Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಲುಷಿತಗೊಂಡ ಮನಸ್ಸುಗಳ ಕೊಳೆ ತೊಳೆಯುವ ಸಾಧನಗಳಾಗಿ ಕನಕದಾಸರ ವಿಚಾರಧಾರೆಗಳು ಇಂದು ಪ್ರಸ್ತುತವಾಗಿವೆ ಎಂದು ಎಚ್.ಜಿ. ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಭಕ್ತ ಕನಕದಾಸರ ೫೩೮ನೆಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಬಸವಾದಿ ಪ್ರಮಥರು ಸಮಾಜದ ಕೊಳೆಯನ್ನು ವಚನಗಳ ಮೂಲಕ ತೊಳೆದಂತೆ ೧೬ನೆಯ ಶತಮಾನದಲ್ಲಿ ಪುರಂದರದಾಸರು ಮತ್ತು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ಶುದ್ಧಿಕರಣ ಮಾಡಲು ಅವಿರತ ಶ್ರಮಿಸಿದವರಾಗಿದ್ದಾರೆ ಎಂದರು. ವೇದಿಕೆಯ ಮೇಲೆ ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶ್ರೀಶೈಲ ಕೌಲಗಿ, ಅಶೋಕ ತೆಲ್ಲೂರ, ಎಸ್.ಆರ್.ಅಗಸಬಾಳ, ಅರವಿಂದ ಡೋಣೂರ, ಮಲ್ಲಣ್ಣ ಸಾಲಿ, ನಿಂಗಣ್ಣ ಬಿರಾದಾರ, ಭೀಮರಾಯ ಅಮರಗೋಳ ಇದ್ದರು.ಕಾರ್ಯಕ್ರಮದಲ್ಲಿ ಸುನಂದಾ ಯಂಪುರೆ, ಸುದರ್ಶನ ಜಂಗಣ್ಣಿ, ಚಂದ್ರಶೇಖರ ದೇವರೆಡ್ಡಿ, ಶ್ಯಾಮಲಾ ಮಂದೇವಾಲ, ಎ.ಆಯ್.ಮಕಾಂದಾರ, ಗಂಗಾಧರ ಸೋಮನಾಯಕ, ನಿಖಿಲ್ ಖಾನಾಪೂರ, ಡಾ.ಅಂಬರೀಷ ಬಿರಾದಾರ, ಎಸ್.ಎಸ್.ಸಾತಿಹಾಳ, ರಾಜು ಸಿಂದಗಿ, ಸಿ.ಬಿ.ಬಾಬಾನಗರ, ಮಲ್ಲಿಕಾರ್ಜುನ ಸಾವಳಸಂಗ, ಆರ್.ಕೆ.ಪಾಟೀಲ ಸೇರಿದಂತೆ ಕುರುಬ…
ವಿಜಯಪುರ ಜಿಲ್ಲಾಡಳಿತದಿಂದ ಸಂತ ಕನಕದಾಸ ಜಯಂತಿ ಆಚರಣೆ | ಸಚಿವ ಡಾ.ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಸೇರಿದಂತೆ ೩೧೬ ಕೀರ್ತನೆಗಳು ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಸಂತ ಕನಕದಾಸರ ಕೀರ್ತನೆಗಳು ಜನಮಾನಸದಲ್ಲಿ ಜನಜನಿತವಾಗಿವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಸಂತ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಕ್ಲಿಷ್ಟಕರ ಹಾಗೂ ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ…
ಧಾತ್ರಿ ಸಮಗ್ರ ಹಾಲುಣಿಸುವಿಕೆ ನಿರ್ವಹಣಾ ಕೇಂದ್ರ-ಮದರ್ ಮಿಲ್ಕ ಬ್ಯಾಂಕ್‌ಗೆ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲಾಗಿದ್ದು, ಅವಧಿ ಪೂರ್ವ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಹಾಗೂ ಮಕ್ಕಳ ಆರೋಗ್ಯ ವೃದ್ದಿಗೆ ಈ ಕೇಂದ್ರ ಅತ್ಯಂತ ಸಹಕಾರಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ಜಿಲ್ಲಾಸ್ಪತ್ರೆಯ ಎಂಸಿಎಚ್ ವಿಭಾಗದಲ್ಲಿ ಶನಿವಾರ ಆಶ್ರಯ ಹಸ್ತ ಫೌಂಡೇಶನನ್ ೨.