Author: editor.udayarashmi@gmail.com

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪಾಲಕರು ತಮ್ಮ ಸಮಾನ ವಯಸ್ಕರೊಂದಿಗೆ ಮಾತನಾಡುವಾಗ ಮಕ್ಕಳೊಂದಿಗೆ ವಿಪರೀತ ಶಿಸ್ತಿನಿಂದ ಮತ್ತು ಕಠಿಣತೆಯಿಂದ ನಡೆದುಕೊಳ್ಳಬೇಕು ಎಂದು ಹೇಳುವುದನ್ನು ನಾವು ಬಹುತೇಕ ಕೇಳಿದ್ದೇವೆ.ಮಕ್ಕಳೊಂದಿಗೆ ಶಿಸ್ತಿನಿಂದ ನಡೆದುಕೊಳ್ಳಲು ನಾವು ಬಯಸಿದಾಗ ನಮ್ಮದೇ ಆದ ಕಿಲ ನಿಯಮಾವಳಿಗಳನ್ನು ಮಾಡಿಕೊಂಡು ಅವುಗಳನ್ನು ಮಕ್ಕಳು ಪಾಲಿಸಲಿ ಎಂದು ಅಪೇಕ್ಷಿಸುತ್ತೇವೆ, ಆಶಿಸ್ತುಕ್ರಮಗಳನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತೇವೆ. ಅವುಗಳನ್ನು ಮಕ್ಕಳು ಪಾಲಿಸದೆ ಹೋದಾಗ ಅವರನ್ನು ದಂಡಿಸುತ್ತೇವೆ ಕಠಿಣವಾಗಿ ಮಾತನಾಡುತ್ತೇವೆ, ಆದರೆ ಅವರು ನಮ್ಮ ಮಕ್ಕಳು ನಮ್ಮದೇ ಪ್ರತಿರೂಪ. ಅತಿಯಾದ ಶಿಸ್ತು ಮಕ್ಕಳು ಪಾಲಕರ ವಿರುದ್ಧ ತಿರುಗಿ ಬೀಳುವಂತೆ ಮಾಡುತ್ತದೆ. ಅವರು ಪಾಲಕರ ಮಾತನ್ನು ಮೀರಬಹುದು. ವಿದ್ಯಾಭ್ಯಾಸದಲ್ಲಿ, ಆಟೋಟಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಆದರೆ ಇಲ್ಲಿ ಇನ್ನೊಂದು ಪದ ಇದೆ.. ಅದುವೇ ಬದ್ಧತೆ. ಬದ್ಧತೆ ಎಂದರೆ ಯಾವುದೇ ಒಂದು ವಿಷಯಕ್ಕೆ ದೃಢವಾಗಿ ಕಚ್ಚಿಕೊಂಡು ನಿಲ್ಲುವುದು, ನಿಲುವಿಗೆ ಬದ್ಧರಾಗುವುದು. ಇಂಥವರು ನನ್ನ ಜೊತೆಗಿದ್ದರೆ ನಾನು ಪರ್ವತವನ್ನೇ ಕಿತ್ತಿ ತರಬಲ್ಲೆ ಎಂಬ ಭಾವವನ್ನು ಮಕ್ಕಳಲ್ಲಿ…

Read More

ವಿಜಯಪುರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆ | ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸುವ ಸಂದರ್ಭದಲ್ಲಿ ಕುಡಿಯುವ ನೀರು ಅನ್ಯ ಕಾರ್ಯಕ್ಕೆ ಬಳಕೆ ಹಾಗೂ ನೀರು ಪೋಲಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸೂಚನೆ ನೀಡಿದರು.ಜಿಲ್ಲೆಯ ವಿವಿಧ ತಾಲೂಕಾ ತಹಶೀಲ್ದಾರ,ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಗುರುವಾರ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸದ್ಭಳಕೆ ಮಾಡಿಕೊಂಡು ಮುಂದಿನ ಜೂನ್‌ವರೆಗೆ ಯಾವುದೇ ಸಮಸ್ಯೆಯಾಗದಂತೆ ನೀರನ್ನು ಕಾಯ್ದಿಟ್ಟುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಬೇಸಿಗೆಯಲ್ಲಿ ಯಾವುದೇ ನೀರಿನ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಭವಿಸಬಹುದಾದ ಸ್ಥಳಗಳ ಕುರಿತು ಮುಂಚಿವಾತವಾಗಿ ತಿಳಿದುಕೊಂಡು ಮಾಹಿತಿ ಸಲ್ಲಿಸಬೇಕು.