Author: editor.udayarashmi@gmail.com

ವಿಜಯಪುರದಲ್ಲಿ ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ಪುಣೆಯ ವಿಜಯಪುರ ಜಿಲ್ಲಾ ಶಾಖೆಯ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ , ಈ ಆಧ್ಯಾತ್ಮಿಕ ಕೇಂದ್ರ ಹಲವು ವರ್ಷಗಳಿಂದ ಬಸವಣ್ಣನವರ ಆದರ್ಶಗಳನ್ನು ಆಧರಿಸಿದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ, ಬೆಳೆಯುವ ಗುರಿಯನ್ನು ಹೊಂದಿದೆ. ಮತ್ತು ಶರಣರ ಪರಂಪರೆಯ ಅಧ್ಯಯನಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ. ಬಸವಾದಿ ಶರಣರ ತತ್ವ, ಸಂದೇಶಗಳನ್ನು ನ್ಯಾಯ, ಸಮಾನತೆ ಮತ್ತು ಸಮುದಾಯದ ಏಕತೆಗಾಗಿ, ಶರಣ ಸತ್ಸಂಗ ಕಾರ್ಯಕ್ರಮಗಳ ಮೂಲಕ, ಶರಣರ ಚಿಂತನೆಗಳನ್ನು ಪ್ರೋತ್ಸಾಹಿಸುತ್ತಾ, ವಚನ ಪರಿಷ್ಕರಣೆ, ವಚನಗಳ ಪ್ರಚಾರ ಮತ್ತು ಪ್ರಸಾರ ಮಾಡುತ್ತ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಮೌಲಿಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ. ಪುಣೆಯಲ್ಲಿ ಇದರ ಮುಖ್ಯ ಕೇಂದ್ರವಿದ್ದು.. ಇತೀಚೆಗೆ ವಿಜಯಪುರದಲ್ಲಿ ಅದರ ಶಾಖೆಯನ್ನು ಉದ್ಘಾಟಿಸಲಾಯಿತು. ವಿಜಯಪುರ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಸಂಸ್ಥಾಪಕ ಅಧ್ಯಕ್ಷರುಡಾ ಶಶಿಕಾಂತ ಪಟ್ಟಣಗೌರವಾಧ್ಯಕ್ಷರುಡಾ. ಸರಸ್ವತಿ ಪಾಟೀಲಅಧ್ಯಕ್ಷರುಪ್ರೊ. ಆರ್.ಎಸ್.ಬಿರಾದಾರ.ಉಪಾಧ್ಯಕ್ಷರುಶ್ರೀ ಸಿದ್ದಪ್ಪ ಪಡನಾಡ ಶ್ರೀ ಜಿ.ಬಿ ಸಾಲಕ್ಕಿಪ್ರಧಾನ ಕಾರ್ಯದರ್ಶಿಗಳುಡಾ.…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಶಾಲೆ ಮಕ್ಕಳ ಸಾಂಸ್ಕೃತಿಕ ಕಲಾ ಪ್ರದರ್ಶನದಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಪ್ರಸ್ತುತ ಪಡಿಸಿದ ಕಿತ್ತೂರು ಸಂಸ್ಥಾನದ ವೀರ ರಾಣಿ ಚೆನ್ನಮ್ಮಳ ಬಲಗೈ ಭಂಟ ಸಂಗೊಳ್ಳಿ ರಾಯಣ್ಣನ ಪ್ರಮುಖ ಪಾತ್ರದ ರೂಪಕ ನಾಟಕ ನೋಡುಗರ ಮೆಚ್ಚುಗೆ ಪಾತ್ರವಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಅವರ ಸಾವಿನವರೆಗೂ ಹೋರಾಡಿದ್ದು, ಥ್ಯಾಖರೆ, ರಾಣಿ ಚನ್ನಮ್ಮ ಮತ್ತು ರಾಯಣ್ಣನ ತಾಯಿ ಕೆಂಚವ್ವಳೊಂದಿಗಿನ ಸಂಭಾಷಣೆಗಳ ಮಕ್ಕಳ ಅಭಿನಯದ ಕಿರು ನಾಟಕ ಸೇರಿದ ಸಭಿಕರನ್ನು ಭಾವದ್ವೇಗಗೊಳಿಸಿತು. ದೇಶಭಕ್ತಿಯ ರಾಯಣ್ಣ ಕಚ್ಚೆದೆಯ ಮಾತುಗಳಿಗೆ ಬಂದ ಹರ್ಷೋದ್ಘಾರ, ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿತು.ಕೆಚ್ಚೆದೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಭಕ್ತಿಯ ಮಕ್ಕಳ ಮನೋಜ್ಞ ಪ್ರದರ್ಶನ ಪುರಸಭೆಯಿಂದ ಪ್ರಥಮ ಬಹುಮಾನ ಪಡೆದುಕೊಂಡು, ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸೇರಿದಂತೆ ಹಲವರು ಅಭಿನಂದಿಸಿ ಶ್ಲಾಘಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಒಂದು ಸಂಸ್ಥೆ ಸ್ಥಾಪನೆಯಾದ ದಿನವನ್ನು ಸಂಸ್ದಾಪನಾ ದಿನವನ್ನಾಗಿ ಆಚರಿಸುವ ಮೂಲಕ ಸಂಸ್ಥೆಯ ಸಾಧನೆಗಳನ್ನು ಮೆಲುಕು ಹಾಕುತ್ತಾ ಭವಿಷ್ಯದ ಗುರಿಗಳನ್ನು ನಿಗದಿಪಡಿಸುವ ವಿಶೇಷ ದಿನವಾಗಿದೆ ಎಂದು ಸಹಕಾರಿ ನಿರ್ದೇಶಕ ವೈ ಟಿ ಪಾಟೀಲ ಹೇಳಿದರು.ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕೆಂಭಾವಿ ಕಾರ್ಯಕ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 18 ನೇ ವರ್ಷದ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾಮಾನ್ಯವಾಗಿ, ಈ ದಿನದಂದು ಸಂಸ್ಥೆಯು ಕಳೆದ ವರ್ಷದ ಸಾಧನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಮುಂದಿನ ಬೆಳವಣಿಗೆಯ ಯೋಜನೆಗಳನ್ನು ರೂಪಿಸುತ್ತಾ ಶೇರುದಾರರ ಹಾಗೂ ಸಿಬ್ಬಂದಿ ಮತ್ತು ಗ್ರಾಹಕರಲ್ಲಿ ಒಗ್ಗಟ್ಟು, ಕೃತಜ್ಞತೆ ಮತ್ತು ಪ್ರೇರಣೆಯನ್ನು ಮೂಡಿಸುತ್ತದೆ ಎಂದರು.ಸಹಕಾರಿಯ ಅಧ್ಯಕ್ಷ ಶಾಂತಗೌಡ ಎಂ ಬಿರಾದಾರ, ಉಪಾಧ್ಯಕ್ಷ ಶರಣಬಸವ ಡಿಗ್ಗಾವಿ, ನಿರ್ದೇಶಕರಾದ, ಸಂಗನಗೌಡ ಮರಡ್ಡಿ, ರಾಮನಗೌಡ ವಂದಗನೂರ ಯಾಳಗಿ, ಎಸ್ ವೈ ಕರಡಕಲ್, ಮಲ್ಲನಗೌಡ‌ ಪೋಲೀಸ್ ಪಾಟೀಲ, ಅಯ್ಯನಗೌಡ ಲಕ್ಕುಂಡಿ, ಮಲ್ಲರಡ್ಡಿ ಮಲ್ಲಾಬಾದಿ, ಸಿದ್ದನಗೌಡ ಶಿವಪುರ, ರವೀಂದ್ರ ಧರಿ, ಡಾ ಪ್ರವೀಣ್ ಪಾಟೀಲ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೂಮಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ವಿಜಯಪುರ ಜಿಲ್ಲೆಯು ತೃತೀಯ ಸ್ಥಾನ ಪಡೆದಿರುವುದಕ್ಕೆ ಕಂದಾಯ ಇಲಾಖೆ ಭೂಮಿ ಉಸ್ತುವಾರಿ ಕೋಶದಿಂದ ಅಭಿನಂದನಾ ಪತ್ರ ನೀಡಲಾಗಿದೆ.