ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ಹಾವಿನಾಳ ಗ್ರಾಮದ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾವಿನಾಳ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ ಕಬ್ಬು ನುರಿಸುವಿಕೆಯ ಪೂಜಾ ಕಾರ್ಯಕ್ರಮವನ್ನು ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಹಂತ, ವಿದ್ವಾಂಸ ಶ್ಯಾಮಸುಂದರ ಶಾಸ್ತ್ರಿ ಮಹಾರಾಜರ ಕಂಪನಿಯ ಸಂಚಾಲಕ ಚೇತನ ಜಯಕುಮಾರ ಧಾರು ಅವರು ಬುಧವಾರ ನೆರವೇರಿಸಿದರು.
ಕಂಪನಿಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಮಾತನಾಡಿ, ಈ ಹಂಗಾಮಿನಲ್ಲಿ 7 ಲಕ್ಷ ಮೆ.ಟನ್ ಕಬ್ಬು ನುರಿಸುವಿಕೆಯ ಉದ್ದಿಷ್ಟ ಇಟ್ಟಕೊಳ್ಳಲಾಗಿದೆ. ಇದರ ಸಲುವಾಗಿ ಈ ಭಾಗದ ಕಬ್ಬು ಬೆಳಗಾರ ರೈತರು ತಮ್ಮ ಎಲ್ಲ ಕಬ್ಬು ನುರಿಸಲು ನಮ್ಮ ಸಕ್ಕರೆ ಕಾರ್ಖಾನೆಗೆ ಕಳುಹಿಸುವಂತೆ ಅವ್ಹಾನ ನೀಡಿದರು. ಇದಕ್ಕೆ ಬೇಕಾಗಿರುವ ಕಬ್ಬು ಕಟಾವು ಮತ್ತು ಸಾಗಾಣಿಕೆಯ ಯಂತ್ರಣಗಳು ಕರಾರ ಮಾಡಿ ತುಂಬಲಾಗಿದೆ. ಅದರಂತೆ ರೈತರ ಕಬ್ಬು ಸರಿಯಾದ ವೇಳೆಗೆ ಕಾರ್ಖಾನೆಗೆ ನುರಿಸಲು ತರುವ ಸಲುವಾಗಿ 10 ಕಬ್ಬು ಕಟಾವು ಮಶಿನಗಳನ್ನು ಖರೀದಿ ಮಾಡಲಾಗಿದೆ. ನುರಿಸಲು ಬರುವ ಕಬ್ಬಿನ ಬಿಲ್ಲು ರೈತರ ಬ್ಯಾಂಕ ಖಾತೆಗೆ ಸರಿಯಾದ ವೇಳೆಗೆ ಜಮಾ ಮಾಡಲಾಗುವದು ಮತ್ತು ನುರಿಸುವಿಕೆ ಹಂಗಾಮ ಮುಗಿದ ಮೇಲೆ ರೈತರಿಗೆ ಟನೇಜ್ ಸಕ್ಕರೆಯನ್ನು ಕೊಡಲಾಗುವದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಡಚಣ ಪಿ.ಎಸ್.ಐ ಸೋಮಶೇಖರ ಗಜ್ಜಿ, ಪ್ರಗತಿಪರ ರೈತ ಬೀಮಾಶಂಕರ ಬಿರಾದಾರ, ಬಸವರಾಜ ಬಿರಾದಾರ, ಶ್ರೀಮಂತ ಉಮರಾಣಿ, ಸಂತೋಷ ಭೈರಗೊಂಡ, ಮಲ್ಲಿಕಾರ್ಜುನ ಭೈರಗೊಂಡ, ಮಹೇಶ ಮೊಸಲಗಿ ಸೇರಿದಂತೆ ಫಲಟನ ಯೂನಿಟ್ ಅಧಿಕಾರಿ ಅಜಿತ ಜಗತಾಪ, ಸೂರಜ ಬಾಂದಲ, ನಿತಿನ ಹೊಲೆ, ಎಶ್ ಠಾಕೂರ ಮತ್ತು ಹಾವಿನಾಳ ಕಾರ್ಖಾನೆಯ ಆಡಳಿತ ಅಧಿಕಾರಿ ರವೀಂದ್ರ ಗಾಯಕ್ವಾಡ, ಜನರಲ್ ಮ್ಯಾನೇಜರ ಜಿತೇಂದ್ರ ಮೆಟಕರಿ, ಶ್ರೀಕಾಂತ ಕುಂಭಾರ, ಅನಿರುದ್ಧ ಪಾಟೀಲ, ರವೀಂದ್ರ ಬಿರಾಜದಾರ, ವಿಜಯಕುಮಾರ ಹತ್ತೂರೆ, ಸುದರ್ಶನ ಕವಜಲಗಿ, ಸಂಗ್ರಾಮ ಸೂರ್ಯವಂಶಿ, ಧನಂಜಯ ಪಾಟೀಲ, ಸಚೀನ ನಿಕ್ಕಮ, ವಿನಾಯಕ ಪೂಜಾರಿ, ಪ್ರಮೋದ ಪಾಟೀಲ, ಮಹಮ್ಮದಹನಿಫ ನಧಾಫ ಹಾಗೂ ಎಲ್ಲಾ ವಿಭಾಗದ ಸಿಬ್ಬಂದಿ, ಕಬ್ಬು ಬೆಳೆಗಾರರು ಮತ್ತು ಕಟಾವು-ಸಾಗಣಿಕೆದಾರರು ಉಪಸ್ಥಿತರಿದ್ದರು.

