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಉಪಪ್ರಾಚಾರ್ಯ ಡಾ.ಅನೀಲ್ .ಭೀ ನಾಯಕ,ಡಾ.ಮಹೇಶಕುಮಾರ, ಡಾ.ಶ್ರೀನಿವಾಸ ದೊಡ್ಡಮನಿ, ಡಾ.ಉಷಾದೇವಿ ಹಿರೇಮಠ, ಪ್ರೊ.ವಿದ್ಯಾ ಪಾಟೀಲ.ಪ್ರೊ.ಶ್ರೀಧರ್ ಜೋಶಿ,ಡಾ.ಎಸ್.ಎನ್ ಉಂಕಿ,ಅಕ್ಷಯ ಜನಾಯ್ ಸೇರಿದಂತೆ ಇನ್ನಿತರ ಮಹಾವಿದ್ಯಾಲಯದ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕಾಂಗ್ರೇಸ್ ಸರ್ಕಾರದಲ್ಲಿ ಹಣ ಸಂಪೂರ್ಣವಾಗಿ ಖಾಲಿಯಾಗಿ,ಕೋಮಾ ಸ್ಥಿತಿ ತಲುಪಿದೆ. ಕಾಂಗ್ರೇಸ್ ಶಾಸಕರಿಗೆ ಹಣ ನೀಡುತ್ತಿಲ್ಲ. ತಮ್ಮ ಸರ್ಕಾರದ ವಿರುದ್ಧವೇ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ನಡೆಸುವುದಕ್ಕಿಂತ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಾಶಿನಾಥ ಚನವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಯುವ ಕಾಂಗ್ರೇಸ್ ವತಿಯಿಂದ ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಪ್ರತಿಭಟನೆ ಮಾಡುವದನ್ನು ಬಿಟ್ಟು ತಮ್ಮ ಸರ್ಕಾರದ ವಿರುದ್ಧ ವಿಧಾನಸಭೆ ಮುಂದೆ ಪ್ರತಿಭಟನೆ ಮಾಡಿ ಕೋಮಾದಲ್ಲಿರುವ ಸರ್ಕಾರವನ್ನು ಎಚ್ಚರಿಸಬೇಕು, ಸರ್ಕಾರದಲ್ಲಿ ನಯಾಪೈಸೆ ಹಣವಿಲ್ಲ ಆರ್ಥಿಕತೆಯಲ್ಲಿ ಮುಗ್ಗರಿಸಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು.ಪಕ್ಕದ ಮುಧೋಳ, ಬೀಳಗಿ, ಬಾಗಲಕೋಟೆಯಲ್ಲಿ ಹೋಗಿ ರಸ್ತೆಯನ್ನು ನೋಡಿದರೆ ಇಲ್ಲಿನ ಕಾಂಗ್ರೇಸನವರಿಗೆ ಗೊತ್ತಾಗುತ್ತದೆ. ಬೆಂಗಳೂರು ಹಿಡಿದು ರಾಜ್ಯದ ಎಲ್ಲ ನಗರ, ಪಟ್ಟಣಗಳ ಹಾಗೂ ಹಳ್ಳಿಗಳ ರಸ್ತೆಗಳು ಪೂರ್ತಿಯಾಗಿ ಹದಗೆಟ್ಟಿದ್ದು, ವಾಹನಗಳು ಓಡಾಡುವದು ಬೀಡಿ ಅಲ್ಲಿ ನಡೆದುಕೊಂಡು ಹೋಗಲು ಅಸಾಧ್ಯವಾಗಿದೆ ಎಂದರು. ಈ ಹಿಂದೆ ಗುತ್ತಿಗೆದಾರರು ಮಾಡಿರುವ ಕಾಮಗಾರಿಗಳಿಗೆ…

