ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕ ವಿಜಯಪುರ ಅಕ್ಟೋಬರ್ 25/2025 ಶನಿವಾರ ಮಧ್ಯಾಹ್ನ 3 ಗಂಟೆವರೆಗೆ ವಿವಿಧ 25 ಸ್ಥಾನಗಳಿಗೆ ಒಟ್ಟು ಏಳು ನಾಮಪತ್ರ ಸಲ್ಲಿಕೆಯಾಗಿದ್ದು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಎರಡು, ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಒಂದು, ಜಿಲ್ಲಾ ಕಾರ್ಯಕಾರಿಣಿ ಸ್ಥಾನಕ್ಕೆ ನಾಲ್ಕು ಹೀಗೆ ಒಟ್ಟು ಏಳು ನಾಮಪತ್ರ ಸಲ್ಲಿಕೆಯಾಗಿವೆ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅಕ್ಟೋಬರ್ 27 ಮಧ್ಯಾಹ್ನ 3 ಗಂಟೆವರಿಗೆ ಮಾತ್ರ ಕಾಲಾವಕಾಶ, 28 ರಂದು ನಾಮಪತ್ರ ಪರಿಶೀಲನೆ 30/10/2025 ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಇದೆ. ನವೆಂಬರ್ 9 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆ ವರಿಗೆ ಮತದಾನ ಅಂದೆ ಮಧ್ಯಾಹ್ನ 3/30 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

