Author: editor.udayarashmi@gmail.com

ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುಣಾರಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ಮರಣಶಕ್ತಿ ದುರ್ಬಲಗೊಳ್ಳುವ ಅಲ್ಝೈಮರ್ಸ್, ಡಿಮೆನ್ಷಿಯ ರೋಗದ ಪ್ರಮಾಣವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ವೇಗವಾಗಿ ಹೆಚ್ಚುತಿದ್ದು, ಅಲ್ಝೈಮರ್ಸ್, ಡಿಮೆನ್ಷಿಯ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುಣಾರಿ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಜಿಲ್ಲಾಸ್ಪತ್ರೆ ಆವರಣದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ ವಿಶ್ವ ಆಲ್ಝೈಮರ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಲ್ಝೈಮರ್ಸ, ಡಿಮೆನ್ಷಿಯ ಖಾಯಿಲೆಯಿಂದ ವಿಶ್ವದಲ್ಲಿ ೫೫ ಮಿಲಿಯನ್ ಜನ ಬಳಲುತ್ತಿದ್ದಾರೆ. ಸಮೀಕ್ಷೆ ಪ್ರಕಾರ ೨೦೩೦ರ ವರೆಗೆ ೭೮ ಮಿಲಿಯನ್ ಹಾಗೂ ೨೦೫೦ರ ಅಂತ್ಯಕ್ಕೆ ೧೩೯ ಮಿಲಿಯನ್ ಈ ಕಾಯಿಲೆಗೆ ಜನರು ಒಳಗಾಗಬಹುದಾಗಿದೆ ಎಂದು ಡಿಮೆನ್ಷಿಯ(ಆಲ್ಝೈಮರ್ಸ,) ನಿಯಂತ್ರಣ ಮತ್ತು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಕಾಯಿಲೆಯ ಬಗ್ಗೆ ಸಾರ್ವಜನಿಕರಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ರವರ ಅಧ್ಯಕ್ಷತೆಯ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಮತಿ ಸೀಮಾ ಉಮೇಶ ಕೋರೆ ಅವರು ತಮ್ಮ ಜನ್ಮ ದಿನದ ಅಂಗವಾಗಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕಗ್ಗೋಡ ಗ್ರಾಮದ ಶ್ರೀ ರಾಮನಗೌಡ ಬ.ಪಾಟೀಲ (ಯತ್ನಾಳ) ಗೋ ರಕ್ಷಾ ಕೇಂದ್ರಕ್ಕೆ ರೂ.5 ಲಕ್ಷ ದೇಣಿಗೆ ಚೆಕ್ ನ್ನು ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ ಅವರಿಗೆ ಸೋಮವಾರ ನೀಡಿದರು.ಈ ಸಂದರ್ಭದಲ್ಲಿ ದಾನಿಗಳಿಗೆ ಜನ್ಮದಿನದ ಶುಭಕೋರಿ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.ಸಿದ್ದಸಿರಿ ಸೌಹಾರ್ದ ಸಹಕಾರಿ ನಿರ್ದೇಶಕಿ ಶ್ರೀಮತಿ ಶೈಲಜಾ ಪಾಟೀಲ, ಶ್ರೀ ಜಗದೀಶ ಕ್ಷತ್ರಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾನಿಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಹೃದಯ ರೋಗ ಹಾಗೂ ಹೃದಯ ರೋಗ ಶಾಸ್ತ್ರ ಚಿಕಿತ್ಸೆ ವಿಭಾಗದ ವತಿಯಿಂದ ವಿಶ್ವ ಹೃದಯ ದಿನ ಅಂಗವಾಗಿ ವಾಕಥಾನ ಕಾರ್ಯಕ್ರಮ ಸೋಮವಾರ ನಡೆಯಿತು.