Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಧೂಳಖೇಡ ಗ್ರಾಮದ ಭೀಮಾಶಂಕರ ನಗರದಲ್ಲಿ ಶನಿವಾರ ಮಧ್ಯಾಹ್ನ ೧೨.೩೦ ರ ಸುಮಾರಿಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಚಡಚಣ ಆಹಾರ ಇಲಾಖೆ ಹಾಗೂ ಝಳಕಿ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಧೂಳಖೇಡ ಗ್ರಾಮದ ಭೀಮಾಶಂಕರ ನಗರದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ೧೫೬೮೦ ರೂಪಾಯಿ ಮೌಲ್ಯದ ೫೬೦ ಕೆಜಿ ಅಕ್ಕಿ ಹಾಗೂ ಟಂ ಟಂ ಪ್ಯಾಜಿಯೋ ಕೆಎ ೨೮/ಎಬಿ ೧೧೧೫ ವಶಕ್ಕೆ ಪಡೆದಿದ್ದಾರೆ ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಝಳಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚಡಚಣ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ಶಿವಾನಂದ ಕೋಳಿ ಹೇಳಿದರು.ಪ್ರಕರಣ ಝಳಕಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.ಈ ದಾಳಿಯಲ್ಲಿ ಚಡಚಣ ಆಹಾರ ನಿರೀಕ್ಷಕ ಶಿವಾನಂದ ಕೋಳಿ, ಝಳಕಿ ಪೋಲಿಸ್ ಸಿಬ್ಬಂದಿಗಳಾದ ಎಸ್.ಬಿ. ಉಮರಾಣಿ, ಎಸ್.ಜಿ. ಬಿರಾದಾರ,…

Read More

ಲೇಖನ- ಜಯಶ್ರೀ. ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು ‘ಇಂಚರ’, ಪ್ಲಾಟ್ ನಂ – ೧೨೪,ಚಂದ್ರಮೌಳಿ ಕಾಲೋನಿಬೆಳಗಾವಿ-೧೭ಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಜೀವದ ಗೆಳತಿ,ನೆತ್ತಿ ಸುಡುವ ಸೂರ್ಯನ ಆರ್ಭಟವ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಗಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲುಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು ನಾಚಿ ಮರೆಯಾಯಿತು. ತಕ್ಷಣವೇ ಬಲು ಮೋಹಗೊಂಡು ನಿನ್ನ ಸುಕೋಮಲ ಬೆರಳಿಗೆ ಬೆರಳು ಬೆಸೆದೆ. ನಿನ್ನನ್ನು ಗೆಳತಿಯಾಗಿ ಪಡೆದು ಪರಿಪೂರ್ಣನಾದೆ ಎಂಬ ಭಾವದಲ್ಲಿ ಮಿಂದು ನನ್ನ ಹೃದಯ ಕುಣಿಯಿತು. ನಾನೇ ಭಾಗ್ಯವಂತ ನಾನೇ ಪುಣ್ಯವಂತ ನನಗರಿವಿಲ್ಲದೇ ಉಸಿರಿದೆ ಅದಕ್ಕೆ ನೀನು ಊಹ್ಞೂಂ ಇಲ್ಲ ನಾನೇ ಭಾಗ್ಯವತಿ ಎಂದದ್ದು ಇಂದಿಗೂ ಕಿವಿಯಲ್ಲಿ ಅನುರುಣಿಸುತ್ತಿದೆ.…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಈ ಹಿಂದೆ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಒಂದು ನೋಟ್ ಪುಸ್ತಕ ಬೇಕಾದರೆ ಅವರು ತಮ್ಮ ಪಾಲಕರಿಗೆ ಹೇಳುತ್ತಿದ್ದರು. ಹಾಗೆ ಹೇಳಿದೊಡನೆ ಪುಸ್ತಕ ಸಿಗುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇರಲಿಲ್ಲ. ಪಾಲಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲಿ ಉಳಿದ ಹಿಂದಿನ ವರ್ಷದ ಪುಸ್ತಕಗಳಲ್ಲಿನ ಖಾಲಿ ಹಾಳೆಗಳನ್ನು ಹರಿದು ಅದರಿಂದಲೇ ಮತ್ತೊಂದು ನೋಟು ಪುಸ್ತಕವನ್ನು ತಯಾರಿಸಿ ಅದನ್ನು ಬಳಸಿಕೊಳ್ಳಲು ಹೇಳುತ್ತಿದ್ದರು.ಯೂನಿಫಾರ್ಮ್ ಅಥವಾ ಸಮವಸ್ತ್ರದ್ದು ಕೂಡ ಇದೇ ಕಥೆ. ನಮಗೆ ಹೊಸ ಸಮವಸ್ತ್ರ ಬೇಕೆಂದು ನಾವು ಈ ವರ್ಷಕ್ಕೆ ಪಾಲಕರಲ್ಲಿ ಬೇಡಿಕೆ ಇಟ್ಟರೆ ಅದು ಮಾರ್ಚ್ ತಿಂಗಳಿನಲ್ಲಿಯೇ ಆಗಬೇಕಿತ್ತು. ಶಾಲೆಯ ರಜಾ ದಿನಗಳಲ್ಲಿ ನಮ್ಮ ಹಳೆಯ ಸಮವಸ್ತ್ರವನ್ನು ಪರಿಶೀಲಿಸಿ ಅದನ್ನು ರಿಪೇರಿ ಮಾಡಬಹುದಾದರೆ ಪಾಲಕರು ಅದರ ಹೊಲಿಗೆ ಬಿಚ್ಚಿ ದೊಡ್ಡದಾಗಿಸುವ ಇಲ್ಲವೇ ಇಲ್ಲವೇ ನಮ್ಮ ದೇಹದ ಅಳತೆಗೆ ಸರಿಹೊಂದುವ ರೀತಿಯಲ್ಲಿ ಸರಿ ಮಾಡಿ ಕೊಡುತ್ತಿದ್ದರು. ಇನ್ನು ಎಲ್ಲಾ ಹಬ್ಬಗಳಿಗೂ ಬಟ್ಟೆ ಕೊಡಿಸುವ ವಾಡಿಕೆಯಂತೂ ಇರಲೇ ಇಲ್ಲ.…

Read More

“ನವೆಂಬರ್ ಕ್ರಾಂತಿ”ಯ ಚರ್ಚೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕ ಹೇಳಿಕೆ ಮಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತಾದ “ನವೆಂಬರ್ ಕ್ರಾಂತಿ”ಯ ಬಗ್ಗೆ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಸಿಎಂ ಸಿದ್ದರಾಮಯ್ಯ ಈ ಚರ್ಚೆಗೆ ಮತ್ತೊಂದು ಟ್ವಿಸ್ಟ್ ನೀಡುವ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಸರ್ಕಾರ ನವೆಂಬರ್‌ನಲ್ಲಿ ತನ್ನ ಐದು ವರ್ಷಗಳ ಅವಧಿಯ ಅರ್ಧಭಾಗ ತಲುಪಿರುವಂತೆಯೇ ನಾಯಕತ್ವದಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ ಊಹಾಪೋಹಗಳೆದ್ದಿವೆ.ಇದನ್ನು ಕೆಲವರು “ನವೆಂಬರ್ ಕ್ರಾಂತಿ” ಎಂದು ಕರೆಯುತ್ತಿದ್ದು, ಈ ಕುರಿತ ಚರ್ಚೆಗಳು ವ್ಯಾಪಕವಾಗಿವೆ. ಆದಾಗ್ಯೂ, ಸಿಎಂ ಸಿದ್ದರಾಮಯ್ಯ ಕೂಡ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸುವುದಾಗಿ ನಿರಂತರವಾಗಿ ಪುನರುಚ್ಚರಿಸುತ್ತಿದ್ದಾರೆ.ಆದರೆ ಇದೀಗ ಮೊದಲ ಬಾರಿಗೆ ಸಿಎಂ ಸ್ಥಾನದ ಬದಲಾವಣೆ ಕುರಿತು ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಅವರ ಆಪ್ತ ಮತ್ತು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, “ಅದು ಅವರ ವೈಯಕ್ತಿಕ ಅಭಿಪ್ರಾಯ”…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವ್ಯವಸ್ಥಿತ ಚರಂಡಿ ಇರದ ಕಾರಣ ಮಲೀನ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಸಿ.ಸಿ ರಸ್ತೆ, ಚರಂಡಿ ನಿರ್ಮಿಸುವುದರ ಜೊತೆಗೆ ಮುಳ್ಳಿನ ಗಿಡಗಳನ್ನು ತೆರವು ಗೊಳಿಸಲು ೧೧ನೇ ವಾರ್ಡಿನ ಬಸವನಗರ ನಿವಾಸಿಗಳು ಆಗ್ರಹಿಸಿದ್ದಾರೆ.ಪಟ್ಟಣದ ೧೧ ನೇ ವಾರ್ಡಿನಲ್ಲಿ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಕರ್ನಾಟಕ ತೈಲ ವಿತರಣಾ ಕೇಂದ್ರ (ಪಟ್ರೋಲ್ ಪಂಪ್)ದ ಹಿಂದುಗಡೆ ಪ್ರದೇಶದಲ್ಲಿ ಅವ್ಯವಸ್ಥೆ ತಲೆದೋರಿದ್ದು ಪಟ್ಟಣ ಪಂಚಾಯಿತಿಯಿಂದ ಅಸ್ಪೃಶ್ಯತೆಗೆ ಒಳಗಾಗಿದೆ. ಈ ಕುರಿತು ವಾರ್ಡಿನ ನಿವಾಸಿಗಳಾದ ಡಾ.ಮಂಜುನಾಥ ಮಠ ಹಾಗೂ ಯೂಸೂಫ್ ಮಹಮ್ಮದ್ ಅಲಿ ಹೇಳುವಂತೆ, ನಮ್ಮ ಕಾಲೊನಿಗೆ ಉತ್ತಮವಾದ ಮುಖ್ಯ ರಸ್ತೆ, ಚರಂಡಿಯಿಲ್ಲದೇ ಬಳಲುತ್ತಿದೆ. ಈ ಕುರಿತು ಪಟ್ಟಣ ಪಂಚಾಯಿತಿಯಲ್ಲಿ ಕೇಳಲಾಗಿ ಅನುದಾನದ ಕೊರತೆಯ ಕಾರಣ ನೀಡಲಾಗುತ್ತಿದೆ. ಹಾಗಿದ್ದರೇ ಪಟ್ಟಣ ಪಂಚಾಯಿತಿಯಡಿ ಅನುಮತಿ ಪಡೆದ ಕಾಲೊನಿಗೆ ರಸ್ತೆ, ಚರಂಡಿಯಂತಹ ಅಭಿವೃದ್ಧಿ ಕಾರ್ಯಗಳು ಬೇಡವೇ? ಇಲ್ಲಿಯ ನಿವಾಸಿಗಳು ಕರ, ತೆರಿಗೆಯನ್ನು ಪ್ರತಿ ವರ್ಷ ಸಂದಾಯ ಮಾಡುತ್ತಿಲ್ಲವೇ? ಯಾಕೆ ಈ ತಾರತಮ್ಯ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಮ್ಮ ಬದುಕಿನಲ್ಲಿ ಎದುರಾಗುವ ಅನಿಶ್ಚಿತ ಘಟನೆಗಳು, ಅವಘಡಗಳು ಆರ್ಥಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ , ಇಲ್ಲವಾದರೆ ಕುಟುಂಬವನ್ನು ನಿರ್ವಹಿಸಲು ಕಷ್ಟವಾಗುತ್ತದೆ, ಇಂತಹ ಸಮಯದಲ್ಲಿ ಜೀವ ವಿಮೆಗಳು ಸಹಕಾರಿಯಾಗುತ್ತವೆ ಎಂದು ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಅಧ್ಯಕ್ಷ ,ನಾಡೋಜ ಶಾಸಕ ಜಗದೀಶ ಗುಡಗುಂಟಿ ಹೇಳಿದರು.ನಗರದ ಗೃಹ ಕಚೇರಿ ಸಾಕ್ಷಾತ್ಕಾರ ಭವನದಲ್ಲಿ ನಡೆದ ಪ್ರಭುಲಿಂಗೇಶ್ವರ ಸಹಕಾರಿ ಸಂಘದ ವಿವಿಧ ವಿಮಾ ಕಂಪನಿಗಳ ಒಡಬಂಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವ ವಿಮೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಬದುಕಿನ ಬಂಡಿಯನ್ನು ಸರಾಗವಾಗಿ ಎಳೆಯಬಹುದು,ಜೀವ ವಿಮೆಯು ದೀರ್ಘಾವಧಿಯ ಉಳಿತಾಯಕ್ಕೆ ನೆರವಾಗುವುದರ ಜೋತೆಗೆ ಬದುಕಿಗೆ ರಕ್ಷಣೆಯನ್ನೂ ನೀಡುತ್ತದೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವಾಗ ಏನಾಗುತ್ತದೆ ಎಂದು ಗೊತ್ತಾಗುವುದಿಲ್ಲ, ಕುಟುಂಬವನ್ನು ನಿರ್ವಹಣೆ ಮಾಡುವ ಯಜಮಾನನಿಗೆ ಆಕಸ್ಮಿಕವಾಗಿ ಏನಾದರೂ ಆದರೆ ಅವನ ಕುಟುಂಬ ಬೀದಿಗೆ ಬರುತ್ತದೆ, ಇಂತಹ ಕೆಟ್ಟ ಸಮಯದಲ್ಲಿ ಇನ್ಸೂರೆನ್ಸ್ ಗಳು ಜೀವನ ನಡೆಸಲು ಸಹಕಾರಿಯಾಗುತ್ತವೆ, ನಾವು ದುಡಿಯುವ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿಮೆ ಮಾಡಿಸಿದರೆ ನಮ್ಮ ಮುಂದಿನ ಜೀವನಕ್ಕೆ ಅನುಕೂಲವಾಗುತ್ತದೆ.ಇಂದು ಸಾಲ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅತೀವಷ್ಛಿ ಮತ್ತು ಪ್ರವಾಹದಿಂದಾಗಿ ಅನ್ನದಾತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿ ಅಕ್ಟೋಬರ್ 31 ರಂದು ಶುಕ್ರವಾರ ತಮ್ಮ ಜನ್ಮದಿನ ಆಚರಿಸಿಕೊಳ್ಳದಿರಲು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ನಿರ್ಧರಿಸಿದ್ದಾರೆ.ರಾಜ್ಯದಲ್ಲಿ ಅತೀವೃಷ್ಠಿ ಮತ್ತು ಪ್ರವಾಹದಿಂದಾಗಿ ರೈತಾಪಿ ಜನರು ಸಂಕಷ್ಟದಲ್ಲಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ಗ್ರಾಮಗಳಲ್ಲಿ ಸಮಸ್ಯೆಗಳಾಗಿವೆ. ಆಸ್ತಿ-ಪಾಸ್ತಿ ಮತ್ತು ಬೆಳೆಯೂ ಹಾನಿಯಾಗಿದೆ.ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನ್ಮದಿನ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಇದೇ ಅಕ್ಟೋಬರ್ 31 ರಂದು ಶುಕ್ರವಾರ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಬೆಂಬಲಿಗರು, ಅಭಿಮಾನಿಗಳು, ಹಿತೈಸಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಸುನೀಲಗೌಡ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದಲ್ಲೇ ರೈತರು ಹಾಗೂ ಸಹಕಾರಿ ಹಿತರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಹಕಾರಿ ಬಲವರ್ಧನೆಗೆ ಆದ್ಯತೆ ನೀಡುತ್ತಿರುವುದು ರಾಜ್ಯದ ರೈತರ ಸೌಭಾಗ್ಯ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.ಭಾನುವಾರ ರಾತ್ರಿ ವಿಜಯಪುರ ತಾಲೂಕಿನ ಜಂಬಗಿ(ಆ) ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಸಭಾಭವನ ಲೋಕಾರ್ಪಣೆ ಮಾಡಿ, ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಷ್ಟ್ರೀಕೃತ ಬ್ಯಾಂಕ್ ಗಳು ರೈತಸ್ನೇಹಿಯಲ್ಲ. ಹೀಗಾಗಿ ಕೃಷಿ, ರೈತ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಸಹಕಾರಿ ರಂಗವನ್ನು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಸಹಕಾರಿ ಸಂಸ್ಥೆಗಳು ಬದುಕಿದ್ದರೆ ರೈತನೂ ಬದುಕಿರುತ್ತಾನೆ, ಇಲ್ಲವಾದರೆ ರೈತ ಹಾಗೂ ಸಹಕಾರಿ ರಂಗ ಎರಡೂ ಅಸ್ತಿತ್ವ ಕಳೆದುಕೊಳ್ಳುತ್ತವೆ.ಸಹಕಾರಿ ವ್ಯವಸ್ಥೆ ಬದುಕಿದ್ದರಿಂದಲೇ ರಾಜ್ಯ ಸರ್ಕಾರ ಮೂರು ಬಾರಿ ಕೃಷಿ ಸಾಲ ಮನ್ನಾ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕಾರ್ಖಾನೆ ಮಾಲೀಕರು ದರ ನಿಗದಿ ಮಾಡದೆ ರೈತರನ್ನು ದಾರಿ ತಪ್ಪಿಸುವ, ದ್ವಂದ್ವ ನೀತಿ ಅನುಸರಿಸಿ ರೈತರ ಮದ್ಯೆ ಒಡಕು ಮೂಡಿಸುವ ಕೆಲಸ ಮಾಡುತ್ತಾರೆ ಈ ಯಾವ ಕಾರ್ಯಗಳಿಗೂ ಕಿವಿಗೊಡದೆ ಸರ್ವ ರೈತರು ಒಂದುಗೂಡಿ ಕಾರ್ಖಾನೆಯವರಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ರೈತ ಸಂಘದ ಮುಖಂಡರಾದ ಟಿ.ಟಿ. ಹಗೇದಾಳ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಸಕ್ಕರೆ ಕಾರ್ಖಾನೆಗಳು ಬೆಲೆ ಘೋಷಣೆ ಮಾಡುವವರೆಗೂ ಕಬ್ಬು ಕಟಾವು ಮಾಡಬಾರದು ಎಂದು ರೈತರಲ್ಲಿ ಮನವಿ ಮಾಡಿದರು.ಯುವ ರೈತ ಮಂಜುನಾಥ ಸೊನ್ನದ ಮಾತನಾಡಿ, ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಹವಾಮಾನ ಬದಲಾವಣೆ ಸಹ ರೈತರ ಜೀವನಕ್ಕೆ ದೊಡ್ಡ ಆಘಾತವಾಗಿದೆ. ಮಳೆ ಹೆಚ್ಚು ಕಡಿಮೆ ಬಂದರೆ ಎರಡೂ ರೈತರಿಗೆ ಹಾನಿ ಉಂಟುಮಾಡುತ್ತವೆ. ಮಳೆ ಅತಿಯಾಗಿರುವುದರಿಂದ ಹಲವೆಡೆ ಬೆಳೆ ನಷ್ಟ ಉಂಟಾಗಿದೆ. ಸರಕಾರಗಳು ರೈತರು ಬೆಳೆದ ಕಬ್ಬಿಗೆ…

Read More

ಉಪ್ಪಾರ ಪ್ರತಿಭಾ ಪುರಸ್ಕಾರ, ನಿವೃತ್ತರು, ನೂತನ ನೇಮಕವಾದ ನೌಕರರು, ಸಾಧಕರಿಗೆ ಸನ್ಮಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರವರ್ಗ 1 ರಲ್ಲಿರುವ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಗೆ ಪೂರಕವಾಗಿ ಕುಲಶಾಸ್ತ್ರ ಅಧ್ಯಯನ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಭರವಸೆ ನೀಡಿದರು.ಭಾನುವಾರ ನಗರದ ಕಂದಗಲ್ ಹನುಮಂತ್ರಾಯ ರಂಗ ಮಂದಿರದಲ್ಲಿ ಜಿಲ್ಲಾ ಉಪ್ಪಾರ ಸೇವಾ ಸಂಘ, ಜಿಲ್ಲಾ ಉಪ್ಪಾರ ನೌಕರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಹಾಗೂ ನೂತನ ನೌಕರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಎಲ್ಲ ಸಮಾಜಗಳಲ್ಲಿ ಇರುವಂತೆ ಆರ್ಥಿಕ ಬಡವರಿದ್ದಾರೆ. ಅಂಥವರಿಗೆ ಸಾಮಾಜಿಕ ನ್ಯಾಯದ ಲಾಭ ಸಿಗಬೇಕಿದೆ. ಮೀಸಲಾತಿಗಾಗಿ ಕುಲ ಶಾಸ್ತ್ರ ಅಧ್ಯಯನ ನಡೆಸುವ ಕುರಿತು ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸೇರಿ ಚರ್ಚೆಗೆ…

Read More