Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ

ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ

ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜಾತಿಯ ಬದಲು ನೀತಿ ನೋಡುವ ಬಸವನಾಡಿನ ಜನರು
(ರಾಜ್ಯ ) ಜಿಲ್ಲೆ

ಜಾತಿಯ ಬದಲು ನೀತಿ ನೋಡುವ ಬಸವನಾಡಿನ ಜನರು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಡಾ.ಪುರುಷೋತ್ತಮಾನಂದಪುರಿ ಶ್ರೀ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಸಚಿವ ಎಂ. ಬಿ. ಪಾಟೀಲರ ಕೆಲಸ ಕಾರ್ಯಗಳು ಸದಾ ಶ್ಲಾಘನೀಯವಾಗಿದ್ದು, ಜಲಸಂಪನ್ಮೂಲ ಸಚಿವರಾಗಿ ಅವರು ಮಾಡಿದ ಕೆಲಸಗಳಿಂದಾಗಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿದ್ಯಾನಗರ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಉಪ್ಪಾರ ಸಮಾಜ ಸೇವಾ ಸಂಘ ಆಯೋಜಿಸಿದ್ದ ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಬಸವಾದಿ ಶರಣರ ಆಶಯವಾಗಿತ್ತು. ಅನುಭವ ಮಂಟಪದ ಮೂಲಕ ಸಮಾನತೆಗೆ ಅವಕಾಶ ಕಲ್ಪಿಸಲಾಗಿತ್ತು. ಸಚಿವರು ಈ ತತ್ಚಗಳಡಿ ಕಾಯಕ ಮಾಡುತ್ತಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಕ್ಕೇರಿ ಚುಕ್ಕಾಣಿ ಹಿಡಿಯಲಿ ಎಂದು‌‌ ಆಶೀರ್ವದಿಸಿದರು
ಬಸವನಾಡಿನಲ್ಲಿ ಜನರು ಜಾತಿಯ ಬದಲು ನೀತಿಯನ್ನು ನೋಡುತ್ತಾರೆ. ಸ್ವಾಮೀಜಿಗಳಿಂದ ಜ್ಞಾನ ಸವಿಯುತ್ತಾರೆ. ಫಲಾಪೇಕ್ಷೆಯಿಲ್ಲದೇ ಗುರುಗಳನ್ನು ಗೌರವಿಸುತ್ತಾರೆ. ಶಿಕ್ಷಣ, ಸಂಘಟನೆ,‌ ಸಂಸ್ಕಾರದ ಮೂಲಕ‌ ಅಭಿವೃದ್ಧಿ ಹೊಂದಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ‌ಜಲಮೂಲಗಳ ಬಳಿ ನಾಗರಿಕತೆಗಳು ಪ್ರಾರಂಭವಾಗಿವೆ. ಆದರೆ, ಭಗೀರಥ ಮಹರ್ಷಿಗಳು ಗಂಗೆಯನ್ನು ಜಲದ ರೂಪದಲ್ಲಿ ಭೂಲೋಕಕ್ಕೆ ತಂದ ರಾಜ ಋಷಿಯಾಗಿದ್ದಾರೆ ಎಂದು ಹೇಳಿದರು.
ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ಈ ಹಿಂದೆ ಮಳೆಯಾಶ್ರಿತ ಬೇಸಾಯ ಮಾಡುತ್ತಿದ್ದ‌ ರೈತರು ಸುಸ್ಥಿರ ಕೃಷಿ ಮಾಡಲು ಅನುಕೂಲವಾಗಿದೆ. ಕಾಖಂಡಕಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿದೆ. ಈಗ ಇಲ್ಲಿಗೆ ಜಲದ ರೂಪದಲ್ಲಿ ಲಕ್ಷ್ಮಿ ಬಂದಿದ್ದಾಳೆ. ಇನ್ನು ಮುಂದೆ ಸರಸ್ವತಿಯೂ ನೆಲೆಸಲಿದ್ದಾಳೆ. ಈ ಸಮುದಾಯ‌ ಈಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಕಾಖಂಡಕಿ ಗುರುದೇವಾಶ್ರಮದ ಶಿವಯೋಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಭಾರತೀಯರಾದ ನಾವೆಲ್ಲರೂ ದುಶ್ಚಟಗಳಿಂದ ದೂರವಿದ್ದು, ಜಾತಿಭೇದ ಮರೆತು ಸದವಿಚಾರಗಳನ್ನು ಅಳವಡಿಸಿಕೊಳ್ಳಬೇಕು.
ಎತ್ತಿಹಿಡಿಯಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ. ಹಿಡಿದ ಕೆಲಸವನ್ನು ಮಾಡಿ ತೋರಿಸುವ ಸಚಿವರ ಕೆಲಸ‌ ಕಾರ್ಯಗಳು ಸದಾಕಾಲ ಉಳಿಯಲಿವೆ ಎಂದು ಹೇಳಿದರು.
ಶಿಕ್ಷಕ ಲಕ್ಷ್ಮಣಗೌಡ ವಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕಂಚಿನ ಪುತ್ಥಳಿ ಸ್ಥಾಪಿಸಲು ಸಚಿವರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಸದಾ ನಮ್ಮ ಸಮಾಜದ ಹಿತ ಕಾಪಾಡುತ್ತಿದ್ದಾರೆ. ಪ್ರತಿ ಊರಲ್ಲಿ ಭಗೀರಥ ಸಮುದಾಯ ಭವನ, ಪುತ್ಥಳಿ ಸ್ಥಾಪಿಸಲು ನೆರವಾಗಿದ್ದಾರೆ ಎಂದು ಹೇಳಿದರು.
ಚಿಕ್ಕಾಲಗುಂಡಿಯ ಶಿವಶರಣಾನಂದ ಮಹಾಸ್ವಾಮಿಗಳು ಮಾತನಾಡಿ, ಅನ್ನ, ಆಹಾರ ನೀಡುವ ಕಾಯಕನಿರತರಾದ ಎಂ. ಬಿ. ಪಾಟೀಲರು ಜನರ ಮನೆಮನದಲ್ಲಿದ್ದಾರೆ. ಕೊಟ್ಟ ಮಾತನ್ನು ಪಾಲಿಸುವ ಗುಣವಂತರಾಗಿದ್ದಾರೆ ಎಂದು ಹೇಳಿದರು.
ಕಾಖಂಡಕಿ ಶ್ರೀ ನಿಜಲಿಂಗಯ್ಯ ಮಹಾಸ್ವಾಮಿಗಳು,
ಉಪ್ಪಾರ ಅಭಿವೃದ್ಧಿ ನಿಗಮ‌ ಅಧ್ಯಕ್ಷ ಭರಮಣ್ಣ ಉಪ್ಪಾರ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಖಂಡಕಿಯ ಅಶೋಕ ಹುಚ್ಚಪ್ಪಯ್ಯ ದಿಗಂಬರಿಮಠ, ಮುಖಂಡರಾದ ರಾಮನಗೌಡ ಬಿ. ಪಾಟೀಲ, ಬಾಪುಗೌಡ ಬಿ. ಪಾಟೀಲ ಶೇಗುಣಸಿ, ಮುತ್ತಪ್ಪ ಕೆ.‌ ಶಿವಣ್ಣವರ, ಜಕ್ಕಪ್ಪ ಯಡವೆ, ಅನೀಲ ಅವಳೆ, ಸೋಮಶೇಖರ ಬಂಡಿ, ಶಂಕರ ಬೆಳ್ಳುಬ್ಬಿ, ಅಪ್ಪುಗೌಡ ಪಾಟೀಲ, ಪದ್ಮಾವತಿ ಗೌಡಪ್ಪಗೋಳ, ಅರವಿಂದ ಕೆ. ಕೊಪ್ಪದ, ರುಕ್ಮಾಬಾಯಿ ಚ. ಲೆಂಕಪ್ಪಗೋಳ, ರಾಜು ಮು. ತೇಲಣ್ಣವರ, ಮಲ್ಲಿಕಾರ್ಜುನ ಹು. ಪರಸನ್ನವರ, ಅಲಿಸಾಬ ಎಂ. ಖಡಕೆ, ಈರಗೊಂಡ ಬಿರಾದಾರ, ರಮೇಶ ಹೆಬ್ಬಿ, ವಿ. ಎಸ್. ಪಾಟೀಲ, ನಂದಕುಮಾರ ಚಂದರಗಿ, ಉಮೇಶ ಮಲ್ಲಣ್ಣವರ, ಮಲ್ಲು ಲೆಂಕಪ್ಪಗೋಳ, ಭೀಮಪ್ಪ ಸ. ಮೋಳಗಿ, ಸಂಗಪ್ಪ ಗಾಂಜಿ, ಕಿರಣ ದಳವಾಯಿ, ಸಂಗಪ್ಪ ಪಡಸಲಗಿ, ಬಸವರಾಜ ಹಕಾರಿ, ನಾಗರಾಜ ಹೊನವಾಡ, ಲಕ್ಷ್ಮಣಗೌಡ ವಿ. ಪಾಟೀಲ, ಈರಣ್ಣ ಮಾಡಲಗಿ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ

ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ

ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ

ಎಂಎಲ್ಸಿ ಸುನೀಲಗೌಡ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ
    In (ರಾಜ್ಯ ) ಜಿಲ್ಲೆ
  • ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ
    In (ರಾಜ್ಯ ) ಜಿಲ್ಲೆ
  • ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ
    In (ರಾಜ್ಯ ) ಜಿಲ್ಲೆ
  • ಎಂಎಲ್ಸಿ ಸುನೀಲಗೌಡ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧಾರ
    In (ರಾಜ್ಯ ) ಜಿಲ್ಲೆ
  • ದೇಶದ ಸಹಕಾರಿ ರಂಗದಲ್ಲೇ ಕರ್ನಾಟಕ ಬೆಸ್ಟ್ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ರೈತರು ಒಂದುಗೂಡಿ ಕಾರ್ಖಾನೆಯವರಿಗೆ ಪಾಠ ಕಲಿಸಬೇಕಿದೆ :ಹಗೇದಾಳ
    In (ರಾಜ್ಯ ) ಜಿಲ್ಲೆ
  • ಉಪ್ಪಾರ ಕುಲಶಾಸ್ತ್ರ ಅಧ್ಯಯನಕ್ಕೆ ಸಂಪುಟದಲ್ಲಿ ಚರ್ಚೆ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ವಿಜಯಪುರದಿಂದ ಪಣಜಿಗೆ ಬಸ್ ಸೇವೆ ಆರಂಭ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಜಾಗೃತಿ ಅಭಿಯಾನ
    In (ರಾಜ್ಯ ) ಜಿಲ್ಲೆ
  • ನ್ಯಾಯಾಲಯದ ಆದೇಶ ಉಲ್ಲಂಘನೆ: ಯುಕೆಪಿ ಜೀಪ್, ಕಂಪ್ಯೂಟರ್ ಜಪ್ತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.