ಹೃದಯರೋಗ ವಿಭಾಗದ ತಜ್ಞ ವೈದ್ಯ ಡಾ. ಸಂಜೀವ ಸಜ್ಜನರ ವಾಕಥಾನ್ ಗೆ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹೃದಯ ಶಸ್ತ್ರಚಿಕಿತ್ಸಕ ಡಾ.ರವಿ ಗಟ್ನಟ್ಟಿ, ಇಂದಿನ ಕಲುಷಿತ ದಿನಮಾನಗಳಲ್ಲಿ ವಿಷಯುಕ್ತ ಆಹಾರ, ಗಾಳಿ, ನೀರು ಜೀವನ ಶೈಲಿಯ ಚಟುವಟಿಕೆಗಳಿಂದ ಹೃದಯ ರೋಗ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ‌ಹೃದಯಾಘಾತ, ಬಿಪಿ, ಶುಗರದಂಥ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಇವುಗಳಿಂದ ಆರೋಗ್ಯ ಕಾಪಾಡಿಕೊಳ್ಳಲು ಯೋಗ, ವ್ಯಾಯಾಮ, ಧ್ಯಾನ ಮುಂತಾದ ಜೀವನ ಶೈಲಿಗಳ ಚಟುವಟಿಕೆಗಳನ್ನೂ ಅಳವಡಿಸಿಕೊಳ್ಳಬೇಕು. ಈ ಮೂಲಕ ಆರೋಗ್ಯಯುತ ಸಮಾಜ ಕಟ್ಟಲು ಸಾಧ್ಯ. ಪ್ರತಿಯೊಬ್ಬರು ಕನಿಷ್ಠ ಆರು ತಿಂಗಳಿಗೊಮ್ಮೆ ಒಮ್ಮೆಯಾದರೂ ತಮ್ಮ ಆರೋಗ್ಯ ತಪಾಸಣೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ , ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವತಿಯಿಂದ ಇಂದು ಸೋಮವಾರ ವಿಶ್ವ ರೇಬೀಸ್ ದಿನ ಆಚರಿಸಲಾಯಿತು.ಈ ದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದ ಅಗದತಂತ್ರ ವಿಭಾಗದಿಂದ ಏರ್ಪಡಿಸಲಾಗಿದ್ದು ಜನಸಾಮಾನ್ಯರಲ್ಲಿ ರೇಬಿಸ್ ವೈರಾಣು ಹರಡುವ ವಿಧಾನ, ರೋಗ ಪೀಡಿತ ಸಾಕಿದ ನಾಯಿಗಳಿಂದ ಹಾಗೂ ಬೀದಿ ನಾಯಿಗಳಿಂದ ಕೆಲವು ಬಾರಿ ಎದುರಾಗುವ ಪ್ರಾಣಾಪಾಯದ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಯಿತು. ಈ ಅಭಿಯಾನದಲ್ಲಿ ಮಹಾವಿದ್ಯಾಲಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.ಅಷ್ಟೇ ಅಲ್ಲ, ಮಹಾವಿದ್ಯಾಲಯದ ಆವರಣದಿಂದ ನಗರ ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕರ ವೃತ್ತದವರೆಗೆ ಜಾಥಾದಲ್ಲಿ ಸಂಚರಿಸಿ ಬೀದಿ ನಾಯಿಗಳ ಕಡಿತ, ಮುನ್ನೆಚ್ಚರಿಕೆ, ಲಕ್ಷಣ, ಪ್ರಥಮ ಚಿಕಿತ್ಸೆ, ಉಪಚಾರ ಕುರಿತು ವೈದ್ಯ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.ಜನ ಸಾಮಾನ್ಯರಲ್ಲಿ ರೇಬಿಸ್ ಮುಕ್ತ ಭಾರತ ಎಂಬುವುದರ ಬಗ್ಗೆ ಅರಿವು ಮೂಡಿಸಲಾಯಿತು‌ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಅಗದತಂತ್ರ ವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ,…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಲೋಣಿ ಬಿಕೆ. ಗ್ರಾಮದ ಲೋಣಿ-ಚಡಚಣ, ಇಂಡಿ ಕ್ರಾಸ್ ಹತ್ತಿರ ಬೈಕ್‌ಸವಾರ ಮತ್ತು ಮಹೀಂದ್ರಾ ಪಿಕಪ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ನುಚ್ಚುನೂರಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.