Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಅಮೋಘಸಿದ್ದನ ಚರಿತ್ರೆ, ಸಾಂಸ್ಕೃತಿಕ ವೈಶಿಷ್ಟ್ಯತೆ, ಅವರ ಆಚಾರ-ವಿಚಾರಗಳು, ಸ್ತ್ರೀ ಅಸ್ತಿತ್ವ, ಆಚರಣೆಗಳ ಕುರಿತಾಗಿನ ವಿವಿಧ ಮಜಲುಗಳನ್ನು ಈ ಕೃತಿಯಲ್ಲಿ ಬಂಡಗರ ಅವರು ಹಾಸುಹೊಕ್ಕಾಗಿಸಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ವಾಂಸ ಡಾ.ಎಫ್ ಟಿ ಹಳ್ಳಿಕೇರಿ ಹೇಳಿದರು.ಶನಿವಾರದಂದು ನಗರದ ಸರಕಾರಿ ನೌಕರರ ಭವನದಲ್ಲಿ ನೆಲೆ ಪ್ರಕಾಶನ ಸಂಸ್ಥೆ ಸಿಂದಗಿ ಹಾಗೂ ಭೀಮಾoತರಂಗ ಸಾಹಿತ್ಯಕ-ಸಾಂಸ್ಕೃತಿಕ ಜಗಲಿ ಕೇಂದ್ರ ಇಂಡಿ ಅವರ ಸಹಯೋಗದಲ್ಲಿ ಚಿದಂಬರ ಬಂಡಗರ ರಚಿಸಿದ ‘ಡಾ.ಚನ್ನಪ್ಪ ಕಟ್ಟಿ:ಹಾಲುಮತದ ಅಧ್ಯಯನಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ಹಾಲುಮತ ಇತಿಹಾಸವು ಮನುಕುಲದ ಇತಿಹಾಸವಾಗಿದೆ. ಅದರ ಕುರಿತು ಇನ್ನು ಹೆಚ್ಚು ಸಂಶೋಧನೆಗಳಾಗಬೇಕಾಗಿದೆ. ಹಾಲುಮತ ಸಂಸ್ಕೃತಿ ವಿದೇಶಿಯರು ಮೆಚ್ಚಿ ಅಧ್ಯಯನ ಮಾಡಿ ಹಲವಾರು ಮಹತ್ವಪೂರ್ಣ ಕೃತಿಗಳನ್ನು ರಚಿಸಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ ಎಂ ಎಂ ಪಡಶೆಟ್ಟಿ ಮಾತನಾಡಿ, 21 ನೇ ಶತಮಾನದ ಈ ಸಂದರ್ಭದಲ್ಲಿ ಪರಂಪರೆ ಒಂದನ್ನು ಮರು ಕಟ್ಟುವಾಗ ಎಲ್ಲ ಜಾಗೃತಿಯನ್ನು ಡಾ.ಕಟ್ಟಿ ಅವರು ವಹಿಸಿದ್ದು ಎದ್ದು ಕಾಣುತ್ತದೆ ಎಂದು…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸದನದಲ್ಲಿ ಸರ್ಕಾರದ ಭಾಷಣ ಓದದೇ ದೇಶದಲ್ಲಿ ಕರ್ನಾಟಕದ ರಾಜ್ಯಪಾಲರು ಹೊಸ ಫ್ಯಾಷನ್ ಆರಂಭಿದ್ದಾರೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಪರಿಸರದ ಸಿಲ್ವರ್ ಲೇಕ್ ನಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅವರು, ಕೇಂದ್ರ ಸರ್ಕಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೆಸರು ತೆಗೆದು ಹಾಕುವ ಜೊತೆಗೆ ಗ್ರಾಮೀಣ ಜನರ ದುಡಿಯುವ ಹಕ್ಕನ್ನು ಕಿತ್ತುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆ, ಶೈಕ್ಷಣಿಕ ಹಕ್ಕು ತೆಗೆದು ಹಾಕಲಿ ನೋಡೋಣ ಎಂದು ಹರಿಹಾಯ್ದರು.ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಶೇ. 90 ರಷ್ಟು ಅನುದಾನದ ಸ್ಥಗಿತಗೊಳಿಸಿ, ಶೇ.60-40 ಅನುದಾನದ ಯೋಜನೆಗಳನ್ನು ಜಾರಿಗೆ ತಂರುವ ಮೂಲಕ ರಾಜ್ಯಗಳ ಮೇಲೆಯೇ ಭಾರ ಹಾಕುವ…