Read More

ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ 16 ಕಿ.ಮೀ ಓಡುವ ಮೂಲಕ ಆಚರಿಸಿದ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯದ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ 16 ಕಿ.ಮೀ ಓಡುವ ಮೂಲಕ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಸಚಿವ ಎಂ.ಬಿ.ಪಾಟೀಲ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.ಮಂಗಳವಾರ ಬೆ.6 ಗಂ. ಬಿ.ಎಂ.ಪಾಟೀಲ ವೃತ್ತದಿಂದ ಓಟ ಆರಂಭಿಸಿದ ಸದಸ್ಯರು, ಸೋಲಾಪುರ, ಅರಕೇರಿ ರಸ್ತೆ ಮೂಲಕ ಭೂತನಾಳ ಕೆರೆ ಪರಿಸರದಲ್ಲಿ, ಕರಾಡ ದೊಡ್ಡಿ ಅರಣ್ಯದಲ್ಲಿ ಓಡುತ್ತ, ಬಿ.ಎಂ.ಪಾಟೀಲ ವೃತ್ತಕ್ಕೆ ಮರಳಿದರು. ಒಟ್ಟು 16 ಕಿ.ಮೀ ಓಟದಲ್ಲಿ 15 ಕ್ಕೂ ಹೆಚ್ಚು ವಿಸಿಜಿ ಸದಸ್ಯರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಸತತ ಬರಗಾಲದ ಈ ಭಾಗಕ್ಕೆ ನೀರಾವರಿ ಕಾರ್ಯಗಳ ಮೂಲಕ ಅರಣ್ಯದ ಜಾಗೃತಿಯ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಜೊತೆಗೆ ಜಲ ವೃಕ್ಷ, ಶಿಕ್ಷಣ ಈ ಮೂರು ಕ್ಷೇತ್ರದಲ್ಲಿ ಎಂ.ಬಿ.ಪಾಟೀಲ ಅವರ ಕೊಡುಗೆ ಅನನ್ಯವಾಗಿದೆ. ಮುಂದಿನ ಜನಾಂಗದ ಭವಿಷ್ಯದ…

Read More

ಸಚಿವ ಎಂ.ಬಿ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಉಕ್ಕಲಿ, ದೇವರಗೆಣ್ಣೂರ, ಬಬಲೇಶ್ವರ ಹಾಗೂ ತಿಕೋಟಾಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಜಿಲ್ಲೆಯ ಉಕ್ಕಲಿ, ದೇವರಗೆಣ್ಣೂರ, ಬಬಲೇಶ್ವರ ಹಾಗೂ ತಿಕೋಟಾಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜಿಸಲಾಗಿತ್ತು.ಈ ಶಿಬಿರಗಳಲ್ಲಿ 2000ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಇರುವ ರೋಗಿಗಳಿಗೆ ವಿಜಯಪುರ ನಗರದ ಬಿ.ಎಲ್.ಡಿ.ಈ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಈ ಚಿಕಿತ್ಸೆ ಶಿಬಿರದಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಕಿವಿ, ಮೂಗು ಹಾಗೂ ಗಂಟಲು, ಹೆರಿಗೆ ಮತ್ತು ಪ್ರಸೂತಿ, ಚಿಕ್ಕಮಕ್ಕಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮನುಷ್ಯ ಬದುಕಿನ ಸಾರ್ವಕಾಲಿಕ ಆದರ್ಶಗಳನ್ನು ರಾಮಾಯಣ ದ ಮೂಲಕ ಮಹರ್ಷಿ ವಾಲ್ಮೀಕಿಯವರು ತಿಳಿಸಿದ್ದಾರೆ ಎಂದು ಕೊಲ್ಹಾರ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು.ಕೊಲ್ಹಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿಯ‌ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿಯವರು ತಮ್ಮ ಮಹಾಕಾವ್ಯ ರಾಮಾಯಣದ ಇಪ್ಪತ್ನಾಲ್ಕು ಸಾವಿರ ಸಂಸ್ಕೃತ ಶ್ಲೋಕಗಳಲ್ಲಿ ಮನುಷ್ಯ ಬದುಕಿನ ಸಾರ್ವಕಾಲಿಕ ಸತ್ಯ ಮತ್ತು ಆದರ್ಶಗಳನ್ನು ಕಟ್ಟಿಕೊಡುವ ಮೂಲಕ ವಿಶ್ವದ ಕವಿಯಾಗಿ ಹೊರಹೊಮ್ಮಿ ಜಗತ್ತಿನ ಕವಿಗಳಿಗೆಲ್ಲಾ ಮಾರ್ಗದರ್ಶಿಯಾಗಿದ್ದಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ, ಕೊಲ್ಹಾರ ವಾಲ್ಮೀಕಿ ಸಮಾಜದ ಮುಖಂಡರಾದ ಗೂಳಪ್ಪ ವಾಲಿಕಾರ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿಯವರು ತೋರಿಸಿದ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರುಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ವೇದಮೂರ್ತಿ ಮಲ್ಲಯ್ಯ ಸ್ವಾಮಿ ಹಿರೇಮಠ ಪೂಜೆ ಸಲ್ಲಿಸಿದರು, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ದಳವಾಯಿ, ಉಪಾಧ್ಯಕ್ಷ ಶಿವಾನಂದ ಈರಗಾರ ಮುಖಂಡರಾದ ಮಲ್ಲಿಕಾರ್ಜುನ ನಾಯ್ಕೋಡಿ, ಸಂಗಪ್ಪ ಚಿತ್ತಾಪುರ, ಲಕ್ಕಪ್ಪ ದಳವಾಯಿ, ಬಸವರಾಜ…

Read More