ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ತಾಂಬಾ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲುಗೈ ಸಾಧಿಸಿದೆ. ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪೆನಲ್ ೧೧ ಸದಸ್ಯರು ಆಯ್ಕೆಯಾಗಿದ್ದಾರೆ ಕೇವಲ ಒಂದು ಸ್ಥಾನಕ್ಕೆೆ ಬಿಜೆಪಿ ಮುಖಂಡರು ತೃಪ್ತಿ ಪಡಬೇಕಾಗಿದೆ.
ಗೆಲವು ಸಾಧಿಸಿದವರಲ್ಲಿ ಬಾಬುರಾವು ಯಲಗೊಂಡ ಪಾಟೀಲ, ಲಕ್ಷ್ಮಣ ನಂದಪ್ಪ ಹಿರೇಕುರಬರ, ಧರ್ಮಣ್ಣ ನಾಗಪ್ಪ ಮಸಳಿ, ಮೈಬೂಬ ಹುಸೇನಸಾಬ ಮುಲ್ಲಾ, ಅಮೋಘಿ ಸಿದ್ದಪ್ಪ ಕನ್ನಾಳ, ಗುರುಲಿಂಗವ್ವ ಗುರಪ್ಪ ಜೇವುರ, ಭಾರತಿ ಸಂಗಯ್ಯ ಅರೇಕಾರ, ಶಿವಪುತ್ರ ಸಿದ್ದಪ್ಪ ಗಗನಳ್ಳಿ, ಗುರಪ್ಪ ಸಿದ್ದಪ್ಪ ಮದಭಾವಿ, ಗೋಪಾಲ ಹುಚ್ಚಪ್ಪ ಸಿಂಗೆ, ಶಂಕ್ರೇಪ್ಪ ಸಿದ್ದಪ್ಪ ಶಿರಗೂರ, ಮಹಾದೇವಪ್ಪ ರಾಚಪ್ಪ ಗಳೇದ ಪ್ರಮುಖರು.
ಚುನಾವಣಾ ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ವಿಜಯೋತ್ಸವ ಆಚರಿಸಲಾಯಿತು .
ಕಾಂಗ್ರೆಸ್ ಮುಖಂಡರಾದ ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ರವಿಕುಮಾರ ಚವ್ಹಾಣ, ಮಹ್ಮದ ವಾಲಿಕಾರ, ಸಿದ್ದನಗೌಡ ಬೀರಾದಾರ, ಜೆ.ಎಸ್.ಹತ್ತಳ್ಳಿ, ಸಿದಗೋಂಡ ಹಿರೇಕುರಬರ, ಕಾಮೇಶ ಉಕ್ಕಲಿ, ಪರಸು ಬೀಸನಾಳ, ಸಿದ್ದು ಹತ್ತಳ್ಳಿ, ರಾಯಗೊಂಡ ನಾಟೀಕಾರ, ಮಹಾದೇವ ಮೂಲಿಮನಿ, ನಾಗಪ್ಪ ಕುರುಬತಳ್ಳಿ, ಸದು ಗಡ್ಡದ, ಮಾಹಂತೇಶ ಬಡದಾಳ, ಸಿದ್ದಪ್ಪ ಕಿಣಗಿ ಮತ್ತಿತರಿದ್ದರು.
ನಂತರ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರಿಗೆ ಭೇಟಿಯಾದರು. ಅವರು ಎಲ್ಲ ಸದಸ್ಯರನ್ನು ಸನ್ಮಾನಿಸಿದರು.