ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ವೈಶಿಷ್ಟ್ಯ ಪೂರ್ಣ ಮಕ್ಕಳ ದಿನಾಚರಣೆ ಹಾಗೂ ಜವಾಹರಲಾಲ್ ನೇಹರು ರವರ ಜಯಂತಿಯನ್ನು ಆಚರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶಿವರಾಜ ಸಾರಂಗಮಠ ಹಾಗೂ ಸಮರ್ಥ ಅಗಸರ ಚಾಚಾ ನೇಹರು ವೇಷದಲ್ಲಿ ಉಪಸ್ಥಿತರಿದ್ದರು.
ಶಾಲೆಯಲ್ಲಿ ಶಿಶು ವಿಹಾರದಿಂದ ಹಿಡಿದು 7ನೇ ತರಗತಿಯ ಎಲ್ಲಾ ಮಕ್ಕಳಿಗೋಸ್ಕರ ವಿವಿಧ ಮನೋರಂಜನಾ ಕ್ರೀಡಾ ಪ್ರಬಂಧ , ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಕ್ರಮಾಂಕ ಪಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಹಿತ್ಯ ಒಳಗೊಂಡ ಬಹುಮಾನ ನೀಡಲಾಯಿತು.
ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ ಮಕ್ಕಳ ದಿನಾಚರಣೆಯನ್ನು ಬಹಳ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿದ್ದು ಶಾಲೆಯ ಹಾಗೂ ಶಿಕ್ಷಕರ ಶಿಷ್ಟಾಚಾರ ಎದ್ದುಕಾಣುತ್ತದೆ. ಮಕ್ಕಳ ಪಾಲಿಗೆ ಈ ದಿನ ಅತ್ಯಂತ ಮಹತ್ವ ಪಡೆದಿದೆ ಹಾಗಾಗಿ ನಮ್ಮ ಶಾಲೆಯು ನಮ್ಮ ಮಕ್ಕಳ ಸಂತೋಷವನ್ನು ವಿವಿಧ ಚಟುವಟಿಕೆಗಳ ಮಾಡಿಸುವುದರ ಮುಖಾಂತರ ದ್ವಿಗುಣ ಗೊಳಿಸಿರುವುದು ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಅಧ್ಯಕ್ಷ ಎಸ್.ಆಯ್.ಜೋಗೂರ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ,ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸುನೀತಾ ಗುಂಡದ, ವೀಣಾ ರಾಂಪೂರಮಠ, ಲಕ್ಷ್ಮೀ ಗುಣಾರಿ ಮುಂತಾದವರು ಉಪಸ್ಥಿತರಿದ್ದರು

