ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶೇಷ ಅತಿಥಿ ಉಪನ್ಯಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚೆಗಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿದ್ದು ಅದರಂತೆ ಸೈಬರ್ ಭದ್ರತೆ ಹಾಗೂ ಸೈಬರ್ ಕಾನೂನುಗಳ ಬಗ್ಗೆ ಅರಿವು ಅಗತ್ಯ ಎಂದು ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ.ಸುನೀಲ್ ಎಂ.ಬಗಡೆ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ ಕ್ಯೂಎಸಿ ಹಾಗೂ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಯುಕ್ತಾಶ್ರಯದಲ್ಲಿ ದಿನಾಂಕ ೦೬-೧೧-೨೦೨೫ ಗುರುವಾರ ದಂದು ಜರುಗಿದ “ಸೈಬರ್ ಜಾಗೃತಿ ಭಾರತ್” ಎಂಬ ವಿಷಯದ ಮೇಲೆ “ಸೈಬರ್ ಕಾನೂನಿನ ಪ್ರಮುಖ ಲಕ್ಷಣಗಳು” ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು ತಂತ್ರಜ್ಞಾನದ ವ್ಯಾಪಕ ಬಳಕೆಯಿಂದಾಗಿ ಸೈಬರ್ ಅಪರಾಧಗಳ ಹೆಚ್ಚುತ್ತಿವೆ. ಇಂದು ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ ಪ್ರತಿಯೊಬ್ಬರ ಬಳಿ ಮೊಬೈಲ್ ಇದೆ. ನಮ್ಮ ಡಿಜಿಟಲ್ ಸ್ವತ್ತುಗಳು ಮತ್ತು ಗೌಪ್ಯತೆಯನ್ನು ರಕ್ಷಿಸಲು ಅಗತ್ಯವಾದ ಜ್ಞಾನ ಮತ್ತು ಸಾಧನೆಗಳೊಂದಿಗೆ ನಾವು ಅಣಿಯಾಗಬೇಕಿದೆ. ಸೈಬರ್ ಅಪರಾಧಗಳಿಗೆ ಬಲಿಪಶು ಆಗುತ್ತಿರುವುದು ವಿಶೇಷವಾಗಿ ಮಹಿಳೆಯರು. ಅನಗತ್ಯ ವೆಬ್ಸೈಟ್ ಗಳಿಗೆ ಬೇಟಿ ನೀಡುವುದು.ಯಾರೇ ಆಗಲಿ ಮೊಬೈಲಿನಿಂದ ಅನ್ಯ ಕರಗಳು ಬಂದರೆ ಮಾಹಿತಿ ಅಥವಾ ವಿಳಾಸ ಕೇಳಲು ಕರೆ ಮಾಡಿದರೆ ಯಾವುದೇ ಅಪರಿಚಿತ ಸಂಖ್ಯೆ ಯಿಂದ ಕರೆಬಂದಾಗ ನಮ್ಮ ಪೂರ್ಣ ವಿವರವನ್ನು ಯಾವುದೇ ಕಾರಣಕ್ಕೂ ನೀಡಬಾರದು ನಮ್ಮ ಅಜಾಗರೂಕತೆಯೇ ನಮ್ಮನ್ನು ತೊಂದರೆಗೆ ಒಳಪಡಿಸುತ್ತದೆ ಹಾಗಾಗಿ ಎಚ್ಚರಿಕೆಯಿಂದ ಬಳಸಬೇಕು ಎಂದು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ಸೈಬರ್ ಜಾಗೃತಿಯ ಮಹತ್ವವನ್ನು ಅರಿವಯುವುದು ಹಾಗೂ ಸೈಬರ್ ಪ್ರಕರಣಕ್ಕೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಡಾ.ಅನೀಲ ಭೀ. ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ. ಎಸ್. ಪಾಟೀಲ್, ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಧರ್ ಜೋಶಿ, ಪ್ರೊ.ಆರ್. ಆರ್. ಹಟಗಾರ, ಪ್ರೊ.ಮಾಂತೇಶ್ ಜೆವೂರ್, ಪ್ರೊ.ಸಂತೋಷ್ ವಂಬಾಸೆ ಮತ್ತು ಪ್ರೊ. ಪವನ್ ಮಹೀಂದ್ರಕರ್ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ವಂದನಾ ನಿರೂಪಿಸಿದರು. ಪ್ರೊ.ಟಿ. ಐ. ಸಾರವಾಡ ವಂದಿಸಿದರು