೬೦ ಕೋಟಿ ರೂ. ಸಿಎಸ್‌ಆರ್ ಅನುದಾನದಲ್ಲಿ ಸ್ಥಾಪಿಸಲಾದ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ನಿರ್ವಹಣಾ ಕೇಂದ್ರ ಹಾಗೂ ಮದರ್ ಮಿಲ್ಕ್ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿ ಮಗುವಿಗೆ ತಾಯಿ ಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಸ್ಥಾಪಿಸಲಾದ ಈ ಹಾಲುಣಿಸುವಿಕೆ ನಿರ್ವಹಣಾ ಕೇಂದ್ರವನ್ನು ಹೈದ್ರಾಬಾದ್‌ನ ಸುಶೇನಾ ಹೆಲ್ಥ್ ಫೌಂಡೇಶನ್ ನಿರ್ವಹಣೆ…
ಲೇಖನ – ಜಯಶ್ರೀ. ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಚೆಂದದ ಚೆಂದುಳ್ಳಿ ,ನನ್ನ ನಿನ್ನ ಪ್ರೀತಿಗೆ ನೀನು ಅಸ್ತು ಅಂತ ಮುದ್ರೆ ಒತ್ತಿದಾಗಿನಿಂದ ಮನಸ್ಸು ಹಬ್ಬದ ಸಂಭ್ರಮದಲ್ಲಿ ಓಡಾಡ್ತಿದೆ. ದಿನ ಓಡಾಡಿದ ಓಣಿಯೇ ಆದರೂ ಏಕೋ ಗೊತ್ತಿಲ್ಲ. ಎಲ್ಲೆಲ್ಲೂ ಹೊಸತು ಸಡಗರ. ಹೃದಯದ ಬಾಗಿಲಿಗೆ ಹಸಿರು ತಳಿರು ತೋರಣ ಕಟ್ಟಿ ನುಲಿಯುತಿದೆ ಈ ಜೀವ. ಸುಳಿದು ಬೀಸುವ ಅನುರಾಗದ ಗಾಳಿಗೆ ತೋರಣ ಸರಭರ ಸದ್ದು ಮಾಡುವುದನು ಕಂಡು ಬೆರಗಾದೆ. ಸದ್ದಿಲ್ಲದೇ ಮನದ ಮನೆಯಲಿ ನೀನು ಕಾಲಿಟ್ಟದ್ದು ಯಾವಾಗ ಅಂತ ನೆನಪಿನ ಪುಟ ತೆರೆದರೆ ಮೈಯಲ್ಲಿ ನವೀನ ರೋಮಾಂಚನ. ದಿನವೂ ನನ್ನ ಕಣ್ಣಿಗೆ ನೀ ಬೀಳದಿದ್ದರೆ ಮಿಡಿವ ಹೃದಯ ಒಂದು ಕ್ಷಣ ನಿಂತಂತಾಗುವುದು. ಚೆಂದ ಚೆಂದದ ಸಾವಿರಾರು ಕನಸುಗಳನು ಎದೆಯಲ್ಲಿ ಬಿತ್ತಿ ಕಣ್ಮರೆಯಾದರೆ ಈ ಜೀವ ತಡೆದುಕೊಳ್ಳುವುದಾದರೂ ಹೇಗೆ? ಅಪರೂಪದ ನಿನ್ನ ರೂಪ ಪ್ರತಿ ರಾತ್ರಿಯೂ ಬಿಡದೇ ಕನಸಿನಲ್ಲಿ ಬಂದು ಹಾಜರಿ ಹಾಕಿ ಕಾಡುತಿದೆ. ಮೊದಲ ಸಲ ಅದರಕೆ ಅದರ ಸೇರಿಸಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಧೂಳಖೇಡ ಗ್ರಾಮದ ಓವರ್ ಬ್ರೀಡ್ಜ್ ಸಮೀಪದಲ್ಲಿ ಶುಕ್ರವಾರ ಸಂಜೆ ಸುಮಾರು 4.30 ರ ಸುಮಾರಿಗೆ ಘಟನೆ ನಡೆದಿದೆ.ಘಟನೆಯಲ್ಲಿ ಬೈಕ್ ಸವಾರ್ ಗಂಭೀರ ಗಾಯಗೊಂಡಿದ್ದು ಅಂಬುಲನ್ಸ್ ಮುಖಾಂತರ ಬೈಕ್ ಸವಾರನನ್ನು ಜಿಲ್ಲಾಸ್ಪತ್ರೆಗೆ ಖಳಿಸಲಾಯಿತು ಎಂದು ತಿಳಿದುಬಂದಿದೆ.ಸೋಲಾಪುರ ದಿಂದ ಅಗರಖೇಡ ಗ್ರಾಮದ ಕೆಡೆಗೆ ಹೋಗುತ್ತಿದ್ದ ಕಾರ್ ನಂ.ಎಮ್.ಎಚ್.12 ವಾಯ್.ಬಿ.4260 ಮತ್ತು ಧೂಳಖೇಡ್ ಗ್ರಾಮದಿಂದ ಸೋಲಾಪೂರ ಕಡೆ ಹೋಗುತ್ತಿದ್ದ ಬೈಕ್ ಕೆ.