Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ.ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರತಿಷ್ಠಿತ ಟೋಯೋಟಾ ಕಿರ್ಲೋಸ್ಕರ ಪ್ರೈ. ಲಿ. ಸಂಸ್ಥೆ ಆಯೋಜಿಸಿದ್ದ ನೇರ ಸಂದರ್ಶನ ಉದ್ಯೋಗ ಮೇಳದಲ್ಲಿ 120 ಯುವಕರು ಆಯ್ಕೆಯಾಗಿದ್ದಾರೆ.ಅ.9 ಗುರುವಾರ ನಡೆದ ಈ ಸಂದರ್ಶನದಲ್ಲಿ 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಿರ್ಲೋಸ್ಕರ ಸಂಸ್ಥೆಯ ವತಿಯಿಂದ ಮಾನವ ಸಂಪನ್ಮೂಲ ಅಧಿಕಾರಿ ಅಭಿಷೇಕ ಮತ್ತು ಹಿರಿಯ ತರಬೇತಿ ಅಧಿಕಾರಿಗಳು ಸಂದರ್ಶನ ನಡೆಸಿದ್ದರು.ಈ ಸಂದರ್ಶನದಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಹಾಗೂ ಆಟೋಮೋಬೈಲ್ ಎಂಜಿನೀಯರಿಂಗ್ ವಿಭಾಗದ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರಭುದೇವ ಬಿ. ಕಳಸಗೊಂಡ, ಪ್ಲೆಸಮೆಂಟ್ ಅಧಿಕಾರಿ ಸುಧನ್ವ. ವಿ. ಕುಲಕರ್ಣಿ, ಸಂತೋಷ ಹಿರೇಮಠ, ಪಾಂಡುರಂಗ ಅಸ್ಲಂಕರ, ಐ. ಎಫ್. ಪಾಟೀಲ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಎಂ. ಸಿ. ಬಿರಾದಾರ, ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.ಈ ನೇರ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ‌ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ.‌ ಪಾಟೀಲ, ಪ್ರಧಾನ…

Read More

ಸಹಕಾರಿ ಕಾಯ್ದೆಗಳಿಗೆ ತಿದ್ದುಪಡಿ, ಅಭಿವೃದ್ಧಿ ಸಮಾಲೋಚನೆ ತರಬೇತಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಹಕಾರಿ ರಂಗದಲ್ಲಿರುವ ಎಲ್ಲರೂ ಪ್ರಾಮಾಣಿಕ, ಪಾರದರ್ಶಕ ಹಾಗೂ ಸೇವಾ ಮನೋಭಾವದ ಜೊತೆಗೆ ಕಾನೂನಿನ ಅರಿವಿನೊಂದಿಗೆ ಕೆಲಸ ಮಾಡಿಬೇಕಿದೆ. ಹಾಗಾದಲ್ಲಿ ಸಹಕಾರಿ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಶುಕ್ರವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ವಿಜಾಪುರ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರಿ ಸಹಕಾರ ಒಕ್ಕೂಟದ ಸಹಯೋಗದಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್, ಪತ್ತಿನ ಸಹಕಾರಿ ಸಂಘಗಳು ಹಾಗೂ ವಿವಿಧೊದ್ದೇಶಗಳ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಸಹಕಾರಿ ಕಾಯ್ದೆಗಳಿಗೆ ತಿದ್ದುಪಡಿ, ಅಭಿವೃದ್ಧಿ ಹಾಗೂ ಎದುರಿಸುತ್ತಿರುವ ಸವಾಲುಗಳ ಸಮಾಲೋಚನೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿ ರಂಗದ ಬಲವರ್ಧನೆಗೆ ಸರ್ಕಾರಗಳು ಮೇಲಿಂದ ಮೇಲೆ ಸಕಾರಾತ್ಮಕ ಕ್ರಮಗಳನ್ನು…