ಈ ಘಟನೆ ಸೋಮವಾರ ಬೆಳಿಗ್ಗೆ ೮:೦೦ ರಿಂದ ೮:೩೦ ರ ನಡುವೆ ನಡೆದಿದೆ ಎನ್ನಲಾಗಿದೆ. ಮಹೀಂದ್ರಾ ಪಿಕಪ್ ಸಂಖ್ಯೆ ಎಮ್.ಎಚ್ 06, ಬಿ ಡ್ ಬ್ಲೂ.0323 ವಾಹನ ಕೂಡಾ ಎಕ್ಸಿಡೆಂಟ್ ರಭಸಕ್ಕೆ ಉರೂಳಿ ಬದ್ದಿದೆ,ಬೈಕ್ ಸಂಖ್ಯೆ. ಎಮ್.ಎಚ್.13,ಬಿಸಿ.0255 ನುಚ್ಚುನೂರಾಗಿದ್ದು ಬೈಕ್ ತುಕುಡಿಗಳು ರಸ್ತೆ ತುಂಬೆಲ್ಲ ಬಿದ್ದಿರುವ ದೃಷ್ಯ ಕಂಡುಬಂದಿತು.ಮೃತ ಬೈಕ್‌ಸವಾರ ಚಡಚಣ ತಾಲೂಕಿನ ಮರಗೂರ ಗ್ರಾಮದ ಖಾಜೆಸಾಬ ಶೇಖ(೪೭) ಎಂದು ಗುರುತಿಸಲಾಗಿದೆ,ಈ ಘಟನೆ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಶಿರಾಡೋಣ ಗ್ರಾಮದಲ್ಲಿ ಭಗತ್ ಸಿಂಗ್ ರವರ ಜಯಂತಿಯನ್ನು ಆಚರಿಸಲಾಯಿತು.ಬಿಜೆಪಿ ಪಕ್ಷದ ಯುವನಾಯಕ ಸುನೀಲ ಬಗಲಿ ಮಾತನಾಡಿ, ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಇಂದಿಗೂ ಕೂಡ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.ಕೆಡಿಪಿ ಸದಸ್ಯ ಶಿವಾನಂದ ಪಾಂಡ್ರೆ ಮಾತನಾಡಿ, ಭಗತ್ ಸಿಂಗ್ ಅವರ ಹೆಸರು ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿದೆ ಇವರ ಧೈರ್ಯ ಇಂದಿಗೂ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಯುವಜನತೆಯ ಮನಸ್ಸಿನಲ್ಲಿ ಇಂದಿಗೂ ಅವರೊಬ್ಬ ಧೀಮಂತ ನಾಯಕ. ಶಿರಡೋಣದ ಗ್ರಾಮದ ಯುವಕರು ಭಗತ್ ಸಿಂಗ್ ರವರ ಆಚಾರ ಮತ್ತು ವಿಚಾರಗಳನ್ನು ರೂಢಿಸಿಕೊಳ್ಳಬೇಕು. ಅವರನ್ನು ನಮ್ಮ ಜೀವನದಲ್ಲಿ ಪ್ರೇರಣೆಯಾಗಿ ನಾವೆಲ್ಲರೂ ತೆಗೆದುಕೊಳ್ಳಬೇಕು ಎಂದರು.ಈ ಸಂಧರ್ಭದಲ್ಲಿ ಅಮಸಿದ್ದ ಪೂಜಾರಿ, ರಮಾನಂದ ಕುಲಕರ್ಣಿ, ಪ್ರವೀಣ ಕಾಟೆ, ಸರ್ವೇಶ ಹಿರೇಮಠ, ಊರಿನ ಪ್ರಮುಖರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾರುಣ್ಯದಲ್ಲೇ ಇಂದು ಯುವ ಸಮೂಹ ಸದೃಢ ಆರೊಗ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಬದುಕಿಗೆ ಆರೋಗ್ಯಯೊಂದೇ ಕೊನೆಯ ಆಯ್ಕೆಯಾಗಿದೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ. ವೈ.ಬಿ.ನಾಯಕ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ.ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರದ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ, ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ, ಎನ್.ಎಸ್.ಎಸ್ ಹಾಗೂ ಮಹಿಳಾ ಸಬಲೀಕರಣ ಘಟಕಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಆಹಾರವು ಕಲಬೆರಕೆ ಹಾಗೂ ರಾಸಾಯನಿಕಯುಕ್ತವಾಗಿರುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ರಾಸಾಯನಿಕಯುಕ್ತವಾಗಿರುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕೆಂದು ಅಭಿಪ್ರಾಯಪಟ್ಟರು.ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಚಿಕಿತ್ಸಕ ಡಾ.ಮೂಲಿಮನಿ, ಸ್ತ್ರೀರೋಗ ಹಾಗೂ ಪ್ರಸೂತಿತಜ್ಞೆ ಡಾ.ಜ್ಯೋತಿ ಲೋಕಾಪೂರ, ಶಸ್ತ್ರಚಿಕಿತ್ಸಕ ಡಾ.ವೀಣಾ ಕೋರಿಶೆಟ್ಟಿ, ಡಾ.ಮಾನಸಾ ಲಕ್ಷ್ಮೀ, ಡಾ.ಆಹಿಶ ಕುಲಕರ್ಣಿ,ಡಾ.ಗೋಪಿನಾಥ, ಡಾ.ಸುಶ್ಮಿತಾ ರೆಡ್ಡಿ, ಡಾ.ವಾಸವಿ ಬಿ.ಎಸ್,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಮಾನತೆ, ಜಾತಿ ಧರ್ಮಗಳಿಂದ ಮುಕ್ತವಾದ ಯುವ ಭಾರತದ ಪರಿಕಲ್ಪನೆಯ ಸ್ವಾತಂತ್ರ್ಯವನ್ನು ಕ್ರಾಂತಿಕಾರಿ ಭಗತ್ ಸಿಂಗ್ ಹೊಂದಿದ್ದರು. ಇಂತಹ ಕ್ರಾಂತಿಕಾರಿ ವಿಚಾರಗಳು, ಆದರ್ಶಗಳು ಇಂದಿನ ಯುವ ಜನತೆಗೆ ದಾರಿ ದೀಪವಾಗಬೇಕೆಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರುಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಭಾನುವಾರ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 117 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸಮಾನತೆಯ ವ್ಯವಸ್ಥೆಯನ್ನು ಹೋಗಲಾಡಿಸಿ ಬದಲಾವಣೆ ತರಲು ಹೋರಾಡಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್. ದೇಶಭಕ್ತ ಭಗತ್ ಸಿಂಗ್ ಅವರ ಜೀವನ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದರು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸಣ್ಣ ವಯಸ್ಸಿನಲ್ಲೇ ನೇಣುಕಂಬಕ್ಕೆ ಏರಿದವರು. ಜಲಿಯನ್ ವಾಲಾಬಾಗ್ ದುರಂತದ ನಂತರದಲ್ಲಿ ಭಗತ್ ಸಿಂಗ್ ಒಬ್ಬ ಕ್ರಾಂತಿಕಾರಿಯಾಗಿ ಬದಲಾಗುತ್ತಾರೆ. ಭಗತ್ ಸಿಂಗ್ ಅವರು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಭಗತ್ ಸಿಂಗ್, ರಾಜಗುರು ಸುಖದೇವ್ ಮೂವರು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮ ಹಾಗೂ ಬಸವನಬಾಗೇವಾಡಿ ವ್ಯಾಪ್ತಿಯಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗಿರುವ ಬೆಳೆ ಹಾನಿಯ ಪ್ರದೇಶಗಳಿಗೆ ಶನಿವಾರ ಸಂಜೆ ಅಪರಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಭೇಟಿ ನೀಡಿ ಪರಿಶೀಲನೆ ಮಾಡಿದರು.