Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮ್ಯಾಟ್ರಿಕ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಅವ್ಯವಸ್ಥೆಯ ಆಗರವಾಗಿದೆ ಎಂದು ಆಗ್ರಹಿಸಿ ಇಂದು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.ಆಹಾರ ಸಾಮಗ್ರಿಗಳು ಸರಿಯಾಗಿ ಇರುವದಿಲ್ಲ. ಆಹಾರಕ್ಕೆ ಬಳಸುವ ತರಕಾರಿ ಕೋಳೆತದ್ದು ಇರುತ್ತದೆ. ಶೌಚಾಲಯ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇರುವದಿಲ್ಲ ಎಂದು ಹೇಳಿದರು.ಈ ಕುರಿತು ಬಿ.ಸಿ.ಎಂ ಅಧಿಕಾರಿಗಳಿಗೆ ಪ್ರತಿ ಬಾರಿಯೂ ಫೋನು ಮೂಲಕ ಸಂಪರ್ಕಿಸಿದಾಗ ಮಿಟಿಂಗನಲ್ಲಿ ಇದ್ದೇನೆ, ನಾನು ಭೇಟಿ ನೀಡಿ ಕ್ರಮ ಕೈಕೊಳ್ಳುವದಾಗಿ ಹೇಳುತ್ತಾರೆ. ಒಮ್ಮೆಯೂ ಸ್ಪಂದಿಸಿಲ್ಲ ಎಂದರು.ಕಂದಾಯ ಉಪ ವಿಬಾಗಾಧಿಕಾರಿ ಅನುರಾಧಾ ವಸ್ತçದ ಇವರಿಗೆ ಮನವಿ ಸಲ್ಲಿಸಿದರು.ಎಬಿವಿಪಿಯ ಭೀಮುಗೌಡ ಬಗಲಿ, ಸಚೀನ ಧನಗೊಂಡ, ಗಣೇಶ ಹಂಜಗಿ, ರಾಹುಲ ಜಾಧವ, ಸೋಮನಾಥ ಕಟಗೇರಿ ಮಾತನಾಡಿದರು.ವಿಕಾಸ ಬಡಿಗೇರ, ಯಲಗೊಂಡ ಹಿರೆಕುರಬರ, ಸಣ್ಣಪ್ಪ ಹಿರೇಕುರಬರ, ಶ್ರೀಕಾಂತ ಬಜಂತ್ರಿ, ಚನ್ನಪ್ಪ ಕುಂಬಾರ, ಪ್ರದೀಪ ಆನೂರ, ನಾಜರಾಜ ಕೊಡಹೊನ್ನ, ಬೀಮರಾಯ ಮೇತ್ರಿ, ವಾಸಿಮ ಚೌಧರಿ ಮತ್ತಿತರಿದ್ದರು.

Read More

ಸೆ.೧೫ರಿಂದ ಲಿಂಗತ್ವ ಅಲ್ಪಸಂಖ್ಯಾತರ-ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆ | ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಇದೇ ಸೆ.೧೫ ರಿಂದ ೪೫ ದಿನಗಳ ನಡೆಯಲಿದ್ದು, ವ್ಯವಸ್ಥಿತವಾಗಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷ್ಷೆ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ೪೫ ದಿನಗಳ ಕಾಲ ನಡೆಯುವ ಸಮೀಕ್ಷೆಯಲ್ಲಿ ಸರ್ಕಾರಿ ತಾಲೂಕಾ ಆಸ್ಪತ್ರೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಮತ್ತು ಶಿಶು ಅಭಿವೃದಿ ಯೋಜನಾ ಕಚೇರಿಗಳಲ್ಲಿ ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ಕೈಗೊಂಡು ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.ಜಿಲ್ಲಾ ಪಂಚಾಯತ್ ಮುಖ್ಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ ಇವರ ಸಹಯೋಗದಲ್ಲಿ ಹೆಚ್‌ಐವಿ ಮುಕ್ತ ಜಿಲ್ಲೆಯನ್ನಾಗಿಸಲು ಜಾಗೃತಿಗಾಗಿ ಸೆ.೧೨ರಂದು ಬೈಕ್ ರ‍್ಯಾಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.ಬೈಕ್ ರ‍್ಯಾಲಿ ಜಾಗೃತಿ ಜಾಥಾಕ್ಕೆ ಆರೋಗ್ಯ ಇಲಾಖೆ ಅಪ್ ನಿರ್ದೇಶಕರಾದ ಡಾ.ಚೆನ್ನಮ್ಮಾ ಕಟ್ಟಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಮತ್ತು ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಚಾಲನೆ ನೀಡಿದರು.ಬೈಕ್ ರ‍್ಯಾಲಿಯಲ್ಲಿ ೧೦೦ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಾಗವಹಿಸಿದ್ದು, ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಏಡ್ಸ್ ನಿಯಂತ್ರಣ ಕಚೇರಿಯಿಂದ ಆರಂಭಗೊಂಡ ರ‍್ಯಾಲಿ ನಗರದ ರಹಿಂ ನಗರ, ಇಬ್ರಾಹಿಂರೋಜಾ, ಬಬಲೇಶ್ವರ ನಾಕಾ, ಮೀನಾಕ್ಷಿ ಚೌಕ್, ಕೇಂದ್ರ ಬಸ್ ನಿಲ್ದಾಣ, ಕಣಕಿ ಬಜಾರ ಮಾರ್ಗವಾಗಿ ಜುಮ್ಮಾ ಮಸೀದ ರಸ್ತೆ, ಹಕೀಮ ಚೌಕ್, ಗೋಲಗುಂಬಜ್‌ದಿಂದ ಗಾಂಧಿಚೌಕ್, ಶಿವಾಜಿ ಸರ್ಕಲ್, ವಾಟರ್ ಟ್ಯಾಂಕ್ ಮಾರ್ಗವಾಗಿ ಜಿಲ್ಲಾ ಆಸ್ಪತ್ರೆವರೆಗೆ ಸಾಗಿತು.ಬೈಕ್ ರ‍್ಯಾಲಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಶಾಲೆಯ ಪರಿಸರ ಕಾಳಜಿ, ಉತ್ತಮ ಕ್ರೀಡಾ ಅವರಣ, ಸುಸಜ್ಜಿತ ಶಾಲಾ ಕಟ್ಟಡ, ಮೂಲಭೂತ ಸೌಲಭ್ಯ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಎಲ್ಲಾ ಸೌಲಭ್ಯಗಳನ್ನು ಈ ಶಾಲೆ ಒಳಗೊಂಡಿರುವುದರಿಂದ ಚಡಚಣ ತಾಲೂಕಿನ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ರೇವತಗಾಂವ ಗ್ರಾಮದ ಹರಿಜನ ಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದೊರೆತಿದೆ.ಪತಿವರ್ಷ ಐದನೇ ಶಾಲೆಗಳಿಗೆ ತರಗತಿಯ ವಿದ್ಯಾರ್ಥಿಗಳು ಪ್ರತಿಷ್ಠಿತ ಮೊರಾರ್ಜಿ ದೇಸಾಯಿ, ಆದರ್ಶ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಶಾಲೆಯ ಮುಖ್ಯ ಗುರು ಸದಾಶಿವ ಪೂಜಾರಿ ಹಾಗೂ ಶಿಕ್ಷಕಿ ಎಸ್.ಎಂ. ಪತ್ತಾರ ಅವರ ಪರಿಶ್ರಮದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ, ಶಾಲೆಯ ಆವರಣದಲ್ಲಿ ಅನೇಕ ಗಿಡ ಮರಗಳನ್ನು ನೆಟ್ಟಿದ್ದಾರೆ. ಅತ್ಯುತ್ತಮ ಬಿಸಿಯೂಟ ಉಣಬಡಿಸುತ್ತಾ ಬಂದಿರುತ್ತಾರೆ. ಈ ಎಲ್ಲ ಕಾರ್ಯಗಳನ್ನು ಗಮನಿಸಿ ಹಾಗೂ ಶಾಲೆಯೂ ತಾಲೂಕಿನಲ್ಲಿಯೇ ಉತ್ತಮ ಸ್ಥಿತಿಯತ್ತ ಕೊಂಡೊಯುವಲ್ಲಿ ಶ್ರಮಿಸಿದ ಶಿಕ್ಷಕ ಹಾಗೂ ಎಸ್.ಡಿ.ಎಂ.ಸಿ.ಯವರ ಪರಿಶ್ರಮಕ್ಕೆ ದೊರೆತ ಪ್ರತಿಫಲ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಚಲನಚಿತ್ರದ ನಾಯಕನಟರಲ್ಲಿ ಒಬ್ಬರಾದ ಡಾ.ವಿಷ್ಣುವರ್ಧನ ಅವರಿಗೆ ಕರ್ನಾಟಕ ಸರಕಾರ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಮಾಡಿರುವುದು. ಅವರ ಅಭಿಮಾನಿಗಳಲ್ಲಿ ತುಂಬಾ ಹರ್ಷವನ್ನುಂಟು ಮಾಡಿದೆ ಎಂದು ವಿಜಯಪುರ ಜಿಲ್ಲಾ ಘಟಕದ ವಿಷ್ಣು ಅಭಿಮಾನಿ ವಿಷ್ಣು ಸಂಗಮೇಶ ಸಂತಸ ವ್ಯಕ್ತಪಡಿಸಿದ್ದಾರೆ.ಗುರುವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಸುಮಾರು ಒಂದೂವರೆ ದಶಕದಿಂದ ಸಮಸ್ತ ಅಭಿಮಾನಿಗಳಿಗೆ ಅವರಿಗೆ ಕರ್ನಾಟಕ ರತ್ನ ಲಭಿಸಲಿ ಎಂದು ಬಯಸುತ್ತಿದ್ದರು. ಅವರ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ ಇದಾಗಿದ್ದು, ವಿಶೇಷ ವಾಗಿ ಕರ್ನಾಟಕ ಸರ್ಕಾರಕ್ಕೆ ವಿಜಯಪುರ ಜಿಲ್ಲಾ ಘಟಕದಿಂದ ವಿಷ್ಣು ಸಂಗಮೇಶ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯರು ಹೋಬಳಿ ಮಟ್ಟದ ಪಂದ್ಯಾವಳಿಯ ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದು ತಾಲುಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸಿದ್ದು ಸವದಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಶ್ರೀ ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯರು ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಸಿದ್ದು ಸವದಿ ಕಾರ್ಯದರ್ಶಿ ವಿದ್ಯಾಧರ ಸವದಿ, ಪ್ರಾಚಾರ್ಯ ರಮೇಶ ಪೂಜಾರಿ, ದೈಹಿಕ ಶಿಕ್ಷಕ ಅನೀಲ ಗುಬಚಿ, ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Read More

