ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಮಹಾರಾಷ್ಟçದ ಫಂಡರಪುರದಲ್ಲಿ ಜರುಗುವ ಕಾರ್ತಿಕ ಏಕಾದಶಿ ಜಾತ್ರೆ ನಿಮಿತ್ಯ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟ ಹಾಗೂ ಬಸವನಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು. ಒಂದೇ ಗುಂಪಿನಿಂದ ಪ್ರಯಾಣಿಸುವ ಕನಿಷ್ಠ ೫೫ ಜನ ಪ್ರಯಾಣಿಕರು ಲಭ್ಯವಾದಲ್ಲಿ ಅವರ ಸ್ವಸ್ಥಳದಿಂದಲೇ ನೇರವಾಗಿ ಫಂಡರಪುರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ-೧ ಮೊ: ೭೭೬೦೯೯೨೨೬೩, ವಿಜಯಪುರ-೨ ಮೊ: ೭೭೬೦೯೯೨೨೬೪, ವಿಜಯಪುರ-೩ ಮೊ: ೭೭೬೦೯೧೪೦೦೮, ಇಂಡಿ ಮೊ: ೭೭೬೦೯೯೨೨೬೫, ಸಿಂದಗಿ ಮೊ: ೭೭೬೦೯೯೨೨೬೬, ಮುದ್ದೇಬಿಹಾಳ ಮೊ: ೭೭೬೦೯೯೨೨೬೭, ತಾಳಿಕೋಟ ಮೊ: ೭೭೬೦೯೯೨೨೬೮, ಬ.ಬಾಗೇವಾಡಿ ಮೊ: ೭೭೬೦೯೯೨೨೬೯, ಕೇಂದ್ರ ಬಸ್ ನಿಲ್ದಾಣ ವಿಜಯಪುರ ೦೮೩೫೨-೨೫೧೩೪೪, ಸಹಾಯಕ ಸಂಚಾರ ವ್ಯವಸ್ಥಾಪಕ ಮೊ: ೭೭೬೦೯೯೨೨೫೮ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