…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಅಂಗವಾಗಿ ಗುರುವಾರ ನಡೆದ ಬ್ರಹತ್ ಶೋಭಾ ಯಾತ್ರೆ ಅದ್ದೂರಿಯಾಗಿ ಜರುಗಿತು.ಶೋಬಾಯಾತ್ರೆಯಲ್ಲಿ ಹಿಂದೂ ಧರ್ಮದ ರಾಜ ಮಾರಾಜರು, ಶರಣರು, ಸಂತರು, ಮಹಾನ ನಾಯಕರು ವಿವಿದ ಸಮಾಜದ ದೇವರ ಮೂರ್ತಿಗಳ ಭಾವ ಚಿತ್ರಗಳೊಂದಿಗೆ ಪಾಲ್ಗೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು.ಶೋಭಾ ಯಾತ್ರೆಯಲ್ಲಿ ನಾಡ ದೇವಿ, ಭಾರತ ಮಾತೆ, ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣ ಪ್ರತಾಪ್ ಸಿಂಹ, ಸಂಗೋಳ್ಳಿ ರಾಯಣ್ಣ, ಕಿತ್ತೂರ ರಾಣಿ ಚನ್ನಮ್ಮ, ಶರಣ ಅಣ್ಣ ಬಸವಣ್ಣ, ಡಾ. ಬಾಬಾ ಸಾಹೇಬ ಅಂಬೇಡ್ಕರ್, ಡೋಹರ ಕಕ್ಕಯ್ಯ, ಕ್ರಾಂತಿ ವೀರ ಬೆಳವಡಿ ಮಲ್ಲಣ್ಣ, ಮಡಿವಾಳ ಮಾಚಿದೇವ, ಜೇಡರ ದಾಸಿಮಯ್ಯ, ಜಗದ್ಗುರು ರೇಣುಕಾರ್ಯ, ನೋಲಿ ಚಂದಯ್ಯ, ವೀರ ದುರ್ಗಾದಾಸ ರಾಠೋಡ, ಅಂಬಿಗರ ಚೌಡಯ್ಯ, ಗಾಣದರೆವತೆ, ಮಹರ್ಷಿ ವಾಲ್ಮಿಕಿ, ಹೂಗಾರ ಮಾದಯ್ಯ, ಶ್ರೀರಾಮ, ಸ್ವಾಮಿ ವಿವೇಕಾನಂದ, ತುಳಜಾಪುರ ಅಂಬಾಭವಾನಿ, ವಿಶ್ವಕರ್ಮ, ಕೇತೇಶ್ವರ, ಜಗದ್ಗುರು ಶಂಕರಾಚಾರ್ಯ, ಸೇರಿದಂತೆ ಹಿಂದೂ ಧರ್ಮದ ಎಲ್ಲ ಸಮುದಾಯದ ರಾಜ ಮಾರಾಜರು,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮರಗೂರದ ಭೀಮಾಶಂಕರ ಕಾರ್ಖಾನೆಗೆ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ನೇತೃತ್ವದ ಕಬ್ಬು ಪರಿಶೀಲನಾ ಸಮಿತಿ ಗುರುವಾರ ಭೇಟಿ ನೀಡಿತು.ಕಬ್ಬಿನ ತೂಕ, ಮಷಿನ ಮತ್ತು ಇಳುವರಿ ಪರಿಶೀಲಿಸಿತು. ಕಬ್ಬಿನ ತೂಕದ ಮಷೀನು ಡಿಜಿಟಲ್ ಮತ್ತು ಎರಡು ತೂಕದ ಮಷಿನ್ ಇರುವದನ್ನು ಪರಿಶೀಲಿಸಿತು.ಅದರಂತೆ ಕಬ್ಬಿನ ರಿಕವರಿ ರೈತರ ಸಮ್ಮುಖದಲ್ಲಿ ಪ್ರಯೋಗಾಲಯದಲ್ಲಿ ಖಚಿತ ಪಡಿಸಿಕೊಂಡಿತು.ಅದಲ್ಲದೆ ರೈತರಿಗೆ ಕಬ್ಬಿನ ತೂಕದ ಪಾವತಿ ವಿತರಣೆ ಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು. ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಕಾರ್ಖಾನೆ ಸಿಬ್ಬಂದಿಗೆ ಸೂಚಿಸಿತು. ಕಬ್ಬಿನ ಹಣ ನೀಡುವದನ್ನು ಸಮಿತಿ ಖಚಿತ ಪಡಿಸಿಕೊಂಡಿತು.ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ, ಆಹಾರ ನೀರಿಕ್ಷಕ ಎಸ್.ಎಸ್.ಕೋಳಿ, ಅಬಕಾರಿ ಅಧಿಕಾರಿ ಎನ್.ಎಚ್.ಹೂಗಾರ, ಪಿ.ಎಸ್.ಐ ಎಸ್.ಬಿ.ನವೀನಕೊರೆ, ತೂಕ ಮತ್ತು ಅಳತೆ ಅಧಿಕಾರಿ ರೇಣುಕಾ ಪಟ್ಟಣಶೆಟ್ಟಿ ರೈತ ಮುಖಂಡರಾದ ವಂಸತ ಭೈರಾಮಡಗಿ, ಜೆ.ಸಿ.