ಸಾಹಸಸಿಂಹ ದಿ.ವಿಷ್ಣುವರ್ಧನ್, ಪದ್ಮಶ್ರಿ ದಿ. ಬಿ.ಸರೋಜಾದೇವಿಗೆ ಮರಣೋತ್ತರ ಪ್ರಶಸ್ತಿ ಘೋಷಣೆ | ರಾಷ್ಟ್ರಕವಿ ಕುವೆಂಪು ರಿಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಪತ್ರ | ಸಂಪುಟ ಸಭೆಯಲ್ಲಿ ನಿರ್ಧಾರ ಬೆಂಗಳೂರು: ವಿಷ್ಣು ಅಭಿಮಾನಿಗಳ ದಶಕಗಳ ಬೇಡಿಕೆ ಫಲಿಸಿದ್ದು ರಾಜ್ಯ ಸರ್ಕಾರ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.ನಟರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಇನ್ನು ಪ್ರಶಸ್ತಿಯನ್ನು ಯಾವಾಗ, ಎಲ್ಲಿ ಪ್ರದಾನ ಮಾಡಬೇಕೆಂದು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ. ಇಂದಿನ ಸಂಪುಟ ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಪತ್ರ ಕಳುಹಿಸಲು ನಿರ್ಣಯ ಅಂಗೀಕರಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಅವರು ಮನವಿ ಮಾಡಿಕೊಂಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ…

Read More

ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಆಗ್ರಹ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿ ಇರುವ ಸರ್ವೆ ನಂಬರ್ 842 ರ ಈ ಎಲ್ಲ 84 ಕುಟುಂಬಗಳು ಕಾರ್ಮಿಕ ಕುಟುಂಬಗಳಾಗಿದ್ದು ಇದು ತಾಲೂಕು ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಯಾಗಿದ್ದು ಇದಕ್ಕೆ ಕೂಡಲೇ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ವಸ್ತು ಸಚಿವರು ಹಾಗೂ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಿ 84 ಕುಟುಂಬಗಳಿಗೆ ನ್ಯಾಯ ಕೊಡುವಂತ ಕೆಲಸ ಆಗಬೇಕು ಎಂದು ಸ್ಥಳಿಯ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಈ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳ ಬಗ್ಗೆ ಸರ್ಕಾರ ಮಾನವೀಯತೆ ಮೆರೆದು ಈ ಮಧ್ಯ ಒಂದು ಸಂಧಾನ ಪ್ರಕ್ರಿಯೆ ಜರುಗಬೇಕಿದೆ ಎಲ್ಲೋ ಇರುವ ಟಿಬೆಟಿಯನ್ ದೇಶದ ಪ್ರಜೆಗಳ ಮೇಲೆ ಕನಿಕರ ತೋರಿಸಿ ಆಶ್ರಯ ಕೊಟ್ಟ ನಾಡು ನಮ್ಮದು ಅಂತಹದರಲ್ಲಿ ನಮ್ಮದೇ ತಾಲೂಕಿನ ಜನತೆಯ ಜೊತೆ…