ಎ.28 ಎಚ್.ಎಫ್ 5011 ಮುಖಾಮುಖಿ ಡಿಕ್ಕಿಆಗಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ.ಡಿಕ್ಕಿಯ ರಭಸಕ್ಕೆ ಕಾರ್ ಪಕ್ಕದಲ್ಲಿರುವ ನೀರು ತುಂಬಿದ ತೆಗ್ಗಿಗೆ ತಲೆ ಕೆಳಗಾಗಿ ಬಿದ್ದಿದೆ ಆದರು ಕಾರನಲ್ಲಿ ಇದ್ದವರಿಗೆ ಯಾವುದೇ ಅನಾಹುತವಾಗಿಲ್ಲ.ಕಾರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ: ಅಪಘಾತ ನಡೆದ ಸ್ಥಳದ ಪಕ್ಕದಲ್ಲೆ ಮಳೆ ನೀರು ಹೋಗಲು ಅಂಡರ್‌ಪಾಸ್ ತಡೆಗೋಡೆ ಇದ್ದುದರಿಂದ ಆ ತಡೆಗೋಡೆಗೆ ಕಾರ್ ಗುದ್ದಿದ್ದರೆ ಕಾರ್‌ನಲ್ಲಿ ಇದ್ದ ಸವಾರರು ಮತ್ತು ಡ್ರೈವರ್ ಉಳಿಯುವ ಸಾಧ್ಯತೆ ಕಡಿಮೆ ಇತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶೇಷ ಅತಿಥಿ ಉಪನ್ಯಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚೆಗಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿದ್ದು ಅದರಂತೆ ಸೈಬರ್ ಭದ್ರತೆ ಹಾಗೂ ಸೈಬರ್ ಕಾನೂನುಗಳ ಬಗ್ಗೆ ಅರಿವು ಅಗತ್ಯ ಎಂದು ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ.ಸುನೀಲ್ ಎಂ.ಬಗಡೆ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ ಕ್ಯೂಎಸಿ ಹಾಗೂ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಯುಕ್ತಾಶ್ರಯದಲ್ಲಿ ದಿನಾಂಕ ೦೬-೧೧-೨೦೨೫ ಗುರುವಾರ ದಂದು ಜರುಗಿದ “ಸೈಬರ್ ಜಾಗೃತಿ ಭಾರತ್” ಎಂಬ ವಿಷಯದ ಮೇಲೆ “ಸೈಬರ್ ಕಾನೂನಿನ ಪ್ರಮುಖ ಲಕ್ಷಣಗಳು” ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು ತಂತ್ರಜ್ಞಾನದ ವ್ಯಾಪಕ ಬಳಕೆಯಿಂದಾಗಿ ಸೈಬರ್ ಅಪರಾಧಗಳ ಹೆಚ್ಚುತ್ತಿವೆ. ಇಂದು ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ ಪ್ರತಿಯೊಬ್ಬರ ಬಳಿ ಮೊಬೈಲ್ ಇದೆ. ನಮ್ಮ ಡಿಜಿಟಲ್…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜ್ಞಾನದ ಜೊತೆ ಕೌಶಲ್ಯವು ಮುಖ್ಯ, ಮೀನುಗಾರಿಕೆ ಮತ್ತು ಜಲಕೃಷಿಯ ಪದ್ಧತಿ ಬಗ್ಗೆ ತಿಳಿದುಕೊಳ್ಳಲು ಮೀನುಗಾರಿಕೆ ಮತ್ತು ಮೀನುಕೃಷಿ ಕ್ಷೇತ್ರಗಳು ಜೀವನೋಪಾಯವನ್ನು ವೃದ್ಧಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರು, ಸಹ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ್ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಪ್ರಾಣಿಶಾಸ್ತ್ರ ವಿಭಾಗದ ಹಾಗೂ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಭೂತನಾಳ ಇವರ ಸಹಯೋಗದಲ್ಲಿ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಪದ್ಧತಿಗಳು (ಎಫ್ ಆರ್ ಐ ಸಿ) ವಿಷಯದ ಕುರಿತು ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಇವೆರಡೂ ವಿಭಿನ್ನ ಪದ್ಧತಿಗಳು.ಭಾರತವು ಜಾಗತಿಕ ಮೀನುಗಾರಿಕೆ ಉತ್ಪಾದನೆಯಲ್ಲಿ ಶೇ ೮ ರಷ್ಟು ಮುಂದಿದ್ದು…
ಹಳಕಟ್ಟಿ ಪ್ರೌಢಶಾಲೆಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭೇಟಿ – ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆಗೆ ಸಂವಾದ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಹತ್ತನೇ ತರಗತಿ ಶೈಕ್ಷಣಿಕ ಜೀವನದ ಬೆಸ್ ಅಗಿದೆ. ಏಳನೇಯ ತರಗತಯಿಂದ ಹತ್ತನೆಯ ತರಗತಿ ವರೆಗಿನ ಕಲಿಕೆಯು ಮಕ್ಕಳ ಜೀವನದಲ್ಲಿ ಶ್ರೇಯೋಭಿವೃದ್ಧಿಯ ಮಹತ್ತರ ಪಾತ್ರವಹಿಸುತ್ತದೆ. ಈ ಕಲಿಕಾವಧಿಯ ಶಿಕ್ಷಣವು ವಿದ್ಯಾರ್ಥಿಗಳಿಗೆ ಮಹತ್ವದ ಪಿಕ್ ಟೈಮ್ ಎಂದು ವಿಜಯಪುರ ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಶಶೀಧರ ನೀಲಗರ ಅಭಿಪ್ರಾಯಿಸಿದರು.ಇಲ್ಲಿನ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಅವರು ಬೆರೆತು ಪ್ರೌಢಶಿಕ್ಷಣದ ಮಹತ್ವ ಮತ್ತು ಪರೀಕ್ಷಾ ಸಿದ್ದತೆ ಕುರಿತು ಅನುಭವ ಹಂಚಿಕೊಂಡರು.ನಮ್ಮೆಲ್ಲರನ್ನು ಸಶಕ್ತರನ್ನಾಗಿಸುವ ಶಕ್ತಿ ಶಿಕ್ಷಣಕ್ಕಿದೆ.ಶಿಕ್ಷಣದಿಂದಲೇ ಜೀವನ ಬಲಕ್ಕೆ ಮೆರುಗು ಬರುತ್ತದೆ. ನಮ್ಮ ಜೀವನದ ಗುರಿ ಮುಟ್ಟುವ ಸಾಧನವಾಗಿರುವ ಪ್ರೌಢಶಿಕ್ಷಣವನ್ನು ಯಾವುದೇ ಕಾರಣಕ್ಕೂ ಮಕ್ಕಳು ನಿರ್ಲಕ್ಷ್ಯ ತೋರಬಾರದು.ಈ ಹಂತದ ಶಿಕ್ಷಣವೇ ನಿಮ್ಮ ಮುಂದಿನ ಶೈಕ್ಷಣಿಕ ಸವಾ೯ಂಗೀಣ ಪ್ರಗತಿಗೆ ನಾಂದಿಯಾಗಿದೆ. ಆ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣದ ಓದಾಭ್ಯಾಸದ ಚಟುವಟಿಕೆಗಳಲ್ಲಿ ವಿಭಿನ್ನ ಸಾಮಥ್ರ‍್ಯ ಹೊಂದಿ ಶಿಕ್ಷಣದ ಅಗತ್ಯ…
