ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕಾಂಗ್ರೇಸ್ ಸರ್ಕಾರದಲ್ಲಿ ಹಣ ಸಂಪೂರ್ಣವಾಗಿ ಖಾಲಿಯಾಗಿ,
ಕೋಮಾ ಸ್ಥಿತಿ ತಲುಪಿದೆ. ಕಾಂಗ್ರೇಸ್ ಶಾಸಕರಿಗೆ ಹಣ ನೀಡುತ್ತಿಲ್ಲ. ತಮ್ಮ ಸರ್ಕಾರದ ವಿರುದ್ಧವೇ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ನಡೆಸುವುದಕ್ಕಿಂತ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಾಶಿನಾಥ ಚನವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಕಾಂಗ್ರೇಸ್ ವತಿಯಿಂದ ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಪ್ರತಿಭಟನೆ ಮಾಡುವದನ್ನು ಬಿಟ್ಟು ತಮ್ಮ ಸರ್ಕಾರದ ವಿರುದ್ಧ ವಿಧಾನಸಭೆ ಮುಂದೆ ಪ್ರತಿಭಟನೆ ಮಾಡಿ ಕೋಮಾದಲ್ಲಿರುವ ಸರ್ಕಾರವನ್ನು ಎಚ್ಚರಿಸಬೇಕು, ಸರ್ಕಾರದಲ್ಲಿ ನಯಾಪೈಸೆ ಹಣವಿಲ್ಲ ಆರ್ಥಿಕತೆಯಲ್ಲಿ ಮುಗ್ಗರಿಸಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಪಕ್ಕದ ಮುಧೋಳ, ಬೀಳಗಿ, ಬಾಗಲಕೋಟೆಯಲ್ಲಿ ಹೋಗಿ ರಸ್ತೆಯನ್ನು ನೋಡಿದರೆ ಇಲ್ಲಿನ ಕಾಂಗ್ರೇಸನವರಿಗೆ ಗೊತ್ತಾಗುತ್ತದೆ. ಬೆಂಗಳೂರು ಹಿಡಿದು ರಾಜ್ಯದ ಎಲ್ಲ ನಗರ, ಪಟ್ಟಣಗಳ ಹಾಗೂ ಹಳ್ಳಿಗಳ ರಸ್ತೆಗಳು ಪೂರ್ತಿಯಾಗಿ ಹದಗೆಟ್ಟಿದ್ದು, ವಾಹನಗಳು ಓಡಾಡುವದು ಬೀಡಿ ಅಲ್ಲಿ ನಡೆದುಕೊಂಡು ಹೋಗಲು ಅಸಾಧ್ಯವಾಗಿದೆ ಎಂದರು. ಈ ಹಿಂದೆ ಗುತ್ತಿಗೆದಾರರು ಮಾಡಿರುವ ಕಾಮಗಾರಿಗಳಿಗೆ ಎರಡು ವರ್ಷ ಕಳೆದರು ಬಿಲ್ ಪಾವತಿಯಾಗುತ್ತಿಲ್ಲ, ಗುತ್ತಿಗೆದಾರರಿಗೆ ಸಾಯುವ ಪರಿಸ್ಥಿತಿ ಬಂದಿದೆ, ಬಿಲ್ ಪಡೆಯಲು ಅಧಿಕಾರಿಗಳು ಶೇ.80 ರಷ್ಟು ಕಮಿಶನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ ಅವರಿಗೆ ಮೊದಲು ಹಣ ನೀಡಿ ಆಮೇಲೆ ಪ್ರತಿಭಟನೆ ಮಾಡಬೇಕು ಎಂದು ತಿಳಿಸಿದ್ದಾರೆ.

