ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭೀಮಾಶಂಕರ ಸ್ವಾಮಿಗಳ ೩೯೪ನೆಯ ಆರಾಧನೆ ಮಹೋತ್ಸವದ ಮೂರನೆಯ ದಿನದ ಪ್ರಮುಖ ಘಟ್ಟವಾದ ಬಿಂದಿಗೆ ಮಹಾತ್ಮೆ ನಿಮಿತ್ಯ ಮೂಲ ಬಿಂದಿಗೆಯನ್ನು ಮೆರವಣಿಗೆ ಮೂಲಕ ಶ್ರೀಮಠಕ್ಕೆ ತರಲಾಯಿತು.
ಬಳಿಕ ಬಿಂದಿಗೆ ಪವಾಡದ ಚಟುವಟಿಕೆಗಳಿಗೆ ಚಾಲನೆ ನೀಡಿಲಾಯಿತು.
ನಂತರ ಶ್ರೀಮಠದ ಪೀಠಾಧಿಪತಿಗಳಾದ ದತ್ತಪ್ಪಯ್ಯ ಮಹಾಸ್ವಾಮಿಗಳು ಪೀಠದ ಪರಂಪರೆಯ ಮೂಲ ಪುರುಷರ ಸ್ಮರಣೆಯೊಂದಿಗೆ ಮಠದಲ್ಲಿನ ಕೋಣೆಗೆ ತೆರಳಿ ಬಿಂದಿಗೆ ಮಹಾತ್ಮೆಯ ಸಫಲತಾ ಕಾರ್ಯದ ಸಂಕಲ್ಪಕ್ಕೆ ಆಶೀರ್ವಾದ ಪಡೆದು, ಭೀಮಾಶಂಕರರ ಕೃಪೆಗಾಗಿ ಪೂಜೆ ಸಲ್ಲಿಸಿದರು.
ಈ ವೇಳೆ ದತ್ತಪ್ಪಯ್ಯ ಮಹಾಸ್ವಾಮಿಗಳು, ಪ್ರಶಾಂತ ಕುಲಕರ್ಣಿ, ಶ್ರೀನಿವಾಸ ಜೋಷಿ, ಶ್ರೀಹರಿ ಕುಲಕರ್ಣಿ, ಆರ್.ಡಿ.ಕುಲಕರ್ಣಿ, ಪವನ ಕುಲಕರ್ಣಿ, ಎಸ್.ಕೆ.ಕುಲಕರ್ಣಿ, ಹಣಮಂತ ಪೋತದಾರ್ ಶ್ರೀಧರ ಕುಲಕರ್ಣಿ ಸೇರಿದಂತೆ ಶ್ರೀಮಠಧ ಭಕ್ತರು ಇದ್ದರು.