ಡಿಸೆಂಬರ್–೨೦೨೫ ಮಾಹೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದ ಒಟ್ಟು ೧೪,೦೬೦ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ಶೀಘ್ರವಾಗಿ ವಿಲೇವಾರಿ ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ.ಡಿಸೆAಬರ್–೨೦೨೫ ಮಾಹೆಯಲ್ಲಿ ಜಿಲ್ಲೆ ೫.೫೨ ಸಿಗ್ಮಾ ಮೌಲ್ಯವನ್ನು ಸಾಧಿಸಿದ್ದು, ಇದರ ಫಲವಾಗಿ ವಿಲೇವಾರಿ ಸೂಚ್ಯಾಂಕ (ಆisಠಿosಚಿಟ Iಟಿಜex) ೪.೫೮೭೬೬ ದಾಖಲಾಗಿದೆ. ಈ ಸಾಧನೆ ಜಿಲ್ಲೆಯಲ್ಲಿ ಭೂಮಿ ಯೋಜನೆಯ ಅನುಷ್ಠಾನವು ಪರಿಣಾಮಕಾರಿಯಾಗಿ ನಡೆಯುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಈ ಮಹತ್ವದ ಕಾರ್ಯಸಾಧನೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ಸಂಬಂಧಿತ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮರ್ಪಿತ ಸಹಕಾರ, ಕಾರ್ಯತತ್ಪರತೆ ಮತ್ತು ಹೊಣೆಗಾರಿಕೆ ಪ್ರಮುಖ ಕಾರಣವಾಗಿದೆ ಎಂದು ಭೂಮಿ ಉಸ್ತುವಾರಿ ಕೋಶ ತಿಳಿಸಿದೆ.ಜಿಲ್ಲೆಯ ಈ ಸಾಧನೆಗೆ ಭೂಮಿ ಉಸ್ತುವಾರಿ ಕೋಶದ ಪರವಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಅವರ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು–ಸಿಬ್ಬಂದಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪಟ್ಟಣದ ಉತ್ತರಾದಿ ಮಠದಲ್ಲಿ ಮಧ್ವನವಮಿ ಕಾರ್ಯಕ್ರಮವನ್ನು ಮಂಗಳವಾರ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಯಿತು. ಮಧ್ವನವಮಿಯಿಂಗವಾಗಿ ಬೆಳಗ್ಗೆ 9 ಗಂಟೆಗೆ ಮುಖ್ಯಪ್ರಾಣ ದೇವರಿಗೆ ಹಾಗೂ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ವಾಯುಸ್ತುತಿ ಪುನಶ್ಚರಣ, ಭಜನಾ ಕಾರ್ಯಕ್ರಮ ಮುಂತಾದವು ನಡೆದವು. ನಂತರ ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಸುಮಧ್ವ ವಿಜಯ ಗ್ರಂಥಗಳೊಂದಿಗೆ ಪಲ್ಲಕ್ಕಿ ಸೇವೆ ಹಾಗೂ ರಥೋತ್ಸವ ಸೇವೆಗಳು ವಿಜೃಂಭಣೆಯಿಂದ ಜರುಗಿದವು.