ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಶ್ರೀಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಮುಂದಿನ ಆವರಣದಲ್ಲಿ ವಾಲ್ಮೀಕಿ ಸಮಾಜ ಬಾಂಧವರು ಹಾಗೂ ಗ್ರಾಮದ ವಿವಿಧ ಪ್ರಗತಿಪರ ಚಿಂತಕರು ಮತ್ತು ಸಾರ್ವಜನಿಕರಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ಗುರುಮರುಳಾರಾಧ್ಯ ಹಿರೇಮಠದ ಸಿದ್ಧರಾಮ ಶಿವಾಚಾರ್ಯರ ನೇತೃತ್ವದಲ್ಲಿ ಮಹಾಕಾವ್ಯ ಶ್ರೀ ರಾಮಾಯಣವನ್ನು ಬರೆದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸೇರಿದ ಯುವಕರು ಮತ್ತು ಗ್ರಾಮಸ್ಥರು ಅವರ ಸ್ಮರಣೆ ಮಾಡಿಕೊಳ್ಳುವುದರ ಜೊತೆಗೆ ತತ್ವಾದರ್ಶಗಳನ್ನು ಮೌಲಿಕ ವಿಚಾರಗಳನ್ನು ಮೆಲುಕು ಹಾಕಿದರು.
ಈ ವೇಳೆ ಸಹಕಾರಿ ಸಂಘಗಳ ಇಲಾಖೆಯ ಕನಕರಾಜ ವಡ್ಡರ, ಯುವ ಮುಖಂಡರಾದ ಹಣಮಂತ ವಡ್ಡರ, ಗ್ರಾಪಂ ಸದಸ್ಯರಾದ ಸುಧಾಕರ ಅಡಕಿ ಮತ್ತು ಜೆಡಿಎಸ್ ಮುಖಂಡರಾದ ರಮೇಶ ಹೆಂಡಿ ಮಾತನಾಡಿದರು.
ಈ ವೇಳೆ ಸಣ್ಣಶರಭಯ್ಯ ಗದ್ದಗಿಮಠ, ಬಾಲಪ್ಪ ದೊರೆಗೋಳ, ಶರಣಪ್ಪ ಮೋಪಗಾರ, ಶಿವರಾಜ ದೊರೆಗೋಳ, ಪ್ರವೀಣ ಜಗಶೆಟ್ಟಿ, ಪರಶುರಾಮ ದೊರೆಗೋಳ, ಗ್ರಾಪಂ ಸದಸ್ಯರಾದ ಭೀಮಣ್ಣ ವಡ್ಡರ, ವಿಶ್ವನಾಥ ರಾಠೋಡ, ಜೆ.ಬಿ.ಕುಲಕರ್ಣಿ, ಪ್ರಕಾಶ ಯರನಾಳ, ಪ್ರಶಾಂತ ಬಡಿಗೇರ, ಶಿವಯ್ಯ ಗಣೇಶಮಠ, ಶ್ರೀಶೈಲ ಬಡಿಗೇರ, ರಾಜು ಈಳಗೇರ, ವೀರೇಶ ನೆಲ್ಲಗಿ, ಮುದುಕಣ್ಣ ಜೋಗೂರ ಸೇರಿದಂತೆ ಇತರರು ಇದ್ದರು.