ಉದಯರಶ್ಮಿ ದಿನಪತ್ರಿಕೆ ಸೊಲ್ಲಾಪುರ: ಅಕ್ಕಲಕೋಟ ಪ್ರದೇಶವು ಕನ್ನಡದ ಅಸ್ಮಿತೆಯನ್ನು ಇನ್ನೂ ಉಳಸಿಕೊಂಡಿದೆ, ಕನ್ನಡ ನುಡಿಕಟ್ಟುವ ಕೆಲಸ ಗಡಿಭಾಗದಲ್ಲಿ ಖೇಡಗಿ ಸಂಸ್ಥೆ ಮಾಡುತ್ತಿದೆ ಎಂದು ಸಿಂದಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ರಮೇಶ ಕತ್ತಿ ಶ್ಲಾಘಿಸಿದರು.ಅವರು ಅಕ್ಕಲಕೋಟ ಪಟ್ಟಣದ ಸಿ.ಬಿ.ಖೇಡಗಿ ಕಾಲೇಜು ಕನ್ನಡ ವಿಭಾಗ ಹಾಗೂ ಪಿ.ಎಂ.ಉಷಾ ಪ್ರಾಯೋಜಕತ್ವದಲ್ಲಿ ಗುರುವಾರ ಹಮ್ಮಿಕೊಂಡ ‘ ಕನ್ನಡ ಭಾಷೆ’ ಕಾರ್ಯಾಗಾರದ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ನೀಡಿದರು.ಎರಡು ಸಾವಿರ ವರ್ಷಗಳಿಂದಲೂ ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತ, ಇಂದುಜಾಗತಿಕ ಮಟ್ಟದಲ್ಲಿಯೂ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ತನ್ನ ಸ್ಥಾನ ಗಟ್ಟಿಯಾಗಿಸಿದೆ, ಅಂತುಹುದೇ ಕೆಲಸವನ್ನು ಇಲ್ಲಿನ ಸಂಸ್ಥೆ ಮಾಡುತ್ತಿದೆ ಎಂದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಹಾಗೂ ಕನ್ನಡದ ವಿಭಾಗದ ಮುಖ್ಯಸ್ಥ ಪ್ರೊ. ಗುರುಲಿಂಗಪ್ಪ ಧಬಾಲೆ ‘ಕನ್ನಡ ನುಡಿಯನ್ನು ಅಕ್ಕಲಕೋಟ ಭಾಗದಲ್ಲಿ ಇನ್ನೂ ನಿರರ್ಗಳವಾಗಿ ಮಾತನಾಡುವವರಿದ್ದಾರೆ, ಗಡಿನಾಡಿನಲ್ಲಿ ಕನ್ನಡ ಕಲಿಸುವ, ಶೋಧಿಸುವ ಪ್ರಕ್ರಿಯೆ ಕಳೆದ ೩೦ ವರ್ಷಗಳಿಂದಲೂ ನಮ್ಮಅಧ್ಯಯನ ಕೇಂದ್ರ ಮಾಡುತ್ತಿದೆ, ನಿರಂತರ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸುವ…
ಆಲಮಟ್ಟಿ ಶಾಸ್ತ್ರೀ ಸಾಗರದಲ್ಲಿ ಬೋಟಿಂಗ್ ಗೆ ಚಾಲನೆ | ಮಹಾರಾಷ್ಟ್ರ, ಆಂಧ್ರ ಪ್ರವಾಸಿಗರ ಆಕರ್ಷಣೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಿಂದ ನೀರಾವರಿಗೆ ಆದ್ಯತೆ ನೀಡುವ ಜೊತೆಗೆ ಪ್ರವಾಸಿಗರ ಆಕರ್ಷಣೆಯಾಗುವಂತೆ ಬೋಟಿಂಗ್ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಮಾಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿಗೆ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರುಶನಿವಾರ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಪರಿಸರದಲ್ಲಿ ಸಿಲ್ವರ್ ಲೇಕ್ ನಲ್ಲಿ ಬೋಟಿಂಗ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಕ್ ಗಾರ್ಡನ್, ಸೈನ್ಸ್ ಗಾರ್ಡನ್ ಸೇರಿದಂತೆ ಹಲವು ಉದ್ಯಾನವನಗಳು ಶೈಕ್ಷಣಿಕ ಅಧ್ಯಯನ ಪ್ರವಾಸಿ ಯೋಗ್ಯತಾಣಗಳಾಗಿ, ಜನಮನ ಗೆದ್ದಿವೆ. ಇದಕ್ಕೆ ಇದೀಗ ಬೋಟಿಂಗ್ ಸೇವೆ ಮರು ಆರಂಭದ ಮೂಲಕ ಆಲಮಟ್ಟಿ ಪ್ರವಾಸಿ ತಾಣದ ವೈಭವ ಹೆಚ್ಚಿಸಿದೆ ಎಂದರುರಾಜ್ಯದ ಮೈಸೂರು ಭಾಗದ ಕೆಆರ್‍ಎಸ್ ನಂತರದ ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣವಾದ ಆಲಮಟ್ಟಿ ಸಿಲ್ವರ ಲೇಕ್‍ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಕ್ರೀಡೆಯಲ್ಲಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡಾಪಟುಗಳು ಪೌಷ್ಟಿಕ ಆಹಾರ ಸೇವಿಸುವ ಮೂಲಕ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ದೇಹ ಮತ್ತು ಮನಸ್ಸು ಸದೃಢವಾಗಿರಲು ನಿಯಮಿತವಾಗಿ ಕ್ರೀಡಾಭ್ಯಾಸ ಮಾಡಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ. ಬಿರಾದಾರ ಸಲಹೆ ನೀಡಿದರು.ಪಟ್ಟಣದ ಶ್ರೀ ಎಸ್‌ಎಸ್‌ಎಚ್ ಅಂತರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಚಾಲನೆ ನೀಡಿ ಅವರು ಮಾತನಾಡಿದರು.ಬರಡೋಲ ಕೆಪಿಎಸ್ ಪ್ರೌಢಶಾಲೆಯ ಪ್ರಾಚಾರ್ಯ ಸಿ.ಎ. ಚನಗೊಂಡ ಮಾತನಾಡಿ, ಕ್ರೀಡೆಗಳನ್ನು ಆಡುವುದರಿಂದ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಚಲನಶೀಲತೆ ವೃದ್ಧಿಯಾಗುತ್ತದೆ. ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಿಂಜರಿಕೆ ಹಾಗೂ ಕೀಳರಿಮೆಯನ್ನು ದೂರ ಮಾಡುವುದರ ಜೊತೆಗೆ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.ದೈಹಿಕ ಶಿಕ್ಷಕ ಜಿ.ಎಸ್. ಧಂದರಗಿ ಮಾತನಾಡಿದರು.ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಿ ತಮ್ಮ ತಮ್ಮ ಪ್ರತಿಭೆಯನ್ನು ತೋರಿದರು ಮತ್ತು ಪಾರಿತೋಷಕವನ್ನು ಪಡೆದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಾವಿನಾಳ,…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಇಂದು ಪ್ರತಿಯೊಂದು ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು, ಹಾಗೂ ಒಂದು ಹೆಣ್ಣು ಮಗು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಕುಂಬಾರಹಳ್ಳದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದಿನ ದಿನಮಾನದಲ್ಲಿ ಸಮಾಜದಲ್ಲಿ ಎಲ್ಲಾ ರಂಗದಲ್ಲಿಯೂ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಿಸುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.