ಬಿರಾದಾರ ಸೇರಿದಂತೆ ಮತ್ತಿತರರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಆದರ್ಶ ವಿದ್ಯಾಲಯಕ್ಕೆ ೬ ನೇ ತರಗತಿಗೆ ೨೦೨೬-೨೭ ನೇ ಸಾಲಿನ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಎಸ್.ಜಿ.ಬನಸೋಡೆ ತಿಳಿಸಿದ್ದಾರೆ.ಆನ್ ಲೈನ್ ಅರ್ಜಿ ಪ್ರಾರಂಭ ಜ. ೨೩ ರಂದು, ಆನ್ ಲೈನ್ ಅರ್ಜಿ ಮುಕ್ತಾಯದ ದಿನ ೨೫ ಫೆ , ಪ್ರವೇಶ ಪರೀಕ್ಷೆ ದಿನಾಂಕ ಮಾರ್ಚ ೧೫, ಹಾಲ್ ಟಿಕೇಟ್ ಡೌನಲೋಡ ಮಾರ್ಚ ೧, ಫಲಿತಾಂಶ ಏಪ್ರೀಲ ೧೦ ರಂದು ಜರುಗಲಿವೆ.ಅರ್ಜಿ ಸಲ್ಲಿಸಲು ಮಗುವಿನ ಫೋಟೋ, ಪಾಲಕರ ಫೋನ್ ನಂ, ೫ ನೇ ತರಗತಿ ಶಾಲಾ ಮುಖ್ಯೋಪಾಧ್ಯಾಯರ ಫೋನ್ ನಂ, ಮಗುವಿನ ಎಸ್.ಎ.ಟಿ.ಎಸ್ ನಂಬರ, ಮಗುವಿನ ಜಾತಿ ಆದಾಯ ಪ್ರಮಾಣ ಪತ್ರ, ಮಗುವಿನ ಆಧಾರ ಕಾರ್ಡ, ವಿದ್ಯಾರ್ಥಿಯು ೫ ನೇ ತರಗತಿಯನ್ನು ಓದುತ್ತಿರುವ ಶಾಲೆಯ ತಾಲೂಕು ಮತ್ತು ಆದರ್ಶ ಶಾಲೆ ತಾಲೂಕು ವಿಭಿನ್ನವಾಗಿದ್ದರೆ ವಾಸಸ್ಥಳ, ಡೋಮಿಸೈಲ ಪ್ರಮಾಣ ಪತ್ರ ತರಬೇಕು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಗೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.ಗೋವಾದಲ್ಲಿ ಯೂತ್ ಗೇಮ್ಸ್ ಕೌನ್ಸಿಲಿಂಗ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೪ ವರ್ಷದ ವಯೋಮಿತಿಯೊಳಗಿನ ವಿದ್ಯಾರ್ಥಿಗಳಾದ ಸಂಪತ ಶಿಂಧೆ, ಆರ್ಯ ಆರ್. ತನಿಷ್ ಪಾಟೀಲ್, ಸುಮಂಜಿತ್ ಪವಾರ, ಪ್ರೀತಮ್ ಬೆಳ್ಯಾಳ, ಮತ್ತು ೧೭ ವರ್ಷದ ವಯೋಮಿತಿಯೊಳಗಿನ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಅಸ್ಕಿ, ಕಾರ್ತಿಕ್ ತಿಮ್ಮಾಪುರ್ ಈ ವಿದ್ಯಾರ್ಥಿಗಳು ಭಾಗಿಯಾಗಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆ ಬರುವ ದಿನಗಳಲ್ಲಿ ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಿಕೊಂಡು ಸಾಧನೆ ಗೈದಿದ್ದಾರೆ.ಇವರ ಸಾಧನೆಗೆ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ಸೇರಿದಂತೆ ಶಾಲೆಯ ಎಸ್.ಡಿ.ಎಂ.ಸಿ ಪದಾಧಿಖಾರಿಗಳು, ಸರ್ವ ಸದಸ್ಯರು, ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಫೆ.೧ ರಂದು ಬೆಳಿಗ್ಗೆ ೯ಗಂಟೆಗೆ ವಿದ್ಯಾನಗರದ ಸಿಬಿಎಸ್ ಶಾಲೆಯ ಬಳಿ ಗುರು ಕೊಟ್ಟೂರೇಶ್ವರ ದೇವಸ್ಥಾನದ ನೂತನ ಶಿಲಾಮಠ ಭೂಮಿ ಪೂಜಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲ ಸದ್ಭಕ್ತರು ಆಗಮಿಸಿ ಸಲಹೆ ಸಹಕಾರವನ್ನು ನೀಡಬೇಕು ಎಂದು ನಿವೃತ್ತ ಶಿಕ್ಷಕ ಕೆ.ಪಿ.ಹಿರೇಮಠ ಅವರು ಹೇಳಿದರು.ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ಇರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.ಗುರು ಕೊಟ್ಟೂರೇಶ್ವರ ಗ್ರಾಮೀಣ ವಿವಿದೋದ್ದೇಶಗಳ ವಿದ್ಯಾಪ್ರಸಾರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಭಾವೈಕ್ಯತಾ ಮಠದ ಡಾ.ಚನ್ನವೀರ ಶಿವಾಚಾರ್ಯರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಇಟಗಿಯ ಗುರುಶಾಂತವೀರ ಶಿವಾಚಾರ್ಯರು, ಸಿದ್ದನಕೊಳ್ಳದ ಶಿವಕುಮಾರ ಮಹಾಸ್ವಾಮಿಗಳು, ಜೀರಲಭಾವಿಯ ಆನಂದಯ್ಯ ಮಹಾಸ್ವಾಮಿಗಳು, ಗುಡುದುರದ ನೀಲಕಂಠ ಶಿವಾಚಾರ್ಯರು ಸಜ್ಜಲಗುಡ್ಡದ ದೊಡ್ಡಬಸವಾಚಾರ್ಯರು ವಹಿಸಲಿದ್ದು, ವಿಜಯಲಕ್ಷ್ಮಿ ಹಿರೇಮಠ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಿಗಾಗಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಸೇರಿದಂತೆ ಹಲವು ಗಣ್ಯರು ಭಾಗಿಯಾಗುವರು.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದು ಮಾನವ ಜೀವನದಲ್ಲಿ ಏನೆಲ್ಲವನ್ನು ಗಳಿಸಬಲ್ಲ, ಸಂಪಾದಿಸಬಲ್ಲ. ಆದರೆ ಆತನ ಜೀವನದಲ್ಲಿ ಒಂದಿಷ್ಟು ಸುಖ-ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ನಗು ಸರ್ವರ ರೋಗಗಳಿಗೆ ಮದ್ದು. ಮನುಷ್ಯನ ಮೊಗದಲ್ಲಿ ಕೊಂಚ ನಗು, ಸಂತೋಷ ಮತ್ತು ಮನಸ್ಸನ್ನು ಪುಳಕಿತಗೊಳಿಸಲು ಹಾಸ್ಯ ಮತ್ತು ಸಂಗೀತ ಆಲಿಸುವುದು ಅವಶ್ಯಕ. ದೇವಸ್ಥಾನಗಳಲ್ಲಿ ಸಂಗೀತ ಸಭಾ ನಡೆಸುವುದರ ಮೂಲಕ ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಸಂತೋಷದ ಸಂಗತಿ ಎಂದು ಮುಖ್ಯ ಅತಿಥಿ ಬಿಗ್ ಬಾಸ್ ಖ್ಯಾತಿಯ ಮೈಸೂರಿನ ಕಲಾವಿದೆ ಸುಮಾ ರಾಜಕುಮಾರ ಅವರು ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಆಂಜನೇಯ ದೇವಸ್ಥಾನದಲ್ಲಿ ೬ ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸಂಗೀತ ರಸಮಂಜರಿ, ಹಾಸ್ಯಮಯ ಜಾದೂ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಸಂಗೀತ ಮನುಷ್ಯನ ಮನೋರೋಗಗಳನ್ನು ದೂರ ಮಾಡುತ್ತದೆ. ಮನಸ್ಸಿಗೆ ಆಹ್ಲಾದ ಮತ್ತು ರಂಜನೀಯವಾದ ಕಲೆಯಾಗಿ ಮಾನಸಿಕ ನೆಮ್ಮದಿ ನೀಡುವ ಸಾಧನವಾಗಿದೆ. ಸಂಗೀತ ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ.…