ಈ ಸಂದರ್ಭದಲ್ಲಿ ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ಅವರು ಮಾತನಾಡಿ, ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ತೆರಳಿದ ದಿನವನ್ನು ಸ್ಮರಿಸುವುದಕ್ಕೆ ಮಧ್ವನವಮಿಯನ್ನು ಆಚರಿಸಲಾಗುತ್ತದೆ. ಮಧ್ವಮತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಶ್ರೀಮದಾಚಾರ್ಯರ ಸ್ಮರಣೆ ಅನುದಿನವೂ ಅವಶ್ಯಕ ಎಂದು ತಿಳಿಸಿದರು.ಶ್ರೀಮಠದ ಸದ್ಭಕ್ತ ಆನಂದ ಜಿ.ಕುಲಕರ್ಣಿ ಅವರು ಇಂದಿನ ಕಾರ್ಯಕ್ರಮದ ಸಮಸ್ತ ಸೇವಾ ಕೈಂಕರ್ಯ ಹಾಗೂ ತೀರ್ಥ ಪ್ರಸಾದದ ವ್ಯವಸ್ಥೆಯನ್ನು ಕೈಗೊಂಡಿದ್ದರು. ಶ್ರೀಮಠದ ಅರ್ಚಕ ವಾದಿರಾಜಾಚಾರ್ಯ ಯಜುರ್ವೇದಿ, ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರು ಹಾಗೂ ನೂರಾರು ಸದ್ಭಕ್ತರು ಹಾಗೂ ಮಹಿಳೆಯರು ಈ ಉತ್ಸವದಲ್ಲಿ ಪಾಲ್ಗೊಂಡು ವೇದಾಂತ ಸಾಮ್ರಾಜ್ಯದ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ಕಶವಾದ ಶಬ್ದವನ್ನು ಉಂಟು ಮಾಡುವ ಜೊತೆಗೆ ಶಬ್ದ ಮಾಲಿನ್ಯ ಹರಡಿ ಸಾರ್ವಜನಿಕವಾಗಿ ತುಂಬಾ ತೊಂದರೆ ಉಂಟುಮಾಡುವ ಬೈಕ್ ಗಳನ್ನುಪಿಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ವಶಪಡಿಸಿಕೊಂಡು ಬೈಕ್ ಸೈಲೆನ್ಸರ ಕಿತ್ತುಹಾಕಿ ಬೈಕ್ ಸವಾರರಿಗೆ ಸೂಕ್ತ ಎಚ್ಚರಿಕೆ ನೀಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಯಿತು.ಪಟ್ಟಣದಲ್ಲಿ ಕರ್ಕಶ ಶಬ್ದದಿಂದ ಶಬ್ದ ಮಾಲಿನ್ಯ, ಸೈಲೆನ್ಸರ್ ದಿಂದ ಹೆಚ್ಚು ಹೊಗೆಯಿಂದಾಗಿ ವಾಯುಮಾಲಿನ್ಯ ಉಂಟಾಗುತ್ತಿರುವದನ್ನು ಗಮನಿಸಿದ ಪೊಲೀಸ್ ಇಲಾಖೆಯು ಇಂತಹ ಕಾರ್ಯಾಚರಣೆ ಕೈಗೊಂಡಿರುವದಕ್ಕೆ ಪ್ರಜ್ಞಾವಂತರಿಂದ ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಜಗದೀಶ ತಕ್ಕೋಡ, ಮಹಾಂತೇಶ ಸಜ್ಜನ ಇತರರು ಇದ್ದರು.

