Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಜನವರಿ ೨೫ ರಂದು ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ೧೬ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦ಕ್ಕೆ ನಡೆಯುವ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹರೀಶ ಎ.ಅವರು ಉದ್ಘಾಟಿಸಲಿದ್ದು, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗರಗಿ,ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧನೆ, ಸಾಂಕೇತಿಕವಾಗಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಣೆ, ಅತ್ಯುತ್ತಮ ಬಿ.ಎಲ್.ಒ ಅವರಿಗೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಬಸವ ಇಂಟರ್ನ್ಯಾಷನಲ್ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಕುಮಾರ್ ಮೊಮ್ಮದ್ ಜಿಶಾನ್ ಸೂರಜ್ ರಿಸಾಲ್ದಾರ್ ಇವರು ಕರ್ನಾಟಕ ರಾಜ್ಯದ ಪರವಾಗಿ ಗೋವಾ ರಾಜ್ಯದಲ್ಲಿ ಯುಥ್ ಗೇಮ್ಸ್ ಇಂಡಿಯಾ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಅಂಡರ್ ೧೦ ನಲ್ಲಿ ಅಥ್ಲೇಟಿಕ್ ಸ್ಪರ್ಧೆ ೧೦೦ ಮೀಟರ್ ಓಟದಲ್ಲಿ ೧೫ ಸೆಕೆಂಡ್ ನಲ್ಲಿ ಓಟವನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ಕರ್ನಾಟಕದ ಪರವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊಹಮ್ಮದ್ ಜಿಶಾನ್ ಸೂರಜ್ ರಿಸಾಲ್ದಾರ್ ಈಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಮುಂದೆ ನೇಪಾಳದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತಪರವಾಗಿ ಜೀಶಾನ್ ಪ್ರತಿನಿಧಿಸಲಿದ್ದಾರೆ. ಅಲ್ಲಿ ಏಷಿಯಾ ಖಂಡದ ಎಲ್ಲಾ ರಾಷ್ಟ್ರಗಳು ಭಾಗವಹಿಸುತ್ತಿದ್ದು, ಅಲ್ಲಿಯೂ ಕೂಡ ಜಿಶಾನ್ ಗೆಲುವು ಸಾಧಿಸಲಿ ಎಂದು ನಗರದ ಜನತೆ ಹಾರೈಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಹಾಗೂ ಕರ್ನಾಟಕ ನಾಡ ರಕ್ಷಣಾ ವೇದಿಕೆ ವಿಜಯಪುರ ವತಿಯಿಂದ ವಿಶೇಷ ಸಾಧಕರಿಗೆ ಕೊಡಮಾಡುವ ರಾಷ್ಟ್ರೀಯ ಜ್ಞಾನಸಿರಿ ಪ್ರಶಸ್ತಿಗೆ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ತಿಳಿಸಿದ್ದಾರೆ.ಇದೇ 28 ರ ಇಳಿಹೊತ್ತು 4.30 ಕ್ಕೆ ವಿಜಯಪುರ ನಗರದಲ್ಲಿ ಜರುಗುವ ‘ಜ್ಞಾನಸಿರಿ ಉತ್ಸವ-2026’ ಸಮಾರಂಭದಲ್ಲಿ ಮನುಗೂಳಿಯ ಸಂಗನಬಸವ ಶಿವಾಚಾರ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಸೇರಿದಂತೆ ಅನೇಕ ಗಣ್ಯರು ಶಿಕ್ಷಕ ಸಂತೋಷ ಬಂಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಚಾಲಕರ ದಿನಾಚರಣೆ | ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಅಭಿಮತ B ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಾಲಕರಿಗೆ ನೈತಿಕ ಸ್ಥೈರ್ಯ ತುಂಬುವ ಹಾಗೂ ಅವರ ಜವಾಬ್ದಾರಿಯುತ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಜನವರಿ 24ರಂದು ಚಾಲಕರ ದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆಯೊಂದಿಗೆ ಪ್ರಯಾಣಿಕರ ನಂಬಿಕೆ ಗಳಿಸಿ, ಸೇವೆ ಸಲ್ಲಿಸುತ್ತಿರುವ ಚಾಲಕರ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಅವರ ಕಾರ್ಯ ಜವಾಬ್ದಾರಿಯುತ ಮತ್ತು ಗೌರವಯುತ ಸೇವೆಯಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಸೀಂಬಾಬಾ ಮುದ್ದೇಬಿಹಾಳ ಅವರು ಹೇಳಿದರು.ಅವರು, ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದ ಚಾಲಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಕರ್ತವ್ಯದ ಅವಧಿಯಲ್ಲಿ ಮೈತುಂಬಾ ಕಣ್ಣಾಗಿಸಿಕೊಂಡು ಪ್ರಯಾಣಿಕರ ಸುರಕ್ಷತೆಯನ್ನು ಆದ್ಯತೆಯನ್ನಾಗಿಸಿಕೊಂಡು ನಿರ್ವಹಿಸುವ ಕಾರ್ಯ ಅನುಪಮವಾಗಿದೆ ಎಂದು ಅವರು ಹೇಳಿದರು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಅವರು ಮಾತನಾಡಿ,ಚಾಲಕರ ದಿನಾಚರಣೆ ಸಂದರ್ಭದಲ್ಲಿ ಚಾಲಕರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ…
ಲೇಖನ- ಜಯಶ್ರೀ. ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪ್ರಿಯ ಪ್ರಿಯತಮೆ ಪ್ರಿಯಾ,ಕಿಟಕಿಯ ಕಿಂಡಿಯಲ್ಲಿ ಒಳಗೆ ಹಣಕಿಕ್ಕಿ ಕದ್ದು ಕದ್ದು ನೋಡಿದೆ. ನೀನು ಉಟ್ಟುಕೊಳ್ಳುತ್ತಿದ್ದ ಬಂಗಾರದಂಚಿನ ಸೀರೆಯ ತುದಿಯನ್ನು ಒಂದು ಕೈಯಲ್ಲಿ ಹಿಡಿದಿದ್ದೆ. ಮತ್ತೊಂದು ಕೈಯನ್ನು ಅಂದವಾದ ನಾಭಿಯ ಹತ್ತಿರ ಇಟ್ಟು ಭಾವ ಪ್ರಪಂಚದಲ್ಲಿ ಮುಳುಗಿದ್ದೆ. ನನಗೆನಿಸಿದಂತೆ ನೀನು ನನ್ನನ್ನೇ ನೆನೆಯುತ್ತ ಕನ್ನಡಿಯ ಮುಂದೆ ನಿನ್ನನ್ನು ನೀನು ಮುದ್ದು ಮಾಡಿಕೊಳ್ಳುತ್ತಿದಿಯಾ ಎಂದು ಭಾಸವಾಯಿತು. ತುಟಿಗೆ ಹಚ್ಚಿದ ಬಣ್ಣ ನನ್ನನ್ನೇ ಕೈ ಬೀಸಿ ಕರೆದಂತೆನಿಸಿತು. ತಡ ಮಾಡದೇ ಬಂದು ನಿನ್ನ ಸಪೂರ ಗಲ್ಲದ ಮೇಲೆ ಕಲೆ ಮಾಡಿ ಬಿಡಬೇಕೆನಿಸಿತು. ಅದು ನೆನೆದು, ಕ್ಷಣಾರ್ಧದಲ್ಲಿ ಮೈ ಬಿಸಿಯಾಯಿತು. ‘ಸೀರೆಲಿ ಹುಡುಗಿಯರ ನೋಡಲೇಬಾರದು ನಿಲ್ಲಲ್ಲ ಟೆಂಪ್ರೆಚರ್.’ ಹಾಡು ತಲೆಯಲ್ಲಿ ಸುಳಿದು ಗಿರಗಟ್ಲೆ ಆಡ ತೊಡಗಿತು. ಕಪ್ಪು ಬಿಳುಪಿನ ನನ್ನ ಜೀವನ ಕಲರ್ ಫುಲ್ ಆಗೋ ಮುನ್ಸೂಚನೆ ಕಾಣತೊಡಗಿತು. ನನ್ನ ನಾನೇ ಮರೆತು ಕನಸಲ್ಲೂ ನಿನ್ನ ಮೇಲೆ ಗೀಚಿದ ಅದೆಷ್ಟೋ ಕವನಗಳು ಎದೆಯ ಗೂಡಿನಲ್ಲಿ ಬೆಚ್ಚಗೆ…
ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ಸಿ. ವಿ. ನಾಗರಾಜ್ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಹೆಚ್.ಡಿ.ಕೋಟೆ: ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿಖಿಲ್ ಕುಮಾರಸ್ವಾಮಿ ಟೊಂಕಕಟ್ಟಿ ನಿಂತಿದ್ದಾರೆ. ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ಸಿ. ವಿ. ನಾಗರಾಜ್ ಭವಿಷ್ಯ ನುಡಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ 37ನೇ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಮೂರು ಬಾರಿ ಸೋತರೂ ಕುಗ್ಗದೆ ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕವಾದ ಹೋರಾಟವನ್ನು ಮಾಡುತ್ತಿರುವ ವ್ಯಕ್ತಿ. ಪಕ್ಷದಲ್ಲಿ ಇರುವ ಸ್ಥಾನ ಮಾನಗಳನ್ನು ಬಳಕೆ ಮಾಡಿಕೊಂಡು ಇಡೀ ರಾಜ್ಯವನ್ನು ಸುತ್ತಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಛಲವನ್ನು ಇಟ್ಟುಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ತಿಳಿಸಿದರು.ಹಿರಿಯ ಜೆಡಿಎಸ್ ಮುಖಂಡ ನರಸಿಂಹೇಗೌಡ ಮಾತನಾಡಿ ಚುನಾವಣೆ ಸೋಲಿನಿಂದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾವೆಲ್ಲರೂ ಭಾರತೀಯರೆಂಬ ಐಕ್ಯತಾ ಮಂತ್ರವನ್ನು ಪಠಿಸುತ್ತಾ ನಮ್ಮಲ್ಲಿರುವ ಜಾತಿ, ಮತ, ಪಂಥ, ಪಂಗಡ, ಮೇಲು-ಕೀಳುಗಳೆಂಬ ಅನಿಷ್ಟಗಳನ್ನು ತೊಲಗಿಸಿ ನಾವೆಲ್ಲರೂ ಒಂದೇ, ಜಾತಿ ಒಂದೇ, ಮತ ಒಂದೇ ನಾವು ಮನುಜರು ಎಂಬಂತೆ ಸದ್ಭಾವನೆಯನ್ನು ಹೊಂದಬೇಕು. ನಮ್ಮದು ‘ವಸುದೈವ ಕುಟುಂಬಕಂ’ ಎನ್ನುವ ಸಂಸ್ಕೃತಿಯ ನಾಡು. ಮಾನವೀಯತೆ, ಸದಾಚಾರ, ಸನ್ನಡತೆ, ಸದ್ವಿಚಾರ, ಸಚ್ಚಾರಿತ್ರ್ಯ, ಸತ್ಸಂಗ, ಸಮಷ್ಠಿಭಾವ ಮತ್ತು ಸಮನ್ವಯತೆ ಮತ್ತು ಸಮಾನತೆಯಂತಹ ಗುಣಗಳನ್ನು ಅಳವಡಿಸಿಕೊಂಡು ನಮ್ಮ ನಾಡಿನ ಭವ್ಯ ಸಂಸ್ಕೃತಿ-ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂದು ಜಮಖಂಡಿಯ ಓಲೆಮಠದ ಆನಂದ ದೇವರು ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಎನ್.ಜಿ,ಓ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ೬ ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದುಶ್ಚಟಗಳ ನಿರ್ಮೂಲನೆ ಮತ್ತು ಸದ್ಭಾವನಾ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಇಂದಿನ ಆಧುನಿಕತೆ ಮತ್ತು ವಾಣಿಜ್ಯೀಕರಣದತ್ತ ಸಾಗುತ್ತಿರುವ ಈ ಸಮಾಜದಲ್ಲಿ ಯುವಕರು ನೈತಿಕ-ಮೌಲ್ವಿಕ ಮತ್ತು ಮಾನವೀಯತೆಯಂತಹ ಗುಣಗಳನ್ನು ತೊರೆದು ಮಾಯಾ ಜಗತ್ತಿನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜನಾರ್ಧನ ಮಹಾಸ್ವಾಮಿಗಳು , ಗಂಗಯ್ಯ ಮಠಪತಿ, ಸುಭಾಸಗೌಡ ಪಾಟೀಲ್,ರಾಮಪ್ಪ ಬಬಲಾದಿ,ಕಲ್ಲಪ್ಪ ಗಡ್ಡಿ,ಶೇಖಪ್ಪ ನೀಲನ್ನವರ, ಸುರೇಶ ಗಡ್ಡಿ, ಅಶೋಕ ಕರೇನಿ, ಲೋಹಿತ್ ನೀಲನ್ನವರ, ಅನಿಲ ಕರೇನಿ, ಹನಮಂತ ಕರೇನಿ, ಲಾಲೆಸಾಬ್ ಮುಲ್ಲಾ ಇತರರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ರಸ್ತೆ ಸಂಚಾರಿ ನಿಯಮವನ್ನು ಪಾಲಿಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು ಇವುಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಮುಖ್ಯವಾಗಿ ವಾಹನಗಳನ್ನು ಚಲಾಯಿಸುವಾಗ ಯಾವುದೇ ಕಾರಣಕ್ಕೂ ಮೊಬೈಲ್‌ನಲ್ಲಿ ಮಾತನಾಡಬಾರದು, ಅಪ್ರಾಪ್ತ ವಯಸ್ಸಿನವರು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಲು ಮುಂದಾಗಬಾರದು ವಾಹನಗಳನ್ನು ಅಪ್ರಾಪ್ತರಿಗೆ ನೀಡುವದು ಕೂಡಾ ತಪ್ಪು ಎಂದು ಸಿಂದಗಿಯ ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ ಹೇಳಿದರು.ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಬಸವೇಶ್ವರ ಪೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮೀತಿ, ವಕೀಲರ ಸಂಘ, ಪೋಲಿಸ್, ಶಿಕ್ಷಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಸ್ತೆ ಸುರಕ್ಷತಾ ಸಪ್ತಾಹ-೨೦೨೬ ಅಭಿಯಾನ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದ್ವಿ ಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಲಘು ವಾಹನ ಚಾಲಕರು ಶೀಟ್ ಬೆಲ್ಟ್ಗಳನ್ನು ಧರಿಸಿ ವಾಹನ ಚಲಾಯಿಸಬೇಕು ಇದರಿಂದ ಬಹುತೇಕ ಅಪಘಾತಗಳನ್ನು ತಡೆಗಟ್ಟಬಹುದು ಈ ಕುರಿತು…
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯುತ್ ಶಾರ್ಟ ಸರ್ಕ್ಯೂಟನಿಂದ ಕೊಯ್ಲಿಗೆ ಬಂದ ಬೆಲೆ ಬಾಳುವ ಕಬ್ಬು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಲಚ್ಯಾಣ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.ಈ ಅಗ್ನಿ ಅವಘಡದಲ್ಲಿ ಇಲ್ಲಿನ ಮಲ್ಲಿಕಾರ್ಜುನ ಮುಜಗೊಂಡ ಇವರ ೪ ಎಕರೆ ಕಬ್ಬು ಸುಟ್ಟು ಕರಕಲಾಗಿಸುಮಾರು ಮೂರು ಲಕ್ಷ ರೂ ದಷ್ಟು ಬೆಳೆ ನಷ್ಟವಾಗಿದೆ.ಬೆಳಿಗ್ಗೆ ೧೦ ಗಂಟೆಯ ವೇಳೆಯಲ್ಲಿ ಆಕಸ್ಮಿಕವಾಗಿ ಕಬ್ಬಿನ ಪಡದ ಮಧ್ಯೆ ಹಾದುಹೋದ ಎಲ್.ಟಿ ವಿದ್ಯುತ್ ಲೈನ ತಂತಿ ಗಾಳಿಯಲ್ಲಿ ಜೋಡಣೆಯಾಗಿ ವಿದ್ಯುತ್ ಶಾರ್ಟ ಸರ್ಕ್ಯೂಟದಿಂದ ಉತ್ಪತ್ತಿಯಾದ ಬೆಂಕಿಯ ಕಿಡಿಯು ತಂತಿಯ ಕೆಳಭಾಗದ ಒಣಗಿದ ರವದಿ ತುಂಬಿದ ಕಬ್ಬಿನ ಗದ್ದೆಯಲ್ಲಿ ಬಿದ್ದಿದೆ.ಇಂಡಿಯ ಅಗ್ನಿಶಾಮಕ ದಳದವರಿಗೆ ಮಾಲಿಕರು ಫೋನು ಮಾಡಿದ್ದಾರೆ. ಪಕ್ಕದ ಜಮೀನ ಬೋರವೆಲ್ ನೀರನ್ನು ಬಳಸಿ ಮತ್ತು ಅಗ್ನಿ ಶಾಮಕ ದಳದವರೂ ಸ್ಥಳಕ್ಕೆ ಧಾವಿಸಿ ೨ ಎಕರೆ ಕಬ್ಬನ್ನು ಉಳಿಸಿದ್ದಾರೆ.. ಗ್ರಾಮ ಲೆಕ್ಕಾಧಿಕಾರಿ ಅವಜಿ, ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬೇಟಿ ನಡೆಸಿದ್ದಾರೆ.ಇಂಡಿಯ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
