ಹಳಕಟ್ಟಿ ಪ್ರೌಢಶಾಲೆಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭೇಟಿ – ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆಗೆ ಸಂವಾದ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಹತ್ತನೇ ತರಗತಿ ಶೈಕ್ಷಣಿಕ ಜೀವನದ ಬೆಸ್ ಅಗಿದೆ. ಏಳನೇಯ ತರಗತಯಿಂದ ಹತ್ತನೆಯ ತರಗತಿ ವರೆಗಿನ ಕಲಿಕೆಯು ಮಕ್ಕಳ ಜೀವನದಲ್ಲಿ ಶ್ರೇಯೋಭಿವೃದ್ಧಿಯ ಮಹತ್ತರ ಪಾತ್ರವಹಿಸುತ್ತದೆ. ಈ ಕಲಿಕಾವಧಿಯ ಶಿಕ್ಷಣವು ವಿದ್ಯಾರ್ಥಿಗಳಿಗೆ ಮಹತ್ವದ ಪಿಕ್ ಟೈಮ್ ಎಂದು ವಿಜಯಪುರ ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಶಶೀಧರ ನೀಲಗರ ಅಭಿಪ್ರಾಯಿಸಿದರು.
ಇಲ್ಲಿನ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಅವರು ಬೆರೆತು ಪ್ರೌಢಶಿಕ್ಷಣದ ಮಹತ್ವ ಮತ್ತು ಪರೀಕ್ಷಾ ಸಿದ್ದತೆ ಕುರಿತು ಅನುಭವ ಹಂಚಿಕೊಂಡರು.
ನಮ್ಮೆಲ್ಲರನ್ನು ಸಶಕ್ತರನ್ನಾಗಿಸುವ ಶಕ್ತಿ ಶಿಕ್ಷಣಕ್ಕಿದೆ.ಶಿಕ್ಷಣದಿಂದಲೇ ಜೀವನ ಬಲಕ್ಕೆ ಮೆರುಗು ಬರುತ್ತದೆ. ನಮ್ಮ ಜೀವನದ ಗುರಿ ಮುಟ್ಟುವ ಸಾಧನವಾಗಿರುವ ಪ್ರೌಢಶಿಕ್ಷಣವನ್ನು ಯಾವುದೇ ಕಾರಣಕ್ಕೂ ಮಕ್ಕಳು ನಿರ್ಲಕ್ಷ್ಯ ತೋರಬಾರದು.ಈ ಹಂತದ ಶಿಕ್ಷಣವೇ ನಿಮ್ಮ ಮುಂದಿನ ಶೈಕ್ಷಣಿಕ ಸವಾ೯ಂಗೀಣ ಪ್ರಗತಿಗೆ ನಾಂದಿಯಾಗಿದೆ. ಆ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣದ ಓದಾಭ್ಯಾಸದ ಚಟುವಟಿಕೆಗಳಲ್ಲಿ ವಿಭಿನ್ನ ಸಾಮಥ್ರ‍್ಯ ಹೊಂದಿ ಶಿಕ್ಷಣದ ಅಗತ್ಯ ಅರಿತು ಮುನ್ನಡೆಯಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಲಹೆ ಧಾರೆ..ಮಕ್ಕಳ ಮೊರೆ : ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶೀಧರ ನೀಲಗರ ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆಗೆ ಮುಕ್ತವಾಗಿ ಬೆರೆತು ಸಂವಾದ ನಡೆಸಿದರು. ತಮ್ಮ ಜೀವನ್ನೋತ್ತಿಯ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಉಪಯುಕ್ತ ಟಿಪ್ಸ್ ಸಲಹೆ ಧಾರೆ ಎರೆದಿದ್ದು ಮಕ್ಕಳ ಗಮನ ಸೆಳೆಯಿತು.