ವಿಶ್ವಹಿಂದೂ ಪರಿಷತ್, ಭಜರಂಗದಳದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದ ಲೋಕೋಪಯೋಗಿ ಇಲಾಖೆಯ ಸರ್ವೇ ನಂಬರ್ 103 ಕ್ಷೇತ್ರದ 38 ಗುಂಟೆ ಸರಕಾರಿ ಜಮೀನನ್ನು ಮುಸ್ಲಿಂ ಖಬರಸ್ಥಾನಕ್ಕೆ ನೀಡುವ ಪ್ರಸ್ತಾವನೆಯನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳದ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳದ ಅಧ್ಯಕ್ಷ ಮಹೇಶ ತುಂಬರಮಟ್ಟಿ ಮಾತನಾಡಿ ಲೋಕೋಪಯೋಗಿ ಇಲಾಖೆಯ ಜಮೀನು ಮುಸ್ಲಿಂ ಖಬರಸ್ಥಾನಕ್ಕೆ ನೀಡುವುದಕ್ಕೆ ವಿಶ್ವಹಿಂದೂ ಪರಿಷತ್, ಭಜರಂಗದಳ ಖಡಾಖಂಡಿತವಾಗಿ ವಿರೋಧಿಸುತ್ತದೆ. ಸರ್ಕಾರದ ಇಂತಹ ಇಬ್ಬಗೆಯ ನೀತಿ ಖಂಡನೀಯವಾದದ್ದು. ಖಬರಸ್ಥಾನಕ್ಕೆ ಈಗಾಗಲೇ ರೈತರು ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದರಿ ಸರ್ಕಾರಿ ಜಾಗದಲ್ಲಿ ಎಲ್ಲ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸರ್ಕಾರಿ ಕಛೇರಿಗಳನ್ನು ಮಾಡಲು ಈ ಮೂಲಕ ವಿಶ್ವ ಹಿಂದೂ ಪರಿಷತ-ಭಜರಂಗದಳ ಘಟಕ ಕೊಲ್ದಾರ ತಾಲೂಕು ಪ್ರಖಂಡ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.ಈ ವೇಳೆ ಶಂಕರ್ ಗಣಚಾರಿ, ಮಹೇಶ್ ತುಂಬರಮಟ್ಟಿ, ಬಸವರಾಜ ಚೌದ್ರಿ, ಅಭಿಷೇಕ್ ಹೆಬ್ಬಾಳ, ಯಮನಜಿ ಕರಣಿ, ಮಲ್ಲಿಕಾರ್ಜುನ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರತಿಯೊಂದು ಮಗುವು ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಶಾಲೆಗಳಲ್ಲಿ ಜರುಗಬೇಕು ಎಂದು ಬೆನ್ನಕೊಟಗಿ ಕಿರಿಯ ಪ್ರಾಥಮಿಕ ಶಾಲೆ ಸಹಾಯಕ ಮುಖ್ಯೋಪಾಧ್ಯಾಯ ಎಸ್.ವಿ.ಉಪ್ಪಿನ ಹೇಳಿದರು.ಸಿಂದಗಿ ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡ ಯುವಜನೋತ್ಸವ ಕಾರ್ಯಕ್ರಮದ ನಿರ್ಣಾಯಕರಾಗಿ ಆಗಮಿಸಿ ಮಾತನಾಡಿದ ಅವರು, ಅವರ ಆಸಕ್ತಿಗೆ ಅನುಗುಣವಾಗಿ ಮಕ್ಕಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಸಧೃಡತೆಗೆ ಸಹಕಾರಿಯಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ನಿರ್ದೇಶಕ ಡಾ.ಎಂ.ಎಂ.ಪಡಶೆಟ್ಟಿ, ಶಿಕ್ಷಣ ಮಗುವಿನ ಸರ್ವತೋಮುಖ ಬೆಳೆವಣಿಗೆಗೆ ಕಾರಣವಾಗಿದೆ. ಮಕ್ಕಳ ಆಂತರ್ಯದಲ್ಲಿ ಹುದುಗಿರುವ ಪ್ರತಿಭೆ ಮತ್ತು ಸಂಸ್ಕಾರ ಹೊರಹಾಕುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿ ವರ್ಷದಂತೆ ಶಾಲೆಯಲ್ಲಿ ಎರಡು ದಿನಗಳ ಕಾಲ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ಮಗುವಿನ ದೈಹಿಕ, ಮಾನಸಿಕ, ಭೌದ್ಧಿಕ ಬೆಳೆವಣಿಗೆ ಜೊತೆಗೆ ಮಾನಸಿಕವಾಗಿ ಸದೃಢಗೊಳಿಸುವ ಮೂಲಕ ಕಲಿಕೆಗೆ ಅನುವು ಮಾಡಿಕೊಡುವುದು ಎಂದರು.ಈ ವೇಳೆ ಶಾಲೆಯ ಪ್ರಾಂಶುಪಾಲೆ…