Read More

ಕರ್ನಾಟಕ ಕಾಟ್ ಸೀಡ್ಸ್ ಹತ್ತಿ ಮೀಲ್ ಕಾರ್ಖಾನೆ ಉದ್ಘಾಟಿಸಿದ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: ರೈತರ ಹಿತ ಕಾಪಾಡುವಲ್ಲಿ ಎಲ್ಲ ಪಕ್ಷದ ಸರ್ಕಾರಗಳು ವಿಫಲವಾಗಿವೆ. ರೈತರಿಗೆ ಒಳಿತು ಮಾಡುವದಾಗಿ ಹೆಳುತ್ತಾರೆ ವಿನಹ ರೈತರ ಬೆಳೆಗೆ ಯೋಗ್ಯ ಬೆಲೆ ನಿಗದಿಗೊಳಿಸುವ ಕಾನೂನು ಜಾರಿಗೊಳಿಸಲು ಯಾವುದೆ ಸರ್ಕಾರ ಆಸಕ್ತಿ ತೋರದಿರುವದು ವಿಪರ್ಯಾಸ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು. ಆಲಮೇಲ ಸಮೀಪದ ಇಂಡಿ ತಾಲೂಕಿನ ತೆಗ್ಗೆಹಳ್ಳಿ ಕ್ರಾಸ್ ಹತ್ತಿರ ನಿರ್ಮಾಣ ಮಾಡಿರುವ ಕರ್ನಾಟಕ ಕಾಟ್ ಸೀಡ್ಸ್ ಹತ್ತಿ ಮೀಲ್ ಕಾರ್ಖಾನೆ ಉದ್ಘಾಟಿಸಿ ಮಾತನಾಡುತ್ತ ಹೆಳಿದರು. ಆಲಮೇಲ ಇಂಡಿ ತಾಲೂಕಿನ ಮದ್ಯದಲ್ಲಿ ನಿರ್ಮಾಣವಾಗಿರುವ ಈ ಹತ್ತಿ ಮಿಲ್ ಪ್ರಾರಂಭವಾಗಿದ್ದರಿಂದ ನಾಲ್ಕರಿಂದ ಐದು ತಾಲೂಕಿನ ರೈತರಿಗೆ ಅನಕೂಲವಾಗಲಿದೆ ಕಾರ್ಖಾನೆ ಮಾಲಿಕರು ರೈತರಿಗೆ ಯಾವುದೆ ಅನ್ಯಾಯಮಾಡದೆ ಯೋಗ್ಯ ಬೇಲೆ ನೀಡಿ ರೈತರಿಗೆ ಪ್ರೋತ್ಸಹ ನೀಡಿದರೆ ರೈತರು ಅಂತಹ ಕಾರ್ಖಾನೆ ಗಳಿಗೆ ಸಹಕಾರ ನೀಡುತ್ತಾರೆ ಎಂದೆರು. ನಿಜವಾದ ರೈತರ ಹಿತ ಕಾಪಾಡುವ ಉದ್ದಿಮೆದಾರರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸರಕಾರಿ ನೌಕರರ ಸಹಕಾರಿ ಬ್ಯಾಂಕಿನಲ್ಲಿ 77ನೇ ಗಣರಾಜ್ಯೋತ್ಸವದ ರಾಷ್ಟ್ರ ದ್ವಜಾರೋಹಣವನ್ನು ಬ್ಯಾಂಕಿನ ಅಧ್ಯಕ್ಷರಾದ ಅರ್ಜುನ ಲಮಾಣಿ ಇವರು ನೆರವೇರಿಸಿದರು.ರಾಷ್ಟ್ರದ್ವಜಾರೋಹಣ ನೆರವೇರಿಸಿ ಮಾತನಾಡಿದ ಅಧ್ಯಕ್ಷ ಅರ್ಜುನ ಲಮಾಣಿ ಇಡೀ ಜಗತ್ತಿಗೆ ಮಾದರಿಯಾದ ನಮ್ಮ ಸಂವಿಧಾನ ನಮ್ಮೆಲ್ಲರಿಗೂ ಹೆಮ್ಮೆ. ಇಂತಹ ಪವಿತ್ರ ಸಂವಿಧಾನ ಸಂರಕ್ಷಿಸೋಣ. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುತ್ತ ಸಂವಿಧಾನ ಪಾಲಿಸೋಣ ಎಂದರು.ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಬ್ಯಾಂಕಿನ ನಿರ್ದೇಶಕರಾದ ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಅರವಿಂದ ಭೋ ಹೂಗಾರ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಎಸ್ ಎಸ್ ಜುಬೇರ, ಬ್ಯಾಂಕಿನ ಪ್ರಧಾನ ವ್ಯವಸ್ಧಾಪಕರಾದ ಎಮ್ ಕೆ ಜೋಶಿ, ವ್ಯವಸ್ಧಾಪಕರಾದ ಸಿ.ಎಸ್.ಹಿರೇಮಠ ಹಾಗೂ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.

