ಬಿಜ್ಜರಗಿ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿಗಳ ಜಯಂತ್ಯೋತ್ಸವ | ರಕ್ತದಾನ ಶಿಬಿರ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಜ್ಞಾನಯೋಗಿ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳ ೮೫ನೆ ಜಯಂತ್ಯೋತ್ಸ ಆಚರಣೆ ಶ್ರೀಗಳ ಹುಟ್ಟೂರಾದ ಬಿಜ್ಜರಗಿ ಗ್ರಾಮದಲ್ಲಿ ಮಾಡುತ್ತಿರುವದು ಸನ್ಮಾರ್ಗದ ದಾರಿ ಸುಲಭ ಕಾಣುವಂತೆ ಮಾಡಲಾಗಿದೆ ಎಂದು ಬೀಳೂರ ವೀರಕ್ತಮಠದ ಚನ್ನಬಸವ ಗುರುಬಸವ ಮಹಾ ಸ್ವಾಮೀಜಿ ಹೇಳಿದ್ದಾರೆ.
ಬಿಜ್ಜರಗಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಚನ್ನಮಲ್ಲಿಕಾರ್ಜುನ ಮಹಾ ಸ್ವಾಮಿಗಳ ಹಾಗೂ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಮಾತನಾಡಿದ ಅವರು, ಶ್ರೀಗಳು ಹುಟ್ಟಿ ಬೆಳೆದು ಕನ್ನಡ ಶಾಲೆಯಲ್ಲಿ ವ್ಯಾಸಾಂಗ ಮಾಡಿ ವಿಜಯಪುರ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳ ಶಿಷ್ಯರಾಗಿ ಬೆಳೆದು ಈ ನಾಡಿಗೆ ಜ್ಞಾನ ಭಂಡಾರ ಬಿತ್ತಿದರು. ನಾಡಿನ ಉದ್ದಗಲಕ್ಕೂ, ದೇಶ ವಿದೇಶಗಲ್ಲಿ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಕಡೆಗೆ ಮಾರ್ಗದರ್ಶನ ನೀಡಿದವರು. ಅವರ ಪ್ರವಚನ ಎಲ್ಲೆಯಿದ್ದರೂ ಲಕ್ಷಲಕ್ಷ ಭಕ್ತರು ಸೇರುತ್ತಿದ್ದರು. ಶ್ರೀಗಳು ಕೋಟ್ಟಂತಹ ಜ್ಞಾನ ಭಂಡಾರ ಅಜರಾಮರವಾಗಿ ಉಳಿಯುವದು ಮತ್ತು ಶ್ರೀಗಳು ಪ್ರತಿಯೊಬ್ಬರ ಮನದಲ್ಲಿ ಮನೆಯ ಗುರುವಾಗಿ ಇದ್ದಾರೆ ಎಂದರು.
ಇದೆ ವೇಳೆ ತಿಕೋಟಾ ವೀರಕ್ತಮಠದ ಚನ್ನಮಲ್ಲಿಕಾರ್ಜುನ ಮಹಾ ಸ್ವಾಮಿಗಳು, ಕೃಷ್ಣಾ ಕಿತ್ತೂರ ಗುರದೇವಾಶ್ರಮದ ಬಸವೇಶ್ವರ ಮಾಹಾಸ್ವಾಮಿಗಳು, ಕಾಖಂಡಕಿ ಗುರುದೇವಾಶ್ರಮದ ಶಿವಯೋಗಿ ಮಾಹಾಸ್ವಾಮಿಗಳು, ಕಕಮರಿಯ ಆತ್ಮಾರಾಮ ಸ್ವಾಮಿಗಳು ಕಾಗವಾಡ ಗುರುದೇವಾಶ್ರಮದ ಯತಿಶ್ವರಾನಂದ ಮಾಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಈ ಮುನ್ನ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳ ಭಾವಚಿತ್ರ ಹಾಗೂ ಸಿದ್ದೇಶ್ವರ ಶ್ರೀಗಳ ಬಾವಚಿತ್ರ ಎತ್ತಿನ ಗಾಡಿಯಲ್ಲಿ ಸಕಲ ವಾದ್ಯ ಮೇಳದೊಂದಿಗೆ ಸಾವಿರಾರು ಭಕ್ತರು ಕೂಡಿಕೊಂಡು ಪ್ರಮುಖ ರಸ್ತೆಗಳ ಮೂಲಕ ಭವ್ಯ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕನಮಡಿ, ಜ್ಞಾನಯೋಗ ಲಯನ್ಸ ಕ್ಲಭ್ ಬೆಂಗಳೂರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ಶಿಭಿರ ಎರ್ಪಡಿಸಲಾಗಿತ್ತು. ನೂರಾರು ಜನರು ಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು.
ಇದೆ ಸಂದರ್ಭದಲ್ಲಿ ವೈದ್ಯಕಿಯ ಹಾಗೂ ಇಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಅಶೋಕ ಆರ ಮಸಳಿ, ಸೋಮನಿಂಗ ಓ ಪಾಟೀಲ, ರವಿ ಎಂ ಬಿರಾದಾರ, ಶಿವಲಿಂಗ ದವಳೇಶ್ವರ, ರಾಜು ಬ ಸೌದಿ, ರಾಜೀವ ಎ ಮಸಳಿ, ಮಲ್ಲಿಕಾರ್ಜುನ ತುಳಜನ್ನವರ, ಅಪಾರ ಭಕ್ತರು, ಮಕ್ಕಳು ವೃದ್ದರು ಮಹಿಳೆಯರು ಇದ್ದರು.