ಅವರು ಹೇಳಿದ್ದು ಹೀಗೆ ! ಎಸ್ಸೆಸ್ಸೆಲ್ಸಿ ಮಕ್ಕಳು ಸುವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ಕೈಗೊಳ್ಳಬೇಕು. ಸ್ಟಡಿ ಫೈಮ್ ಬೆಳೆಸಿಕೊಳ್ಳಬೇಕು.ಟೈಮ್ ಟೇಬಲ್ ಚಾಟ್ ರೂಪಿಸಿಕೊಂಡು ಫಾಲೋ ಆಪ್ ಮಾಡಬೇಕು. ಬೆಳಿಗ್ಗೆಯಿಂದ ಸಂಜೆವರೆಗೆ ಓದಿದ್ದನ್ನು ಮನೆಯಲ್ಲಿ ರಾತ್ರಿ ಮಲಗುವ ಮುನ್ನ ರೀ ಕಾಲ್ ಮಾಡಿಕೊಳ್ಳಬೇಕು.ಮೊಬೈಲ್ ದಿಂದ ಅದಷ್ಟು ದೂರಯಿರಿ. ಈ ಸಮಯದಲ್ಲಿ ಮೊಬೈಲ್ ಹಿಡಿದರೆ ಮುಂದಿನ ಕರಿಯರ್ ಮಂಕಾಗುತ್ತದೆ. ಈ ಪಿಕ್ ಪಾಯಿಂಟ್ ಲೈಫ್ ನಲ್ಲಿ ಕೆಟ್ಟ ಹವ್ಯಾಸ, ದುರಭ್ಯಾಸ ಅಂಟಿಸಿಕೊಳ್ಳದಿರಿ.ದುಶ್ಚಟಗಳ ವ್ಯಾಮೋಹ ಜೀವನ ನರಕಮಯ ಮಾಡುತ್ತದೆ. ಶರೀರ, ಆರೋಗ್ಯ ಸ್ವಾಸ್ಥ್ಯ ಹಾಳಾಗುತ್ತದೆ. ಯುವ ಜನತೆ ಇಂಥ ಫೋಕಸ್ ಗಳಿಗೆ ಮೈಮರೆಯಬಾರದು. ನೆಗೆಟಿವ್ ಬಲು ಬೇಗ ಆಕಷಿ೯ಸುತ್ತದೆ. ಆ ಕಾರಣ ಪಾಸಿಟಿವ್ ಅನುಸರಿಸಿ ಯಶಸ್ಸು ಸಾಧಿಸಿ. ೨೫ ವರ್ಷದೊಳಗಾಗಿ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಿ. ಜೀವನ ಚರಿತ್ರೆ ಉತ್ತಮವಾಗಿ ಘಮಿಸಲು ಪಠ್ಯಕ್ರಮದ ವಿಮಶೆ೯,ಒಡನಾಟದಲ್ಲಿ ಶ್ರದ್ಧೆಯಿಂದ ಮಿಂದೆಳುವುದು ಅತ್ಯಗತ್ಯ. ಶಿಕ್ಷಣದ ಉದ್ದೇಶ ಪ್ರತಿಯೊಬ್ಬರೂ ಅಥೈ೯ಸಿಕೊಳ್ಳಬೇಕು. ಗುಣಮಟ್ಟದ ಕಲಿಕಾ ಸಾಮಥ್ರ‍್ಯ ಹೊಂದಲು ಓದು-ಬರಹ ಕಾಯಕ ಸ್ಪೂತಿ೯ದಾಯಕವನ್ನಾಗಿಸಿಕೊಳ್ಳಬೇಕು ಎಂದರು.
ಮಕ್ಕಳು ತಮ್ಮ ಭವಿಷ್ಯತ್ತಿನ ಸುಖಕರ ಭವಿಷ್ಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯ ಆಲೋಚನಾ ಚಿಂತನೆ ಆಳವಡಿಸಿಕೊಳ್ಳಬೇಕು.ಬೌದ್ಧಿಕ ಸ್ವತ್ತು ಅರಿತು ಯಶಸ್ಸು ಪಡೆಯಬೇಕು. ಶಿಕ್ಷಣ ಜ್ಞಾನ ಮಾರ್ಗದಿಂದಲೇ ಸುಂದರ ಜೀವನ ಸಾಧ್ಯ. ಆ ನಿಟ್ಟಿನಲ್ಲಿ ದಿನಚರಿ ಶಿಸ್ತು ಸಂಯಮ ನೀತಿಯಿಂದ ಸಾಗುವಂತಿರಲಿ. ಓದು ಆಸಕ್ತಿ ಸಾಧನೆಯ ಪರಂಪರೆಗೆ ಸಹಕಾರಿಯಾಗಿದೆ.ಆ ತುಡಿತ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಮೂಡಿಬರಲಿ. ಸ್ಪಧಾ೯ತ್ಮಕ ಮನೋಭಾವದಿಂದ ಪರೀಕ್ಷೆಗಳಿಗೆ ಸಿದ್ದತೆ ನಡೆಸಬೇಕು.ಆ ದಿಸೆಯಲ್ಲಿ ಮಾನಸಿಕವಾಗಿ, ಕ್ರಿಯಾಶೀಲವಾಗಿ ತಯಾರಾಗಬೇಕು ಎಂದು ಶಶೀಧರ ನೀಲಗರ ಮಕ್ಕಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಶಾಲೆ,ಸಂಸ್ಥೆಯ ಪರವಾಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶೀಧರ ನೀಲಗರ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಶಶೀಧರ ನೀಲಗರ ಶಾಲಾ ಕಟ್ಟಡ, ಅನುಸರಿಸಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಶಿಕ್ಷಣ ಅಭಿಮಾನಿ ಬಸಯ್ಯ ಶಿವಯೋಗಿಮಠ, ಶಿಕ್ಷಕರಾದ ಎನ್.ಎಸ್.ಬಿರಾದಾರ, ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಎಂ.ಬಿ.ದಶವAತ, ಜಿ.ಆರ್.ಜಾಧವ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಸಚೀನ ಹೆಬ್ಬಾಳ, ಶಾಂತೂ ತಡಸಿ, ಗೋಪಾಲ ಬಸಪ್ಪ ಬಂಡಿವಡ್ಡರ ಇತರರಿದ್ದರು.