ತಾಲೂಕಿನ ಯರನಾಳ, ಮನಗೂಳಿ ರೈತ ಬಾಂಧವರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತೊಗರಿ, ಮೆಕ್ಕೆಜೋಳ, ಹತ್ತಿ ಮತ್ತು ಈರುಳ್ಳಿ ಬೆಳೆಗಳು ಅತಿಯಾದ ಮಳೆಯಿಂದ ನಾಶವಾಗುತ್ತಿದೆ. ಎಲ್ಲ ರೈತ ಬಾಂಧವರಿಗೂ ಬೆಳೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೆಪ್ಟಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದ ಬೆಳೆ ಹಾನಿಯಾದ ತಾಲೂಕಿನ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡುತ್ತಿದ್ದಾರೆ. ಜಂಟಿ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ನೀಡಲಾಗುವುದು. ಬೆಳೆ ಹಾನಿಯಾದ ರೈತರು ಸಂಬಂಧಪಟ್ಟ ಗ್ರಾಮಾಡಳಿತಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ,…

Read More

ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಭೀಮಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಸಮೀಪದ ಕುಮಸಗಿ ಗ್ರಾಮದ ೪೦ ರೈತ ಕುಟುಂಬಕ್ಕೆ ಸ್ಥಳೀಯ ಶ್ರೀವೆಂಕಟೇಶ್ವರ ಮಠದ ಅಭಿನವ ವೆಂಕಟೇಶ್ವರ ಸ್ವಾಮೀಜಿ ನೊಂದ ಕುಟುಂಬಗಳಿಗೆ ನೆರವಾಗಿದ್ದಾರೆ.ಕುಮಸಿಗಿ ಗ್ರಾಮದಲ್ಲಿ ಭೀಮಾನದಿಯ ಪ್ರವಾಹ ದಿಂದ ಮನೆ ಕಳೆದುಕೊಂಡ ೪೦ ಸಂತ್ರಸ್ತರ ಕುಟುಂಬಗಳು ಆತಂಕದಲ್ಲಿ ಗ್ರಾಮದ ಶಾಲೆ ಒಂದರಲ್ಲಿ ತಮ್ಮ ಬದುಕು ನಡೆಸುತ್ತಿದ್ದು ಸಂತ್ರಸ್ಥರನ್ನು ಕಂಡು ಅವರ ಜೀವನಕ್ಕೆ ಬೇಕಾಗಿರುವ ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ಕುಮಸಿಗಿ ಗ್ರಾಮದ ವೆಂಕಟೇಶ್ವರ ಮಠದ ಪೂಜ್ಯರು ಮಾನವೀಯತೆ ದೃಷ್ಟಿಯಿಂದ ಎಲ್ಲ ಕುಟುಂಬಗಳಿಗೆ ವಿತರಿಸಿದ್ದರು.ಈ ವೇಳೆ ಸಂತ್ರಸ್ತರು ಪೂಜ್ಯರ ಎದುರು ತಮ್ಮ ಅಳಲು ತೋಡಿಕೊಂಡರುಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ಚಾವರ, ಬಸರಾಜ್ ಯಾತ್ನೂರ್, ವಿಶ್ವನಾಥ್ ಸಿಂಪಿ, ಗುರುಪಾದ ಚಾವರ್, ದತ್ತು ವಾಲಿಕಾರ, ದರೆಪ್ಪ ಗಿಣಿಯಾರ, ಸಿದ್ದರಾಮ ಸಮಗಾರ, ಗುರು ಜಾದವ, ಮಹಾಂತಪ್ಪ ಮರದ ಸೇರಿದಂತೆ ಗ್ರಾಮಸ್ಥರು ಇದ್ದರು.

Read More