Read More

ಇಂದು (ಅಕ್ಟೋಬರ-೧೧, ಶನಿವಾರ) “ವಿಶ್ವ ಹೆಣ್ಣು ಮಕ್ಕಳ ದಿನಚಾರಣೆ”ಯ ತನಿಮಿತ್ಯ ಈ ವಿಶೇಷ ಲೇಖನ) ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಜವಾಹರಲಾಲ ನೆಹರು ಅವರು, “ಒಬ್ಬ ಪುರುಷನನ್ನು ಶಿಕ್ಷಣವಂತನ್ನಾಗಿ ಮಾಡಿದರೆ ಅದು ಅವನ ವೈಯಕ್ತಿಕ ಬೆಳವಣಿಗೆ. ಒಬ್ಬ ಹೆಣ್ಣು ಮಗುವನ್ನು ಶಿಕ್ಷಣವಂತವನ್ನಾಗಿಸಿದರೆ ಅದು ಕುಟುಂಬ, ಸಮಾಜ ಮತ್ತು ಇಡೀ ರಾಷ್ಟ್ರವನ್ನೇ ಸುಶಿಕ್ಷಿತಗೊಳಿಸಿದಂತೆ. ಅದಕ್ಕಾಗಿ ಮಹಿಳೆಯ ಸಬಲೀಕರಣಕ್ಕಾಗಿ ಶಿಕ್ಷಣ ಒಂದು ಸಾಧನವಾಗಿದೆ” ಎಂದು ಹೇಳಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿನಂತೆ, ಪ್ರತಿ ಹೆಣ್ಣು ಮಗು ಶಿಕ್ಷಣ ಪಡೆದರೆ ಆಕೆ ಇಡೀ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಶೈಕ್ಷಣಿಕ ಪ್ರಗತಿಗೆ ಪೂರಕವಾಗಬಲ್ಲಳು. ಹೆಣ್ಣು ಮಗು ಎಂದರೆ ಟೆನ್ಷನ್ ಅಲ್ಲ ಆಕೆಯು ಹತ್ತು ಗಂಡು ಮಕ್ಕಳಿಗೆ ಸರಸಾಟಿಯಾಗಬಲ್ಲ ಒಂದು ಶಕ್ತಿಯಾಗಿದ್ದಾಳೆ. ಈ ಭೂಮಿಯ ಮೇಲೆ ಹೆಣ್ಣು ಇಲ್ಲದಿದ್ದರೆ ಈ ಜಗತ್ತೇ ಇರುತ್ತಿರಲಿಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆ…

Read More

ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ – 05) ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಬದುಕಿನಲ್ಲಿ ಬರುವ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ನಮಗೆ ಚರ್ಚೆ, ಮಾತುಕತೆ ಮತ್ತು ಸಮಾಲೋಚನೆಗಳ ಅವಶ್ಯಕತೆ ಇದೆ.ಈ ಹಿಂದೆ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಒಂದು ನೋಟ್ ಪುಸ್ತಕ ಬೇಕಾದರೆ ಅವರು ತಮ್ಮ ಪಾಲಕರಿಗೆ ಹೇಳುತ್ತಿದ್ದರು. ಹಾಗೆ ಹೇಳಿದೊಡನೆ ಪುಸ್ತಕ ಸಿಗುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇರಲಿಲ್ಲ. ಪಾಲಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲಿ ಉಳಿದ ಹಿಂದಿನ ವರ್ಷದ ಪುಸ್ತಕಗಳಲ್ಲಿನ ಖಾಲಿ ಹಾಳೆಗಳನ್ನು ಹರಿದು ಅದರಿಂದಲೇ ಮತ್ತೊಂದು ನೋಟು ಪುಸ್ತಕವನ್ನು ತಯಾರಿಸಿ ಅದನ್ನು ಬಳಸಿಕೊಳ್ಳಲು ಹೇಳುತ್ತಿದ್ದರು.ಯೂನಿಫಾರ್ಮ್ ಅಥವಾ ಸಮವಸ್ತ್ರದ್ದು ಕೂಡ ಇದೇ ಕಥೆ. ನಮಗೆ ಹೊಸ ಸಮವಸ್ತ್ರ ಬೇಕೆಂದು ನಾವು ಈ ವರ್ಷಕ್ಕೆ ಪಾಲಕರಲ್ಲಿ ಬೇಡಿಕೆ ಇಟ್ಟರೆ ಅದು ಮಾರ್ಚ್ ತಿಂಗಳಿನಲ್ಲಿಯೇ ಆಗಬೇಕಿತ್ತು. ಶಾಲೆಯ ರಜಾ ದಿನಗಳಲ್ಲಿ ನಮ್ಮ ಹಳೆಯ ಸಮವಸ್ತ್ರವನ್ನು ಪರಿಶೀಲಿಸಿ ಅದನ್ನು…

