ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕು ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಪ್ರಾಥಮಿಕ ವಿಭಾಗದಲ್ಲಿ ತಾಲ್ಲೂಕಿನ ತಡವಲಗಾ ಗ್ರಾಮದ ವಿನಾಯಕ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಮಂಗಳವಾರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ ಹಾಗೂ ಶಿಕ್ಷಣ ಇಲಾಖೆಯ ಇವರ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಸಿದ್ದಪ್ಪ ಅಗರಖೇಡ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಾಲಕಿಯರ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ. ಪಠ್ಯದ ಜೊತೆ ಆಟದಲ್ಲಿ ಸಕ್ರೀಯವಾಗಿರಬೇಕು. ಆಟದಿಂದ ರೋಗ ಬರುವುದಿಲ್ಲ ಎಂದು ಹೇಳಿದರು. ಇದೇ ರೀತಿ ವಿದ್ಯಾರ್ಥಿಗಳು ಮುಂಬರುವ ದಿನಮಾನಗಳಲ್ಲಿ ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಮಂತ ದುದಗಿ, ಖಜಾಂಚಿ ವಿನೋದ ಖೇಡ, ಮುಖ್ಯ ಗುರು ಬಿ ಜಿ ಬಾಗೇವಾಡಿ, ಪ್ರೌಢಶಾಲೆಯ ಮುಖ್ಯ ಗುರು ಎಂ ಆರ್ ರೂಗಿ, ದೈಹಿಕ ಶಿಕ್ಷಕ ಪ್ರಕಾಶ ಐರೋಡಗಿ, ಟಿಮ್ ಮ್ಯಾನೇಜರ್ ರಮೇಶ ಬಗಲಿ, ಈರಣ್ಣ ಕುಂಬಾರ ಸೇರಿದಂತೆ ಸಹ ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.