ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಕಾಡಿನಲ್ಲಿ ಬೇಟೆಗೆ ಹೋದಾಗ ನಾರದ ಮುನಿಗಳ ದರ್ಶನ ಹಾಗೂ ಅವರ ಉಪದೇಶದಿಂದ ಜೀವನ ಬದಲಾಯಿಸಿಕೊಂಡು, ಸರ್ವಶ್ರೇಷ್ಠವಾದ ರಾಮಾಯಣ ಗ್ರಂಥ ರಚಿಸಿ ಜಗತ್ತಿಗೆ ನೀಡಿದರು. ಅಂತಹ ಮಹಾನುಭವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಮಂಗಳವಾರ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸರ್ಕಾರದಿಂದ ಅನೇಕ ಮಹಾಪುರುಷರ ಜಯಂತ್ಯೋತ್ಸವಗಳನ್ನು ಆಚರಿಸಲಾಗುತ್ತದೆ. ಎಲ್ಲ ಜನಾಂಗಕ್ಕೆ ಬೇಕಾಗಿರುವ ಮಹಾಪುರುಷರ ಕಾರ್ಯಕ್ರಮಗಳಲ್ಲಿ ಆಯಾ ಸಮಾಜದವರು ಮಾತ್ರ ಭಾಗವಹಿಸುವ ಸಂಪ್ರದಾಯ ಬಿಡಬೇಕು. ಎಲ್ಲ ಸಮಾಜದವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಎಲ್ಲ ಗಣ್ಯರಿಗೆ ಗೌರವ ಸಲ್ಲಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಸದಸ್ಯರಾದ ದಿಲಾವರ ಶಿರೋಳ, ಸುನೀಲ ಸಿಂಧೆ, ಮುಖಂಡರಾದ ರಾಮಣ್ಣ ಚಿನಗುಂಡಿ, ಗಂಗಾಧರ ಮಾರ್ದನಿ, ಪುಟ್ಟು ಪಾನಿ, ರಾಜು ಚಿಕನಾಳ, ಅಜಯ ಕಡಪಟ್ಟಿ, ಅಂಬರೇಶ ಗುದ ಗುಡದಾರ ಮುಂತಾದವರಿದ್ದರು. ತಹಸೀಲ್ದಾರ ಅನೀಲ ಬಡಿಗೇರ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಓ ಸಚೀನ ಮಾಚಕನೂರ, ಪೌರಾಯುಕ್ತ ಜ್ಯೋತಿಗಿರೀಶ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ ಪಾಸೋಡಿ, ಅಬಕಾರಿ ಇಲಾಖೆಯ ಅಧಿಕಾರಿ ಗೀತಾ ತೆಗ್ಯಾಳ ಇದ್ದರು.

