ಆಲಮೇಲದಲ್ಲಿ ಗಾಲಿಸಾಬ್ ಜಾತ್ರಾ ನಿಮಿತ್ಯ ಶಾಂತಿ ಸಭೆ | ನಾಗರೀಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಪೊಲೀಸ್ ಸ್ಟೇಷನ್ ಆವರಣದಲ್ಲಿ ಗ್ರಾಮ ದೇವರಾದ ಹಜರತ್ ಪೀರ್ ಗಾಲಿಸಾಬ್ ಜಾತ್ರೆಯು ಅತಿ ವಿಜ್ರಂಣೆಯಿಂದ ಊರಿನ ದೇಶಮುಖ ಮನೆತನದಿಂದ ಗಂಧದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುವುದು. ಈ ಜಾತ್ರೆಯ ವಿಶೇಷತೆ ಎಂದರೆ ಹಿಂದೂ -ಮುಸ್ಲಿಂ ಭೇದ ಭಾವವಿಲ್ಲದೆ ಏಕತೆ ಹೊಂದಿದ್ದಾರೆ ಹಾಗೂ ಕಮಿಟಿಯ ಅಧ್ಯಕ್ಷರು ಹಿಂದೂ ಬಾಂಧವರು ಪ್ರತಿ ವರ್ಷ ಇದನ್ನು ಅನುಸರಿಸಿಕೊಂಡು ಬಂದಿದ್ದು ವಿಶೇಷವಾಗಿದೆ ಎಂದು ಆಲಮೇಲ ನಾಗರೀಕ ವೇದಿಕೆ ಅಧ್ಯಕ್ಷ
ರಮೇಶ ಬಂಟನೂರ ಹೇಳಿದರು.
ಆಲಮೇಲ ತಾಲೂಕಿಗೆ ಇದು ಒಂದು ದೊಡ್ಡ ಜಾತ್ರೆ ಇರುವುದರಿಂದ ಸುಮಾರು 43 ಹಳ್ಳಿಗಳು ಒಳಗೊಂಡಿರತಕ್ಕಂಥ ಈ ಜಾತ್ರೆಯು ಶಾಂತಿ ಕಾಪಾಡುವುದು ಈ ಆಲಮೇಲ ಊರಿನ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿರುತ್ತದೆ. 29ರಂದು ಗಂಧ ಇರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ನೀಡಬೇಕು ಎಂದು ಪ್ರಭು ವಾಲಿಕಾರ ಹೇಳಿದರು.
ಹಳ್ಳಿಯಿಂದ ಬಂದಿರತಕ್ಕಂತ ನಾಗರಿಕರು ತಮ್ಮ ಬೈಕುಗಳು ಮತ್ತು ಫೋರ್ ವಿಲ್ಲರ್ ಗಳು ಎಲ್ಲಿ ಬೇಕಾದಲ್ಲಿ ನಿಲ್ಲಿಸಬಾರದು ಒಂದು ಸುರಕ್ಷತವಾದ ಸ್ಥಳದಲ್ಲಿ ಹಚ್ಚಿ ಜನರಿಗೆ ಹೋಗಲು ಬರಲು ಅನುಕೂಲ ಮಾಡಿಕೊಡಬೇಕು ಅದರ ಜೊತೆಗೆ ತಮ್ಮ ಸಹಕಾರ ಈ ಜಾತ್ರೆಗೆ ಅವಶ್ಯಕತೆ ಇದೆ ಎಂದರು.
ಪಿ ಎಸ್ ಐ ಅರವಿಂದ್ ಅಂಗಡಿ ಮಾತನಾಡಿ, ಜಾತ್ರೆಗೆ ಬಂದ ಮಹಿಳೆಯರು ತಮ್ಮ ಒಡವೆಗಳು ಮನೆಯಲ್ಲಿ ಇಟ್ಟು ಬರಬೇಕು ಇತ್ತೀಚಿನ ದಿನಗಳಲ್ಲಿ ಕಳ್ಳತನ ಹೆಚ್ಚಾಗುವುದರಿಂದ ಮೊಬಲ್ ತಮ್ಮ ಬೆಲೆಬಾಳುವ ಆಭರಣಗಳನ್ನು ಸೇಫಾಗಿ ಇಟ್ಟುಕೊಳ್ಳುವುದು ಉತ್ತಮ. ಜನ ದಟ್ಟಣೆಯಾದ ಸದ್ಯದಲ್ಲಿ ತಮ್ಮ ಬೈಕುಗಳನ್ನು ತಗೊಂಡು ತಿರುಗಾಡುವುದಾಗಲಿ, ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಚುಡಾಯಿಸುವದಾಗಲಿ ಏನಾದರೂ ಕಂಡುಬಂದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಾತ್ರೆಯ ಕಮಿಟಿ ಅಧ್ಯಕ್ಷ ಬಸವರಾಜ್ ತೆಲ್ಲೂರ, ಹರೀಶ್ ಯಂಟಮನ ಮಾತನಾಡಿದರು.
ವಾಹಬ್ ಸುಂಬುಡ್, ಭೀಮು ಭೋಮ್ಮನಳ್ಳಿ, ಅಮ್ಮದ ವಾಲಿಕಾರ, ಸೈಫನ್ ಜಮಾದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