ಶಿಕ್ಷಕ ಸಂಗಮೇಶ್ ಉಟಗಿ ಮಾತನಾಡಿ, ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಹುದು ಎಂಬುದಕ್ಕೆ ನಮ್ಮ ದೇಶದ ರಾಷ್ಟ್ರಪತಿ ದ್ರೌಪದಿ ಮುರುಮು ಸಾಕ್ಷಿಯಾಗಿದ್ದಾರೆ. ಅದೇ ರೀತಿ ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅಧಿಕಾರದಲ್ಲಿರುವುದು ನೋಡಬಹುದಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಶಿಕ್ಷಣ. ಆದರೆ ಈಗಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ತಾವರಖೇಡ ಗ್ರಾಮದಲ್ಲಿ ಮೃತಪಟ್ಟ ಮಂಗನ ಶವ ಸಂಸ್ಕಾರವನ್ನು ಗ್ರಾಮಸ್ಥರು ವಿಧಿ ವಿಧಾನಗಳೊಂದಿಗೆ ನೆರವೇರಿಸಿದ ಘಟನೆ ಶನಿವಾರ ನಡೆದಿದೆ.ಗ್ರಾಮದಲ್ಲಿ ಮಂಗವೊಂದು ಅಸಸ್ಥಗೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು ಅದನ್ನು ಕೂಡಲೆ ವಾಹನ ಮೂಲಕ ಆಲಮೇಲ ಸರ್ಕಾರಿ ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಸಹಿತ ಚಿಕಿತ್ಸೆ ಫಲಕಾರಿಯಾಗದೆ ಜ.24 ಶನಿವಾರ ಮೃತಪಟ್ಟಿದೆ.ಗ್ರಾಮಸ್ಥರು ಮಂಗನ ಅಂತ್ಯ ಸಂಸ್ಕಾರವನ್ನು ವಾದ್ಯಮೇಳದೊಂದಿಗೆ, ಪಟಾಕಿ ಸುಡುತ್ತಾ, ಭಜನೆ ಮಾಡುತ್ತಾ ಗ್ರಾಮಸ್ಥರು ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿಯ ಮೇಲೆ ಮೆರವಣಿಗೆ ಮಾಡುತ್ತ ಭೀಮಾ ನದಿಯ ದಂಡೆಯಲ್ಲಿರುವ ಹಳೆ ತಾವರಖೇಡ ಗ್ರಾಮದಿಂದ ಹೊಸ ಪುನರ್ವಸತಿ ಕೇಂದ್ರದಲ್ಲಿ ಮಂಗನ ಅಂತ್ಯಕ್ರಿಯೆಯನ್ನು ವೇ.ಗುರುಮೋರ್ತಯ್ಯ ಹಿರೇಮಠ್ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.ಗ್ರಾಮದ ಯುವಕರು ಹಿರಿಯರು ತಾಯಂದಿರು ಅಂತ್ಯಕ್ರಿಯೆ ಯಲ್ಲಿ ಬಾಗಿಯಾಗಿದ್ದರು. ಅಂತ್ಯಕ್ರಿಯೆಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ವಿಪಕ್ಷ ಶಾಸಕರ ವಿರುದ್ಧ ಮಾತ್ರವೇ ಕ್ರಮವೇಕೆ? | ರಾಜ್ಯಪಾಲರ ಅವಮಾನಿಸಿದ ಕಾಂಗ್ರೆಸ್ ವಿರುದ್ಧ ಶಿಸ್ತು ಕ್ರಮ ಏಕಿಲ್ಲ? | ಬಿಜೆಪಿ ಆರೋಪ ಬೆಂಗಳೂರು: ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ವಿರೋಧ ಪಕ್ಷಗಳ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು, ರಾಜ್ಯಪಾಲರ ಅವಮಾನಿಸಿದ ಕಾಂಗ್ರೆಸ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಹೇಳಿದ್ದು, ಪಕ್ಷಪಾತದ ನಡೆಸುತ್ತಿರುವುದಾಗಿ ಆರೋಪ ಮಾಡಿದ್ದಾರೆ.ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.ರಾಜ್ಯಪಾಲರು ಸದನದಿಂದ ಹೊರಬಂದಾಗ, ಸ್ಪೀಕರ್ ಸೇರಿದಂತೆ ಯಾರೂ ಅವರೊಂದಿಗೆ ಇರಲಿಲ್ಲ. ರಾಜ್ಯಪಾಲರು ಸದನದಿಂದ ಓಡಿಹೋದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಇದು ರಾಜ್ಯದ ರಾಜ್ಯಪಾಲರಿಗೆ ಮಾಡಿದ ಅವಮಾನ. ಕೆಲವು ಕಾಂಗ್ರೆಸ್ ಶಾಸಕರು ರಾಜ್ಯಪಾಲರು ಸದನದಿಂದ ಹೊರಹೋಗದಂತೆ ತಡೆಯಲು ಪ್ರಯತ್ನಿಸಿದಾಗ, ಸ್ಪೀಕರ್ ಆಗಿ ನೀವು ಕ್ರಮ…
ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ಅಭಿವೃದ್ಧಿ ಹಾಗೂ ಐ.ಟಿ ಮತ್ತು ಬಿ.ಟಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಈಗಿರುವ ಆಡಳಿತ ಸಮಿತಿಯನ್ನು ಮರು ನೇಮಕ ಮಾಡಲು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ಅಭಿವೃದ್ಧಿ ಹಾಗೂ ಐ.ಟಿ ಮತ್ತು ಬಿ.ಟಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.ಯಾವುದೇ ಪಂಚಾಯಿತಿ ಸದಸ್ಯರ ಅವಧಿ ಮೊದಲ ಸಭೆ ಗೊತ್ತುಪಡಿಸಿದ ದಿನಾಂಕದಿಂದ ಐದು ವರ್ಷಗಳ ಅಸ್ತಿತ್ವದಲ್ಲಿದ್ದು, ಐದು ವರ್ಷಗಳ ಪೂರ್ಣಗೊಂಡ ನಂತರ ಅವಧಿ ಮುಕ್ತಾಯವಾಗುತ್ತದೆ. 2020 ರಿಂದ 2025ರ ವರೆಗೆ ರಚಿತವಾದ ರಾಜ್ಯದ ಗ್ರಾ. ಪಂ ಅವಧಿಯುವ 2026ರ ಜನೇವರಿಯಿಂದ ಮಾರ್ಚವರೆಗೆ ನಾನಾ ದಿನಾಂಕಗಳಂದು ಮುಕ್ತಾಯವಾಗಲಿದೆ. ಆದ್ದರಿಂದ ರಾಜ್ಯ ಸರಕಾರ ಅವಧಿ ಮುಗಿಯುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಯಂದಿರು ಮಕ್ಕಳಲ್ಲಿ ಧಾರ್ಮಿಕ-ಸಾಮಾಜಿಕ, ನಮ್ಮ ಪರಂಪರೆ-ಸಂಪ್ರದಾಯ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳನ್ನು ಒಡಮೂಡಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಮುಂದಿನ ಜನಾಂಗವು ನಮ್ಮ ಧಾರ್ಮಿಕ ಸಂಪ್ರದಾಯ-ವಿಧಿವಿಧಾನಗಳನ್ನು ಉಳಿಸಿ-ಬೆಳೆಸಲು ಸಾಧ್ಯ ಎಂದು ಮುಖ್ಯ ಅತಿಥಿ ಶ್ರೀಮತಿ ಮಾಯಾದೇವಿ ಚೌಧರಿ ಅವರು ಸಲಹೆ ನೀಡಿದರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಆಂಜನೇಯ ದೇವಸ್ಥಾನದ ೬ ನೇಯ ವರ್ಷದ ಜಾತ್ರಾ ಮಹೋತ್ಸವದಲ್ಲಿ ಗೋಮಾತೆ ಮತ್ತು ಬನ್ನಿ ಮಹಾಂಕಾಳಿ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಬದುಕು ಸಂಕೀರ್ಣಮಯವಾಗುತ್ತಿರುವ ಇಂದಿನ ಕಾಲದಲ್ಲಿ ಮನುಷ್ಯ ಏನೆಲ್ಲ ಗಳಿಸಿದರೂ ಮನಸ್ಸಿಗೆ ಶಾಂತಿ ಇಲ್ಲದಂತಾಗಿದೆ. ಹನುಮಂತ-ರಾಮನ ನಡುವಿನ ಗುರು-ಶಿಷ್ಯರ ಅವಿನಾವ ಸಂಬಂಧ ಮತ್ತು ದೈವಿಭಕ್ತಿಯೇ ನಮ್ಮೆಲ್ಲರಿಗೆ ಆದರ್ಶವಾಗಬೇಕು. ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ಪರಂಪರೆ-ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾದ ರಾಷ್ಟ್ರ ನಮ್ಮದು. ಹಲವು ಧರ್ಮ, ಸಂಪ್ರದಾಯ, ಆಚರಣೆ, ಭಾಷೆ, ಸಂಸ್ಕೃತಿ ಬೇರೆ ಬೇರೆಯಾದರೂ ಅಖಂಡತೆ ಮತ್ತು ವಿವಿಧತೆಯಲ್ಲಿ ಏಕತೆ ಎಂಬುದನ್ನು…