Read More

ವಿಜಯಪುರದಲ್ಲಿ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲ ಮಕ್ಕಳನ್ನು ಶಾಲಾ ದಾಖಲಾತಿ ಮಾಡಿಸುವ ಮೂಲಕ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಸಂಬಂಧಿಸಿ ಇಲಾಖೆಗಳು ನಿಗಾವಹಿಸಬೇಕು. ಶಾಲೆ ಬಿಟ್ಟಮಕ್ಕಳ ಸಮಗ್ರ ಮಾಹಿತಿ ಕ್ರೋಡಿಕರಿಸಬೇಕು ಎಂದು ಧಾರವಾಡದ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ ಅವರು, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಈಗಾಗಲೇ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಅಲ್ಲಿನ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ನಿಗಾ ವಹಿಸಬೇಕು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ೧೫ ದಿನಗಳೊಳಗೆ ಈ ಮಾಹಿತಿಯನ್ನು ಕ್ರೋಡಿಕರಿಸಿ ವರದಿ ನೀಡಲು ಸೂಚಿಸಲಾಯಿತು.ನಗರದಲ್ಲಿರುವ ಸಾರ್ವಜನಿಕ ಉದ್ಯಾನವನಗಳನ್ನು ಮಕ್ಕಳು ಸೇರಿದಂತೆ ನಾಗರಿಕರ ಹಿತದೃಷ್ಟಿಯಿಂದ ಬಳಕೆಯಾಗುತ್ತಿರುವ ಕುರಿತು ಖುದ್ದಾಗಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘವು ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶೇಷವಾದ ಪ್ರಗತಿಯನ್ನು ಸಾಧಿಸಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸ್ ಕೋ.ಆಪರೇಟಿವ್ ಸೊಸೈಟಿ ಲಿಮಿಟೆಡ್ ಆಗಿ ಪರಿವರ್ತನೆಯಾಗಿದೆ ಎಂದು ಸೊಸೈಟಿ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2006ರ ಮೇ 29 ರಂದು ಶುಭ ಗಳಿಗೆಯಲ್ಲಿ ಪ್ರಾರಂಭವಾಗಿ ಕರ್ನಾಟಕ ರಾಜ್ಯದಾದ್ಯಂತ ಕಾರ್ಯಕ್ಷೇತ್ರ ಹೊಂದಿ, ಸದಸ್ಯರ ವಿಶ್ವಾಸ, ಸಹಕಾರಿ ಬೆಳವಣಿಗೆಗೆ ಪರೋಕ್ಷವಾಗಿ ಅಪರೋಕ್ಷವಾಗಿ ಸಹಾಯ ಸಹಕಾರ ನೀಡಿದ್ದರಿಂದ ಕರ್ನಾಟಕ ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿದೆ. ಕೇವಲ ಹಣಕಾಸಿನ ವ್ಯವಹಾರವಲ್ಲದೆ, ಸಾರ್ವಜನಿಕರಿಗೆ, ರೈತ ಬಾಂಧವರಿಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲತೆಯನ್ನು ಹೊಂದಲು ಸೇವೆ ಒದಗಿಸುತ್ತಿದೆ. ಇನ್ನೂ ಹಚ್ಚಿನ ಸಮಾಜ ಸೇವೆ, ದೇಶದ ಅಭಿವೃದ್ದಿಗಾಗಿ, ಯುವಕ ಯುವತಿಯರಿಗೆ ಉದ್ಯೋಗ, ಉದ್ಯಮಿಗಳಿಗೆ ಸಾಲ ನೀಡಿ ಅವುಗಳ ಪ್ರಗತಿಗೆ ಪೂರಕವಾದ ಸೇವೆ ಕಲ್ಪಿಸುವುದು ನಮ್ಮ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭೀಮಾಶಂಕರ ಸ್ವಾಮಿಗಳ ೩೯೪ನೆಯ ಆರಾಧನೆ ಮಹೋತ್ಸವದ ಮೂರನೆಯ ದಿನದ ಪ್ರಮುಖ ಘಟ್ಟವಾದ ಬಿಂದಿಗೆ ಮಹಾತ್ಮೆ ನಿಮಿತ್ಯ ಮೂಲ ಬಿಂದಿಗೆಯನ್ನು ಮೆರವಣಿಗೆ ಮೂಲಕ ಶ್ರೀಮಠಕ್ಕೆ ತರಲಾಯಿತು.ಬಳಿಕ ಬಿಂದಿಗೆ ಪವಾಡದ ಚಟುವಟಿಕೆಗಳಿಗೆ ಚಾಲನೆ ನೀಡಿಲಾಯಿತು.ನಂತರ ಶ್ರೀಮಠದ ಪೀಠಾಧಿಪತಿಗಳಾದ ದತ್ತಪ್ಪಯ್ಯ ಮಹಾಸ್ವಾಮಿಗಳು ಪೀಠದ ಪರಂಪರೆಯ ಮೂಲ ಪುರುಷರ ಸ್ಮರಣೆಯೊಂದಿಗೆ ಮಠದಲ್ಲಿನ ಕೋಣೆಗೆ ತೆರಳಿ ಬಿಂದಿಗೆ ಮಹಾತ್ಮೆಯ ಸಫಲತಾ ಕಾರ್ಯದ ಸಂಕಲ್ಪಕ್ಕೆ ಆಶೀರ್ವಾದ ಪಡೆದು, ಭೀಮಾಶಂಕರರ ಕೃಪೆಗಾಗಿ ಪೂಜೆ ಸಲ್ಲಿಸಿದರು.ಈ ವೇಳೆ ದತ್ತಪ್ಪಯ್ಯ ಮಹಾಸ್ವಾಮಿಗಳು, ಪ್ರಶಾಂತ ಕುಲಕರ್ಣಿ, ಶ್ರೀನಿವಾಸ ಜೋಷಿ, ಶ್ರೀಹರಿ ಕುಲಕರ್ಣಿ, ಆರ್.ಡಿ.ಕುಲಕರ್ಣಿ, ಪವನ ಕುಲಕರ್ಣಿ, ಎಸ್.ಕೆ.ಕುಲಕರ್ಣಿ, ಹಣಮಂತ ಪೋತದಾರ್ ಶ್ರೀಧರ ಕುಲಕರ್ಣಿ ಸೇರಿದಂತೆ ಶ್ರೀಮಠಧ ಭಕ್ತರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೧೧೦/೩೩/೧೧ಕೆವ್ಹಿ ಆಹೇರಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಸಿಂದಗಿ ನಗರ-೦೧ರ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ, ಸದರಿ ಮಾರ್ಗಗಳ ಮೇಲೆ ಬರುವ ಕೆಹೆಚ್‌ಬಿ ಕಾಲೋನಿ, ಬಂದಾಳ ಕ್ರಾಸ್, ವಿವೇಕಾನಂದ ವೃತ್ತ ಬಜಾರ್ ಏರಿಯಾ, ಕನಕದಾಸ ವೃತ್ತ, ಸಂಗಮೇಶ್ವರ ಕಾಲೋನಿ ಹಾಗೂ ಆದರ್ಶ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ.೧೦ರಂದು ಬೆಳಿಗ್ಗೆ ೧೦ಗಂಟೆಯಿಂದ ಸಾಯಂಕಾಲ ೫ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯ ಉಂಟಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ದೇವಣಗಾಂವ ಬ್ರಿಜ್ ದುರಸ್ತಿಗಾಗಿ 3 ಕೋಟಿ ಮಂಜೂರು ಮಾಡಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಶಾಸಕ ಅಶೋಕ ಮನಗೂಳಿ ಅವರಿಗೆ ಆಲಮೇಲ ದೇವಣಗಾಂವ ಭಾಗದ ಜನರ ಪರವಾಗಿ ಅಭಿನಂದಿಸುತ್ತೆೇವೆ ಎಂದು ಪ.ಪಂ. ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಾದೀಕ ಸುಂಬಡ ಹೇಳಿದರು.