ವಿಶ್ವಹಿಂದೂ ಪರಿಷತ್, ಭಜರಂಗದಳದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದ ಲೋಕೋಪಯೋಗಿ ಇಲಾಖೆಯ ಸರ್ವೇ ನಂಬರ್ 103 ಕ್ಷೇತ್ರದ 38 ಗುಂಟೆ ಸರಕಾರಿ ಜಮೀನನ್ನು ಮುಸ್ಲಿಂ ಖಬರಸ್ಥಾನಕ್ಕೆ ನೀಡುವ ಪ್ರಸ್ತಾವನೆಯನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳದ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳದ ಅಧ್ಯಕ್ಷ ಮಹೇಶ ತುಂಬರಮಟ್ಟಿ ಮಾತನಾಡಿ ಲೋಕೋಪಯೋಗಿ ಇಲಾಖೆಯ ಜಮೀನು ಮುಸ್ಲಿಂ ಖಬರಸ್ಥಾನಕ್ಕೆ ನೀಡುವುದಕ್ಕೆ ವಿಶ್ವಹಿಂದೂ ಪರಿಷತ್, ಭಜರಂಗದಳ ಖಡಾಖಂಡಿತವಾಗಿ ವಿರೋಧಿಸುತ್ತದೆ. ಸರ್ಕಾರದ ಇಂತಹ ಇಬ್ಬಗೆಯ ನೀತಿ ಖಂಡನೀಯವಾದದ್ದು. ಖಬರಸ್ಥಾನಕ್ಕೆ ಈಗಾಗಲೇ ರೈತರು ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದರಿ ಸರ್ಕಾರಿ ಜಾಗದಲ್ಲಿ ಎಲ್ಲ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸರ್ಕಾರಿ ಕಛೇರಿಗಳನ್ನು ಮಾಡಲು ಈ ಮೂಲಕ ವಿಶ್ವ ಹಿಂದೂ ಪರಿಷತ-ಭಜರಂಗದಳ ಘಟಕ ಕೊಲ್ದಾರ ತಾಲೂಕು ಪ್ರಖಂಡ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಈ ವೇಳೆ ಶಂಕರ್ ಗಣಚಾರಿ, ಮಹೇಶ್ ತುಂಬರಮಟ್ಟಿ, ಬಸವರಾಜ ಚೌದ್ರಿ, ಅಭಿಷೇಕ್ ಹೆಬ್ಬಾಳ, ಯಮನಜಿ ಕರಣಿ, ಮಲ್ಲಿಕಾರ್ಜುನ ಬಿರಾದಾರ್, ಹನುಮಂತ ಮುಳವಾಡ, ಜಗದೀಶ್ ಸುನಗದ, ವೀರಕುಮಾರ ಚೌವಾನ, ಮಲ್ಲು ಗಣಿ, ಕಲ್ಲಪ್ಪ ಬಾಲಗೂಂಡ, ಸಂಗು ಬಾಟಿ ಸೇರಿದಂತೆ ಇನ್ನಿತರರು ಇದ್ದರು.

