ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಧೂಳಖೇಡ ಗ್ರಾಮದ ಓವರ್ ಬ್ರೀಡ್ಜ್ ಸಮೀಪದಲ್ಲಿ ಶುಕ್ರವಾರ ಸಂಜೆ ಸುಮಾರು 4.30 ರ ಸುಮಾರಿಗೆ ಘಟನೆ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರ್ ಗಂಭೀರ ಗಾಯಗೊಂಡಿದ್ದು ಅಂಬುಲನ್ಸ್ ಮುಖಾಂತರ ಬೈಕ್ ಸವಾರನನ್ನು ಜಿಲ್ಲಾಸ್ಪತ್ರೆಗೆ ಖಳಿಸಲಾಯಿತು ಎಂದು ತಿಳಿದುಬಂದಿದೆ.
ಸೋಲಾಪುರ ದಿಂದ ಅಗರಖೇಡ ಗ್ರಾಮದ ಕೆಡೆಗೆ ಹೋಗುತ್ತಿದ್ದ ಕಾರ್ ನಂ.ಎಮ್.ಎಚ್.12 ವಾಯ್.ಬಿ.4260 ಮತ್ತು ಧೂಳಖೇಡ್ ಗ್ರಾಮದಿಂದ ಸೋಲಾಪೂರ ಕಡೆ ಹೋಗುತ್ತಿದ್ದ ಬೈಕ್ ಕೆ.ಎ.28 ಎಚ್.ಎಫ್ 5011 ಮುಖಾಮುಖಿ ಡಿಕ್ಕಿಆಗಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ.ಡಿಕ್ಕಿಯ ರಭಸಕ್ಕೆ ಕಾರ್ ಪಕ್ಕದಲ್ಲಿರುವ ನೀರು ತುಂಬಿದ ತೆಗ್ಗಿಗೆ ತಲೆ ಕೆಳಗಾಗಿ ಬಿದ್ದಿದೆ ಆದರು ಕಾರನಲ್ಲಿ ಇದ್ದವರಿಗೆ ಯಾವುದೇ ಅನಾಹುತವಾಗಿಲ್ಲ.
ಕಾರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ: ಅಪಘಾತ ನಡೆದ ಸ್ಥಳದ ಪಕ್ಕದಲ್ಲೆ ಮಳೆ ನೀರು ಹೋಗಲು ಅಂಡರ್‌ಪಾಸ್ ತಡೆಗೋಡೆ ಇದ್ದುದರಿಂದ ಆ ತಡೆಗೋಡೆಗೆ ಕಾರ್ ಗುದ್ದಿದ್ದರೆ ಕಾರ್‌ನಲ್ಲಿ ಇದ್ದ ಸವಾರರು ಮತ್ತು ಡ್ರೈವರ್ ಉಳಿಯುವ ಸಾಧ್ಯತೆ ಕಡಿಮೆ ಇತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ರಕ್ತಸ್ರಾವವಾಗಿದೆ ಬದುಕುಳಿಯುವದು ಕಡಿಮೆ ಎಂದಿದ್ದಾರೆ.ಬೈಕ್ ಸವಾರ್ ಖೇಡಗಿ ಗ್ರಾಮದವರು ಎಂದು ಮಾತನಾಡಿಕೊಳ್ಳುತ್ತಿದ್ದರು.
ಸ್ಥಳದಲ್ಲಿ ಕಿಲೋಮೀಟರ್ ಗಟ್ಟಲೆವಾಹನಗಳು ನಿಂತಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು ನಂತರ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪೋಲಿಸರು ವಾಹನ ಸಂಚಾರ ಸುಗಮಗೋಳಿಸಿದರು.
ಸಂಪೂರ್ಣ ಮಾಹಿತಿ ಝಳಕಿ ಪೋಲೀಸರ್ ತನಿಖೆಯಿಂದ ತಿಳಿಯಲಿದೆ.

