ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ನವಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಆರ್ಯುವೇದ ಕಾಲೇಜಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ಐದು ಪ್ರಶಸ್ತಿಗಳನ್ನು ಪಡೆಯುವದರೊಂದಿಗೆ ವೀರಾಗ್ರಣಿ (ಚಾಂಪಿಯನ್) ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿತು.
ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಗಳು ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಸುನೀಲಕುಮಾರ ತೋಂಟಾಪೂರ ಇವರ ಮಾರ್ಗದರ್ಶನದಲ್ಲಿ ತಯಾರಿಸಿದ ನವೀಕರಿಸಬಹುದಾದ ಶಕ್ತಿಯ ಸಾಧನವಾದ ವಿಂಡ್ ಎನರ್ಜಿ ಮಾದರಿ ಮತ್ತು ವಿಷಯ ಮಂಡನೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಪುಷ್ಪಾ ಶಾಪೇಟಿ, ರೂಪಾ ಮಿರಗಿ, ವಾಣಿಶ್ರೀ ಸಾವಂತ, ಲಕ್ಷ್ಮಿ ಯಾದವಾಡ, ರಮೇಶ ಪಾರಗೊಂಡ, ಚೇತನ ಪತ್ತಾರ, ಪ್ರಜ್ವಲ ಬಬಲೇಶ್ವರ, ಆಸೀಫ್ ಭಾವಖಾನ ಮತ್ತು ರೋಹಿತ ಬೀಳಗಿ ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ತೋರಿದರು.
ಘೋಷಣೆ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ರುಕ್ಮೀಣಿ ಬಬಲಾದಕರ ಇವಳು ಘೋಷಣೆ ಬರಹದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ: ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಪ್ರೀತಿ ಚವ್ಹಾಣ, ಲಕ್ಷ್ಮಿ ರಾಠೋಡ, ಸೃಷ್ಟಿ ಕಂಠಿಕಟ್ಟಿ, ರೇಷ್ಮಾ ಪೂಜಾರಿ, ದಾನಮ್ಮ ಪಾಟೀಲ, ಅಕ್ಷತಾ ಜಮಖಂಡಿ, ಪ್ರೀತಿ ಚನವೀರ, ಭಾಗ್ಯಶ್ರೀ, ರವಿ ಬಡಿಗೇರ, ರೇಣುಕಾ ಆಸಂಗಿ ಇವರು ಕನ್ನಡ ನಾಡಿನ ಜಾನಪದ ಸಂಸ್ಕೃತಿ ಅಭಿವ್ಯಕ್ತಿಗೊಳಿಸುವ ನೃತ್ಯ ಪ್ರದರ್ಶನದಲ್ಲಿ ಪ್ರೇಕ್ಷಕರ ಮನಸೂರೆಗೊಳಿಸಿದರು.
ಜಾನಪದ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ: ರಂಗೂಬಾಯಿ ಬಿರಾದಾರ, ಪ್ರೀತಿ ಚನವೀರ, ಪ್ರಿಯಾಂಕಾ ಪಾಟೀಲ, ಸುಧಾ ಬಿರಾದಾರ, ನಿರ್ಮಲಾ ಮಠಪತಿ, ರಂಜಿತಾ ಬಿರಾದಾರ, ವಿಜಯಲಕ್ಷ್ಮಿ, ಲಕ್ಷ್ಮಿ ಈಟಿ, ಸಂಗೀತಾ ನಾಗಠಾಣ, ರವಿ ಬಡಿಗೇರ ಇವರು ಉತ್ತಮ ಸಾಧನೆ ತೋರಿ ದ್ವಿತೀಯ ಸ್ಥಾನಕ್ಕೆ ಭಾಜನರಾದರು.
ಕವಿತೆ ಬರೆಯುವ ಸ್ಫರ್ಧೆಯಲ್ಲಿ ಪ್ರವೀಣ ಬನಸೋಡೆ ತೃತೀಯ ಸ್ಥಾನ ಪಡೆದರು.
ಕಾಲೇಜಿನ ಈ ಎಲ್ಲ ವಿದ್ಯಾರ್ಥಿಗಳ ಅಮೋಘ ಸಾಧನೆಗೆ ವಿಜಯಪುರ ನಗರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳ, ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ, ಸಾಂಸ್ಕೃತಿಕ ಕಾರ್ಯದರ್ಶಿ ಡಾ. ಚಂದ್ರಕಾಂತ.ಬಿ, ಐ.ಕ್ಯೂ.ಎ.ಸಿ. ಸಂಚಾಲಕ ಪ್ರೊ. ರಾಮಪ್ಪ. ಕುರಿ, ಪ್ರೊ. ಎಸ್.ಡಿ.ತೋಂಟಾಪೂರ, ಡಾ. ವಿಶಾಲಾಕ್ಷೀ ಹೊನ್ನಾಕಟ್ಟಿ, ಡಾ, ರಾಜಶ್ರೀ ಮಾರನೂರ, ಪ್ರೊ. ಎಂ.ಎಸ್.ಖೊದ್ನಾಪೂರ, ಪ್ರೊ. ಲೀಲಾ ವ್ಹಿ.ಟಿ, ಹಾಗೂ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

