ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಸರ್ವೇ ನಂಬರ್ 708 ರ 708/13 ಮತ್ತು 708/14 ರಲ್ಲಿ ಈಗಾಗಲೇ ತಗ್ಗು ತೋಡಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದೂ ಅದನ್ನು ಬಂದ್ ಮಾಡುವಂತೆ ಕಳೆದ್ ವರ್ಷ ಜಿಲ್ಲಾಧಿಕಾರಿಗಳು ಹಾಗೂ ಸಂಭಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಅಧಿಕೃತವಾಗಿ ಬಂದ್ ಮಾಡಿದ್ದರು.
ಆದರೆ ಈಗ ಮತ್ತೆ ಇದೆ ಭೂಮಿಗಳನ್ನು ಅಭಿವೃದ್ಧಿ ಮಾಡಲು ಅಧಿಕಾರಿಗಳು ಅನುಮತಿ ನೀಡುತ್ತಿದ್ದಾರೆ ಎಂಬ ಮಾಹಿತಿ ಬಂದಿರುವ ಹಿನ್ನಲೆಯಲ್ಲೇ ತಹಸೀಲ್ದಾರ್ ಅವರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಕಲ್ಲಿನ ಕ್ವಾರಿ ಪ್ರಾರಂಭ ಮಾಡಲು ಅನುಮತಿ ಕೊಡಬಾರದು ಇದರ ಅಕ್ಕಪಕ್ಕದಲ್ಲಿ ನೀರಾವರಿ ಜಮೀನುಗಳಿದ್ದು, ಸಮೀಪದಲ್ಲಿ ಅನೇಕ ಕುಟುಂಬಗಳು ಪುನರ್ ವಸ್ತಿಯಿಂದಾಗಿ ಗುಡಿಸಲಿನಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದು ಮಕ್ಕಳು ವೃದ್ಧರು ಸೇರಿದಂತೆ ಎಲ್ಲರೂ ಅಲ್ಲಿರುವುದರಿಂದ ಕಳ್ಳು ಬ್ಲಾಸ್ಟ್ ಮಾಡುವುದರಿಂದ ಅವರ ಮೇಲೆ ಕಲ್ಲುಗಳ ಬಿದ್ದು ಜೀವ ಅಪಾಯ ಆಗೋದ್ರಲ್ಲಿ ಸಂದೇಹವಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಕಲ್ಲಿನ ಕ್ವಾರಿ ಮಾಡಬಾರದೆಂದು ಆಗ್ರಹಿಸಿದರು.
ಒಂದು ವೇಳೆ ಮಾನವೀಯತೆ ಮೀರಿ ನೀವು ಏನಾದರೂ ಸಂಬಂಧಿಸಿದ ಅಧಿಕಾರಿಗಳು ಅನುಮತಿ ನೀಡಿದರೆ ಅಕ್ಕಪಕ್ಕದ ಎಲ್ಲ ರೈತರು ದನ ಕರ ಕುರಿ ಸಮೇತವಾಗಿ ತಹಶೀಲ್ದಾರ್ ಕಚೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ವೇಳೆ ಮುದಕಣ್ಣ ಛಲವಾದಿ, ವಿಠ್ಠಲ್ ಬಿದರಿ, ಶಂಕ್ರಪ್ಪ ಮಾಚಕಾನೂರ್, ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪ್ಪಗೊಳ್, ಶ್ರೀಶೈಲ್ ಸೊನ್ನದ, ಮುದಕಣ್ಣ ಛಲವಾದಿ
ಪರಸು ಛಲವಾದಿ, ಮುತ್ತು ಸೊನ್ನದ ಸೇರಿದಂತೆ ಇತರರು ಇದ್ದರು.