ಉದಯರಶ್ಮಿ ದಿನಪತ್ರಿಕೆ
ಆಲಮೇಲ: ದೇವಣಗಾಂವ ಬ್ರಿಜ್ ದುರಸ್ತಿಗಾಗಿ 3 ಕೋಟಿ ಮಂಜೂರು ಮಾಡಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಶಾಸಕ ಅಶೋಕ ಮನಗೂಳಿ ಅವರಿಗೆ ಆಲಮೇಲ ದೇವಣಗಾಂವ ಭಾಗದ ಜನರ ಪರವಾಗಿ ಅಭಿನಂದಿಸುತ್ತೆೇವೆ ಎಂದು ಪ.ಪಂ. ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಾದೀಕ ಸುಂಬಡ ಹೇಳಿದರು.
ಗುರುವಾರ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೆಳಿದ ಅವರು. ಇತ್ತಿಚೆಗೆ ಸುರಿದ ಮಳೆ ಮತ್ರು ಪ್ರವಾಹ ಸಂದರ್ಭದಲ್ಲಿ ದೇವಣಗಾಂವ ಬ್ರಿಜ್ ಮೇಲಿನ ದುಸ್ಥಿತಿಯನ್ನು ಕಂಡು ಶಾಸಕ ಅಶೋಕ ಮನಗೂಳಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ತಿಂಗಳಲ್ಲೆ ಅನುದಾನ ಮಂಜೂರು ಮಾಡಿಸಿದ್ದಾರೆ. ಆಲಮೇಲ ಮಾರ್ಗವಾಗಿ ವಿಜಯಪುರ ಕಲಬುರಗಿ ಜಿಲ್ಲೆಗೆ ಸಂಪರ್ಕ ಕಲ್ಪಿಸಿರುವ ಸದಾಶಿವಗಡ ಔರಾದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರವ ದೇವಣಗಾಂವ ಹತ್ತಿರ ಬೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಮೇಲೆ ರಸ್ತೆ ಸಂಪೂರ್ಣ ತಗ್ಗು ಗುಂಡಿ ಬಿದ್ದು ಹಾಳಾಗಿದ್ದು ಅದರ ದುರಸ್ತಿ ಮತ್ತು ಬ್ರಿಜ್ ಮೇಲೆ ರಸ್ತೆ ನಿರ್ಮಾಣಕ್ಕಾಗಿ 3 ಕೋಟಿ ರಾಜ್ಯ ಸರ್ಕಾರ ಮಂಜುರು ಮಾಡಿದೆ. ಅದಕ್ಕೆ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಪ್ರಾಮಾಣಿಕ ಪ್ರಯತ್ನದಿಂದ. ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ ಮನಗೂಳಿ ಅವರು ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದು ಅದನ್ನು ಸಹಿಸಿಕೊಳ್ಳಲು ಆಗದೆ ಬಿಜೆಪಿ ಮುಖಂಡರು, ಮಾಜಿ ಶಾಸಕ ರಮೇಶ ಭೂಸನೂರ ಅವರು ಮಂಜುರಾದ ಕಾಮಗಾರಿಗಳ ಬಗ್ಗೆ ತಿಳಿದುಕೊಂಡು ಅದರ ಬಗ್ಗೆ ಹೋರಾಟ ಹಮ್ಮಿಕೊಂಡು ಮಹಾನ್ ನಾಯಕರಾಗಲು ಯತ್ನಿಸುತ್ತಿದ್ದಾರೆ. ಈ ರೀತಿ ಡೋಂಗಿ ಹೋರಾಟ ಬಿಜೆಪಿಯವರು ಮಾಡುತ್ತಿರುವದು ಸರಿಯಲ್ಲ ಎಂದರು.
ಸಿಂದಗಿ ಕ್ಷೇತ್ರದಲ್ಲಿ ಕಳೆದ 12 ವರ್ಷಗಳ ಕಾಲ ಬಿಜೆಪಿ ಶಾಸಕ ರಮೇಶ ಭೂಸನೂರ ಅಧಿಕಾರದಲ್ಲಿ ಇದ್ದರೂ ಅವರು ಮಾಡದ ಕೆಲಸಗಳು ನಮ್ಮ ಕಾಂಗ್ರೆಸ್ ಶಾಸಕ ಅಶೋಕ ಮನಗೂಳಿ ಮಾಡುತ್ತಿದ್ದಾರೆ ಅದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ. ಬಿಜೆಪಿ ಶಾಸಕರ ಅಧಿಕಾರದಲ್ಲಿ ಇದ್ದಾಗ ಬೀಮಾ ನದಿ ಪ್ರವಾಹಕ್ಕೆ ಒಳಗಾಗುವ ಕುಮಸಗಿ ಗ್ರಾಮವನ್ನು ಸ್ಥಳಾಂತರಿಸಲಿಲ್ಲ? ಆಲಮೇಲ ದೇವಣಗಾಂವ ರಸ್ತೆ ಮೊದಲೆ ಹಾಳಾಗಿದೆ, ತಮ್ಮದೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆ ಇದಾಗಿದ್ದರೂ ಸುಂದರ ರಸ್ತೆ ನಿರ್ಮಿಸಲು ಮುಂದಾಗಲಿಲ್ಲ, ದೇವಣಗಾವ ಹತ್ತಿರದ ಬ್ರಿಜ್ ದುರಸ್ತಿ ಮಾಡಲಿಲ್ಲ. ಇವರ ಅದಿಕಾರದಲ್ಲಿ ಇಲ್ಲದಿದ್ದಾಗ ಬ್ರಿಜ್, ರಸ್ತೆ ನಿರ್ಮಾಣ ಮಾಡಲು ಹೋರಾಟ ಮಾಡುತ್ತಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಳೆದ ಮೂರು ತಿಂಗಳ ಹಿಂದೆ ತಮ್ಮದೇ ಕೇಂದ್ರ ಸರ್ಕಾರದ ಅನುದಾನದಲ್ಲಿ 6 ಕೋಟಿ ರೂ, ವೆಚ್ಚದಲ್ಲಿ ದೇವಣಗಾಂವ ಗ್ರಾಮದಿಂದ 4 ಕಿಲೋಮೀಟರ್ ವರೆಗೆ ರಸ್ತೆ ನಿರ್ಮಾಣ ಮಾಡಿ ತಿಂಗಳಲ್ಲೆ ಕಿತ್ತು ಹೋಗಿದೆ. ಕಳಪೆ ಕಾಮಗಾರಿ ಬಗ್ಗೆ ಯಾಕೆ ಹೋರಾಟ ಮಾಡಲಿಲ್ಲ? 6 ಕೋಟಿ ವೆಚ್ಚದ ಕಳಪೆ ರಸ್ತೆ ಕಾಮಗಾರಿ ಕಂಡು ಶಾಸಕ ಅಶೋಕ ಮನಗೂಳಿ ಸರ್ಕಾರದ ಗಮನಕ್ಕೆ ತಂದು ಮರು ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಶಿಧರ ಗಣಿಹಾರ, ಸಂತೋಷ ಜರಕರ, ಮಲ್ಲು ಅಚಲೇರಿ, ಮುನ್ನಾ ಚೌಧರಿ, ಚಾಂದಸಾಬ ವಡಗೇರಿ, ಚಂದ್ರಶೇಖರ ಹಳೆಮನಿ ಶಿವು ರಜಪೂತ ಮುಂತಾದವರು ಇದ್ದರು.