ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಲುಷಿತಗೊಂಡ ಮನಸ್ಸುಗಳ ಕೊಳೆ ತೊಳೆಯುವ ಸಾಧನಗಳಾಗಿ ಕನಕದಾಸರ ವಿಚಾರಧಾರೆಗಳು ಇಂದು ಪ್ರಸ್ತುತವಾಗಿವೆ ಎಂದು ಎಚ್.ಜಿ. ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಭಕ್ತ ಕನಕದಾಸರ ೫೩೮ನೆಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಬಸವಾದಿ ಪ್ರಮಥರು ಸಮಾಜದ ಕೊಳೆಯನ್ನು ವಚನಗಳ ಮೂಲಕ ತೊಳೆದಂತೆ ೧೬ನೆಯ ಶತಮಾನದಲ್ಲಿ ಪುರಂದರದಾಸರು ಮತ್ತು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜ ಶುದ್ಧಿಕರಣ ಮಾಡಲು ಅವಿರತ ಶ್ರಮಿಸಿದವರಾಗಿದ್ದಾರೆ ಎಂದರು.
ಶಿಲ್ಪಾ ಕುದರಗೊಂಡ ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ಈ ವೇಳೆ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಬಿಒ ಎಂ.ಬಿ.ಯಡ್ರಾಮಿ ಸ್ವಾಗತಿಸಿದರು. ರಾಯಪ್ಪ ಯವಣಗಿ ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶ್ರೀಶೈಲ ಕೌಲಗಿ, ಅಶೋಕ ತೆಲ್ಲೂರ, ಎಸ್.ಆರ್.ಅಗಸಬಾಳ, ಅರವಿಂದ ಡೋಣೂರ, ಮಲ್ಲಣ್ಣ ಸಾಲಿ, ನಿಂಗಣ್ಣ ಬಿರಾದಾರ, ಭೀಮರಾಯ ಅಮರಗೋಳ ಇದ್ದರು.
ಕಾರ್ಯಕ್ರಮದಲ್ಲಿ ಸುನಂದಾ ಯಂಪುರೆ, ಸುದರ್ಶನ ಜಂಗಣ್ಣಿ, ಚಂದ್ರಶೇಖರ ದೇವರೆಡ್ಡಿ, ಶ್ಯಾಮಲಾ ಮಂದೇವಾಲ, ಎ.ಆಯ್.ಮಕಾಂದಾರ, ಗಂಗಾಧರ ಸೋಮನಾಯಕ, ನಿಖಿಲ್ ಖಾನಾಪೂರ, ಡಾ.ಅಂಬರೀಷ ಬಿರಾದಾರ, ಎಸ್.ಎಸ್.ಸಾತಿಹಾಳ, ರಾಜು ಸಿಂದಗಿ, ಸಿ.ಬಿ.ಬಾಬಾನಗರ, ಮಲ್ಲಿಕಾರ್ಜುನ ಸಾವಳಸಂಗ, ಆರ್.ಕೆ.ಪಾಟೀಲ ಸೇರಿದಂತೆ ಕುರುಬ ಸಮಾಜದ ಬಾಂಧವರು ಹಾಗೂ ಅಧಿಕಾರಿಗಳು ಇದ್ದರು.
ಬಾಕ್ಸ್
ಭಕ್ತ ಕನಕದಾಸರ ಕೊಡುಗೆಗಳು ಅನನ್ಯ :ಮನಗೂಳಿ
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದ ಕನಕದಾಸ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಮಾಜಕ್ಕೆ ಭಕ್ತ ಕನಕದಾಸರ ಕೊಡುಗೆಗಳು ಅನನ್ಯ. ಅವರ ಜೀವನದ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಅವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