Read More

ಸಿಂದಗಿ ಪಟ್ಟಣದ ೮೪೨ನ ೮೪ ಕುಟುಂಬಗಳು ಬೀದಿಗೆ | ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೫೦ಸಾವಿರ ಜನಸಂಖ್ಯೆ ಹೊಂದಿದ್ದರೆ ಸಹಜವಾಗಿ ಸರಕಾರದ ನಿಯಮದಂತೆ ನಗರಸಭೆಯಾಗಿ ಮೇಲ್ದರ್ಜೆಗೆರುವುದು ಸಾಮಾನ್ಯ. ಸುಖಾ ಸುಮ್ಮನೆ ಅದ್ದೂರಿ ಮೆರವಣಿಗೆ ಮಾಡಿಕೊಂಡಿರಿ. ತಾಂಬಾ ಪಟ್ಟಣ ಪಂಚಾಯತ್ ಮಾಡಿ. ವೈಭವದ ಡಂಬಾಚಾರದ ರಾಜಕೀಯ ಬಿಟ್ಟು ಬಡವರ ಕಣ್ಣಿರೊರೆಸುವುದು ಮಾಡಬೇಕು. ಅವರ ಸಮಸ್ಯೆಗಳು ಪರಿಹರಿಸಬೇಕು ಇಲ್ಲವಾದರೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ರಮೇಶ ಭೂಸನೂರ ಎಚ್ಚರಿಕೆ ನೀಡಿದರು.ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ೮೪೨ನ ೮೪ ಕುಟುಂಬಗಳು ಬೀದಿಗೆ ಬಿದ್ದದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಅಶೋಕ ಮನಗೂಳಿ ನಾನು ಹಕ್ಕು ಪತ್ರ ಹಂಚಿಲ್ಲ ಇದಕ್ಕೆ ನಾನು ಜವಾಬ್ದಾರನಲ್ಲ ಎಂದು ಮಾತನಾಡುತ್ತಾ ನುಣಿಚುಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡುವ ಸಮಯದಲ್ಲಿಯೂ ಕಾಂಗ್ರೆಸ್ ಸರಕಾರವಿತ್ತು. ಇಂದು ಕಿತ್ತುವಾಗಲೂ ಕಾಂಗ್ರೆಸ್ ಸರಕಾರವಿದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ತಹಶೀಲ್ದಾರರಾದ ಕರೆಪ್ಪ ಎಸ್ ಬೆಳ್ಳಿ ಇವರ ನೇತೃತ್ವದಲ್ಲಿ ಸೆ.೩ರಂದು ಅನಿರೀಕ್ಷಿತ ಬಾಲಕಾರ್ಮಿಕ ದಾಳಿಯನ್ನು ಕೈಗೊಂಡು ಬಾಲಕಾರ್ಮಿಕ ಮಗುವನ್ನು ರಕ್ಷಿಸಲಾಗಿದೆ.ದಾಳಿಯಲ್ಲಿ ಕಾರ್ಮಿಕ ನಿರೀಕ್ಷಕ ಮಲ್ಲಿಕಾರ್ಜುನ ಬಗಲಿ, ಮುಖ್ಯ ದಂತ ಆರೋಗ್ಯ ಅಧಿಕಾರಿ ಡಾ ರಮೇಶ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಕಾಂತ ಕೊಕಟನೂರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕಿ ಕುಮಾರಿ ನೀಲಮ್ಮಾ ಎಚ್ ಖೇಡಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಎನ್ ಎಸ ತಿಳಗೂಳ, ಪೊಲೀಸ್ ಇಲಾಖೆಯ ಬಿ ಪಿ ಜೋಗಿ, ಡಿಇಒ ಶ್ರೀಶೈಲ ಬಿಸಿರೊಟ್ಟಿ & ಶ್ರೀ ಶರಣು ಹಾಗೂ ಮಕ್ಕಳ ಸಹಾಯವಾಣಿಯ ಕುಮಾರಿ ಸುವರ್ಣಾ ವಾಲಿಕಾರ, ದಬಕಿ ಪಾಲ್ಗೊಂಡಿದ್ದರು.

Read More