ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮನುಷ್ಯ ಬದುಕಿನ ಸಾರ್ವಕಾಲಿಕ ಆದರ್ಶಗಳನ್ನು ರಾಮಾಯಣ ದ ಮೂಲಕ ಮಹರ್ಷಿ ವಾಲ್ಮೀಕಿಯವರು ತಿಳಿಸಿದ್ದಾರೆ ಎಂದು ಕೊಲ್ಹಾರ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು.
ಕೊಲ್ಹಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿಯವರು ತಮ್ಮ ಮಹಾಕಾವ್ಯ ರಾಮಾಯಣದ ಇಪ್ಪತ್ನಾಲ್ಕು ಸಾವಿರ ಸಂಸ್ಕೃತ ಶ್ಲೋಕಗಳಲ್ಲಿ ಮನುಷ್ಯ ಬದುಕಿನ ಸಾರ್ವಕಾಲಿಕ ಸತ್ಯ ಮತ್ತು ಆದರ್ಶಗಳನ್ನು ಕಟ್ಟಿಕೊಡುವ ಮೂಲಕ ವಿಶ್ವದ ಕವಿಯಾಗಿ ಹೊರಹೊಮ್ಮಿ ಜಗತ್ತಿನ ಕವಿಗಳಿಗೆಲ್ಲಾ ಮಾರ್ಗದರ್ಶಿಯಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಕೊಲ್ಹಾರ ವಾಲ್ಮೀಕಿ ಸಮಾಜದ ಮುಖಂಡರಾದ ಗೂಳಪ್ಪ ವಾಲಿಕಾರ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿಯವರು ತೋರಿಸಿದ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು
ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ವೇದಮೂರ್ತಿ ಮಲ್ಲಯ್ಯ ಸ್ವಾಮಿ ಹಿರೇಮಠ ಪೂಜೆ ಸಲ್ಲಿಸಿದರು, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ದಳವಾಯಿ, ಉಪಾಧ್ಯಕ್ಷ ಶಿವಾನಂದ ಈರಗಾರ ಮುಖಂಡರಾದ ಮಲ್ಲಿಕಾರ್ಜುನ ನಾಯ್ಕೋಡಿ, ಸಂಗಪ್ಪ ಚಿತ್ತಾಪುರ, ಲಕ್ಕಪ್ಪ ದಳವಾಯಿ, ಬಸವರಾಜ ರೊಳ್ಳಿ, ಈರಣ್ಣ ಮಸೂತಿ, ಭೀಮಣ್ಣ ದಳವಾಯಿ, ಶಂಕರ ದಳವಾಯಿ, ಮಲ್ಲಿಕಾರ್ಜುನ ಆಕಳವಾಡಿ, ಸೋಮಲಿಂಗ ದಳವಾಯಿ, ಜಗದೀಶ ದಳವಾಯಿ, ಯಲ್ಲಪ್ಪ ಕನಮುಚನಾಳ, ಸಿದ್ದು ಪೂಜಾರಿ, ಪರಸಪ್ಪ ತೆಲಗಿ, ಹರಿಶ್ಚಂದ್ರ ತಳವಾರ, ಹಣಮಂತ ಪೂಜಾರ ಹಾಗೂ ನಿಂಗಪ್ಪ ಗಣಿ, ಸೋಮು ಬಿರಾದಾರ ರೈತ ಸಂಘದ ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿ ಗೊಳಸಂಗಿ ಉಪಸ್ಥಿತರಿದ್ದರು
ಉಪ ತಹಶೀಲ್ದಾರ್ ಕೃಷ್ಣ ಗೂಡೂರು, ಚಂದ್ರಶೇಖರ ಈಟಿ, ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಮನು ಪತ್ತಾರ ಕಲಕೇರಿ, ಸೈಪಾನ್ ಕೊರ್ತಿ, ಸಿದ್ದು ಬಿಸಷ್ಟಣ್ಣವರ್, ಲಕ್ಷ್ಮಣ್ ಕುಂಬಾರ, ಧರೆಪ್ಪ ಚವ್ಹಾಣ, ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವರ್ಗದವರು
ಭಾಗವಹಿಸಿದ್ದರು
ತಹಶೀಲ್ದಾರ್ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮದ ನಂತರ
ಪಟ್ಟಣದ ಶ್ರೀ ದಿಗಂಬರೇಶ್ವರ ಮಠದಿಂದ ಮಹರ್ಷಿ ವಾಲ್ಮೀಕಿಯವರ ಭಾವ ಚಿತ್ರದ ಮೆರವಣಿಗೆ ಆಯೋಜಿಸಲಾಯಿತು ನೂರಾರು ಮಹಿಳೆಯರು ಕುಂಭ ಹಾಗೂ ಕೆಲಸದೊಂದಿಗೆ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು

