ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಧೂಳಖೇಡ ಗ್ರಾಮದ ಭೀಮಾಶಂಕರ ನಗರದಲ್ಲಿ ಶನಿವಾರ ಮಧ್ಯಾಹ್ನ ೧೨.೩೦ ರ ಸುಮಾರಿಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಚಡಚಣ ಆಹಾರ ಇಲಾಖೆ ಹಾಗೂ ಝಳಕಿ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಧೂಳಖೇಡ ಗ್ರಾಮದ ಭೀಮಾಶಂಕರ ನಗರದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ೧೫೬೮೦ ರೂಪಾಯಿ ಮೌಲ್ಯದ ೫೬೦ ಕೆಜಿ ಅಕ್ಕಿ ಹಾಗೂ ಟಂ ಟಂ ಪ್ಯಾಜಿಯೋ ಕೆಎ ೨೮/ಎಬಿ ೧೧೧೫ ವಶಕ್ಕೆ ಪಡೆದಿದ್ದಾರೆ ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಝಳಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚಡಚಣ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ಶಿವಾನಂದ ಕೋಳಿ ಹೇಳಿದರು.
ಪ್ರಕರಣ ಝಳಕಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಈ ದಾಳಿಯಲ್ಲಿ ಚಡಚಣ ಆಹಾರ ನಿರೀಕ್ಷಕ ಶಿವಾನಂದ ಕೋಳಿ, ಝಳಕಿ ಪೋಲಿಸ್ ಸಿಬ್ಬಂದಿಗಳಾದ ಎಸ್.ಬಿ. ಉಮರಾಣಿ, ಎಸ್.ಜಿ. ಬಿರಾದಾರ, ಎಸ್.ಬಿ. ಶಿವೂರ, ಗಣೇಶ ಮೇತ್ರಿ ಇದ್ದರು.