Read More

ಸದುಪಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಫೆಬ್ರವರಿ ೨ರಂದು ಕೌಶಲ್ಯದಿಂದ ಉದ್ಯೋಗದ ಕಡೆಗೆ ಯುವ ಸಮೃದ್ಧಿ ಸಮ್ಮೇಳನದ ಬೃಹತ್ ಉದ್ಯೋಗ ಮೇಳವು ಅಂದು ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೫ರವರೆಗೆ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ.ಈ ಮೇಳದಲ್ಲಿ ಉತ್ತರ ಕರ್ನಾಟಕ ಭಾಗದ ಯುವನಿಧಿ ಫಲಾನುಭವಿಗಳು ಹಾಗೂ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಪದವಿ, ಸ್ನಾತ್ತಕೊತ್ತರ ಪದವಿ ಹಾಗೂ ಇಂಜಿನೀಯರಿಂಗ್ ಪದವಿಯಲ್ಲಿ ಉತ್ತೀರ್ಣರಾದವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಉದ್ಯೋಗಮೇಳದಲ್ಲಿ ಭಾಗವಹಿಸಿ, ತಮ್ಮ ಆಸಕ್ತಿ ಹಾಗೂ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆದುಕೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಮಾಹಿತಿ ನೀಡಿದರು.ಅವರು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಜಿಲ್ಲಾ…

Read More

ಗಾಂಧಿ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಡಿಸಿ ಡಾ.ಆನಂದ.ಕೆ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸೋಮವಾರ ನಗರದ ಜಿಲ್ಲಾ ಪಂಚಾಯತಿಯ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಅವರು, ನಮ್ಮ ಸಂವಿಧಾನದ ಆಶಯಗಳಿಗನುಗುಣವಾಗಿ ಕಾರ್ಯನಿರ್ವಹಿಸಿ, ನಮಗೆ ಸಂವಿಧಾನ ಕಲ್ಪಿಸಿರುವ ಮೂಲಭೂತ ಹಕ್ಕುಗಳಂತೆ ಅದರಲ್ಲಿ ಅಡಕವಾಗಿರುವ ಕರ್ತವ್ಯಗಳನ್ನು ಪಾಲಿಸೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ,ಜಿಲ್ಲಾ ನಿರೂಪಣಾಧಿಕಾರಿ ನಿರದಮಲಾ ಸುರಪೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ದೀಪಾ ಕಾಳೆ, ವಾರ್ತಾಧಿಕಾರಿ ಅಮರೇಶ ದೊಡಮನಿ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಶ್ರೀಮತಿ ಮಂಜುಳಾ ದುರಗನ್ನವರ, ವೈಷ್ಣವಿ, ರತ್ನಾಂಜಲಿ, ಮಿಥುನ ಬನಸೋಡೆ, ನಾಗೇಶ ಸೇರಿದಂತೆ ಪೀಟರ್ ಅಲೆಕ್ಸಾಂಡರ್, ಬಾಪುಗೌಡ ಪಾಟೀಲ ಶೇಗುಣಸಿ ಹಾಗೂ ನೇತಾಜಿ ಗಾಂಧಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ,ಸಿಬ್ಬಂದಿ ಸಾರ್ವಜನಿಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read More