Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ

ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ

ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪ್ರಿಯಾಂಕ್ ಖರ್ಗೆ ಆ್ಯಂಡ್ ಟೀಂಗೆ ತಕ್ಕ ಪಾಠ ಕಲಿಸಲಿದ್ದೇವೆ
(ರಾಜ್ಯ ) ಜಿಲ್ಲೆ

ಪ್ರಿಯಾಂಕ್ ಖರ್ಗೆ ಆ್ಯಂಡ್ ಟೀಂಗೆ ತಕ್ಕ ಪಾಠ ಕಲಿಸಲಿದ್ದೇವೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಶಿವಸೇನೆ (ಏಕನಾಥ ಶಿಂಧೆ ಬಣ) ರಾಜ್ಯ ಘಟಕದ ಅಧ್ಯಕ್ಷ ಆಂದೋಲಾ ಸ್ವಾಮೀಜಿ ಎಚ್ಚರಿಕೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಮಾತಿನ ಭರದಲ್ಲಿ ಆಡಿದ ಮಾತುಗಳನ್ನೇ ದೊಡ್ಡದು ಮಾಡಿ ಕನೇರಿ ಶ್ರೀಗಳನ್ನು ಅಪಮಾನ ಮಾಡುವ ಕೆಲಸ ನಡೆಯುತ್ತಿದೆ, ಅಂಬಿಗರ ಚೌಡಯ್ಯನವರು ಸಹ ಕಟುವಾಗಿ ತಮ್ಮ ವಚನಗಳಲ್ಲಿ ಅನ್ಯಾಯವನ್ನು ವಿರೋಧಿಸಿದ್ದಾರೆ, ಇದೇ ಮಾದರಿಯಲ್ಲಿ ಕನೇರಿ ಶ್ರೀಗಳು ಒಡಕು ಮೂಡಿಸುವುದರ ವಿರುದ್ಧ ಕಿಡಿಕಾರಿದ್ದಾರೆ ಎಂದು ಶಿವಸೇನೆ (ಏಕನಾಥ ಶಿಂಧೆ ಬಣ) ರಾಜ್ಯ ಘಟಕದ ಅಧ್ಯಕ್ಷ ಶ್ರೀ ಆಂದೋಲ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತಿನ ಭರದಲ್ಲಿ ಶ್ರೀಗಳು ಮಾತನಾಡಿರಬಹುದು, ಲಿಂಗಾಯತ ಮಹಾಸಭೆಗೆ ಸೂತ್ರಧಾರಿಯಾಗಿರುವ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀಗಳಿಗೆ ಕರೆ ಮಾಡಿ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ಕ್ಷಮೆ ಕೇಳುವಂತೆ ಹೇಳಿದ್ದರೆ ಈ ವಿಷಯ ದೊಡ್ಡದಾಗುತ್ತಿರಲಿಲ್ಲ, ಆದರೆ ಹಿಂಬಾಲಕರಿಂದ ಈ ವಿಷಯವನ್ನು ದೊಡ್ಡದು ಮಾಡಿದ್ದು ಯಾರು? ಜಿಲ್ಲೆಯಲ್ಲಿ ಎಗ್ಗಿಲ್ಲದೇ ಗಾಂಜಾ ದೊರಕುತ್ತಿದೆ, ಈ ಎಲ್ಲವೂಗಳನ್ನು ಕಡಿವಾಣ ಹಾಕುವ ಬದಲು ಈ ವಿಷಯವನ್ನು ದೊಡ್ಡದು ಮಾಡುವುದು ಇರಲಿಲ್ಲ ಎಂದರು.
ಈ ವಿವಾದವನ್ನು ಕನೇರಿ ಶ್ರೀಗಳು ತಿಳಿಗೊಳಿಸಬೇಕು, ಆ ರೀತಿ ಶಬ್ದ ಬಳಕೆಯನ್ನೂ ನಾನು ಸಹ ಒಪ್ಪುವುದಿಲ್ಲ, ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವುದು ನನ್ನ ಭಾವನೆ ಕೂಡಾ ಹೌದು ಎಂದರು.
ಸಂಘ ಪರಿವಾರ ಬಲಿಷ್ಠವಾದರೆ ತಮ್ಮ ಸೋಲು ಎಂಬ ಭಯದಿಂದ ಪ್ರಿಯಾಂಕ್ ಖರ್ಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಪ್ರಿಯಾಂಕ್ ಖರ್ಗೆ ಆ್ಯಂಡ್ ಟೀಂಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದರು. ಸಂಘ ಪರಿವಾರದ ಪಥಸಂಚಲನದಲ್ಲಿ ಭಾಗಿಯಾದ ಪಿಡಿಓಗೆ ಅಮಾನತ್ತು ಮಾಡಲಾಗಿದೆ, ಆದರೆ ಅನೇಕ ಭ್ರಷ್ಟ ಪಿಡಿಓಗಳು ಅವರ ಸುತ್ತ ಸುತ್ತುತ್ತಾರೆ ಅವರನ್ನು ಅಮಾನತ್ತು ಮಾಡಲಿ ಎಂದರು.
ಗಡಿ ವಿವಾದ ಕೆದಕುವವರು ಉದ್ಛವ ಠಾಕ್ರೆ ಬಣದವರು..
ಉದ್ಧವ ಠಾಕ್ರೆ ಅವರಂತಹ ನಾಯಕರು ಕರ್ನಾಟಕ-ಮಹಾರಾಷ್ಟçದಲ್ಲಿ ಗಡಿ ವಿವಾದದ ಸೃಷ್ಟಿ ಮಾಡುತ್ತಾರೆ, ಭಾಷೆ, ಗಡಿ ವಿವಾದವನ್ನು ಉದ್ಛವ ಠಾಕ್ರೆ ಬಣದವರು ಕೆಣಕುತ್ತಾರೆ, ಈ ಹಿಂದೆ ಮರಾಠಿ-ಹಿಂದಿ ಭಾಷಿಕರ ಸಂಘರ್ಷ ನಡೆದಾಗ ಏಕನಾಥ ಶಿಂಧೆ ಹಿಂದಿ ಭಾಷಿಕರ ಪರ ನಿಂತುಕೊಂಡರು, ಯಾವುದು ನ್ಯಾಯದ ಪರ ಅವರು ಅದರ ಪರ. ಈಗ ಶಿವಸೇನೆ ಪಕ್ಷ ಬದಲಾಗಿದೆ, ಅದು ಉದ್ಧವ ಠಾಕ್ರೆ ಅವರ ಕೈಯಲ್ಲಿ ಇಲ್ಲ, ಈಗ ಏಕನಾಥ ಶಿಂಧೆ ಅವರ ಸಾರಥ್ಯದಲ್ಲಿದೆ, ಪಕ್ಷ ಸಂಘಟನೆಯ ಸಭೆ ಅವರೊಂದಿಗೆ ನಡೆದಾಗ ನಾವೇ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಹೃದಯ ವೈಶಾಲ್ಯವುಳ್ಳ ಏಕನಾಥ ಶಿಂಧೆ, ಈ ವಿಷಯ ಸುಪ್ರಿಂಕೋರ್ಟ್ನಲ್ಲಿದೆ, ನ್ಯಾಯಾಲಯದ ತೀರ್ಪು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಯಿಂದ ಹಿಡಿದು ಲೋಕಸಭೆಗೆ ಶಿವಸೇನೆ ಕರ್ನಾಟಕದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಹಿಂದೂಗಳಿಗೆ ಭಾರತದಲ್ಲಿ ಪ್ರಥಮಾದ್ಯತೆ ದೊರಕಬೇಕು, ಭಾರತ ವಿಶ್ವದಲ್ಲಿಯೇ ಸರ್ವತೋಮುಖ ಅಭಿವೃದ್ಧಿ ಹೊಂದಿದ ರಾಷ್ಟçವಾಗಬೇಕು ಎಂಬ ಎರಡು ಮಹತ್ವದ ಸಂಕಲ್ಪವನ್ನು ಶಿವಸೇನೆ ಹೊಂದಿದ್ದು, ರಾಜ್ಯದಲ್ಲಿ ಪ್ರಬಲವಾಗಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.
ಕುಂಭಕರ್ಣ ನಿದ್ರೆಯಲ್ಲಿ ಸರ್ಕಾರ
ಧಾರಕಾರ ಮಳೆಯಿಂದಾಗಿ ರೈತ ಸಂಕಷ್ಟದಲ್ಲಿದ್ದರೂ ಸಹ ರಾಜ್ಯ ಸರ್ಕಾರ ರೈತರಿಗೆ ಒಂದೇ ಒಂದು ರೂ. ಪರಿಹಾರ ನೀಡದೇ ಕುಂಭಕರ್ಣ ನಿದ್ರೆಯಲ್ಲಿದೆ, ಇದೊಂದು ದಪ್ಪ ಚರ್ಮದ ದೇಶದಲ್ಲಿಯೇ ಅತ್ಯಂತ ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಧಾರಾಕಾರ ಮಳೆಯಿಂದಾಗಿ ರೈತರು ಬೆಳೆದ ಬೆಳೆ ನೆಲಕಚ್ಚಿದೆ, ಆದರೆ ಸರ್ಕಾರ ಮಾತ್ರ ರೈತರನ್ನು ನಡು ನೀರಿನಲ್ಲಿ ಬಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದಲ್ಲಿಯೇ ಕೆಟ್ಟ ಸರ್ಕಾರ, ಜಾತಿ ಸಮೀಕ್ಷೆ ಬದಿಗೊತ್ತಿ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ಕೊಡಿ, ಕೇವಲ ವೈಮಾನಿಕ ಸಮೀಕ್ಷೆ ಹೆಸರಿನಲ್ಲಿ ಏರ್ ಷೋ ಎಂಬ ನಾಟಕ ನಡೆಸಿದೆ ಹೊರತು ಒಂದೇ ಒಂದು ರೂ. ರೈತರಿಗೆ ಪರಿಹಾರ ಕೈ ಸೇರಿಲ್ಲ, ರೈತರ ನೋವಿಗೆ ಸ್ಪಂದಿಸದ ಈ ಸರ್ಕಾರ ದಪ್ಪ ಚರ್ಮದ ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರ, ರೈತ ಶಾಪ ಹಾಕಿದರೆ ಈ ಸರ್ಕಾರ ಉಸಿರಾಡಲು ಸಾಧ್ಯವಾಗುವುದಿಲ್ಲ ಎಂದರು.
ಕಲ್ಯಾಣ ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ, ತಿಂಗಳು ಉರುಳಿ ರೈತ ಸಂಕಷ್ಟದಲ್ಲಿದ್ದರೂ ಸಹ ರೈತಪರ ಯಾವ ನಿರ್ಧಾರವನ್ನು ಕೈಗೊಳ್ಳದೇ ಹೋಗಿರುವುದು ಖಂಡನಾರ್ಹ, ಪ್ರವಾಹಪೀಡಿತ ಪ್ರದೇಶಗಳ ಪರಿವೀಕ್ಷಣೆಗೆ ಸಂಬಂಧಿಸಿದಂತೆ ವೈಮಾನೀಕ ಸಮೀಕ್ಷೆ ಹೆಸರಿನಲ್ಲಿ ಏರ್ ಷೋ ಎಂಬ ನಾಟಕ ಮಾಡಿದ್ದಾರೆ ಹೊರತು ಒಂದೇ ಒಂದು ರೂ. ಪರಿಹಾರ ರೈತರ ಕೈ ಸೇರಿಲ್ಲ, ರೈತರನ್ನು ನಡು ನೀರಿನಲ್ಲಿ ಕೈ ಬಿಟ್ಟಿರುವುದು ಖಂಡನೀಯ.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಲಭೀಮ ಬಾಬು ಸಾಳುಂಕೆ, ಭೀಮಾಶಂಕರ ಕ್ಷತ್ರಿ ಸೇರಿದಂತೆ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ

ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ

ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪಾತ್ರವೂ ಮುಖ್ಯ :ಗುಂದಗಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ
    In (ರಾಜ್ಯ ) ಜಿಲ್ಲೆ
  • ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪಾತ್ರವೂ ಮುಖ್ಯ :ಗುಂದಗಿ
    In (ರಾಜ್ಯ ) ಜಿಲ್ಲೆ
  • ಕೇಂದ್ರದಿಂದ ಅಸಹಕಾರವಿದ್ದರೂ ವಿತ್ತೀಯ ಶಿಸ್ತು ಪಾಲನೆ :ಸಿಎಂ
    In (ರಾಜ್ಯ ) ಜಿಲ್ಲೆ
  • ವಿಕಲಚೇತನ ಹಾಗೂ ಗರ್ಭಿಣಿಯರಿಗೆ ಜನಗಣತಿಯಿಂದ ವಿನಾಯಿತಿ ನೀಡಿ
    In (ರಾಜ್ಯ ) ಜಿಲ್ಲೆ
  • ಕರುನಾಡು ಜನತೆಗೆ ವರವಾದ ಪಂಚ ಗ್ಯಾರಂಟಿ ಯೋಜನೆಗಳು
    In ವಿಶೇಷ ಲೇಖನ
  • ದಿವ್ಯಾಂಗರ ವಾಲಿಬಾಲ್ ನಲ್ಲಿ ಮಿಂಚಿದ ಯಮನಪ್ಪ
    In (ರಾಜ್ಯ ) ಜಿಲ್ಲೆ
  • ಮಕ್ಕಳೆ ಮೊಬೈಲ್‌ ಬಿಟ್ಟು ಪುಸ್ತಕ ಹಿಡಿಯಿರಿ :ಮಲ್ಲಿಬೊಮ್ಮ ಶ್ರೀ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣದ ಬಜೆಟ್
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.