ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹಕೀಮ ಚೌಕ್ ಹತ್ತಿರದ ಪಾಶ್ಚಾಪುರ ಪೇಠ ನಿವಾಸಿಯಾದ ೩೩ ವರ್ಷದ ರೇಖಾ ಗಂ. ಭೀಮಾಶಂಕರ ಕುಮಟಗಿ ಎಂಬ ಮಹಿಳೆ ದಿನಾಂಕ : ೦೩-೧೦-೨೦೨೫ರಿಂದ ಕಾಣೆಯಾಗಿರುವ ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಮಹಿಳೆ ಪತ್ತೆಗೆ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ಮಹಿಳೆಯು ಸಾಧಾರಣ ಮೈಕಟ್ಟು, ದುಂಡುಮುಖ, ನೆಟ್ಟನೆಯ ಮೂಗು, ಸಾದಾಗಪ್ಪು ಮೈ ಬಣ್ಣ ಹೊಂದಿದ್ದಾಳೆ. ೫.೪ ಅಡಿ ಎತ್ತರವಿದ್ದು, ಕನ್ನಡ ಮತ್ತು ವಡ್ಡರ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಮಿಶ್ರಿತ ಚಾಕಲೇಟ್ ಬಣ್ಣದ ನೈಟಿ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ಪೊಲಿಸ್ ಕಂಟ್ರೋಲ್ ರೂಂ ದೂ: ೦೮೩೫೨-೨೫೦೨೧೪ ಅಥವಾ ಗೋಲಗುಂಬಜ್ ಪೊಲಿಸ್ ಠಾಣೆಗೆ ಮಾಹಿತಿ ಒದಗಿಸುವಂತೆ ಪ್ರಕಟಣೆ ತಿಳಿಸಿದೆ.