ಗುರುವಾರ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೆಳಿದ ಅವರು. ಇತ್ತಿಚೆಗೆ ಸುರಿದ ಮಳೆ ಮತ್ರು ಪ್ರವಾಹ ಸಂದರ್ಭದಲ್ಲಿ ದೇವಣಗಾಂವ ಬ್ರಿಜ್ ಮೇಲಿನ ದುಸ್ಥಿತಿಯನ್ನು ಕಂಡು ಶಾಸಕ ಅಶೋಕ ಮನಗೂಳಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ತಿಂಗಳಲ್ಲೆ ಅನುದಾನ ಮಂಜೂರು ಮಾಡಿಸಿದ್ದಾರೆ. ಆಲಮೇಲ ಮಾರ್ಗವಾಗಿ ವಿಜಯಪುರ ಕಲಬುರಗಿ ಜಿಲ್ಲೆಗೆ ಸಂಪರ್ಕ ಕಲ್ಪಿಸಿರುವ ಸದಾಶಿವಗಡ ಔರಾದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರವ ದೇವಣಗಾಂವ ಹತ್ತಿರ ಬೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಮೇಲೆ ರಸ್ತೆ ಸಂಪೂರ್ಣ ತಗ್ಗು ಗುಂಡಿ ಬಿದ್ದು ಹಾಳಾಗಿದ್ದು ಅದರ ದುರಸ್ತಿ ಮತ್ತು ಬ್ರಿಜ್ ಮೇಲೆ ರಸ್ತೆ ನಿರ್ಮಾಣಕ್ಕಾಗಿ 3 ಕೋಟಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಥಿಲಗೊಂಡ ತಾಲೂಕಿನ ದೇವಣಗಾಂವ ಸೇತುವೆಗೆ ಶೀಘ್ರದಲ್ಲೇ ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.ಇತ್ತೀಚೆಗೆ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಹಾಗೂ ಸಿಂದಗಿ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿದ್ದರು. ದೇವಣಗಾಂವ ಸೇತುವೆಯಲ್ಲಿ ಗುಂಡಿಗಳು ಬಿದ್ದು ಸಂಪರ್ಕ ಕಷ್ಟವಾಗಿದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸೇತುವೆ ಸಬಲೀಕರಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಲು ಸಮ್ಮತಿ ಸೂಚಿಸಿದ್ದು, ಶೀಘ್ರದಲ್ಲೇ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಅಪಾರ ಪ್ರಮಾಣದಲ್ಲಿ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಸಿಂದಗಿ ಮತಕ್ಷೇತ್ರದ ಔರಾದ ಸದಾಶಿವಗಡ್ ರಾಜ್ಯ ಹೆದ್ದಾರಿ ೩೪ರಲ್ಲಿ ಬರುವ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿದ್ದು, ಇದರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ರೂ.೩ ಕೋಟಿ ಅನುದಾನ ಬಿಡುಗಡೆಗೊಳಿಸಲು ಮುಂದಾಗಿದೆ. ಸೇತುವೆ ದುರಸ್ತಿ ಬಗ್ಗೆ ಸಚಿವರ…

Read More