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನಲ್ಲಿ ಮತ್ತೆ ಕಾಡುಪ್ರಾಣಿಗಳ ಆತಂಕ ಶುರುವಾಗಿದೆ. ಕಣಿಯನಹುಂಡಿ ಗ್ರಾಮದಲ್ಲಿ ಚಿರತೆ ಓಡಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೃಷ್ಣ ಅವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು,ಅದರ ಓಡಾಟವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಇದನ್ನು ನೋಡಿ ರೈತರು ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ.ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ಚಿರತೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದ್ದಾರೆ.ಈ ಮೂಲಕ ಜನ ಮತ್ತು ಜಾನುವಾರಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.ಸರಗೂರು ತಾಲೂಕಿನ ಬಂಡೀಪುರ ಅರಣ್ಯ ವಲಯ ವ್ಯಾಪ್ತಿಯಲ್ಲಿ ತಿಂಗಳ ಅಂತರದಲ್ಲೇ ನಾಲ್ವರ ಮೇಲೆ ಹುಲಿ ದಾಳಿ ನಡೆಸಿ ಮೂವರ ಬಲಿ ಪಡೆದಿತ್ತು. ಬಳಿಕ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯದಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದಾದ ನಂತರ ಕಾಡುಪ್ರಾಣಿಗಳ ಹಾವಳಿ ಕಡಿಮೆಯಾಗಿತ್ತು. ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಜನರನ್ನು ಆತಂಕಕ್ಕೀಡುಮಾಡಿದೆ.

Read More

ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಪುಣ್ಯಸ್ಮರಣೆ ನಿಮಿತ್ತ “ಭಗೀರಥ ಕಪ್” ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ | ಸೌತ ಸೆಂಟ್ರಲ್ ರೈಲ್ವೆ ಹುಬ್ಬಳ್ಳಿ ರನ್ನರ್ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದಿ.ಎಂ.ಸಿ.ಮನಗೂಳಿ ಅವರು ಒಬ್ಬ ಕ್ರೀಡಾಪಟುವಾಗಿದ್ದರು. ಅವರ ಸದಾಶಯದಂತೆ ಅವರ ಹೆಸರಿನ ಮೇಲೆ ರಾಜ್ಯ ಮಟ್ಟದ ಭಗೀರಥ ಕಪ್ ವಾಲಿಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಎಚ್.ಜಿ. ಕಾಲೇಜಿನ ಮೈದಾನದಲ್ಲಿ ಕರ್ನಾಟಕ ವಾಲಿಬಾಲ್ ಸಂಸ್ಥೆ, ಶ್ರೀ ಎಮ್.ಸಿ.ಮನಗೂಳಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ೫ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡ ಭಗೀರಥ ಕಪ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಗಳಿಸಿದ ಕರ್ನಾಟಕ ರಾಜ್ಯ ಪೊಲೀಸ್ ತಂಡಕ್ಕೆ ೧ಲಕ್ಷ ನಗದು ಹಾಗೂ ಭಗೀರಥ ಕಪ್ ನ್ನು ಸಮಾರೋಪ ಸಮಾರಂಭದಲ್ಲಿ ವಿತರಿಸಿ ಮಾತನಾಡಿದ ಅವರು, ರಾಜಕೀಯ ಎಂದರೆ ಇದೊಂದು ಸಾಮಾಜಿಕ ಸೇವೆ. ಜನ ನಮಗೆ ನೀಡಿದ ಅಧಿಕಾರವನ್ನು ಅವರ ಸೇವೆಗಾಗಿಯೇ ಮುಡಿಪಾಗಿಡಬೇಕು. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆದು…

Read More